Sonam Kapoor: ಸೋನಮ್ ಕಪೂರ್ ಬಳಿ ಎಷ್ಟೆಲ್ಲಾ ದುಬಾರಿ ಆಸ್ತಿಗಳಿವೆ ಗೊತ್ತೆ..? ನೀವೂ ಒಮ್ಮೆ ನೋಡಿ

ಆನಂದ್ ಅಹುಜಾ ಒಬ್ಬ ಶ್ರೀಮಂತ ಉದ್ಯಮಿ. ಸೋನಮ್ ಕಪೂರ್ ಇದೀಗ ತಾಯಿಯಾಗುತ್ತಿದ್ದಾರೆ ಕೂಡ. ಇವರಿಬ್ಬರು ತಮ್ಮ ನಡುವಿನ ಕೆಮೆಸ್ಟ್ರಿಯ ಮೂಲಕ ಬಿಟೌನ್‍ನಲ್ಲಿ ಜನಪ್ರಿಯರು ನಿಜ. ಆದರೆ ಈ ದಂಪತಿ ಅನೇಕ ಬೆಳೆಬಾಳುವ ಆಸ್ತಿಗಳ ಮಾಲೀಕರು ಎಂಬುವುದು ನಿಮಗೆ ಗೊತ್ತೇ? ಅವರ ಬಳಿ ಇರುವ ಕೆಲವು ವಿಶೇಷ ಮೌಲ್ಯದ ಆಸ್ತಿಗಳ ಬಗ್ಗೆ ತಿಳಿಯೋಣ ಬನ್ನಿ.

ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ

ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ

  • Share this:
ಸೆಲೆಬ್ರಿಟಿಗಳ (celebrities) ಬದುಕು ಎಂದರೆ, ಅವರಿಗೆ ಇಷ್ಟವಿರಲಿ, ಇಲ್ಲದಿರಲಿ ತೆರೆದ ಪುಸ್ತಕ ಇದ್ದಂತೆ. ಅವರ ಜೀವನದಲ್ಲಿ (Life) ನಡೆಯುವ ಪ್ರತಿಯೊಂದು ಸಂಗತಿಗಳ ಬಗ್ಗೆ ಜನರಿಗೆ ತಿಳಿದುಕೊಳ್ಳುವ ಕುತೂಹಲ. ಅಭಿಮಾನಿಗಳ ಕಣ್ಣಂತೂ ಸದಾ ಸೆಲೆಬ್ರಿಟಿಗಳ ವೈಯುಕ್ತಿಕ ಬದುಕಿನ ಮೇಲೆ ನೆಟ್ಟಿರುತ್ತದೆ. ಎಷ್ಟೋ ಮಂದಿ ಸೆಲೆಬ್ರಿಟಿಗಳು ತಮ್ಮ ಬದುಕಿನ ಆಗುಹೋಗುಗಳನ್ನು ಮಾಧ್ಯಮದ (media) ಕ್ಯಾಮರಾಗಳ (Camera) ಕಣ್ಣಿಂದ ದೂರ ಇಡಲು ಬಯಸುತ್ತಾರೆ. ಅಂತವರಲ್ಲಿ ಬಾಲಿವುಡ್ (Bollywood) ನಟಿ ಸೋನಮ್ ಕಪೂರ್ (Sonam Kapoor) ಕೂಡ ಒಬ್ಬರು. ಆಕೆ ಆನಂದ್ ಅಹುಜಾ (Anand Ahuja) ಜೊತೆ ತಮ್ಮ ಮದುವೆಯನ್ನು (Marriage) ಘೋಷಿಸಿದಾಗ ಪ್ರತಿಯೊಬ್ಬರು ಅಚ್ಚರಿಗೊಂಡಿದ್ದರು.

ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಅವರ ಮದುವೆ, 2018ರ ಮೇ 8 ರಂದು ಮುಂಬೈನಲ್ಲಿ ಅದ್ದೂರಿಯಾಗಿ ನಡೆದಿತ್ತು. ಆನಂದ್ ಅಹುಜಾ ಒಬ್ಬ ಶ್ರೀಮಂತ ಉದ್ಯಮಿ. ಸೋನಮ್ ಕಪೂರ್ ಇದೀಗ ತಾಯಿಯಾಗುತ್ತಿದ್ದಾರೆ ಕೂಡ. ಇವರಿಬ್ಬರು ತಮ್ಮ ನಡುವಿನ ಕೆಮೆಸ್ಟ್ರಿಯ ಮೂಲಕ ಬಿಟೌನ್‍ನಲ್ಲಿ ಜನಪ್ರಿಯರು ನಿಜ. ಆದರೆ ಈ ದಂಪತಿ ಅನೇಕ ಬೆಳೆಬಾಳುವ ಆಸ್ತಿಗಳ ಮಾಲೀಕರು ಎಂಬುವುದು ನಿಮಗೆ ಗೊತ್ತೇ? ಅವರ ಬಳಿ ಇರುವ ಕೆಲವು ವಿಶೇಷ ಮೌಲ್ಯದ ಆಸ್ತಿಗಳ ಬಗ್ಗೆ ತಿಳಿಯೋಣ ಬನ್ನಿ.

ದಂಪತಿಯ ಬಂಗಲೆ
ಸೋನಮ್ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ತಾರೆಗಳಲ್ಲಿ ಒಬ್ಬರು. ಆಕೆ ಆಗಾಗ ದೆಹಲಿಯಲ್ಲಿರುವ ತಮ್ಮ ಐಷಾರಾಮಿ ಮನೆಯ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇದನ್ನೂ ಓದಿ: Viral Story: ಈತ ಪುಣ್ಯಾತ್ಮ ಕಣ್ರಿ! 11 ಸಾವಿರ ವೋಲ್ಟ್​​ ವಿದ್ಯುತ್​ ಹರಿದರೂ ಬದುಕುಳಿದ


View this post on Instagram


A post shared by anand s ahuja (@anandahuja)
ಪ್ರಥ್ವಿರಾಜ್ ರಸ್ತೆಯಲ್ಲಿರುವ 3170 ಚದರ ಗಜಗಳಷ್ಟು ಹರಡಿರುವ ಈ ಬಂಗಲೆಯ ಮೌಲ್ಯ 173 ಕೋಟಿ ರೂ. ಸೋನಮ್ ಕಪೂರ್ ಮತ್ತು ಆನಂದ್ ಅಹುಜಾ ಲಂಡನ್‍ನಲ್ಲಿ ನೆಲೆಸಿದ್ದಾರೆ. ಆದರೂ ಲಂಡನ್‍ನಿಂದ ದೆಹಲಿಗೆ, ದೆಹಲಿಯಿಂದ ಲಂಡನ್‍ಗೆ ಸದಾ ಓಡಾಡುತ್ತಲೇ ಇರುತ್ತಾರೆ.

ಸ್ವ್ಯಾಂಕಿ ಕಾರುಗಳು
ಇತರ ಬಾಲಿವುಡ್ ಎ -ಲಿಸ್ಟರ್ ಗಳಂತೆ, ಸೋನಮ್ ಕಪೂರ್ ಅವರ ಕಾರ್ ಗ್ಯಾರೆಜ್‍ನಲ್ಲಿಯೂ, ಹಲವು ಸ್ವ್ಯಾಂಕಿ ಕಾರುಗಳ ಸಂಗ್ರಹವಿದೆ. ಮರ್ಸಿಡೀಸ್ ಬೆಂಜ್ ಎಸ್500, ಬಿಎಂಡಬ್ಲ್ಯೂ730ಎಲ್‍ಡಿ, ಆಡಿ ಎ6 ಮತ್ತು ಆಡಿ ಕ್ಯೂ7 ಅವರ ಸಂಗ್ರಹದಲ್ಲಿರುವ ದುಬಾರಿ ಕಾರುಗಳಲ್ಲಿ ಕೆಲವು. ಭಾರತದಲ್ಲಿ ಅವರ ಮೇಬ್ಯಾಚ್‍ನ ಮೌಲ್ಯ 1.70 ಕೋಟಿ ರೂ ಮತ್ತು ಅದು 4.7 ಲೀಟರ್ ವಿ8 ಬೈ ಟರ್ಬೋ ಎಂಜಿನ್ ಅನ್ನು ಹೊಂದಿದ್ದು, 455 ಹಾರ್ಸ್‍ಪವರ್ ಮತ್ತು 700 ಎನ್‍ಎಂ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ಶೆನೆಲ್ ಹ್ಯಾಂಡ್ ಬ್ಯಾಗ್
ಶೆನೆಲ್ ಕ್ವಿಲ್ಟೆಡ್ ಪರ್ಸ್‍ಗಳ ಮಹತ್ವ ಏನೆಂಬುದು ಪ್ರತಿಯೊಬ್ಬ ಟ್ರೆಂಡ್ ಸೆಟ್ಟರ್‍ಗೂ ಗೊತ್ತಿರುತ್ತದೆ. ಫ್ಯಾಶನ್ ಪ್ರಿಯ ಶ್ರೀಮಂತ ಮಹಿಳೆಯರು ತಮ್ಮ ಬಳಿ ಇರಲೇಬೇಕೆಂದು ಬಯಸುವ ಪರ್ಸ್ ಅದು. ಶೆನೆಲ್ ಅತ್ಯಂತ ದುಬಾರಿ ಬ್ರಾಂಡ್ ಪರ್ಸ್. ಸುಮಾರು ರೂ. 7,21,000 ಮೌಲ್ಯವುಳ್ಳ, ಕಪ್ಪು ಮತ್ತು ಬಿಳಿ ಟೋನ್ ಹೊಂದಿರುವ ಶೆನೆಲ್ ಪರ್ಸ್‍ನ್ನು ಹೊಂದಿದ್ದಾರೆ ಸೋನಮ್ ಕಪೂರ್.


View this post on Instagram


A post shared by anand s ahuja (@anandahuja)
ಜೋರ್ಡಾನ್ ಸ್ನಿಕ್ಕರ್
ಏರ್ ಜೋರ್ಡಾನ್ 1 , ಯಾವುದೇ ಸ್ನಿಕ್ಕರ್ ಸಂಗ್ರಹದಲ್ಲಿ ವಿಶೇಷ ಬೇಡಿಕೆ ಉಳ್ಳದ್ದು. ಅದು ಸರ್ವಕಾಲೀಕ ಜನಪ್ರಿಯ ಸ್ನಿಕ್ಕರ್‍ಗಳಲ್ಲಿ ಒಂದಾಗಿದೆ. ಜಗತ್ತಿನ ಸ್ಪೋರ್ಟ್ಸ್ ಶೂ ಪ್ರೇಮಿಗಳಿಗೆ ಇದು ಅಚ್ಚುಮೆಚ್ಚು.

ಇದನ್ನೂ ಓದಿ: Lamborghini: ಈತ ಶ್ರೀಮಂತ ಬಾಲಕ! 10ನೇ ವಯಸ್ಸಿಗೆ ಲ್ಯಾಂಬೋರ್ಗಿನಿ ಕಾರು ಗಿಫ್ಟ್​​ ಪಡೆದುಕೊಂಡ


View this post on Instagram


A post shared by anand s ahuja (@anandahuja)
ಸ್ಪೋರ್ಟ್ಸ್ ಶೂಗಳ ಬಗ್ಗೆ ವಿಶೇಷ ಆಸಕ್ತಿ ಹೊಂದಿರುವ ಆನಂದ್ ಅಹುಜಾ ಅವರ ಬಳಿಯೂ ಒಂದು ಜೋಡಿ ಏರ್ ಜೋರ್ಡಾನ್ 1 ಇದೆ. ಅದರ ಮೌಲ್ಯ 3.72 ಲಕ್ಷಗಳಾಗಿದ್ದು, ಅದು 1984 ರಲ್ಲಿ ಮೈಕೆಲ್ ಜೋರ್ಡಾನ್ ಅವರಿಂದ ಪ್ರಸಿದ್ಧಿ ಪಡೆದ ಶೂ ಆಗಿದ್ದು, ಸದಾ ಅಭಿಮಾನಿಗಳ ಅಚ್ಚುಮೆಚ್ಚಿನದ್ದು ಎನಿಸಿಕೊಂಡಿದೆ.
Published by:Ashwini Prabhu
First published: