Video Viral: ಮಗನಿಂದಾಗಿ ಲೈವ್​​ ಸಂದರ್ಶನದ ವೇಳೆ ಮರ್ಯಾದೆ ಕಳೆದುಕೊಂಡ ಮಂತ್ರಿ!

Zoom: ಸದ್ಯ ವೈರಲ್​ ಆಗುತ್ತಿರುವ ವಿಡಿಯೋವನ್ನು ಬಹುತೇಕರು ವೀಕ್ಷಿಸಿದ್ದಾರೆ. ಸಂಖ್ಯೆಗಳ ಪ್ರಕಾರ 92.7 ಸಾವಿರಕ್ಕಿಂತ ಹೆಚ್ಚು ಜನರು ನೋಡಿದ್ದಾರೆ.

Zoom

Zoom

  • Share this:
    ಜೂಮ್​ ಮೀಟಿಂಗ್​ ವೇಳೆ ಅಥವಾ ಲೈವ್​ ಸಂದರ್ಶನದ (Live Interview) ವೇಳೆ ಅಚಾನಕ್​ ಆಗಿ ನಡೆದ ಅನೇಕ ಘಟನೆಗಳು ವೈರಲ್​ ಆಗಿರುವುದನ್ನು ನೋಡಿದ್ದೇವೆ. ತಿಳಿದು ಅಥವಾ ತಿಳಿಯದೇ ಕೆಲವೊಂದು ಸನ್ನಿವೇಷಗಳು ನಗೆ ತರಿಸಿದರೆ ಇನ್ನು ಕೆಲವೊಮ್ಮೆ ಮರ್ಯಾದೆ ಕಳೆದುಕೊಂಡ ಪ್ರಸಂಗವೂ ನಡೆದಿದೆ. ಅದರಂತೆ ಇದೀಗ ಮಂತ್ರಿಯೊಬ್ಬರು ಲೈವ್​ ಸಂದರ್ಶನದ ಮೇಲೆ ಆದ ಸನ್ನಿವೇಷವೊಂದು ವೈರಲ್​ ಆಗಿದೆ. ಸದ್ಯ ವಿಡಿಯೋ (Video)ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

    ನ್ಯೂಜಿಲ್ಯಾಂಡ್​ನ (New Zealand) ಮಂತ್ರಿ ಕಾರ್ಮೆಲ್​ ಸಪುಲೋನಿ (Carmel Sepuloni) ಆನ್​ಲೈನ್​ ಮೂಲಕ ನೇರ ಸಂದರ್ಶನದಲ್ಲಿ ತೊಡಗಿಕೊಂಡಿರುತ್ತಾರೆ. ಈ ವೇಳೆ ಅವರಿದ್ದ ರೂಮಿನ ಬಾಗಿಲಿಗೆ ಲಾಕ್ ಹಾಕಲು ಮರೆತು ಹೋಗಿದೆ. ಸಂದರ್ಶನದಲ್ಲಿ ಮುಳುಗಿದ್ದ ಕಾರ್ಮೆಲ್​ ಕೋಣೆಗೆ ಅವರ ಮಗ ಬರುತ್ತಾನೆ. ಕೈಯಲ್ಲಿ ಮನುಷ್ಯನ ಖಾಸಗಿ ಭಾಗವನ್ನು ಹೋಲುವ ವಿಚಿತ್ರ ಆಕೃತಿಯ ಕ್ಯಾರೆಟ್​ ಒಂದನ್ನು ಹಿಡಿದುಕೊಂಡಿರುತ್ತಾನೆ. ತಾಯಿ ಸಂದರ್ಶನ ವೇಳೆ ಇಣುಕಿ ನೋಡಿದ ಮಗ ಕೈಯಲ್ಲಿದ್ದ ಕ್ಯಾರೆಟ್​ ಅನ್ನು ತೋರಿಸುತ್ತಾನೆ.

    ಕಾರ್ಮೆಲ್​ ಸಪುಲೋನಿ ನ್ಯೂಜಿಲ್ಯಾಂಡ್​ನ ಅಭಿವೃದ್ಧಿ ಸಚಿವೆಯಾಗಿದ್ದು, ಲೈವ್​ ಸಂದರ್ಶನ ವೇಳೆ ಮಗ ಮಾಡಿದ ತುಂಟಾಟವನ್ನು ಗಮನಿಸುತ್ತಾರೆ. ತಕ್ಷಣವೇ ತಡೆಯಲು ಪ್ರಯತ್ನಿಸುತ್ತಾಳೆ. ಆದರೆ ಮಗ ಮಾತ್ರ ಕೈಯಲ್ಲಿದ್ದ ಕ್ಯಾರೆಟ್​ ಅನ್ನು ತೋರಿಸುತ್ತಾನೆ. ಸದ್ಯ ಈ ದೃಶ್ಯ ವೈರಲ್​ ಆಗಿದೆ.

    ಕಾರ್ಮೆಲ್​ ಸಪುಲೋನಿ ರೇಡಿಯೋ ಸವೋವಾ ಜೊತೆಗೆ ಲೈವ್​ ಜೂಮ್​ ಸಂದರ್ಶನದಲ್ಲಿದ್ದರು. ಅವರ ಕಿರಿಯ ಮಗನಿಂದಾಗಿ ಈ ರೀತಿಯಾಗಿದೆ. ಪ್ರಾರಂಭದಲ್ಲಿ ಕಾರ್ಮೆಲ್​ಗೆ ಮಗನ ತುಂಟಾದಿಂದ ಅವಮಾನವಾಗಿದ್ದು, ಆ ಬಳಿಕ ಅವರೇ ಟ್ವಿಟ್ಟರ್​ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ.

    ಸದ್ಯ ವೈರಲ್​ ಆಗುತ್ತಿರುವ ವಿಡಿಯೋವನ್ನು ಬಹುತೇಕರು ವೀಕ್ಷಿಸಿದ್ದಾರೆ. ಸಂಖ್ಯೆಗಳ ಪ್ರಕಾರ 92.7 ಸಾವಿರಕ್ಕಿಂತ ಹೆಚ್ಚು ಜನರು ನೋಡಿದ್ದಾರೆ.

    ಮಂತ್ರಿ ಕಾರ್ಮೆಲ್ ಸೆಪುಲೋನಿ ತನ್ನ ಟ್ವೀಟ್ ನಲ್ಲಿ ‘ಜೂಮ್ ಮೂಲಕ ನೇರ ಸಂದರ್ಶನ ಮಾಡುತ್ತಿರುವಾಗ ಮತ್ತು ಮಗ ಕಿರುಚುತ್ತಾ ಕೊಠಡಿಗೆ ಬಂದು ಕ್ಯಾರೆಟ್ ತೋರಿಸಲು ಆರಂಭಿಸಿದ. ಆದರೆ ಕ್ಯಾಮರಾದಲ್ಲಿ ಕ್ಯಾರೆಟ್‌ಗಳಿಗೆ ಕುಸ್ತಿ ಮಾಡುತ್ತಿದ್ದೆವು, ಆದರೆ ಈಗ ಆ ಘಟನೆ ನೆನೆದು ನಗುತ್ತಿದ್ದೇನೆ ಎಂದು ಬರೆದಿದ್ದಾರೆ.

    ತನ್ನ ಇನ್ನೊಂದು ಟ್ವೀಟ್ ನಲ್ಲಿ, ಇನ್ಮುಂದೆ ವಿಚಿತ್ರವಾಗಿ ಕಾಣುವ ಕ್ಯಾರೆಟ್ ಖರೀದಿಸುವ ತಪ್ಪನ್ನು ಮಾಡುವುದಿಲ್ಲ ಎಂದು ಹೇಳಿದ್ದಾರೆ.

    ಕೊರೋನಾ ಸಮಯದಲ್ಲಿ ಆನ್​ಲೈನ್​ ಮೂಲಕ ಜೂಮ್​ ಮೀಟಿಂಗ್​, ಗೂಗಲ್​ ಮೀಟಿಂಗ್​ಗಳನ್ನು ಹೆಚ್ಚಾಗಿ ಮಾಡಲಾಗುತ್ತಿತ್ತು. ವರ್ಕ್​ ಫ್ರಂ ಹೋಮ್​, ಅಥವಾ ಮನೆಯಲ್ಲಿದ್ದುಕೊಂಡವರು ಆಫೀಸು ಕೆಲಸಕ್ಕಾಗಿ ಜೂಮ್​ ಮೀಟಿಂಗ್​ ಮಾಡುತ್ತಿದ್ದರು. ಇನ್ನು ಶಾಲಾ ಶಿಕ್ಷಕರು ಕೂಡ ವಿದ್ಯಾರ್ಥಿಗಳ ಜೊತೆಗೆ ಸಂವಾದ ನಡೆಸಲು ಆನ್​ಲೈನ್​ ವಿಡಿಯೋ ಕಾಲಿಂಗ್​ ಮೊರೆ ಹೋಗುತ್ತಿದ್ದರು.

    ಇದನ್ನು ಓದಿ:Video Viral: ಪ್ರವಾಹ ಇದ್ರೂ ಪಾತ್ರೆಯಲ್ಲಿ ಕುಳಿತುಕೊಂಡು ಮಂಟಪ ಸೇರಿದ ಜೋಡಿ… ಕೊನೆಗೂ ಮದುವೆ ಆದ್ರು!





    ಆನ್​ಲೈನ್ ವಿಡಿಯೋ ಕರೆ ಅಥವಾ ಜೂಮ್​ ಮೀಟಿಂಗ್ ಸಮಯದಲ್ಲಿ ಅನೇಕ ಅವಮಾನಕಾರಿಯಾದ ಘಟನೆಘಲು ನಡೆದಿರುವುದು ಬೆಳಕಿಗೆ ಬಂದಿದೆ. ಕ್ಯಾಮೆರಾ ಆಫ್​ ಆಗಿದೆ ಎಂದು ಲೈನ್​ ಮೂಲಕ ಮರ್ಯಾದೆ ಹೋದ ಅನೇಕ ಪ್ರಸಂಗಳಿವೆ.

    ಇದನ್ನು ಓದಿ: Nidhi Parmar: 37ನೇ ವಯಸ್ಸಿಗೆ ತಾಯಿಯಾಗಿ 100 ಲೀಟರ್ ಎದೆಹಾಲು ದಾನ​ ಮಾಡಿದ ಬಾಲಿವುಡ್ ನಿರ್ದೇಶಕಿ!

    ಅದರಲ್ಲೂ ಜೂಮ್​ ಮೀಟಿಂಗ್​ ವೇಳೆ ಸೆಕ್ಸ್​ ನಡೆಸಿ, ಬೆತ್ತಲಾಗಿ ಓಡಾಡಿ, ಕೆಟ್ಟ ಭಾಷೆ ಪ್ರಯೋಗಿಸಿ ವೈರಲ್​ ಆದ ಅನೇಕ ವಿಡಿಯೋಗಳಿವೆ. ಅದರಂತೆ ಇದೀಗ ನ್ಯೂಜಿಲ್ಯಾಂಡ್​ನ ಅಭಿವೃದ್ಧಿ ಸಚಿವೆ ಕಾರ್ಮೆಲ್​ ಸಪುಲೋನಿ ಅವರ ಮಗ ಮಾಡಿರುವ ತುಂಟಾಟದಿಂದ ನಗೆಗೀಡಾದ ಸನ್ನಿವೇಷ ಎದುರಾಗಿದೆ.
    Published by:Harshith AS
    First published: