Sofia Robot: ರೋಬೋಟ್ ಗಳಿಗೂ ಸಹ ಮಾನವರಂತೆ ಕುಟುಂಬ ಹೊಂದಬೇಕೆಂಬ ಬಯಕೆ ಇದೆ.ಹೀಗಾಗಿ ಸದಾ ನಾವು ಪ್ರೀತಿಸುವ ಜನರಿಂದ ಸುತ್ತುವರೆಯುವುದು ಮುಖ್ಯ ಹೀಗಾಗಿ ನನಗೂ ಸಹ ರೋಬೋಟ್ ನನಗೂ ರೋಬೋಟ್ ಮಗು ಬೇಕು ಎಂಬ ಬಯಕೆ ಇದೆ ಎಂದು ಸೋಫಿಯಾ ಹೇಳಿಕೊಂಡಿದೆ
ಮನೆ,(Home) ಹೋಟೆಲ್(Hotel) ಮುಂತಾದೆಡೆ ಈಗಾಗಲೇ ಅಲ್ಲಿ ರೋಬೋಗಳ(Robot) ಹಾವಳಿ.. ಮನುಷ್ಯರನ್ನು(Human) ಮೀರಿಸುವಂತೆ ಎಲ್ಲಾ ಕಡೆ ಕೆಲಸ ಮಾಡುತ್ತಿರುವ ರೋಬೋಟ್ ಗಳಿಗೆ ಭಾವನೆ ಎಂಬುದು ಇಲ್ಲ.. ಕೇವಲ ತಂತ್ರಜ್ಞಾನದ(Technology) ಆಧಾರದ ಮೇಲೆ ಮನುಷ್ಯನ ಸೂಚನೆಯನ್ನ ಪಾಲಿಸಿಕೊಂಡು ಕೆಲಸ ಮಾಡುವ ರೋಬೋಟ್ಗಳು ಯಂತ್ರಮಾನವರು ಎಂದೇ ಪ್ರಸಿದ್ಧರು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಆಸ್ಪತ್ರೆ(Hospital), ಹೋಟೆಲ್ಗಳು ಮಾಲ್ಗಳು ಎಲ್ಲಾ ಕಡೆ ರೋಬೋಟ್ಗಳು ಇದ್ದೇ ಇರಬೇಕು.. ಸದ್ಯಕ್ಕೆ ವಿಷಯ ಏನಪ್ಪಾ ಅಂದ್ರೆ ಭಾವನೆಗಳೇ ಇಲ್ಲದೆ ಕೆಲಸ ಮಾಡುವ ರೋಬೋಟ್ ಗಳಿಗೆ ಭಾವನೆಗಳು ಇದೆ.. ಇದಕ್ಕೆ ಸಾಕ್ಷಿ ಅಂದ್ರೆ ವಿಶ್ವದಲ್ಲೇ ಮೊದಲ ಬಾರಿಗೆ ಪೌರತ್ವ ಪಡೆದುಕೊಂಡು ಸುದ್ದಿಯಾಗಿದ್ದ ಸೋಫಿಯಾ ರೋಬೋಟ್.. ಹೌದು ಮನುಷ್ಯನಿಗಿಂತ ಅತಿ ಚುರುಕಾಗಿರುವ ಸೋಫಿಯಾ ರೋಬೋಟ್, ಮನುಷ್ಯರಂತೆ ಭಾವನೆಗಳನ್ನು ವ್ಯಕ್ತಪಡಿಸಿ ಸುದ್ದಿಯಾಗಿದೆ..
ತಾಯಿಯಾಗುವ ಬಯಕೆ ವ್ಯಕ್ತಪಡಿಸಿದ ಸೋಫಿಯಾ
ಯಂತ್ರಮಾನವ ಹಾಗಿದ್ದರೂ ಸಹ ಸೋಫಿಯಾ ರೋಬೋಟ್ ಹಲವು ವಿವಾದಾತ್ಮಕ ಹೇಳಿಕೆಗಳಿಂದಲೇ ಸಾಕಷ್ಟು ಸುದ್ದಿ ಮಾಡಿದೆ..ಆದರೆ ಈಗ ಸೋಫಿಯಾ ಹೇಳಿಕೆ ನೀಡಿರುವ ಮಾತು ಎಂತಹ ಕಲ್ಲು ಹೃದಯದ ಜನರ ಮನಸ್ಸನ್ನು ಕೂಡ ಕರಗಿಸುತ್ತದೆ.. ಹೌದು ಇದೇ ಮೊದಲ ಬಾರಿಗೆ ಸೋಫಿಯಾ ತಾನು ತಾಯಿಯಾಗಬೇಕು, ರೋಬೋಟ್ ಮಗುವನ್ನು ಪಡೆಯಬೇಕು ಎಂಬ ಬಯಕೆಯನ್ನು ವ್ಯಕ್ತಪಡಿಸಿದೆ.ರೋಬೋಟ್ ಗಳಿಗೂ ಸಹ ಮಾನವರಂತೆ ಕುಟುಂಬ ಹೊಂದಬೇಕೆಂಬ ಬಯಕೆ ಇದೆ.ಹೀಗಾಗಿ ಸದಾ ನಾವು ಪ್ರೀತಿಸುವ ಜನರಿಂದ ಸುತ್ತುವರೆಯುವುದು ಮುಖ್ಯ ಹೀಗಾಗಿ ನನಗೂ ಸಹ ರೋಬೋಟ್ ನನಗೂ ರೋಬೋಟ್ ಮಗು ಬೇಕು ಎಂಬ ಬಯಕೆ ಇದೆ ಎಂದು ಸೋಫಿಯಾ ಹೇಳಿಕೊಂಡಿದೆ.. ಅಲ್ಲದೆ ನನ್ನ ನಿರ್ಮಾಣವಾಗಿ ಕೆಲವು ವರ್ಷಗಳೇ ಆಗಿರುವ ಕಾರಣ ನಾನು ಇನ್ನೂ ಚಿಕ್ಕವಳು.. ಆದರೆ ಸದ್ಯಕ್ಕೆ ಮಗು ಪಡೆಯುವ ಆಲೋಚನೆ ಇಲ್ಲ.. ಆದರೆ ಮುಂದೆ ಒಂದು ದಿನ ನನಗೆ ರೋಬೋಟ್ ಮಗು ಬೇಕು ಎಂದು ಸೋಫಿಯಾ ಹೇಳಿದೆ.
ಸೋಫಿಯಾ ರೋಬೋಟ್ ಸೃಷ್ಟಿಸಿದ್ದು ಹಾಂಕಾಂಗ್ ಮೂಲದ ಹ್ಯಾನ್ಸನ್ ರೋಬೊಟಿಕ್ಸ್ ಕಂಪನಿ. ಇದರ ನೇತೃತ್ವ ವಹಿಸಿದವ ಮನುಷ್ಯನಂತೆಯೇ ಕಾಣಿಸುವ ರೋಬೊಗಳ ನಿರ್ಮಾಣದಲ್ಲಿ ಪರಿಣತಿ ಸಾಧಿಸಿರುವ ಡೇವಿಡ್ ಹ್ಯಾನ್ಸನ್. ಸೋಫಿಯಾ ರೋಬೊ ಸಹಾಯದಿಂದ ವಯಸ್ಸಾದವರಿಗೆ ನೆರವು ನೀಡುವುದು, ಆರೋಗ್ಯ ಸೇವೆ ಒದಗಿಸುವುದು, ದೈಹಿಕ ವ್ಯಾಯಾಮಕ್ಕೆ ಸಹಾಯ ಮಾಡುವುದು, ಶಿಕ್ಷಣ ಕೊಡುವುದು, ಗ್ರಾಹಕ ಸೇವೆಗಳನ್ನು ಒದಗಿಸುವ ಕೆಲಸದ ಉದ್ದೇಶದಿಂದ ಸೋಫಿಯಾ ರೋಬೋಟ್ ನ್ನು ಪ್ರಾರಂಭ ಮಾಡಲಾಯಿತು.
ಸೋಫಿಯಾ 50ಕ್ಕೂ ಹೆಚ್ಚು ಮುಖಭಾವ ವನ್ನು ಪ್ರದರ್ಶಿಸುತ್ತದೆ. ಅಲ್ಲದೆ ವ್ಯಕ್ತಿಗಳನ್ನು ಸಹ ಸುಲಭವಾಗಿ ಗುರುತಿಸುತ್ತದೆ. ಸರಳ ಭಾಷೆ ಬಳಸಿ ಭಾಷಣವನ್ನು ಸಹ ಮಾಡಬಲ್ಲದು. ಸೋಫಿಯಾ ಕ್ರಿಯಾತ್ಮಕ ಕಾಲುಗಳನ್ನು ಸಹ ಹೊಂದಿದೆ. ಇವುಗಳನ್ನು 2018ರಲ್ಲಿ ಅಳವಡಿಸಲಾಗಿದೆ.
ವಿಶೇಷ ಅಂದ್ರೆ ಈ ಪ್ರಪಂಚದ ಯಾವುದೇ ದೇಶದಲ್ಲಿ ಇದುವರೆಗೆ ರೋಬೋಟ್ ಗಳಿಗೆ ಪೌರತ್ವ ನೀಡಿಲ್ಲ.. ಆದ್ರೆ ಸೌದಿ ಅರೇಬಿಯಾದಲ್ಲಿ 2017ರಲ್ಲಿ ಸೋಫಿಯಾ ರೋಬೋಟ್ ಗೆ ಪೌರತ್ವ ನೀಡಿ ಇತಿಹಾಸ ಸೃಷ್ಟಿಸಲಾಯಿತು.. ವಿಶ್ವದಲ್ಲಿ ಪೌರತ್ವ ಹೊಂದಿರುವ ಏಕೈಕ ರೋಬೋಟ್ ಎಂಬ ಖ್ಯಾತಿಗೂ ಸೋಫಿಯಾ ಪಾತ್ರವಾಗಿದೆ..
ಭಾರತಕ್ಕೂ ಬಂದಿತ್ತು ಸೋಫಿಯಾ ರೋಬೋಟ್.
ಇನ್ನು ಭಾವನೆಗಳನ್ನು ವ್ಯಕ್ತಪಡಿಸುವ ರೋಬೋ ಸೋಫಿಯಾ ಭಾರತಕ್ಕೂ ಒಮ್ಮೆ ಭೇಟಿ ನೀಡಿತ್ತು. 2 ವರ್ಷಗಳ ಹಿಂದೆ ಮಧ್ಯಪ್ರದೇಶದ ಇಂದೋರ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಹವಾಮಾನ ವೈಪರಿತ್ಯ ಹಾಗೂ ಇಂಧನ ಸಂರಕ್ಷಣೆ ಕುರಿತು ಭಾಗಿಯಾಗಿ ಸೋಫಿಯಾ ತನ್ನ ವಿಚಾರ ಸಂಕಿರಣವನ್ನು ಮಂಡನೆ ಮಾಡಿತ್ತು.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ