Google: ಗೂಗಲ್ ಸಿಇಒ ಸುಂದರ್ ಪಿಚೈ ಕುರಿತು ಕೆಲವು ಆಸಕ್ತಿಕರ ಮಾಹಿತಿಗಳು

ಸುಂದರ್ ಪಿಚೈ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊ ​​ಕೊಲ್ಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು 3 ಎಕರೆ ಲಾಸ್ ಆಲ್ಟೋಸ್ ಹಿಲ್ಸ್‌ ಪ್ರದೇಶದಲ್ಲಿ ಸುಮಾರು 10,000 ಚದರ ಅಡಿ ಮನೆಯನ್ನು ಹೊಂದಿದ್ದಾರೆ, ಅದನ್ನು ಅವರು 2014 ರಲ್ಲಿ ಖರೀದಿಸಿದ್ದರು

Sundar Pichai-ಸುಂದರ್ ಪಿಚೈ.

Sundar Pichai-ಸುಂದರ್ ಪಿಚೈ.

 • Share this:

  ಗೂಗಲ್ ಪೇರೆಂಟ್ ಆಲ್ಫಾಬೆಟ್ ಇಂಕ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸುಂದರ್ ಪಿಚೈ ಅವರು ಮೂಲತ ಭಾರತದವರು ಬಾಲ್ಯದಿಂದಲೂ ತಂತ್ರಜ್ಞಾನದ ಬಗ್ಗೆ ಆಸಕ್ತಿ ಹೊಂದಿದ್ದರು. ಈ ಉತ್ಸಾಹದಿಂದಾಗಿ ಅವರು ಇಂದು ವಿಶ್ವದ ಇತಿ ದೊಡ್ಡ ಕಂಪನಿಯ ಸಿಇಒ ಆಗಿ ವೃತ್ತಿಜೀವನವನ್ನು ನಡೆಸುತ್ತಿದ್ದಾರೆ ಅದು ಮಾತ್ರವಲ್ಲದೆ ಲಕ್ಷಾಂತರ ಡಾಲರ್‌ಗಳನ್ನು ಸಂಪಾದಿಸುತ್ತಿದ್ದಾರೆ ಮತ್ತು ಅವರು ಈಗ ಮಲ್ಟಿ ಮಿಲಿಯನೇರ್ ಆಗಿದ್ದಾರೆ. ಈ ಸೆಲೆಬ್ರಿಟಿಯ ಆಸ್ತಿ, ಆದಾಯಗಳನ್ನು ಲೆಕ್ಕ ಹಾಕಿದರೆ ಏನೆಂದರೂ ನಿವ್ವಳ ಮೌಲ್ಯ $ 600 ಮಿಲಿಯನ್ ಡಾಲರ್​ನಷ್ಟಿದೆ.


  ಸುಂದರ್ ಪಿಚೈ ಅವರ ಈ ಆಸ್ತಿಯ ಮೂಲ ಯಾವುದು?


  ಸುಂದರ್ ಪಿಚೈ ಅವರು ತಂತ್ರಜ್ಞಾನ ಉದ್ಯಮದಲ್ಲಿ ಹಲವಾರು ವರ್ಷಗಳಿಂದ ಕೆಲಸ ಮಾಡುವ ಮೂಲಕ ಭಾರಿ ಮೌಲ್ಯದ ಆಸ್ತಿಗಳನ್ನು ತಮ್ಮ ಬಳಿ ಸಂಗ್ರಹಿಸಿದ್ದಾರೆ. ಗೂಗಲ್‌ ಪ್ರಸ್ತುತ ಪಡಿಸಿದ ಅನೇಕ ಯೋಜನೆಗಳಲ್ಲಿ ಪಿಚೈ ಪ್ರಮುಖ ಪಾತ್ರವಹಿಸಿದ್ದಾರೆ ಮತ್ತು 2015 ರಿಂದ 2020 ರವರೆಗೆ ಪ್ರತಿವರ್ಷ $1 ಬಿಲಿಯನ್‌ಗಿಂತ ಹೆಚ್ಚಿನ ಸಂಬಳವನ್ನು ಪಡೆದಿದ್ದಾರೆ.ಪಿಚೈ ಅವರ ಮೂಲ ವೇತನ ಸುಮಾರು $2 ಮಿಲಿಯನ್, ಇದರ ಜೊತೆಗೆ ಅವರು ಬೋನಸ್ ಮತ್ತು ಸ್ಟಾಕ್ ಅನುದಾನವನ್ನು ಸಹ ಪಡೆದುಕೊಂಡಿದ್ದಾರೆ, ಈ ಬೋನಸ್ ಮತ್ತು ಸ್ಟಾಕ್ ಅವರ ಆದಾಯದ ಮೌಲ್ಯವನ್ನು ಹೆಚ್ಚಿಸಿದೆ.


  ಸುಂದರ್ ಪಿಚೈ ಅವರ ವರ್ಣರಂಜಿತ ವೃತ್ತಿಜೀವನ


  ಪಿಚೈ ಭಾರತದಲ್ಲಿ ಜನಿಸಿದರು ಮತ್ತು ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಮತ್ತು ವಾರ್ಟನ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಪದವಿಗಳನ್ನು ಪಡೆದಿದ್ದಾರೆ. ಅವರು 2004 ರಲ್ಲಿ ಗೂಗಲ್‌ಗೆ ಸೇರಿದರು. ಗೂಗಲ್‌ನಲ್ಲಿ, ಡ್ರೈವ್, ಜಿಮೇಲ್ ಮತ್ತು ನಕ್ಷೆಗಳು ಸೇರಿದಂತೆ ಕೆಲವು ಪ್ರಸಿದ್ಧ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಲು ಪಿಚೈ ಸಹಾಯ ಮಾಡಿದರು. ಅವರು 2019 ರಲ್ಲಿ ಆಲ್ಫಾಬೆಟ್ ಇಂಕ್ ಸಿಇಒ ಕೂಡ ಆದರು.


  ಸುಂದರ್ ಪಿಚೈ ಅವರ ದೇಣಿಗೆ ಹಾಗೂ ಸಹಾಯ


  ಸುಂದರ್ ಪಿಚೈ ಅವರು ಗೂಗಲ್‌ನ $1 ಮಿಲಿಯನ್ ದೇಣಿಗೆಯನ್ನು ಹಲವಾರು ಸಂಘ ಸಂಸ್ಥೆಗಳಿಗೆ ನೀಡಿದ್ದಾರೆ,. ಭಾರತದ ಕೊರೊನಾ ವೈರಸ್ ಪರಿಹಾರಕ್ಕೂ ಅವರು ಹಣ ನೀಡಿದ್ದನ್ನು ಈ ಸಂದರ್ಭದಲ್ಲಿ ನೆನೆಯಬಹುದು.


  ಸುಂದರ ಪಿಚೈ ಅವರ ಕುಟುಂಬದ ಬಗ್ಗೆ ಒಂದಷ್ಟು ಮಾಹಿತಿ ತಿಳಿಯೋಣ


  ಸುಂದರ್ ಪಿಚೈ ಅವರು ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಸ್ಯಾನ್ ಫ್ರಾನ್ಸಿಸ್ಕೊ ​​ಕೊಲ್ಲಿ ಪ್ರದೇಶದಲ್ಲಿ ವಾಸಿಸುತ್ತಿದ್ದಾರೆ. ಅವರು 3 ಎಕರೆ ಲಾಸ್ ಆಲ್ಟೋಸ್ ಹಿಲ್ಸ್‌ ಪ್ರದೇಶದಲ್ಲಿ ಸುಮಾರು 10,000 ಚದರ ಅಡಿ ಮನೆಯನ್ನು ಹೊಂದಿದ್ದಾರೆ, ಅದನ್ನು ಅವರು 2014 ರಲ್ಲಿ ಖರೀದಿಸಿದ್ದರು ಎಂಬುದು ವರದಿಗಳಿಂದ ತಿಳಿದು ಬಂದಿದೆ.


  ಇದನ್ನೂ ಓದಿ: ICSE- ISE: ಐಸಿಎಸ್‌ಇ 10 ನೇ ತರಗತಿ, 12 ಫಲಿತಾಂಶ ಪ್ರಕಟ

  ಅಂತಿಮ ಟಿಪ್ಪಣಿ: ಸುಂದರ್ ಪಿಚೈ ನಿವ್ವಳ ಮೌಲ್ಯ: $600 ಮಿಲಿಯನ್ ವೃತ್ತಿಜೀವನ: 2015 ರಲ್ಲಿ ಗೂಗಲ್‌ನ ಸಿಇಒ ಮತ್ತು 2019 ರಲ್ಲಿ ಆಲ್ಫಾಬೆಟ್‌ನ ಸಿಇಒ. ಅವರು ಭಾರತೀಯರಾಗಿರುವುದರಿಂದ ನಾವು ಅವರ ಬಗ್ಗೆ ಹೆಮ್ಮೆ ಪಡಬೇಕು. ಮತ್ತು ಅವರು ಬಹಳ ಸ್ಫೂರ್ತಿದಾಯಕ ವ್ಯಕ್ತಿ ಎಂಬುದು ಉಲ್ಲೇಖಾರ್ಹ ವಿಚಾರವಾಗಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಮನೆಯಿಂದ ಹೊರ ಹೋಗುವುದನ್ನು ಆದಷ್ಟು ಕಡಿಮೆ ಮಾಡಿ.
  Published by:HR Ramesh
  First published: