news18-kannada Updated:February 20, 2021, 3:43 PM IST
ಸಾಂದರ್ಭಿಕ ಚಿತ್ರ
ದುಬಾರಿ ಹೋಟೆಲ್ನಲ್ಲಿ ಹನಿಮೂನ್ ಮಾಡಿಕೊಳ್ಳೋಣ ಎಂದು ಹೋದ ದಂಪತಿಗೆ ಈ ಹೋಟೆಲ್ ದೊಡ್ಡ ಶಾಕ್ ಕೊಟ್ಟಿದೆ. ಹನಿಮೂನ್ ಕ್ಷಣಗಳು ಯಾರಿಗೂ ತಿಳಿಯಬಾರದು ಎಂದು ದಂಪತಿಗಳು ಫೈವ್ ಸ್ಟಾರ್ ಹೋಟೆಲ್ಗಳನ್ನು ಬುಕ್ ಮಾಡಿಕೊಳ್ಳುತ್ತಾರೆ. ಆದರೆ, ಹನಿಮೂನ್ಗೆ ಬಂದ ನವದಂಪತಿಯ ಖಾಸಗಿ ಸಮಯ ಎಲ್ಲರಿಗೂ ತಿಳಿಯುವಂತೆ ಆದರೆ ನಿಜಕ್ಕೂ ಅವರಿಗೆ ಶಾಕ್ ಆಗುತ್ತದೆ. ಇದೇ ರೀತಿಯ ಶಾಕ್ ದಕ್ಷಿಣ ಕೊರಿಯಾದ ಸ್ಟಾರ್ ಹೋಟೆಲ್ವೊಂದರಲ್ಲಿ ನಡೆದಿದೆ.
ದಕ್ಷಿಣ ಕೊರಿಯಾದ ಜೆಜು ದ್ವೀಪದ ದುಬಾರಿ ದಿ ಗ್ರ್ಯಾಂಡ್ ಜೋಸುನ್ ರೆಸಾರ್ಟ್ನಲ್ಲಿ ಮಹಿಳೆಯೊಬ್ಬರು ಸೌನಾದಲ್ಲಿ ಸ್ನಾನ ಮಾಡುತ್ತಿದ್ದರು. ಆದರೆ, ಸೌನಾದಲ್ಲಿ ಸ್ನಾನ ಮಾಡುವುದು ಯಾರಿಗೂ ಕಾಣದಂತೆ ಕಿಟಕಿಗಳಿಗೆ ಕನ್ನಡಿಗಳನ್ನು ಅಳವಡಿಸಲಾಗಿದೆ. ಆದರೆ, ಸೌನಾದ ಕೆಲವು ಕಿಟಕಿಗಳಲ್ಲಿ ಅಳವಡಿಸಿದ ಕನ್ನಡಿ ಇಲ್ಲದೆ ಹೊರಗಿನವರಿಗೆ ಅದರ ಚಿತ್ರಣ ಕಾಣುತ್ತಿತ್ತು. ಇದನ್ನು ಗಮನಿಸದ ಮಹಿಳೆಯೊಬ್ಬರು ಸ್ನಾನ ಮಾಡಿದ್ದಾರೆ. ಅದನ್ನು ಅಲ್ಲಿನ ಜನರೆಲ್ಲರೂ ನೋಡಿದ್ದಾರೆ ಎಂದು ಹೋಟೆಲ್ನ ವೆಬ್ಸೈಟ್ನಲ್ಲಿ ತಿಳಿಸಿದೆ. ಜೊತೆಗೆ ಈ ರೀತಿ ಆಗಿರುವುದಕ್ಕೆ ಹೋಟೆಲ್ ಕ್ಷಮೆ ಕೇಳಿದೆ.
ವೆಬಿನಾರ್ಗಳಿಗೆ ಸರ್ಕಾರದ ಅನುಮತಿ ಕಡ್ಡಾಯ; ಶಿಕ್ಷಣ ಸಚಿವಾಲಯಕ್ಕೆ ವಿಜ್ಞಾನ ಅಕಾಡೆಮಿಗಳಿಂದ ಪತ್ರ
ಹೋಟೆಲ್ ಹೇಳಿದ್ದೇನು?
ಹಗಲು ಸಮಯದಲ್ಲಿ ಸೌನಾದಲ್ಲಿ ಯಾರು ಇದ್ದಾರೆ ಎಂಬುದು ಯಾರಿಗೂ ತಿಳಿಯಲು ಸಾಧ್ಯವಿಲ್ಲ. ರಾತ್ರಿ ವೇಳೆಯೂ ಸ್ನಾನ ಮಾಡುವುದು ಕಾಣುವುದಿಲ್ಲ. ಸದ್ಯ ಆಗಿರುವ ತೊಂದರೆಯನ್ನು ಬಗೆಹರಿಸುತ್ತೇವೆ. ಎಲ್ಲಾ ಕಿಟಕಿಗಳಿಗೆ ಕನ್ನಡಿಗಳು ಸರಿಯಾಗಿ ಇದೆಯಾ ಎಂದು ಪರಿಶೀಲಿಸುತ್ತೇವೆ. ಸಮಸ್ಯೆ ಕುರಿತು ಪರಿಶೀಲನೆ ನಡೆಸಿದ್ದೇವೆ ಹಾಗಾಗಿ ಆವಿಸ್ನಾನವನ್ನು ನಿಲ್ಲಿಸಿದ್ದೇವೆ ಎಂದು ಹೋಟೆಲ್ ವಿವರಿಸಿದೆ.
ಇನ್ನು ಕೊರಿಯಾದ ಬ್ಲಾಗರ್ ಒಬ್ಬರು ತಮ್ಮ ಹನಿಮೂನ್ ಸಮಯ ಕಳೆಯಲು ಜೆಜು ದ್ವೀಪದ ದಿ ಗ್ರ್ಯಾಂಡ್ ಜೋಸುನ್ ರೆಸಾರ್ಟ್ಗೆ ಹೋಗಿದ್ದರು. ಈ ವೇಳೆ ನಡೆದ ಅನುಭವವನ್ನು ಹಂಚಿಕೊಂಡಿದ್ದಾರೆ. ನಾನು ಹೊಸದಾಗಿ ತೆರೆದ ದಿ ಗ್ರ್ಯಾಂಡ್ ಜೋಸುನ್ ಹೋಟೆಲ್ನಲ್ಲಿ ಉಳಿದುಕೊಂಡಿದ್ದೆ. ಆದರೆ ನನ್ನ ಜೀವನದಲ್ಲಿ ಹನಿಮೂನ್ ಅತ್ಯಂತ ಕೆಟ್ಟ ನೆನಪಾಗಿ ಉಳಿದಿದೆ ಎಂದು ಬ್ಲಾಗರ್ ಬರೆದುಕೊಂಡಿದ್ದಾರೆ.
ಹನಿಮೂನ್ ಮೂಡ್ನಲ್ಲಿದ್ದ ವ್ಯಕ್ತಿ ಶಾಕ್ ಆದ!ಹನಿಮೂನ್ ಸಮಯ ಹೋಟೆಲ್ನಲ್ಲಿ ಹಕ್ಕಿಗಳಂತೆ ದಂಪತಿಗಳು ಕಾಲ ಕಳೆಯುತ್ತಿದ್ದರು. ಪತ್ನಿ ಸ್ನಾನ ಮುಗಿಸಿದ ಬಳಿಕ ವಾಕ್ ಮಾಡಲು ರೂಮ್ನಿಂದ ಹೊರಗೆ ಹೋಗಿದ್ದಾನೆ. ಆಗ ಸೌನಾದ ಕಿಟಕಿಗಳನ್ನು ನೋಡಿದಾಗ ಒಳಗಿನ ಚಿತ್ರಣ ನೋಡಲು ಸಾಧ್ಯವಾಗುತ್ತದೆ ಎಂಬುದು ಆತನಿಗೆ ತಿಳಿದಿದೆ. ಅಷ್ಟೇ ಅಲ್ಲದೇ ಹೋಟೆಲ್ನ ಯಾವುದೇ ಭಾಗದಿಂದಲೂ ಸ್ನಾನಗೃಹಗಳ ಒಳಭಾಗವನ್ನು ನೋಡಬಹುದು.
ಇದನ್ನು ಕಂಡು ನನ್ನ ಹೆಂಡತಿ ಮತ್ತು ನಾನು ಆಘಾತಕ್ಕೊಳಗಾಗಿದ್ದೇವೆ. ನಾವು ಸ್ನಾನ ಮಾಡುವುದನ್ನು ಇತರೆ ಜನರು ನೋಡಿದ್ದಾರಾ ಇಲ್ಲವೇ ಎಂಬ ಘಟನೆಯನ್ನು ನೆನೆದು ಶಾಕ್ ಆಗಿತ್ತು. ಘಟನೆ ಬಗ್ಗೆ ಹೋಟೆಲ್ನಲ್ಲಿದ್ದ ಅತಿಥಿಗಳು ಹೋಟೆಲ್ ಸಿಬ್ಬಂದಿಗೆ ದೂರು ನೀಡಿದರು. ಆಗ ಸ್ಥಳೀಯ ಪೊಲೀಸರನ್ನು ಕರೆಸಲಾಯಿತು. ಆದರೆ, ಆ ವೇಳೆ ಹೋಟೆಲ್ ವ್ಯವಸ್ಥಾಪಕರು ಹೋಟೆಲ್ನಿಂದ ಹೊರಗೆ ಇದ್ದರು ಎಂದು ಬ್ಲಾಗರ್ ಹೇಳಿಕೊಂಡಿದ್ದಾರೆ.
ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದ್ದಾರೆ. ಹೊರಗಿನಿಂದ ಯಾರಾದರೂ ಚಿತ್ರಗಳನ್ನು ಅಥವಾ ವಿಡಿಯೋವನ್ನು ಸೆರೆ ಹಿಡಿಯಲು ಹೀಗೆ ಮಾಡಿದ್ದಾರಾ ಎಂಬುದನ್ನು ತನಿಖೆ ನಡೆಸುತ್ತಿದ್ದಾರೆ. ಕೊರಿಯಾದಲ್ಲಿ ಕೊರೋನಾ ಸೋಂಕಿನ ಹಿನ್ನೆಲೆ ಕೆಲವು ಜನರು ಹೊಸ ವರ್ಷದ ಜೊತೆಗೆ ಸಂಭ್ರಮ ಕ್ಷಣಗಳನ್ನು ಈಗ ಕಳೆಯಲು ಆರಂಭಿಸಿದ್ದಾರೆ.
Published by:
Latha CG
First published:
February 20, 2021, 3:43 PM IST