ಅಪ್ಪನ ಹೆಣದೊಂದಿಗೆ 57 ಲಕ್ಷದ ಕಾರನ್ನೂ ಮಣ್ಣು ಮಾಡಿದ ಮಗ!


Updated:June 13, 2018, 6:39 PM IST
ಅಪ್ಪನ ಹೆಣದೊಂದಿಗೆ 57 ಲಕ್ಷದ ಕಾರನ್ನೂ ಮಣ್ಣು ಮಾಡಿದ ಮಗ!
credit: Facebook

Updated: June 13, 2018, 6:39 PM IST
ನೈಜಿರಿಯಾ: ತಮ್ಮ ಪ್ರೀತಿ ಪಾತ್ರರಾದವರನ್ನು ಅಗಲಿದವರ ನೆನಪಿಗೆ ಏನಾದರೂ ಸ್ಪೆಷಲ್​ ಸಾಹಸಕ್ಕೆ ಜನ ಮುಂದಾಗುವುದು ಹೊಸದೇನಲ್ಲ. ಇದೀಗ ನೈಜೀರಿಯಾದ ಅಝುಬುಕ್​ ಎಂಬಾತ ತನ್ನನ್ನು ಅಗಲಿದ ತಂದೆಯ ನೆನಪಿಗೆ ಅವರ ದೇಹವನ್ನು ಹೊಸ ಬಿಎಂಡಬ್ಲ್ಯೂ ಕಾರ್​ನೊಂದಿಗೆ ಹೊಂಡದಲ್ಲಿ ಹೂತಿದ್ದಾನೆ.

ಅಝುಬುಕ್​ನ ಇತ್ತೀಚೆಗೆ ತನ್ನ ತಂದೆಯನ್ನು ಕಳೆದುಕೊಂಡಿದ್ದ, ಅವರ ಅಂತಿಮ ಯಾತ್ರೆ ಸುಗಮವಾಗಿ ಸಾಗಲಿ ಎಂಬ ಉದ್ದೇಶದಿಂದ 85,000 ಡಾಲರ್​( 57 ಲಕ್ಷ ಭಾರತೀಯ ಮೌಲ್ಯದ) ಹೊಚ್ಚ ಹೊಸ ಬಿಎಂಡಬ್ಲ್ಯು ಕಾರನ್ನು ಖರೀದಿಸಿದ್ದಾನೆ. ಬಳಿಕ ಕಾರು ಸಮೇತ ತನ್ನ ತಂದೆಯನ್ನು ಮಣ್ಣು ಮಾಡಿದ್ದು ಈ ಚಿತ್ರ ಫೇಸ್​ಬುಕ್​ ಭಾರೀ ವೈರಲ್​ ಆಗಿದೆ.ಫೇಸ್​ಬುಕ್​ನಲ್ಲಿ ಈ ಚಿತ್ರ 25 ಲಕ್ಷಕ್ಕೂ ಅಧಿಕ ಶೇರ್​ ಆಗಿದ್ದು, ನೆಟ್ಟಿಗರು ಅಝುಬುಕ್​ನ ಈ ಕೃತ್ಯಕ್ಕೆ ಛೀಮಾರಿ ಹಾಕಿದ್ದಾರೆ. ಇಷ್ಟೊಂದು ದುಬಾರಿ ಮಟ್ಟದಲ್ಲಿ ತಂದೆಯ ಅಂತ್ಯಕ್ರಿಯೆ ನಡೆಸುವ ಅಗತ್ಯವೇ ಇರಲಿಲ್ಲ ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

ತಂದೆತಾಯಿ ಇದ್ದಾಗ ಇಂತಹ ಐಶಾರಾಮಿ ಜೀವನನ್ನು ನಡೆಸಿ ಅವರನ್ನು ಸಂತಸದಿಂದ ಕಾಪಾಡಿ. ಆದರೆ ಅವರ ಮರಣದ ಬಳಿಕ ಈ ರೀತಿಯಾಗಿ ನಡೆದುಕೊಳ್ಳುವುದು ಮೂರ್ಖತನದ ಪರಮಾವಧಿ ಎಂದು ಸಿಫಿಸೊ ಇನೋ ಮಖಶಿಲಾ ಎಂಬವರು ಕಾಮೆಂಟ್​ ಮಾಡಿದ್ದಾರೆ.
First published:June 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ