Mobile Addiction: ಅತಿಯಾದ ಸೋಶಿಯಲ್‌ ಮೀಡಿಯಾದ ಬಳಕೆ ಆರ್ಥಿಕ ಅಸಮಾನತೆಗೆ ಕಾರಣವಾಗಿದ್ಯಂತೆ

ಸಾಮಾಜಿಕ ಮಾಧ್ಯಮಗಳ ಬಳಕೆಯ ಹೆಚ್ಚಿನ ಚಟವು ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಅಷ್ಟೇ ಅಲ್ಲ, ಈ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಆರ್ಥಿಕವಾಗಿ ಉತ್ತಮವಾಗಿರುವವರಿಗಿಂತ ಬಡ ಕುಟುಂಬದ ಮಕ್ಕಳು, ಯುವಕರು ಹೆಚ್ಚಾಗಿ ಇವುಗಳನ್ನು ಬಳಸುತ್ತಾರೆ ಮತ್ತು ವ್ಯಸನಿಗಳಾಗಿದ್ದಾರೆ ಎಂದು ಸಂಶೋಧನೆಗಳು ತಿಳಿಸಿವೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಮತ್ತು ಇತರ ಸಾಮಾಜಿಕ ಮಾಧ್ಯಮಗಳ (Social Media) ಬಳಕೆಯ ಹೆಚ್ಚಿನ ಚಟವು ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ ಎಂದು ಇತ್ತೀಚಿನ ವರದಿಯೊಂದು ತಿಳಿಸಿದೆ. ಅಷ್ಟೇ ಅಲ್ಲ, ಈ ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಆರ್ಥಿಕವಾಗಿ ಉತ್ತಮವಾಗಿರುವವರಿಗಿಂತ ಬಡ ಕುಟುಂಬದ ಮಕ್ಕಳು (Children), ಯುವಕರು (Youths) ಹೆಚ್ಚಾಗಿ ಇವುಗಳನ್ನು ಬಳಸುತ್ತಾರೆ ಮತ್ತು ವ್ಯಸನಿಗಳಾಗಿದ್ದಾರೆ (Addicted) ಎಂದು ಸಂಶೋಧನೆಗಳು ತಿಳಿಸಿವೆ. ಈ ಸಂಶೋಧನೆಯು ʼಪೀರ್-ರಿವ್ಯೂಡ್ ಜರ್ನಲ್ ಇನ್ಫರ್ಮೇಶನ್‌, ಕಮ್ಯುನಿಕೇಷನ್‌, ಸೊಸೈಟಿʼಯಲ್ಲಿ ಪ್ರಕಟವಾಗಿದೆ.

40 ದೇಶಗಳ 179,000 ಕ್ಕಿಂತ ಮಕ್ಕಳ ಡೆಟಾ ಆಧಾರಿಸಿದೆ ಸಂಶೋಧನೆ
ಫೇಸ್‌ಬುಕ್, ಇನ್‌ಸ್ಟಾಗ್ರಾಮ್, ವಾಟ್ಸಾಪ್ ಚಟವು ಆರ್ಥಿಕ ಅಸಮಾನತೆಗೆ ಸಂಬಂಧಿಸಿದೆ ಎಂದು‌ ಸೂಚಿಸುವ ಅಧ್ಯಯನವು ಸುಮಾರು 40 ದೇಶಗಳ 179,000 ಕ್ಕಿಂತ ಹೆಚ್ಚು ಮಕ್ಕಳ ಡೇಟಾವನ್ನು ಆಧರಿಸಿವೆ. ವಿದ್ಯಾರ್ಥಿಗಳ ನಡುವೆ ಆರ್ಥಿಕ ಮತ್ತು ಸಾಮಾಜಿಕ ವಿಭಜನೆಗಳಿರುವ ಶಾಲೆಗಳಲ್ಲಿ ಪರಿಸ್ಥಿತಿಯು ಹದಗೆಟ್ಟಿದೆ ಎಂದು ಸಂಶೋಧನೆ ತೋರಿಸಿಕೊಟ್ಟಿದೆ.

ಮೊಬೈಲ್‌ ವೀಕ್ಷಣೆಯ ಸಮಯವನ್ನು ಕಡಿತಗೊಳಿಸಲು ಅಥವಾ ಸ್ನೇಹಿತರು ಮತ್ತು ಕುಟುಂಬಕ್ಕೆ ಸಾಮಾಜಿಕ ಮಾಧ್ಯಮದ ಬಳಕೆಯ ಬಗ್ಗೆ ಸುಳ್ಳು ಹೇಳಲು ಸಾಧ್ಯವಾಗದ ಯುವಜನತೆಯ ಅಸಹಜ ನಡವಳಿಕೆಯನ್ನು ಸೀಮಿತಗೊಳಿಸಲು ಸರ್ಕಾರಗಳು ಕೆಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಲೇಖಕರು ತಿಳಿಸಿದ್ದಾರೆ.

ಬಡಕುಟುಂಬದ ಮಕ್ಕಳು ಹೆಚ್ಚು ಸೋಶಿಯಲ್‌ ಮೀಡಿಯಾ ಬಳಸೋದು ಇದೇ ಕಾರಣಕ್ಕೆ..!
ಸವಲತ್ತು ಹೊಂದಿರುವ ಕುಟುಂಬಕ್ಕಿಂತ ಏಕೆ ಹೆಚ್ಚಾಗಿ ಬಡಕುಟುಂಬದ ಮಕ್ಕಳು ಸೋಶಿಯಲ್‌ ಮೀಡಿಯಾಗೆ ಹೊಂದಿಕೊಂಡಿದ್ದಾರೆ ಎಂಬುದರ ಬಗ್ಗೆ ಸಂಭವನೀಯ ಕಾರಣವನ್ನು ಕೂಡ ಒತ್ತಿ ಹೇಳಲಾಗಿದೆ. ಬಡ ಕುಟುಂಬದ ಹದಿಹರೆಯದವರು ಛಾಯಾಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳಲು ಹೆಚ್ಚು ಒಲವು ತೋರುತ್ತಾರೆ, ಏಕೆಂದರೆ, ಅವರು ಅವುಗಳನ್ನು ಸ್ಥಿತಿ ಮತ್ತು ಅಧಿಕಾರದೊಂದಿಗೆ ಸಮೀಕರಿಸುತ್ತಾರೆ ಎಂದು ತಿಳಿಸಿದೆ. ಅಂದರೆ ಫೋಟೋಗಳ ಮೂಲಕ ತಾವು ಅನುಕೂಲವಾಗಿದ್ದೇವೆ ಎಂದು ತೋರಿಸಲು ಹೀಗೆ ಮಾಡುತ್ತಾರೆ ಎಂದು ಸಂಶೋಧನೆ ಹೇಳಿದೆ.

ಇದನ್ನೂ ಓದಿ:   Viral Photo: ಮಳೆಗೆ ಆಫೀಸ್​ ಮುಳುಗ್ತು ಅಂತ ಈ ಭೂಪ ಮಾಡಿದ್ದು ಅಂತಿಂಥ ಕೆಲಸ ಅಲ್ಲ, ಫುಲ್ ವೈರಲ್ ಆಗ್ತಿದೆ ಫೋಟೋ

ಬಡತನದ ಪರಿಣಾಮಗಳನ್ನು ಸರಿದೂಗಿಸುವ ಹೊಸ ಸಾಮಾಜಿಕ ಮಾಧ್ಯಮ ಬಳಕೆಯ ನೀತಿಯ ಅಗತ್ಯವನ್ನು ಸಂಶೋಧನೆಯು ಸೂಚಿಸಿದೆ. "ಅಸಮಾನತೆಗಳನ್ನು ಕಡಿಮೆ ಮಾಡಲು ಮತ್ತು ಹದಿಹರೆಯದವರ ಅನಾರೋಗ್ಯಕರ ಸಾಮಾಜಿಕ ಮಾಧ್ಯಮ ಬಳಕೆಯ ನಡವಳಿಕೆಗಳನ್ನು ನಿರ್ಬಂಧಿಸಲು ಸರ್ಕಾರವು ಉಪಕ್ರಮಗಳನ್ನು ರಚಿಸಬೇಕು" ಎಂದು ಅಧ್ಯಯನದ ಪ್ರಮುಖ ಲೇಖಕ ಮೈಕೆಲಾ ಲೆಂಜಿ ತಿಳಿಸಿದ್ದಾರೆ.

18-22 ವಯಸ್ಸಿನ 40% ಯುವಕರು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಗಳು
ಸಂಶೋಧನೆಯಲ್ಲಿ ಸಾಮಾಜಿಕ ಮಾಧ್ಯಮವನ್ನು ಯುವಜನರು ಹೆಚ್ಚಾಗಿ ಬಳಸುತ್ತಾರೆ ಎಂಬುವುದು ಸ್ಪಷ್ಟವಾಗಿದೆ. ಯುಎಸ್‌ ಬಳಕೆದಾರರ ಮೇಲೆ ನಡೆಸಿದ ಒಂದು ಸಂಶೋಧನೆಯಲ್ಲಿ 18-22 ವಯಸ್ಸಿನ ನಡುವಿನ 40% ಜನರು ಸಾಮಾಜಿಕ ಮಾಧ್ಯಮಕ್ಕೆ ವ್ಯಸನಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಮತ್ತು 23-38 ವಯಸ್ಸಿನ 37% ಜನರು ವ್ಯಸನದ ಬಗ್ಗೆ ಒಪ್ಪಿಕೊಂಡಿದ್ದಾರೆ. ಡಿಜಿಟಲ್ 2022: ಡೇಟಾ ರಿಪೋರ್ಟಲ್‌ನ ಭಾರತ ವರದಿಯ ಪ್ರಕಾರ, ಜನವರಿ 2022 ರಲ್ಲಿ 46 ಕೋಟಿಗೂ ಹೆಚ್ಚು ಸಾಮಾಜಿಕ ಮಾಧ್ಯಮ ಬಳಕೆದಾರರಿದ್ದಾರೆ, ಇದು ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 33.4 ರಷ್ಟಿದೆ.

ಅಧ್ಯಯನ ನಡೆಸಲು ಉದ್ದೇಶವೇನು?
ಈ ಅಧ್ಯಯನದ ಗುರಿಯು, ಹದಿಹರೆಯದ ಮತ್ತು ಸಾಮಾಜಿಕ-ಆರ್ಥಿಕ ಅಸಮಾನತೆಗಳಲ್ಲಿ ಸಮಸ್ಯಾತ್ಮಕ ಸಾಮಾಜಿಕ ಮಾಧ್ಯಮ ಬಳಕೆ (PSMU) ನಡುವಿನ ಸಂಬಂಧಗಳನ್ನು ನೋಡುವುದಾಗಿದೆ, ಅದನ್ನು ವೈಯಕ್ತಿಕ, ಶಾಲೆ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಅಳೆಯಬಹುದು. ಪೀರ್ ಮತ್ತು ಕುಟುಂಬದ ಬೆಂಬಲವು ಮಾಡರೇಟರ್‌ಗಳಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಂಶೋಧನೆಯು ಪರಿಶೋಧಿಸಿದೆ. ಸಂಶೋಧಕರು ಮಕ್ಕಳಿಗೆ ತುಂಬಲು ಪ್ರಶ್ನಾವಳಿಗಳನ್ನು ನೀಡಿದರು. ಶಿಕ್ಷಕರು ಮತ್ತು ಅರ್ಹ ಸಂದರ್ಶಕರ ಸಮ್ಮುಖದಲ್ಲಿ ಪರೀಕ್ಷೆ ನಡೆಸಲಾಯಿತು.

ಪ್ರಶ್ನೆಗಳಿಗೆ ಉತ್ತರಿಸಿದ ಮಕ್ಕಳ ಪತ್ರಿಕೆಗಳ ಪ್ರಕಾರ, ಯುವಜನತೆ ಬಳಕೆಯನ್ನು ಕಡಿಮೆ ಮಾಡಲು ಪ್ರಯತ್ನಸಿಸುತ್ತಿರುವುದಾಗಿ ಮತ್ತು ಸಾಮಾಜಿಕ ಜಾಲತಾಣಗಳನ್ನು ಬಳಸದೇ ಇದ್ದಲ್ಲಿ ಒಂದು ರೀತಿಯ ಕೆಟ್ಟ ಭಾವನೆಯನ್ನು ಅನುಭವಿಸುವ ಬಗ್ಗೆ ಮಕ್ಕಳು ತಿಳಿಸಿದ್ದಾರೆ.

ಇದನ್ನೂ ಓದಿ: World’s Loneliest Tree: ಹವಾಮಾನ ಬದಲಾವಣೆ ಬಗ್ಗೆ ತಿಳಿಸಲಿದೆ 'ವಿಶ್ವದ ಏಕಾಂಗಿ ಮರ'!

ಸಂಶೋಧಕರು, ಸ್ನೇಹಿತರು ಮತ್ತು ಕುಟುಂಬದಿಂದ ಸಾಮಾಜಿಕ ಬೆಂಬಲದ ಮಟ್ಟವನ್ನು ನಿರ್ಣಯಿಸಿದ್ದಾರೆ. ದೇಶದ ಆರ್ಥಿಕತೆ ಮತ್ತು ಇಂಟರ್‌ ನೆಟ್ ಬಳಸುವ ರಾಷ್ಟ್ರದ ಜನಸಂಖ್ಯೆಯ ಶೇಕಡಾವಾರು ಪ್ರಮಾಣವನ್ನು ಪರಿಗಣಿಸಿ ಸಂಶೋಧಕರು ಅಧ್ಯಯನದ ಫಲಿತಾಂಶವನ್ನು ತೀರ್ಮಾನಿಸಿದ್ದಾರೆ. ತಮ್ಮ ಸಹಪಾಠಿಗಳಿಗಿಂತ ಗಣನೀಯವಾಗಿ ಕಡಿಮೆ ಸವಲತ್ತು ಹೊಂದಿರುವ ಮತ್ತು ಹೆಚ್ಚಿನ ಆರ್ಥಿಕ ಅಸಮಾನತೆಗಳೊಂದಿಗೆ ಶಾಲೆಗಳಿಗೆ ಹಾಜರಾಗುವ ಹದಿಹರೆಯದವರಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ.
Published by:Ashwini Prabhu
First published: