ಇತ್ತೀಚೆಗೆ ಕೇರಳದಲ್ಲಿ ಚಾಲಕನೊರ್ವನ ಕಾರು ಪಾರ್ಕಿಂಗ್ ಕಲೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ರಸ್ತೆ ಬದಿಯ ಕಾಲುವೆ ಮೇಲೆ ಕಾರು ನಿಲ್ಲುವಷ್ಟೇ ಜಾಗದಲ್ಲಿ ಚಾಲಕ ಇನೋವಾ ಕಾರನ್ನು ಪಾರ್ಕ್ ಮಾಡಿದ್ದ. ಕೇವಲ ಒಂದೇ ನಿಮಿಷದಲ್ಲಿ ಆತ ಕಾರನ್ನು ಹೊರ ತೆಗೆದಿದ್ದ. ಆತನ ಚಾಲನ ಕೌಶಲ್ಯಕ್ಕೆ ಅನೇಕರು ಭೇಷ್ ಎಂದಿದ್ದರು. ಮಾತ್ರವಲ್ಲದೆ ಫೇಸ್ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್ನಲ್ಲಿ ವಿಡಿಯೋ ಹರಿದಾಡಿತ್ತು. ಆ ವಿಡಿಯೋ ಕಂಡು ಮತ್ತೊರ್ವ ಚಾಲಕ ತನ್ನ ಕಾರನ್ನು ತಂದು ಆದೇ ಸ್ಥಳದಲ್ಲಿ ನಿಲ್ಲಿಸಲು ಮುಂದಾಗಿದ್ದಾನೆ.
ಕಪ್ಪು ಬಣ್ಣದ ಸೆಡಾನ್ ಕಾರಿನ ಚಾಲಕ ಅದೇ ಸ್ಥಳದಲ್ಲಿ ತನ್ನ ಗಾಡಿಯನ್ನು ನಿಲ್ಲಿಸಲು ಹರ ಸಾಹಸ ಪಡುತ್ತಿರುವ ದೃಶ್ಯ ವೈರಲ್ ಆಗಿದೆ. ಅನೇಕರು ಆತನ ಕಾರು ನಿಲ್ಲಿಸುತ್ತಾನೋ ಎಂದು ಕುತೂಹಲದಿಂದ ನೋಡುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿದೆ. ಇನ್ನುಳಿದಂತೆ ಮತ್ತೆ ಕೆಲವರು ತಮ್ಮ ಸ್ಮಾರ್ಟ್ಫೋನ್ ಮೂಲಕ ದೃಶ್ಯ ಸೆರೆಹಿಡಿಯುತ್ತಿರುವುದು ಕಾಣುತ್ತಿದೆ. ದೃಶವನ್ನು ಸೆರೆ ಹಿಡಿಯುತ್ತಿರುವ ಮಹಿಳೆ ಚಾಲಕನು ಯಾಕೆ ಅಷ್ಟು ಕಷ್ಟಪಡುತ್ತಿದ್ದಾರೆ ಎಂದು ಹೇಳುತ್ತಿರುವ ವಿಡಿಯೋದಲ್ಲಿ ಕೇಳಿಬಂದಿದೆ.
That’s Malayalee confidence for you. #Parking pic.twitter.com/3NF4aah83m
— Nandagopal Rajan (@nandu79) September 6, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ