• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಅಳಿಯ ಸಿಗರೇಟ್ ಸೇದಿದ್ರೆ ಮಾತ್ರ ಮಗಳನ್ನು ಕೊಡೋದಂತೆ! ಇಲ್ಲಾಂದ್ರೆ ಮದ್ವೆ ಅಲ್ಲ, 'ಹೊಗೆ'!

Viral Video: ಅಳಿಯ ಸಿಗರೇಟ್ ಸೇದಿದ್ರೆ ಮಾತ್ರ ಮಗಳನ್ನು ಕೊಡೋದಂತೆ! ಇಲ್ಲಾಂದ್ರೆ ಮದ್ವೆ ಅಲ್ಲ, 'ಹೊಗೆ'!

ವೈರಲ್​  ವಿಡಿಯೋ

ವೈರಲ್​ ವಿಡಿಯೋ

ಸಾಮಾಜಿಕ ಮಾಧ್ಯಮಗಳಲ್ಲಿ ಮನರಂಜನೆಗೇನೂ ಕೊರತೆ ಇಲ್ಲ ಬಿಡಿ. ಚಿತ್ರ ವಿಚಿತ್ರವಾದ ಆಚರಣೆಗಳು ನಿಜಕ್ಕೂ ಜನರು ಮೂಕವಿಸ್ಮಿತರನ್ನಾಗಿಸುತ್ತದೆ. ಇದೀಗ ವೈರಲ್​ ಆಗ್ತಾ ಇರುವಂತಹ ಸುದ್ಧಿಯು ಕೂಡ ಅಂತಹದ್ದೇ ಅಂತ ಹೇಳಬಹುದು.

  • Share this:

ಮದುವೆ ಅಂದ್ರೆ ಅದೊಂದು ಸುಂದರ ಅನುಭವ. ಇದರಿಂದ ಅದೆಷ್ಟೋ ಜನರ ಜೀವನವೇ ಬದಲಾಗುತ್ತದೆ. ಅರೇಂಜ್​ ಮ್ಯಾರೇಜ್​ ಮತ್ತು ಲವ್​ ಮ್ಯಾರೇಜ್​ ಎಂಬ ಎರಡು ರೀತಿಯ ಮದುವೆಗಳು ಇರುತ್ತೆ ಅಂತ ನಿಮಗೆ ಗೊತ್ತೇ ಇದೆ. ಅದೆಷ್ಟೋ ಜನರು ತಮ್ಮ ಲವ್​ ಮ್ಯಾರೇಜ್​ನ್ನು (Love Marriage) ಮನೆಯಲ್ಲಿ ಒಪ್ಪಿಸಿ ಆಗ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಹೇಳದೇ ಕೇಳದೇ ಓಡಿ ಹೋಗಿ ಮದುವೆ ಆಗ್ತಾರೆ. ಇಂತಹ ಉದಾಹರಣೆಗಳು ನಮ್ಮ ಸಮಾಜದಲ್ಲಿ ಹಲವಾರು ಉದಾಹರಣೆಗಳೇ ಇದೆ ಅಂತ ಹೇಳಬಹುದು. ಹಾಗೆಯೇ ಒಂದೊಂದು ಕಡೆಯಲ್ಲಿ ಒಂದೊಂದು ರೀತಿಯಾಗಿ ಮದುವೆ ಸಂಪ್ರದಾಯಗಳು ಇರುತ್ತದೆ. ಎಲ್ಲವನ್ನೂ ಗೌರವಿಸಬೇಕು (Respect). ಆದರೆ, ಇಲ್ಲೊಂದು ವೈರಲ್​ (Viral) ಆಗ್ತಾ ಇರುವ ಸುದ್ಧಿಯನ್ನು ನೋಡ್ತಾ ಇದ್ರೆ ಅಬ್ಬಬ್ಬಾ! ಇದೆಂತ ವಿಚಿತ್ರ ಸಂಪ್ರದಾಯ ಅಂತ ಅನಿಸುತ್ತೆ.


ನಿಜ, ಸಾಮಾಜಿಕ ಮಾಧ್ಯಮಗಳಲ್ಲಿ ಮನರಂಜನೆಗೇನೂ ಕೊರತೆ ಇಲ್ಲ ಬಿಡಿ. ಚಿತ್ರ ವಿಚಿತ್ರವಾದ ಆಚರಣೆಗಳು ನಿಜಕ್ಕೂ ಜನರು ಮೂಕವಿಸ್ಮಿತರನ್ನಾಗಿಸುತ್ತದೆ. ಇದೀಗ ವೈರಲ್​ ಆಗ್ತಾ ಇರುವಂತಹ ಸುದ್ಧಿಯು ಕೂಡ ಅಂತಹದ್ದೇ ಅಂತ ಹೇಳಬಹುದು.


ಧೂಮಪಾನ ಆರೋಗ್ಯಕ್ಕೆ ಹಾನಿಕಾರಕ ಅಂತ ಎಲ್ಲರಿಗೂ ಗೊತ್ತು. ಹಾಗೆಯೇ, ಆ ಪ್ಯಾಕ್​ಗಳ ಮೇಲೆಯೂ ಬರೆದಿರುತ್ತದೆ. ಸಿನಿಮಾದಲ್ಲಿಯೂ ನಾವಿದನ್ನು ಕಾಣಬಹುದಾಗಿದೆ. ಎಲ್ಲಾ ಸಂಗತಿಗಳು ಗೊತ್ತಿದ್ರೂ ಕೂಡ ಜನರೇನು ಧೂಮಪಾನ, ಮಧ್ಯಪಾನ ಮಾಡೋದನ್ನು ಕಡಿಮೆ ಮಾಡಿಲ್ಲ ಬಿಡಿ.


ಇದನ್ನೂ ಓದಿ: ವಿಶ್ವದ ಅತ್ಯಂತ ದುಬಾರಿ ವಾಚ್‌ಗಳಿವು, ರೇಟ್​ ಕೇಳಿದ್ರೆ ತಲೆ ತಿರುಗುತ್ತೆ!


ಹುಡುಗನನ್ನು ನೋಡುವಾಗ ತನ್ನ ಅಳಿಯ ಧೂಮಪಾನ, ಮಧ್ಯಪಾನಗಳಂತ ಕೆಟ್ಟ ಚಟ ಇರಬಾರದು ಅಂತ ಹುಡುಗನನ್ನು ಹುಡಕುತ್ತಾರೆ ಅಲ್ವಾ? ಆದರೆ, ಇಲ್ಲಿನ ಅತ್ತೆ ಮಾವ ಎಂತ ವಿಚಿತ್ರ ಅಂದ್ರೆ ಅಳಿಯನ ಬಾಯಿಗೆ ಸಿಗರೇಟ್​ ಇಟ್ಟು, ಸೇದು ಅಂತ ಹೇಳ್ತಾ ಇದ್ದಾರೆ.


ಹೌದು, ವಿವಿಧ ಸಮುದಾಯಗಳು ವಿಶೇಷವಾಗಿ ವಿವಾಹಗಳಿಗೆ ಸಂಬಂಧಿಸಿದ ವಿವಿಧ ಪದ್ಧತಿಗಳನ್ನು ಅನುಸರಿಸುತ್ತವೆ. ಇಲ್ಲಿಯೂ ಅಂತಹ ಒಂದು ವಿಚಿತ್ರ ಸಂಪ್ರದಾಯವನ್ನು ಅನುಸರಿಸಲಾಗಿದೆ. ಅತ್ತೆ-ಮಾವ ತಮ್ಮ ವರನಿಗೆ ಬಾಯಲ್ಲಿ ಸಿಗರೇಟ್ ಇಟ್ಟು, ಅದನ್ನು ಹಚ್ಚಿ ಸ್ವಾಗತಿಸುವ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗಿದೆ.


ಕೆಲವೆಡೆ ಇದು ಅನಾದಿ ಕಾಲದಿಂದಲೂ ನಡೆದುಕೊಂಡು ಬಂದಿರುವ ಪದ್ಧತಿ ಎಂದು ಹಲವರು ಸೂಚಿಸಿದರೆ, ಇನ್ನು ಕೆಲವರು ಇಂತಹ ನೀತಿಗಳನ್ನು ಕೂಡಲೇ ನಿಲ್ಲಿಸಬೇಕು ಎಂದಿದ್ದಾರೆ. ಇಷ್ಟೆಲ್ಲಾ ಮಾಡಲು ಅತ್ತೆ ಹೇಗೆ ತಯಾರಾಗಿದ್ದರು ಎಂದು ವಿಡಿಯೋ ನೋಡುತ್ತಿರುವ ಜನರು ಆಶ್ಚರ್ಯ ಪಡುತ್ತಿದ್ದಾರೆ.


ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ, ವರನು ಸೋಫಾದಲ್ಲಿ ಕುಳಿತಿದ್ದಾನೆ. ಆಗ ಅತ್ತೆ ಸಿಗರೇಟನ್ನು ಹೊಸ ಅಳಿಯನ ಬಾಯಿಗೆ ನೀಡುತ್ತಾಳೆ. ಆಗ ಮಾವ ವಿನಯ, ಸಂಕೋಚದಿಂದಲೇ ಸಿಗರೇಟು ಹಚ್ಚುತ್ತಾರೆ. ಅದಕ್ಕೆ ಅಳಿಯ ಒಂದು ದಮ್​ ಎಳೆದು, ತಕ್ಷಣ ಅದನ್ನು ತನ್ನ ಮಾವನಿಗೆ ಹಿಂತಿರುಗಿಸುತ್ತಾನೆ. ನಂತರ ಸಂಪ್ರದಾಯದ ಪ್ರಕಾರ ವರ ಇಬ್ಬರಿಗೂ ಸ್ವಲ್ಪ ಹಣ ಕೊಡುತ್ತಾನೆ. ಇದೀಗ ಈ ವಿಡಿಯೋ ವೈರಲ್ ಆಗಿದೆ.

View this post on Instagram


A post shared by Joohi K Patel (@joohiie)

ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ವಿಡಿಯೋ ನೋಡಿದ ನೆಟಿಜನ್‌ಗಳು ವಿಭಿನ್ನ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಇದು ಸಂಪೂರ್ಣ ಅಸಂಬದ್ಧ ಎಂದು ಕೆಲವರು ಹೇಳುತ್ತಾರೆ. ಧೂಮಪಾನದಿಂದ ಕ್ಯಾನ್ಸರ್ ಬರುತ್ತದೆ, ಅಷ್ಟು ಮಾತ್ರ ಗೊತ್ತಾಗಲ್ಲವಾ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಗಮನ ಸೆಳೆಯಲು ಕೆಲವರು ಈ ರೀತಿ ಮಾಡುತ್ತಾರೆ ಎಂದೂ ಕೆಲವರು ಕಾಮೆಂಟ್ ಮಾಡಿದ್ದಾರೆ.ಒಟ್ಟಿನಲ್ಲಿ ಕಾಲ ಬದಲಾದಂತ ನಡೆದುಕೊಂಡು ಬಂದ ಸಂಪ್ರದಾಯಗಳು, ಆಚರಣೆ-ವಿಚಾರಣೆಗಳು ಎಲ್ಲವೂ ಬದಲಾಗುತ್ತಿದೆ ಅಂತ ಹೇಳಿದ್ರೂ ತಪ್ಪಾಗಲಾರದು.

First published: