• Home
  • »
  • News
  • »
  • trend
  • »
  • Viral Video: ಕ್ಯಾಂಡಿ 'ಕದ್ದ' ತಾಯಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಮಗ! ಈ ವೈರಲ್ ವಿಡಿಯೋ ನೋಡಿ

Viral Video: ಕ್ಯಾಂಡಿ 'ಕದ್ದ' ತಾಯಿ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಮಗ! ಈ ವೈರಲ್ ವಿಡಿಯೋ ನೋಡಿ

ಪೊಲೀಸ್ ದೂರು ದಾಖಲಿಸಿದ ಬಾಲಕ

ಪೊಲೀಸ್ ದೂರು ದಾಖಲಿಸಿದ ಬಾಲಕ

ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ತುಂಬಾನೇ ಹರಿದಾಡುತ್ತಿದೆ ನೋಡಿ. ಅದರಲ್ಲಿ 3 ವರ್ಷದ ಪುಟ್ಟ ಮಗು ಮಹಿಳಾ ಪೊಲೀಸ್ ಗೆ ಯಾರ ಬಗ್ಗೆಯೋ ದೂರು ಹೇಳುತ್ತಿರುವುದಾಗಿ ಮತ್ತು ದೂರು ನೀಡುತ್ತಿರುವುದಾಗಿ ನಾವು ನೋಡಬಹುದು.

  • Share this:

ಈಗಿನ ಮಕ್ಕಳಿಗೆ (Children) ನಾವು ಇಂತದ್ದು ಮಾಡು, ಇಂತದ್ದು ಮಾಡಬೇಡ ಅಂತ ಹೇಳಿಕೊಡುವ ಅವಶ್ಯಕತೆಯೇ ಇಲ್ಲ ನೋಡಿ, ಏಕೆಂದರೆ ಈಗಿನ ಮಕ್ಕಳು ನಾವು ಹೇಳಿಕೊಡುವುದನ್ನು ಕಲಿಯುವುದಿಲ್ಲ, ನಾವು ಮಾಡುವುದನ್ನು ನೋಡಿ ಕಲಿತುಕೊಳ್ಳುತ್ತವೆ. ಈಗಿನ ಮಕ್ಕಳು ತುಂಬಾ ಬುದ್ದಿವಂತರು (Intelligent People) ಮತ್ತು ಬೇಗನೆ ವಿಷಯವನ್ನು ಗ್ರಹಿಸುವವರು. ಮಕ್ಕಳು ಪ್ರತಿಯೊಂದಕ್ಕೂ ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ ಮತ್ತು ಹಿರಿಯರಿಂದ ಉತ್ತರ ಪಡೆಯಲು ನೋಡುತ್ತಾರೆ. ಮಕ್ಕಳಿಗೆ ಸುಳ್ಳು ಹೇಳಬಾರದು, ಕಳ್ಳತನ ಮಾಡಬಾರದು, ಯಾರ ಜೊತೆಯೂ ಜಗಳವಾಡಬಾರದು ಅಂತೆಲ್ಲಾ ಹೇಳಿರುತ್ತೇವೆ. ಹೀಗೆ ಮಾಡಿದರೆ ಪೊಲೀಸರು (Police) ಬಂದು ಹಿಡಿದುಕೊಂಡು ಹೋಗಿ ಜೈಲಿಗೆ (Jail) ಹಾಕುತ್ತಾರೆ ಅಂತಾನೂ ಸಹ ನಾವು ಅನೇಕ ಸಂದರ್ಭಗಳಲ್ಲಿ ಹೇಳಿರುತ್ತೇವೆ.


ಅಂತಹ ಮಾತುಗಳನ್ನು ತುಂಬಾನೇ ಸೂಕ್ಷ್ಮವಾಗಿ ಆಲಿಸಿ ತಮ್ಮ ತಲೆಯಲ್ಲಿ ಆ ವಿಷಯವನ್ನು ನೆನಪಿಟ್ಟುಕೊಂಡಿರುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ಮಕ್ಕಳು ಚಿಕ್ಕವರಾಗಿದ್ದಾಗ ಏನೇ ಮಾಡಿದರೂ ಅದು ತುಂಬಾನೇ ಮುದ್ದಾಗಿ ಕಾಣುತ್ತದೆ. ಈ ಮಕ್ಕಳ ಅನೇಕ ಮುದ್ದಾದ ವೀಡಿಯೋಗಳನ್ನು ನಾವು ಆಗಾಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ನೋಡುತ್ತಲೇ ಇರುತ್ತೇವೆ.


ದೂರು ದಾಖಲಿಸುತ್ತಿರುವ ಪುಟ್ಟ ಮಗು..
ಇಲ್ಲೊಂದು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತುಂಬಾನೇ ಹರಿದಾಡುತ್ತಿದೆ ನೋಡಿ, ಅದರಲ್ಲಿ 3 ವರ್ಷದ ಪುಟ್ಟ ಮಗು ಮಹಿಳಾ ಪೊಲೀಸ್ ಗೆ ಯಾರ ಬಗ್ಗೆಯೋ ದೂರು ಹೇಳುತ್ತಿರುವುದಾಗಿ ಮತ್ತು ದೂರು ನೀಡುತ್ತಿರುವುದಾಗಿ ನಾವು ನೋಡಬಹುದು.


ಇದನ್ನೂ ಓದಿ:  Viral Video: ಇದೇನ್​ ನಾಯಿನಾ? ಇಲ್ಲ ಸಿಂಹನಾ? ಏನ್​ ಗುರೂ ಈ ಚೆಲುವೆಗೆ ಡಬಲ್​ ಮೀಟರ್​ ಅನ್ಸುತ್ತೆ!


ಈ ಮುದ್ದಾದ ವಿಡಿಯೋ ಆನ್ಲೈನ್ ನಲ್ಲಿ ಕಾಣಿಸಿಕೊಂಡಿದ್ದು, ಹಲವಾರು ಮರುಹಂಚಿಕೆಗಳ ಮೂಲಕ ವೈರಲ್ ಸಹ ಆಗುತ್ತಿದೆ. ನೀವು ಸಹ ಆ ವಿಡಿಯೋವನ್ನು ನೋಡಿದ ನಂತರ ಅದು ನಿಮಗೆ ಸಾಕಷ್ಟು ಸ್ಪಷ್ಟವಾಗುತ್ತದೆ. ಈ ವೈರಲ್ ಆದ ವಿಡಿಯೋ ಜನರನ್ನು ನಗುವಂತೆ ಮಾಡಿದೆ ಮತ್ತು ನಿಮ್ಮ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಬಹುದು.


ವಿಡಿಯೋದಲ್ಲಿ ಏನಿದೆ ನೋಡಿ..
ಈ ವಿಡಿಯೋ ಮಧ್ಯಪ್ರದೇಶದ ಬುರ್ಹಾನ್‌ಪುರ್ ನಿಂದ ಬಂದಿದೆ. ಹಮ್ಜಾ ಎಂಬ ಪುಟ್ಟ ಮಗು ತನ್ನ ಕ್ಯಾಂಡಿಗಳು ಮತ್ತು ಚಾಕೊಲೇಟ್ ಗಳನ್ನು ತನ್ನ ತಾಯಿ ಕದಿಯುತ್ತಿದ್ದಾರೆ ಎಂದು ತಾಯಿಯ ವಿರುದ್ಧವೇ ಮಹಿಳಾ ಪೊಲೀಸ್ ಗೆ ದೂರು ನೀಡಿರುವುದನ್ನು ಇದು ತೋರಿಸುತ್ತದೆ. ಅವನು ತನ್ನ ತಾಯಿಯನ್ನು ಜೈಲಿಗೆ ಹಾಕಿ ಅಂತ ಸಹ ಆ ಮಹಿಳಾ ಪೊಲೀಸ್ ಗೆ ಕೇಳುತ್ತಾನೆ. ಮಹಿಳಾ ಪೊಲೀಸ್ ಮಗುವಿಗೆ ತನ್ನ ತಾಯಿಯ ಹೆಸರಿನ ಬಗ್ಗೆ ಕೇಳಿದಾಗ, ಅವನು 'ಮಮ್ಮಿ' ಎಂದು ಸರಳವಾಗಿ ಮತ್ತು ಮೆಲ್ಲಗೆ ಹೇಳುತ್ತಾನೆ.



ತನ್ನ ದೂರನ್ನು ಗಂಭೀರವಾಗಿ ಪರಿಗಣಿಸುವಂತೆ ಮತ್ತು ಸೂಕ್ಷ್ಮ ವಿವರಗಳನ್ನು ಶ್ರದ್ಧೆಯಿಂದ ಗಮನಿಸುವಂತೆ ಮಹಿಳಾ ಪೋಲೀಸ್ ಸಹ ಹೇಗೆ ನಟಿಸುತ್ತಿದ್ದಾರೆ ಎಂಬುದು ನೋಡಲು ಇನ್ನೂ ತಮಾಷೆಯ ಸಂಗತಿಯಾಗಿದೆ. ಆನ್ಲೈನ್ ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವ ಈ ವಿಡಿಯೋವು ನೆಟ್ಟಿಗರಿಂದ ಟನ್ ಗಟ್ಟಲೆ ಲೈಕ್ ಗಳು ಮತ್ತು ಕಾಮೆಂಟ್ ಗಳನ್ನು ಸಹ ಗಳಿಸಿದೆ.


ಕಾಮೆಂಟ್ ನೋಡಿ ಹೇಗೆ ಬಂದಿವೆ..
"ಈ ವಿಡಿಯೋ ನೋಡಿ ನನಗೆ ತುಂಬಾನೇ ಖುಷಿಯಾಯಿತು" ಎಂದು ನಗುವ ಎಮೋಟಿಕಾನ್ ಗಳೊಂದಿಗೆ ಒಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಪೋಸ್ಟ್ ಮಾಡಿದ್ದಾರೆ. "ತುಂಬಾನೇ ಮುದ್ದಾಗಿದೆ ವಿಡಿಯೋ” ಎಂದು ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಮೂರನೆಯವರು "ನೀವು ನಿಮ್ಮ ಹಕ್ಕುಗಳನ್ನು ತಿಳಿದುಕೊಂಡಾಗ ಹೀಗಾಗುತ್ತದೆ" ಎಂದು ಬರೆದರೆ, ಇನ್ನೂ ಅನೇಕರು ನಗುವ ಎಮೋಜಿಗಳನ್ನು ಕಾಮೆಂಟ್ ನಲ್ಲಿ ಹಾಕಿ ಪ್ರತಿಕ್ರಿಯಿಸಿದರು.


ಇದನ್ನೂ ಓದಿ:  New York: ಮಗುವಿಗೆ ಒಂದೊಳ್ಳೆ ಹೆಸರು ಸೂಚಿಸುವುದಕ್ಕೆ ಪೋಷಕರು ಲಕ್ಷ ರೂಪಾಯಿ ಕೊಡ್ತಾರಂತೆ!


"ಆ ಮಹಿಳಾ ಪೊಲೀಸ್ ಸಹ ಆ ಮಗುವನ್ನು ತುಂಬಾ ಸರಳ ಮತ್ತು ವಿನಮ್ರ ರೀತಿಯಲ್ಲಿ ಹೇಗೆ ನಡೆಸಿಕೊಂಡಳು" ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಕಾಮೆಂಟ್ ವಿಭಾಗವು ಹೃದಯಗಳು ಮತ್ತು ನಗುವ ಎಮೋಟಿಕಾನ್ ಗಳಿಂದ ತುಂಬಿದೆ.

Published by:Ashwini Prabhu
First published: