Divorce party | 17 ವರ್ಷದ ದಾಂಪತ್ಯಕ್ಕೆ ಫುಲ್​ ಸ್ಟಾಪ್​ ಇಟ್ಟಳು, ಖುಷಿಯಲ್ಲಿ ಸ್ನೇಹಿತರಿಗೆ ಡಿವೋರ್ಸ್​ ಪಾರ್ಟಿ ಕೊಟ್ಟಳು; ಇದು ಭಾರತೀಯ ಮಹಿಳೆಯೊಬ್ಬಳ ಕಥೆ!

Divorce party: ಮಹಿಳೆಯೊಬ್ಬಳು ಗಂಡನಿಂದ ದೂರವಾಗಿದ್ದ ಖುಷಿಯಲ್ಲಿ ಪಾರ್ಟಿ ಏರ್ಪಡಿಸಿದ್ದಾಳೆ. ಇದನ್ನು ಡಿಪೋರ್ಟ್​ ಪಾರ್ಟಿ ಎಂದು ಕರೆದಿದ್ದಾಳೆ. ಮಹಿಳೆ ಪತಿಯಿಂದ ದೂರವಾಗಿದ್ದನ್ನು ಸ್ನೇಹಿತರಿಗೆ ಎಣ್ಣೆ- ಮಾಂಸದ ಭರ್ಜರಿ ಪಾರ್ಟಿ ನೀಡುವ ಮೂಲಕ ಡಿಪೋರ್ಸ್​ ನೀಡಿ ಪತಿಯ ಸಾಂಗತ್ಯದಿಂದ ಹೊರಬಂದೆ ಎಂದು ಸಂಭ್ರಮಿಸಿದ್ದಾಳೆ!

ಸೋನಿಯಾ ಗುಪ್ತಾ

ಸೋನಿಯಾ ಗುಪ್ತಾ

  • Share this:
    Women Divorce Party: ಮದುವೆಗೂ ಮುನ್ನ ವಿವಾಹವಾಗುವ ಜೋಡಿಗಳು ತಮ್ಮ ಸ್ನೇಹಿತರಿಗೆ ಬಂಧು-ಮಿತ್ರರಿಗೆ ಪಾರ್ಟಿ ಏರ್ಪಡಿಸುತ್ತಾರೆ. ತಾನೂ ವಿವಾಹವಾಗುವ ವಿಚಾರವನ್ನು ಬಗ್ಗೆ ಹೇಳಿಕೊಂಡು ಸಂಭ್ರಮಿಸುತ್ತಾರೆ. ಸ್ನೇಹಿತರು ಕೂಡ ವಿವಾಹವಾಗುತ್ತಿರುವ ಸ್ನೇಹಿತನಿಗಾಗಿ ಪಾರ್ಟಿ ಏರ್ಪಡಿಸುವ ಟ್ರೆಂಡಿಂಗ್​ ಸದ್ಯ ಚಾಲ್ತಿಯಲ್ಲಿದೆ. ಒಟ್ಟಿನಲ್ಲಿ ವಿವಾಹವಾಗುವ ಖುಷಿಯನ್ನು ಸಂಭ್ರಮಿಸಲು ಮತ್ತು ಒಟ್ಟಿಗೆ ಸ್ನೇಹಿತರನ್ನೇಲ್ಲಾ ವಿವಾಹಕ್ಕೆ ಆಹ್ವಾನಿಸಲಾಗುತ್ತದೆ ಎಂದು ಈ ಪಾರ್ಟಿ ಮಾಡಲಾಗುತ್ತದೆ. ಹಾಗಾಗಿ ಇದಕ್ಕೆ ಬ್ಯಾಚುಲರ್​ ಪಾರ್ಟಿ (Bachelor party) ಎಂಬ ಹೆಸರು ಕೂಡ ಇದೆ. ಆದರೆ ನಿಮಗೆ ಇದೆಲ್ಲದಕ್ಕಿಂತ ಹೊಸದಾದ ಡಿವೋರ್ಸ್​​ ಪಾರ್ಟಿಯ (Divorce party) ಬಗ್ಗೆ ಗೊತ್ತಿದ್ಯಾ? ಅದಕ್ಕೊಂದು ಸಾಕ್ಷಿಯೆಂಬಂತೆ ಇಲ್ಲೊಂದು ಘಟನೆಯಿದೆ. ಭಾರಿ ಕುತೂಹಲಕರವಾಗಿದೆ.. ಏನು ಆ ಘಟನೆ ತಿಳಿಯೋಣ…

    ಮಹಿಳೆಯೊಬ್ಬಳು ಗಂಡನಿಂದ ದೂರವಾಗಿದ್ದ ಖುಷಿಯಲ್ಲಿ ಪಾರ್ಟಿ ಏರ್ಪಡಿಸಿದ್ದಾಳೆ. ಇದನ್ನು ಡಿಪೋರ್ಟ್​ ಪಾರ್ಟಿ ಎಂದು ಕರೆದಿದ್ದಾಳೆ. ಮಹಿಳೆ ಪತಿಯಿಂದ ದೂರವಾಗಿದ್ದನ್ನು ಸ್ನೇಹಿತರಿಗೆ ಎಣ್ಣೆ- ಮಾಂಸದ ಭರ್ಜರಿ ಪಾರ್ಟಿ ನೀಡುವ ಮೂಲಕ ಡಿಪೋರ್ಸ್​ ನೀಡಿ ಪತಿಯ ಸಾಂಗತ್ಯದಿಂದ ಹೊರಬಂದೆ ಎಂದು ಸಂಭ್ರಮಿಸಿದ್ದಾಳೆ!

    ಸೋನಿಯಾ ಗುಪ್ತಾ (Sonia Gupta) ಎಂಬ 45 ವರ್ಷದ ಮಹಿಳೆ ತಮ್ಮ 17 ವರ್ಷದ ದಂಪತ್ಯಕ್ಕೆ ಡಿಪೋರ್ಸ್​ ನೀಡುವ ಮೂಲಕ ಫುಲ್​ ಸ್ಟಾಪ್​​ ಇಟ್ಟಿದ್ದಾರೆ. ಅದರಲ್ಲೂ ಈ ಮಹಿಳೆ ಭಾರತೀಯಳು ಎಂಬುದೇ ಅಚ್ಚರಿಯ ಸಂಗತಿಯಾಗಿದೆ.

    ಸೋನಿಯಾ 2003ರಲ್ಲಿ ಭಾರತದಲ್ಲಿ ಅರೇಂಜ್ಡ್​ ಮ್ಯಾರೇಜ್​ ಆಗುತ್ತಾರೆ. ವಿವಾಹದ ನಂತರ ಪತಿಯೊಂದಿಗೆ ವಿದೇಶಕ್ಕೆ ತೆರಳುತ್ತಾರೆ. ಯುಕೆಯಲ್ಲಿ ನೆಲೆಸುತ್ತಾರೆ. ಈ ಜೋಡಿಗೆ ಎರಡು ಮಕ್ಕಳು ಜನಿಸುತ್ತಾರೆ. ಮುಶಾಲ್​ ಮತ್ತು ಶೇ ಎಂಬ ಪುತ್ರರ ಪೋಷಕರಾಗುತ್ತಾರೆ. ಆದರೆ ಸೋನಿಯಾ ಗುಪ್ತಾಗೆ ವರ್ಷಗಳು ಕಳೆದಂತೆ ಪತಿಯೊಂದಿಗಿನ ಸಂಬಂಧ ಅಷ್ಟೇನು ಸರಿ ಬರುವುದಿಲ್ಲ. ಮಾತ್ರವಲ್ಲದೆ ಅತೃತ್ತಿ ಹೊಂದಿದೆ ಎಂದು ಸೋನಿಯಾ ಗುಪ್ತಾ ಹೇಳಿದ್ದಾರೆ. ಹಾಗಾಗಿ ಕೊನೆಗೆ ಇದಕ್ಕೊಂದು ಮುಕ್ತಿ ನೀಡಬೇಕೆಂದು ವಿಚ್ಛೇದನ ನೀಡುತ್ತಾರೆ. ಇನ್ನು ತಾಯಿ ಡಿವೋರ್ಸ್​ ನೀಡಿರುವುದು ಪುತ್ರರಾದ ಮಿಖಾಲ್​ ಮತ್ತು ಶೇ ಗೆ ಖುಷಿ ನೀಡಿದೆಯಂತೆ.

    Sonia Gupta


    ವಿಚ್ಛೇದನದ ಬಳಿಕ ಮಾತನಾಡಿದ ಸೋನಿಯಾ ಗುಪ್ತಾ, ‘‘ಡಿವೋರ್ಸ್​ ನೀಡಿದ ಬಳಿಕ ಜೀವನವಿಲ್ಲ ಎಂದು ಜನರು ಭಾವಿಸುತ್ತಾರೆ. ಆದರೆ ವಾಸ್ತವವಾಗಿ ಹೇಳಬೇಕೆಂದರೆ ನನ್ನ ಜೀವನವೀಗ ಆರಾಮದಾಯಕವಾಗಿದೆ. ನಾನು ತುಂಬಾ ಕಲಿಯುತ್ತಿದ್ದೇನೆ, ಮತ್ತು ಪ್ರಬಲನಾಗಿದ್ದೇನೆ. ಜೈಲಿನಿಂದ ಹೊರಬಂದಂತೆ ಅನಿಸುತ್ತಿದೆ’’ ಎಂದಿದ್ದಾರೆ.

    ಒಟ್ಟಿನಲ್ಲಿ ಸೋನಿಯಾ ಗುಪ್ತಾ ಅವರು 17 ವರ್ಷದ ದಾಂಪತ್ಯಕ್ಕೆ ಫುಲ್​ಸ್ಟಾಪ್​ ನೀಡಿದ್ದಾರೆ. ಹಾಗಾಗಿ ಇದೊಂದು ಸಂತಸದ ಸಂಗತಿಯೆಂದು ತಿಳಿದುಕೊಂಡು ಸ್ನೇಹಿತರಿಗೆ ಪಾರ್ಟಿ ಆಯೋಜಿಸಿದ್ದಾರೆ. ಮಾತ್ರವಲ್ಲದೆ ಪತಿಯ ಸಾಂಗತ್ಯದಿಂದ ದೂರವಾಗಿದ್ದಾರೆ.

    ಸದ್ಯ ಸೋನಿಯಾ ಗುಪ್ತಾ ಅವರ ಈ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅದರಲ್ಲೂ ವಿಚ್ಛೇದನ ಪಾರ್ಟಿ ನೀಡಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

    ಇದನ್ನು ಓದಿ ⇒ ಬರೋಬ್ಬರಿ 13 ಲಕ್ಷ! Sony ಪರಿಚಯಿಸಿದ ಹೊಸ 8K ಟಿವಿಯ ವಿಶೇಷತೆ ಏನೆಂದು ಗೊತ್ತಿದ್ಯಾ?

    ಸಮಾಜದಲ್ಲಿ ಇಂತಹ ಹಲವು ಘಟನೆಗಳು ಆಗಾಗ ನಡೆಯುತ್ತಲೇ ಇರುತ್ತದೆ. ಕೆಲವೊಂದು ಸಂಗತಿಗಳು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದ ಮೂಲಕ ವೈರಲ್​ ಆಗುತ್ತದೆ.
    Published by:Harshith AS
    First published: