ದಿನ ಬೆಳಗಾದರೆ ಸಾಕು ಪತ್ರಿಕೆಯಲ್ಲಿ ಮತ್ತು ಮೊಬೈಲ್ನಲ್ಲಿ ‘ಬೈಕ್ ಅಪಘಾತವಾಗಿ ಇಬ್ಬರ ಸಾವು’, ‘ಬೈಕ್ ಅಪಘಾತವಾಗಿ ತಲೆಗೆ ತೀವ್ರ ಗಾಯ’ (Accident) ಅಂತೆಲ್ಲಾ ಅಹಿತಕರವಾಗಿರುವ ಸುದ್ದಿಗಳನ್ನು ನೋಡುತ್ತಲೇ ಇರುತ್ತೇವೆ. ಆದರೂ ಸಹ ಎಷ್ಟೋ ಯುವಕ ಮತ್ತು ಯುವತಿಯರು ತಮ್ಮ ಕೂದಲು ಹಾಳಾಗುತ್ತೆ, ಮುಖದ ಮೇಕಪ್ ಹಾಳಾಗುತ್ತದೆ ಅಂತ ಕಾರಣ ಕೊಟ್ಟು ಮನೆಯಲ್ಲಿರುವ ಹೆಲ್ಮೆಟ್ಗಳನ್ನು (Helmet) ತಮ್ಮ ಕೈಗೆ ಸಿಕ್ಕಿಸಿಕೊಂಡು ಬೈಕ್ ಓಡಿಸುವುದನ್ನು ಮತ್ತು ಹಿಂದೆ ಕೂತಿರುವವರು ಸಹ ಹೆಲ್ಮೆಟ್ ತಲೆಗೆ ಹಾಕಿಕೊಳ್ಳದೆ ತಮ್ಮ ಕೈಗೊಳಗೆ ಸಿಕ್ಕಿಹಾಕಿಸಿಕೊಂಡು ಸ್ಟೈಲ್ ಆಗಿ ರೈಡ್ (Ride) ಹೋಗುತ್ತಾರೆ.
ಎಷ್ಟೋ ಬಾರಿ ಬೈಕ್ ಹತ್ತಿದ ನಂತರ ಇಲ್ಲೇ ಐದು-ಹತ್ತು ನಿಮಿಷದ ದಾರಿ ಅಂತೆಲ್ಲಾ ಹೇಳಿ ಹೆಲ್ಮೆಟ್ ಅನ್ನು ಧರಿಸದೆ ಹೋಗಿ ಅಪಘಾತವಾಗಿ ಪ್ರಾಣ ಕಳೆದುಕೊಂಡ ಉದಾಹರಣೆಗಳು ನಮ್ಮ ಕಣ್ಮುಂದೆ ನಡೆದಿರುತ್ತವೆ. ಅದರಲ್ಲೂ ಮನೆಯಲ್ಲಿ ಯಾರಾದರೂ ಹೀಗೆ ಬೈಕ್ ಅಪಘಾತದಲ್ಲಿ ಪ್ರಾಣ ಕಳೆದುಕೊಂಡರೆ, ಮನೆಯಲ್ಲಿನ ಹಿರಿಯರು ಮಕ್ಕಳಿಗೆ ಬೈಕ್ ಮೇಲೆ ಹೋಗುವಾಗ ಹೆಲ್ಮೆಟ್ ಹಾಕ್ಕೊಳ್ಳಿ ಮತ್ತು ತುಂಬಾ ವೇಗವಾಗಿ ಬೈಕ್ ಅನ್ನು ಓಡಿಸಬೇಡಿ ಅಂತೆಲ್ಲಾ ತುಂಬಾನೇ ಹೇಳಿ ಕಳುಹಿಸುತ್ತಾರೆ.
ಹೀಗೆ ಬೈಕ್ ಮೇಲೆ ಹೋಗುವಾಗ ಪ್ರತಿಯೊಬ್ಬರು ಹೆಲ್ಮೆಟ್ ಧರಿಸಿದ್ದಾರೆಯೇ ಅಂತ ನೋಡಲು ರಸ್ತೆಯ ಮೇಲೆ ಸಂಚಾರಿ ಪೊಲೀಸರು ಸಹ ಪ್ರತಿದಿನ ಚೆಕ್ ಮಾಡುತ್ತಿರುತ್ತಾರೆ. ಹೆಲ್ಮೆಟ್ ಧರಿಸದವರನ್ನು ನಿಲ್ಲಿಸಿ ದಂಡ ಸಹ ಹಾಕುವುದನ್ನು ನಾವು ಅನೇಕ ಪ್ರತಿದಿನ ನೋಡುತ್ತಲೇ ಇರುತ್ತೇವೆ.
ಮಗ ಮತ್ತು ಸೊಸೆ ಹೆಲ್ಮೆಟ್ ಧರಿಸದ್ದನ್ನು ರೆಡ್‌ಹ್ಯಾಂಡ್ ಆಗಿ ಹಿಡಿದ ತಾಯಿ
ಇಲ್ಲೊಂದು ಘಟನೆ ನಡೆದಿದೆ ನೋಡಿ, ಅದರಲ್ಲಿ ತಾಯಂದಿರ ದಿನದಂದು ತಾಯಿಯೊಬ್ಬಳು ತನ್ನ ಮಗ ಮತ್ತು ಸೊಸೆಯನ್ನು ಹೆಲ್ಮೆಟ್ ಧರಿಸದ ಕಾರಣ ರಸ್ತೆಯ ಮಧ್ಯದಲ್ಲಿ ಥಳಿಸಿದ ಒಂದು ವಿಡಿಯೋ ವೈರಲ್ ಆಗಿದೆ. ಈ ವಿಡಿಯೋ ತನ್ನ ಮಕ್ಕಳ ಯೋಗಕ್ಷೇಮಕ್ಕಾಗಿ ತಾಯಿ ಎಷ್ಟೊಂದು ಕಾಳಜಿ ವಹಿಸುತ್ತಾಳೆ ಅನ್ನೋದನ್ನು ತೋರಿಸುತ್ತದೆ ನೋಡಿ.
ಇದನ್ನೂ ಓದಿ: ಹಾರ ಬದಲಾಯಿಸಿಕೊಳ್ಳುವಾಗ ಮದುಮಕ್ಕಳ ಹೊಡೆದಾಟ! ವಧುವನ್ನೇ ಮಂಟಪದಿಂದ ತಳ್ಳಿದ ವರ!
ಟ್ವಿಟ್ಟರ್ ಬಳಕೆದಾರರೊಬ್ಬರು ಈ ವಿಡಿಯೋವನ್ನು ಹಂಚಿಕೊಂಡಿದ್ದು "ಹೆಲ್ಮೆಟ್ ಧರಿಸದ ಕಾರಣ ತನ್ನ ಮಗನನ್ನು ರಸ್ತೆಯ ಮಧ್ಯದಲ್ಲಿ ಥಳಿಸಿದ ತಾಯಿಗೆ ಸೆಲ್ಯೂಟ್" ಎಂದು ಶೀರ್ಷಿಕೆಯಲ್ಲಿ ಬರೆದಿದ್ದಾರೆ.
Salute such Mother who beat her son in the middle of the road for not wearing a helmet #IndiaTodayExactPoll #BJPMuktSouthIndia #RahulGhandi #Tejran #KarnatakaPolls pic.twitter.com/RFyJXwQXgj
— Maya Sharma 🇮🇳 (@iammaya_sharma) May 13, 2023
ಕೆಲವು ಸೆಕೆಂಡುಗಳ ನಂತರ, ಮಹಿಳೆಯೊಬ್ಬರು ಬೈಕಿನ ಹಿಂದಿನಿಂದ ಓಡಿ ಬಂದು ತನ್ನ ಮಗನ ಹೆಸರನ್ನು ಕರೆಯುವುದನ್ನು ಕಾಣಬಹುದು. ನಂತರ, ಅವಳು ಅವರ ಬಳಿ ಬಂದು ಪೊಲೀಸರ ಮುಂದೆಯೇ ಹೆಲ್ಮೆಟ್ ಧರಿಸದ ವ್ಯಕ್ತಿಯನ್ನು ಹೊಡೆಯುತ್ತಾಳೆ. ಹೆಲ್ಮೆಟ್ ತಲೆಗೆ ಹಾಕ್ಕೊಳ್ಳಿ ಅಂದ್ರೆ ಕೈಯಲ್ಲಿ ಹಿಡಿದುಕೊಂಡಿದ್ದೀರಾ ಅಂತ ಆ ತಾಯಿ ಅವರಿಬ್ಬರ ಕೂದಲನ್ನು ಹಿಡಿದು ಕೇಳಿದರು. ತಾಯಿಯ ಈ ಕೋಪವನ್ನು ನೋಡಿದ ಪೊಲೀಸರು ಕೂಡ ಒಂದು ಕ್ಷಣ ದಿಗ್ಭ್ರಮೆಗೊಂಡರು.
ನಂತರ ಯುವಕ ಮತ್ತು ಅವನ ಹೆಂಡತಿ ಇಬ್ಬರೂ ಹೆಲ್ಮೆಟ್ ಧರಿಸಿ ತಮ್ಮ ಬೈಕ್ ಸವಾರಿಯನ್ನು ಪುನರಾರಂಭಿಸುತ್ತಾರೆ. ಇದಕ್ಕೂ ಮುನ್ನ ಹೆಲ್ಮೆಟ್ ಧರಿಸದೆ ಎಲ್ಲಿಗೆ ಹೋಗಿದ್ರಿ ಅಂತ ಕೇಳಿದ್ದಕ್ಕೆ ಅವರು ತಾಯಂದಿರ ದಿನಕ್ಕೆ ನಿಮಗೆ ಗಿಫ್ಟ್ ತರೋದಕ್ಕೆ ಹೋಗಿದ್ವಿ ಅಂತ ಹೇಳೊದನ್ನ ಈ ವೀಡಿಯೋದಲ್ಲಿ ನಾವು ಕೇಳಬಹುದು. ಅದಕ್ಕೆ ಆ ತಾಯಿ ನನ್ನ ನಿಜವಾದ ಉಡುಗೊರೆ ನನ್ನ ಮಗ, ದಯವಿಟ್ಟು ಹೆಲ್ಮೆಟ್ ಧರಿಸಿ ಅಂತ ಹೇಳಿದ್ದನ್ನು ಈ ವೀಡಿಯೋದ ಕೊನೆಯಲ್ಲಿ ನೋಡಬಹುದು.
ಆನ್ಲೈನ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ ಈ ವಿಡಿಯೋ
ಈ ವಿಡಿಯೋವನ್ನು ಆನ್ಲೈನ್ ನಲ್ಲಿ ಹಂಚಿಕೊಂಡಾಗಿನಿಂದ, ಈ ವಿಡಿಯೋ 65 ಸಾವಿರ ವೀಕ್ಷಣೆಗಳನ್ನು ಗಳಿಸಿದೆ, 527 ಲೈಕ್ ಗಳು ಮತ್ತು 125 ರಿಟ್ವೀಟ್ ಗಳನ್ನು ಸಹ ಗಳಿಸಿದೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಅಭಿಮಾನಿಗಳು ಮತ್ತು ಫಾಲೋವರ್ಗಳಿಂದ ಸಾಕಷ್ಟು ಕಾಮೆಂಟ್ ಗಳನ್ನು ಸಹ ಇದು ಗಳಿಸಿದೆ.
"ತಾಯಂದಿರು ತುಂಬಾನೇ ಒಳ್ಳೆಯವರು" ಅಂತ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದರೆ, ಇನ್ನೊಬ್ಬ ಬಳಕೆದಾರರು "ಇದು ಉತ್ತಮವಾದ ಕೆಲಸ, ಇದು ಅನೇಕರಿಗೆ ಸ್ಫೂರ್ತಿ ನೀಡುತ್ತದೆ ಎಂದು ನಾನು ಭಾವಿಸುತ್ತೇನೆ" ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ