ತನ್ನನ್ನು ಚೋಟು ಎಂದ ಹುಡುಗಿಗೆ ರತನ್ ಟಾಟಾ ಕೊಟ್ಟ ಉತ್ತರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ

ನಮ್ಮ ಪ್ರತಿಯೊಬ್ಬರಲ್ಲೂ ಮಗು ಇರುತ್ತದೆ ಎಂದು ಹೇಳಿದ ಅವರು ಆ ಹುಡುಗಿಯನ್ನು ಗೌರವದಿಂದ ಕಾಣಬೇಕೆಂದು ಎಲ್ಲರಿಗೂ ಮನವಿ ಮಾಡಿದರು. ರತನ್ ಟಾಟಾ ಅವರ ಈ ಔದಾರ್ಯತೆಯ ಮಾತುಗಳಿಗೆ ಸಾವಿರಾರು ಲೈಕ್​ಗಳು ಬಂದವು.

news18
Updated:February 12, 2020, 6:35 PM IST
ತನ್ನನ್ನು ಚೋಟು ಎಂದ ಹುಡುಗಿಗೆ ರತನ್ ಟಾಟಾ ಕೊಟ್ಟ ಉತ್ತರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಮೆಚ್ಚುಗೆ
ರತನ್ ಟಾಟಾ
  • News18
  • Last Updated: February 12, 2020, 6:35 PM IST
  • Share this:
ಭಾರತದ ಅತ್ಯಂತ ಸಿರಿವಂತ ಉದ್ಯಮಿಗಳಲ್ಲೊಬ್ಬರೆನಿಸಿರುವ ರತನ್ ಟಾಟಾ ಸರಳತೆಗೂ ಹೆಸರಾದವರು. ಅವರ ಸರಳ ಸ್ವಭಾವ ಮತ್ತೊಮ್ಮೆ ಸೋಷಿಯಲ್ ಮೀಡಿಯಾದ ಅಭಿವ್ಯಕ್ತಗೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮನ್ನು ಛೋಟು ಎಂದು ಸಂಬೋಧಿಸಿದ ಬಾಲಕಿಯೊಬ್ಬರನ್ನು ಅವರು ಟೀಕಿಸುವ ಬದಲು ಸಂತೈಸುವ ಕೆಲಸ ಮಾಡಿದ್ದಾರೆ. ಟಾಟಾ ಅವರ ದಯಾ ಸ್ವಭಾವಕ್ಕೆ ನೆಟ್ಟಿಗರು ಮನಸೋತಿದ್ಧಾರೆ.

ಟಾಟಾ ಸನ್ಸ್ ಸಂಸ್ಥೆಯ ಮಾಜಿ ಛೇರ್ಮನ್ ಆದ ಅವರು ಕೆಲ ತಿಂಗಳ ಹಿಂದಷ್ಟೇ ಇನ್ಸ್​ಟಾಗ್ರಾಮ್ ಅಕೌಂಟ್ ಓಪನ್ ಮಾಡಿದ್ದರು. ಅದಾಗಲೇ 10 ಲಕ್ಷ ಫಾಲೋಯರ್ಸ್ ದಕ್ಕಿದ್ದರು. ಅದೇ ಖುಷಿಯಲ್ಲಿ ಅವರು ತಾವು ನೆಲದ ಮೇಲೆ ಕೂತಿರುವ ತಮ್ಮ ಫೋಟೋವನ್ನು ಹಾಕಿ ಸಂತಸ ವ್ಯಕ್ತಪಡಿಸಿಕೊಂಡಿದ್ದರು.

“ಈ ಪೇಜ್​ನಲ್ಲಿ ಹಲವಾರು ಜನರು ಮೈಲಿಗಲ್ಲು ಮುಟ್ಟಿರುವುದನ್ನು ನಾನು ನೋಡಿದೆ. ನಾನು ಇನ್ಸ್​​ಟಾಗ್ರಾಮ್ ಸೇರಿದಾಗ ಇಂಥ ಅದ್ಭುತ ಆನ್​ಲೈನ್ ಕುಟುಂಬವನ್ನು ನಿರೀಕ್ಷಿಸಿರಲಿಲ್ಲ. ಇದಕ್ಕೆ ನಿಮಗೆ ಧನ್ಯವಾದ” ಎಂದು ಟಾಟಾ ಬರೆದುಕೊಂಡಿದ್ದರು.

ಇದನ್ನೂ ಓದಿ: ಹುಡುಗಿಯೊಂದಿಗೆ ಟಿಕ್ ಟಾಕ್ ಮಾಡಿದ್ದಕ್ಕೆ ಜೈಪುರದ ಹುಡುಗನಿಗೆ ಸಿಕ್ಕ ಶಿಕ್ಷೆ ಏನು ಗೊತ್ತಾ?

ಈ ಕಾಲಘಟ್ಟದಲ್ಲಿ ನೀವು ಮಾಡುವ ಗುಣಮಟ್ಟದ ಸಂಪರ್ಕಗಳು ಯಾವುದೇ ಅಂಕಿಗಿಂತ ದೊಡ್ಡದಾಗಿರುತ್ತದೆ ಎಂದು ಭಾವಿಸಿದ್ದೇನೆ. ನಿಮ್ಮ ಕಮ್ಯೂನಿಟಿಯ ಒಂದು ಭಾಗವಾಗಿರುವುದು ಹಾಗೂ ನಿಮ್ಮಿಂದ ಕಲಿಯುತ್ತಿರುವುದು ನಿಜಕ್ಕೂ ಖುಷಿ ಕೊಟ್ಟಿದೆ. ನಮ್ಮ ಪ್ರಯಾಣ ಒಟ್ಟಿಗೆ ಮುಂದುವರಿಯುತ್ತದೆ ಎಂದು ಆಶಿಸುತ್ತೇನೆ ಎಂದೂ ಅವರು ಈ ಪೋಸ್ಟ್​​ನಲ್ಲಿ ಹೇಳಿಕೊಂಡಿದ್ದರು.
ಅವರ ಈ ಪೋಸ್ಟ್​​ಗೆ ಸಾವಿರಾರು ಕಮೆಂಟ್​ಗಳು ಬಂದಿವೆ. ಅದರಲ್ಲಿ ಒಬ್ಬ ಹುಡುಗಿಯ ಕಮೆಂಟ್ ಎಲ್ಲರ ಕಣ್ಣು ಕುಕ್ಕಿತು. ಆಕೆಯ ವಿರುದ್ಧ ಅನೇಕ ವ್ಯಕ್ತಿಗಳು ಟೀಕಾ ಪ್ರಹಾರವನ್ನೇ ಮಾಡಿದರು. ಆಕೆ ಬರೆದದ್ದು ಇಷ್ಟೇ: “ಕಂಗ್ರಾಜುಲೇಶನ್ಸ್ ಛೋಟು” ಎಂದು ಬರೆದು ಹಾರ್ಟ್ ಇಮೋಜಿ ಹಾಕಿದ್ದರು.

ಇದನ್ನೂ ಓದಿ: 11 ಕಿ.ಮೀ ಬೈಕ್​ ಚಲಾಯಿಸಿ ಹೆಲ್ಮೆಟ್​ ತೆರೆದಾಗ ಕಣ್ಣಿಗೆ ಕಂಡದ್ದೇ ಬೇರೆ!

ತನ್ನ ಈ ಪುಟ್ಟ ಕಮೆಂಟ್​ಗೆ ಇಷ್ಟು ತೀಕ್ಷ್ಣ ಪ್ರತಿಕ್ರಿಯೆ ನಿರೀಕ್ಷಿಸದ ಆ ಹುಡುಗಿ, “ರತನ್ ಟಾಟಾ ಎಲ್ಲರಿಗೂ ಮಾದರಿಯೇ. ಅವರ ಮೇಲೆ ನಾನು ಹೇಗೆ ಬೇಕಾದರೂ ಪ್ರೀತಿ ವ್ಯಕ್ತಪಡಿಸಬಹುದು” ಎಂದು ತಮ್ಮ ಛೋಟು ಹೇಳಿಕೆಯನ್ನು ಆ ಹುಡುಗಿ ಸಮರ್ಥಿಸಿಕೊಂಡಿದ್ದರು. ಆದರೂ ಟೀಕೆಯ ಮಳೆ ನಿಲ್ಲದಿದ್ದಾಗ ರತನ್ ಟಾಟಾ ಅವರೇ ಪ್ರತಿಕ್ರಿಯೆ ನೀಡಿದರು.

“ನಮ್ಮ ಪ್ರತಿಯೊಬ್ಬರಲ್ಲೂ ಮಗು ಇರುತ್ತದೆ” ಎಂದು ಹೇಳಿದ ಅವರು ಆ ಹುಡುಗಿಯನ್ನು ಗೌರವದಿಂದ ಕಾಣಬೇಕೆಂದು ಎಲ್ಲರಿಗೂ ಮನವಿ ಮಾಡಿದರು. ರತನ್ ಟಾಟಾ ಅವರ ಈ ಔದಾರ್ಯತೆಯ ಮಾತುಗಳಿಗೆ ಸಾವಿರಾರು ಲೈಕ್​ಗಳು ಬಂದವು.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published:February 12, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ