ಪೋಷಕರು ಮಕ್ಕಳಿಗಾಗಿ ಏನು ಬೇಕಾದ್ರೂ ಮಾಡ್ತಾರೆ ಅಲ್ವಾ? ಆದ್ರೆ ಪ್ರಸ್ತುತ ಮಕ್ಕಳೇ ತಮ್ಮ ಪೋಷಕರನ್ನು ಮನೆಯಿಂದ ಹೊರಗೆ ಹಾಕುವುದು, ಹೊಡೆಯುವುದು ಹೀಗೆ ನಾನಾ ರೀತಿಯ ಅಘೋರ ಸನ್ನಿವೇಶಗಳು (Cruel Situation) ಉಂಟಾಗ್ತಾ ಇದೆ. ಇದಕ್ಕಾಗಿಯೇ, ಅದೆಷ್ಟೋ ಕೇರ್ ಸೆಂಟರ್ಗಳು ಆರಂಭವಾಗಿವೆ. ಇಂತಹ ಸಮಯದಲ್ಲಿ, ಇಲ್ಲೊಬ್ಬ ಮಗ ತನ್ನ ತಂದೆಯ ಹುಟ್ಟುಹಬ್ಬದ ಸಲುವಾಗಿ ಯಾವ ಉಡುಗೊರೆಯನ್ನು ಕೊಟ್ಟಿದ್ದಾನೆ ನೋಡಿ. ಈ ವಿಡಿಯೋ ಅಂತೂ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಫುಲ್ ವೈರಲ್ ಆಗ್ತಾ ಇದೆ. ಯಾಕಂದ್ರೆ ಅಷ್ಟೊಂದು ಎಮೋಷ್ನಲ್ ಆಗಿದೆ ಈ ಗಿಫ್ಟ್. ಇದ್ರೆ ಇಂತಹ ಮಕ್ಕಳು ಇರಬೇಕು ಎಂಬ ಕಾಮೆಂಟ್ಗಳು (Comment) ಈ ವಿಡಿಯೋಗೆ ಬಂದಿರುವುದನ್ನು ನಾವು ಕಾಣಬಹುದು.
ಹೌದು. ಮಗು ಇದ್ದಾಗ ಅದರ ತಂದೆ ತಾಯಿ ನೂರು ಕನಸುಗಳನ್ನು ಕಂಡಿರುತ್ತಾರೆ. ಇವನು / ಇವಳು ದೊಡ್ಡವನಾದ ಮೇಲೆ ನಮ್ಮನ್ನು ಚೆನ್ನಾಗಿ ಸಾಗ್ತಾನೆ ಅಂತ. ಇದರ ಹೊರೆತಾಗಿ ತಮ್ಮ ಮಕ್ಕಳಿಂದ ಯಾವುದೇ ರೀತಿಯ ದುಡ್ಡನ್ನು ಅಥವಾ ಉಡುಗೊರೆಯನ್ನು ನಿರೀಕ್ಷಿಸುವುದಿಲ್ಲ. ಅದಕ್ಕೇ ಅಲ್ವಾ ಪೋಷಕರು ಅಂತಾ ಹೇಳೋದು.
ಇನ್ಸ್ಟಾಗ್ರಾಮ್ನಲ್ಲಿ ಒಂದು ವಿಡಿಯೋ ಸಖತ್ ವೈರಲ್ ಆಗ್ತಾ ಇದೆ. ಮಗ ತನ್ನ ತಂದೆಯ ಹುಟ್ಟುಹಬ್ಬಕ್ಕಾಗಿ ಸಣ್ಣ ಬಾಕ್ಸ್ನಲ್ಲಿ ಉಡುಗೊರೆಯನ್ನು ನೀಡುತ್ತಾನೆ. ಗಿಫ್ಟ್ ಸಣ್ಣದಾದರೇನೋ, ದೊಡ್ಡದಾದರೇನೋ ಪೋಷಕರು ತಮ್ಮ ಮಕ್ಕಳಿಂದ ಯಾವುದೇ ಉಡುಗೊರೆಯನ್ನು ಬಯಸುವುದಿಲ್ಲ. ಅಂತದ್ರಲ್ಲಿ ಮಗ ಒಂದು ಸಣ್ಣ ಬಾಕ್ಸ್ನ್ನು ಚೆನ್ನಾಗಿ ಡೆಕೋರೇಷನ್ ಮಾಡಿ ಕೊಟ್ಟಕೋಡಲೇ ತಂದೆಗೇ ಸಖತ್ ಖುಷಿ ಆಗುತ್ತೆ. ಆದರೆ ಅದನ್ನು ಓಪನ್ ಮಾಡಿ ನೋಡಿದಾಗ ಅದಕ್ಕಿಂತ ದೊಡ್ಡದಾದ ಶಾಕ್ ತಂದೆಗೆ ಕಾದಿರುತ್ತೆ!
ಇದನ್ನೂ ಓದಿ: 'ಆಯೆ ದಿನ್ ಬಹಾರ್ ಕೆ' ಸಿನಿಮಾದ ಹಾಡು ಮತ್ತೆ ವೈರಲ್!
ಎಸ್, 59ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದ ತಂದೆಗೆ ಕಾದಿತ್ತು ಮಗನಿಂದ ಶಾಕ್! ಮಗ ಸಣ್ಣ ಬಾಕ್ಸ್ ಅನ್ನು ಗಿಫ್ಟ್ ಆಗಿ ಕೊಡ್ತಾನೆ. ಆ ಬಾಕ್ಸ್ನಲ್ಲೇ ಅಡಗಿತ್ತು ಬಿಗ್ ಸರ್ಪ್ರೈಸ್. ಏನ್ ಗೊತ್ತಾ? ಬೈಕ್ ಕೀ.
ಅಪ್ಪ ಕಾತುರತೆಯಿಂದ ಬಾಕ್ಸ್ ಓಪನ್ ಮಾಡಿದಾಗ ಅದರಲ್ಲಿ ಇತ್ತು ಬೈಕ್ ಕೀ. ಅಂದ್ರೆ ಮಗ ಅಪ್ಪನ ಬಹುದಿನಗಳ ಕನಸು ನನಸು ಮಾಡಿದ್ದಾನೆ. ಜಾವಾ ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾನೆ.
View this post on Instagram
" We Surprised Our dad on his 59th birthday with the most unexpected gift which he dreamed of having!! " ಎಂದು ಕ್ಯಾಪ್ಶನ್ ನೀಡಿ ಅಭಿ ಮುಜ್ ಮೇನ್ ಕಹೀನ್ ಹಾಡಿಗೆ ಎಡಿಟ್ ಮಾಡಿ ಪೋಸ್ಟ್ ಮಾಡಿದ್ದಾರೆ. ಇದಂತೂ ಇನ್ನಷ್ಟು ನಮ್ಮನ್ನು ಎಮೋಷ್ನಲ್ ಮಾಡುತ್ತದೆ.
ಇಂತಹ ವಿಡಿಯೋಗಳನ್ನು ನೋಡಿ ಆದ್ರೂ ಕೆಟ್ಟ ಮಕ್ಕಳು ಒಳ್ಳೆ ಬುದ್ಧಿಯನ್ನು ಕಲಿಯುವಂತೆ ಆದರೆ ಸಾಕಿತ್ತು. ಹಾಗೆಯೇ ವೃದ್ಧಾಶ್ರಮಗಳು ಕೂಡ ಕಡಿಮೆ ಆಗ್ತಾ ಇತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ