• Home
  • »
  • News
  • »
  • trend
  • »
  • ಸ್ಪೇನ್‍ನ ಪ್ರಸಿದ್ಧ ಖಾದ್ಯ ‘ಪೇಯೆಲ್ಲಾ’ ತಯಾರಿಸುತ್ತೆ ಈ ರೋಬೋಟ್!

ಸ್ಪೇನ್‍ನ ಪ್ರಸಿದ್ಧ ಖಾದ್ಯ ‘ಪೇಯೆಲ್ಲಾ’ ತಯಾರಿಸುತ್ತೆ ಈ ರೋಬೋಟ್!

REUTERS/Susana Vera

REUTERS/Susana Vera

ಸ್ಪ್ಯಾನಿಷ್ ಕಂಪೆನಿ ಬಿಆರ್5 ಎಂಬ ರೋಬೋಟ್ ಅನ್ನು ತಯಾರು ಮಾಡಿದೆ. ಅದು ರಾಷ್ಟ್ರೀಯ ಪಾಕಪದ್ಧತಿಯ ವಿಶ್ವಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದಾದ ಪೇಯೆಲ್ಲಾವನ್ನು ತುಂಬಾ ರುಚಿಕಟ್ಟಾಗಿ ತಯಾರಿಸುತ್ತದೆ. ಸ್ಟೇನ್‍ನಿಂದ ಆಚೆಯೂ ಸಹ ಇದು ತಯಾರಿಸುವ ಆಹಾರೋತ್ಪನ್ನಗಳು ಪ್ರಸಿದ್ಧಿ ಪಡೆದಿದೆ.

ಮುಂದೆ ಓದಿ ...
  • Share this:

    ಸ್ಪ್ಯಾನಿಷ್ ಬಾಣಸಿಗರು ತಯಾರಿಸುವಷ್ಟು ರುಚಿಯಾದ ಪೇಯೆಲ್ಲಾವನ್ನು ರೋಬೋಟ್ ತಯಾರಿಸುವುದೇ? ಹೌದು ಎನ್ನುತ್ತದೆ ಸ್ಪ್ಯಾನಿಷ್ ಕಂಪನಿ. ನಿಜ, ಸ್ಪ್ಯಾನಿಷ್ ಕಂಪೆನಿಯೊಂದು ರೋಬೋಟ್ ಅನ್ನು ಅಭಿವೃದ್ಧಿಪಡಿಸಿದ್ದು, ಅದು ಪೇಯೆಲ್ಲಾವನ್ನು ಬೇಯಿಸುವ ಮೂಲಕ ಬಾಣಸಿಗರಿಂದ ಭೇಷ್ ಎನಿಸಿಕೊಂಡಿದೆ.


    ಸ್ಪ್ಯಾನಿಷ್ ಕಂಪೆನಿ ಬಿಆರ್5 ಎಂಬ ರೋಬೋಟ್ ಅನ್ನು ತಯಾರು ಮಾಡಿದೆ. ಅದು ರಾಷ್ಟ್ರೀಯ ಪಾಕಪದ್ಧತಿಯ ವಿಶ್ವಪ್ರಸಿದ್ಧ ಭಕ್ಷ್ಯಗಳಲ್ಲಿ ಒಂದಾದ ಪೇಯೆಲ್ಲಾವನ್ನು ತುಂಬಾ ರುಚಿಕಟ್ಟಾಗಿ ತಯಾರಿಸುತ್ತದೆ. ಸ್ಟೇನ್‍ನಿಂದ ಆಚೆಯೂ ಸಹ ಇದು ತಯಾರಿಸುವ ಆಹಾರೋತ್ಪನ್ನಗಳು ಪ್ರಸಿದ್ಧಿ ಪಡೆದಿದೆ.


    ಭಾನುವಾರ ಮನೆಯಲ್ಲಿ ಅನ್ನದಿಂದ ಮಾಡುವ ಖಾದ್ಯಗಳು ನಮಗೆ ವಿಭಿನ್ನವಾದ ರುಚಿ ನೀಡುತ್ತದೆ. ಆದರೆ ನಮಗೆ ಕೇವಲ ಮನೆಗೆ ಮಾತ್ರ ಮೀಸಲಾಗಿಸುವ ಅಥವಾ ಮೀಸಲಾಗುವ ಆಸಕ್ತಿಯಿಲ್ಲ. ನಮ್ಮ ಗುರಿ ನಮ್ಮ ದೇಶದ ಆಹಾರವನ್ನು ಪ್ರಪಂಚದಾದ್ಯಂತ ತಲುಪಿಸುವುದಾಗಿದೆ ಎಂದು ಬಿಆರ್5 ಸ್ಥಾಪಕ ಎನ್ರಿಕ್ ಲಿಲ್ಲೋ ರಾಯಿಟರ್ಸ್ ಸುದ್ದಿ ಸಂಸ್ಥೆಗೆ ತಿಳಿಸಿದೆ.


    ಜಪಾನಿನ ಕೆಲವು ರೆಸ್ಟೋರೆಂಟ್‌ಗಳು ಹಾಗೂ ಪಾರ್ಕ್‍ಗಳಲ್ಲಿ ಸ್ವಂತ ಪೇಯೆಲ್ಲಾ ರೋಬೋಟ್ ಹೊಂದಿವೆ. ಆದರೆ ಸ್ಥಳೀಯವಾಗಿ ಮಾತ್ರ ಖ್ಯಾತಿ ಪಡೆದಿದೆ ಎಂದು ಲಿಲ್ಲೋ ತಿಳಿಸಿದರು.


    ರೋಬೋಟ್ ತಯಾರಿಸಿದ ಪೇಯೆಲ್ಲಾ ಸೇವಿಸಿದ ಪೆಯೆಲಾ ಬಾಣಸಿಗ ಮತ್ತು “ಕೊಕಿನಿಯಾ” ಗ್ಯಾಸ್ಟ್ರೊನಮಿ ಶಾಲೆಯ ನಿರ್ದೇಶಕಿ ಮಾರಿಯಾ ಮುನೊಜ್, ಓಲೆ ಅವರು ತಯಾರಿಸಿದ ಈ ರೋಬೋಟ್ ಅದ್ಭುತವಾಗಿದ್ದು, ನನಗೆ ತುಂಬಾ ಇಷ್ಟವಾಯಿತು ಎನ್ನುತ್ತಾರೆ.


    ಈ ರೋಬೋಟ್ ಎಲೆಕ್ಟ್ರಾನಿಕ್ ನಿಯಂತ್ರಿತ ಸ್ಟೌ ರೀತಿಯಲ್ಲಿದ್ದು ಸಂಪೂರ್ಣವಾಗಿ ಮೆಕ್ಯಾನಿಕಲ್ ಆಗಿರುತ್ತದೆ. ಇದು ಪೇಯೆಲ್ಲಾಕ್ಕಾಗಿ ಹುರಿದಿಟ್ಟಿದ್ದ ಪದಾರ್ಥಗಳನ್ನು ಬಾಣಲಿಯಲ್ಲಿ ಹಾಕಿ ನಂತರ ಅಕ್ಕಿಯನ್ನು ಸೇರಿಸುತ್ತದೆ. ನಂತರ ಸ್ವಲ್ಪ ತಿರುವಿ ಇದಕ್ಕೆ ನಂತರ ಮೀನನ್ನು ಸೇರಿಸಲಾಗುತ್ತದೆ. ಇದಕ್ಕೆ ಮೀನಿನ ಬದಲು, ಸಮುದ್ರ ಪ್ರಾಣಿಗಳನ್ನು ಸೇರಿಸಲೂಬಹುದು.


    ಒಂದು ಬಾಣಲಿಗೆ ಎಷ್ಟು ಅಳತೆ ಬೇಕೋ ಅದಕ್ಕೆ ಅನುಗುಣವಾಗಿ ಪೇಯೆಲ್ಲಾ ತಯಾರಿಸಲು ಬೇಕಾದ ಎಲ್ಲಾ ಪದಾರ್ಥಗಳನ್ನು ಮೊದಲೇ ತಯಾರು ಮಾಡಿಟ್ಟುಕೊಳ್ಳಬೇಕು. ನಂತರ ಅದನ್ನು ಬಾಣಲಿಗೆ ಹಾಕಿಡಬೇಕು. ನಂತರ ರೋಬೋಟ್ ಅದನ್ನೆಲ್ಲಾ ಸೇರಿಸಿ ತಿರುವಿ ಬಹಳ ವೇಗವಾಗಿ ಮಾಡಿ ಮುಗಿಸುತ್ತದೆ.


    ಇದು ರೆಸ್ಟೋರೆಂಟ್‍ಗಳಲ್ಲಿ ಬಹಳ ಉಪಯೋಗಕ್ಕೆ ಬರುತ್ತದೆ. ಒಂದೇ ಸಮಯದಲ್ಲಿ ವಿವಿಧ ರೀತಿಯ ಪೇಯೆಲ್ಲಾ ಮಾಡಲು ಅನುಕೂಲವಾಗುತ್ತದೆ ಹಾಗೂ ಕೆಲಸವನ್ನು ಕಡಿಮೆ ಮಾಡುತ್ತದೆ, ಗ್ರಾಹಕ ಸ್ನೇಹಿಯಾಗಲು ಸಹ ಸಹಕಾರಿಯಾಗುತ್ತದೆ. ಅಕಸ್ಮಾತ್ ನೀವು ಒಂದು ಪೇಯೆಲ್ಲಾ ಮಾಡಲು ಹೊರಟಿದ್ದರೆ, ಅದೇ ಸ್ಥಳದಲ್ಲಿ ರೋಬೋಟ್‌ 20 ಪೇಯೆಲ್ಲಾಗಳನ್ನು ಅನಾಯಾಸವಾಗಿ ಮಾಡಬಹುದು.


    ಪೇಯೆಲ್ಲಾ ಎಂದರೇನು?


    ಪೇಯೆಲ್ಲಾ ಒಂದು ಅತ್ಯುತ್ತಮ ಸ್ಪ್ಯಾನಿಷ್ ಅಕ್ಕಿ ಖಾದ್ಯವಾಗಿದ್ದು, ಅಕ್ಕಿ, ಕೇಸರಿ, ತರಕಾರಿಗಳು, ಕೋಳಿ ಮತ್ತು ಸಮುದ್ರಾಹಾರವನ್ನು ಬೆರೆಸಿ ಮಾಡಲಾಗುತ್ತದೆ. ಪೇಯೆಲ್ಲಾ ವೆಲೆನ್ಸಿಯಾದಿಂದ ಹುಟ್ಟಿಕೊಂಡಿದ್ದರೂ, ಇದನ್ನು ಸ್ಪೇನ್‍ನ ರಾಷ್ಟ್ರೀಯ ಆಹಾರವೆಂದು ಗುರುತಿಸಲಾಗಿದೆ. ಇದರಲ್ಲಿ ಹಲವಾರು ವಿಭಿನ್ನ ಪ್ರಭೇದಗಳಿವೆ. ಚಿಕನ್ ಪೇಯೆಲ್ಲಾ, ಸೀಫುಡ್ ಪೇಯೆಲ್ಲಾ ಅಥವಾ ಮಿಶ್ರ ಪೇಯೆಲ್ಲಾ (ಸಮುದ್ರಾಹಾರ, ಮಾಂಸ ಮತ್ತು ತರಕಾರಿಗಳ ಸಂಯೋಜನೆ) ಇವು ಪೇಯಲ್ಲಾದ ಸಾಮಾನ್ಯ ವಿಧಗಳು.




    ಸ್ಪ್ಯಾನಿಷ್ ಪೇಯೆಲ್ಲಾ ತಯಾರಿಸಲು ಬೇಕಾಗುವ ಪದಾರ್ಥಗಳು:


    ಅಕ್ಕಿ, ಕೇಸರಿ, ತರಕಾರಿಗಳು, ಚಿಕನ್ ಮತ್ತು ಸೀಫುಡ್. ಅಂತಾರಾಷ್ಟ್ರೀಯ ಭಕ್ಷ್ಯಗಳನ್ನು ಇಷ್ಟಪಡುವವರಿಗೆ ಇದು ಇಷ್ಟವಾಗುತ್ತದೆ.

    First published: