Troll Video: ಬ್ಲೌಸ್ ಹಾಕೊಂಡು ಭವಿಷ್ಯ ಹೇಳಮ್ಮಾ! ಖ್ಯಾತ ಜ್ಯೋತಿಷಿಯ ಗ್ರಹಚಾರ ಬಿಡಿಸಿದ ನೆಟ್ಟಿಗರು

ನಿಧಿ ಚೌಧರಿ ಎಂಬ ಸ್ಟಾರ್ ಜ್ಯೋತಿಷಿಯೊಬ್ಬರು ಸಖತ್ ಟ್ರೋಲ್ ಆಗಿದ್ದಾರೆ. ವಿಡಿಯೋದಲ್ಲಿ ಭವಿಷ್ಯ ಹೇಳಿದ ಅವರನ್ನು ಟ್ರೋಲ್ ಮಾಡಿದ ನೆಟ್ಟಿಗರು, ಸೋಶಿಯಲ್ ಮೀಡಿಯಾದಲ್ಲೇ ಗ್ರಹಚಾರ ಬಿಡಿಸಿದ್ದಾರೆ! “ಬ್ರಹ್ಮಾಸ್ತ್ರವನ್ನು ನೋಡುವ ಬದಲು ತನಗಾಗಿ ಕುಪ್ಪಸವನ್ನು ಖರೀದಿಸಲು ಸಾಧ್ಯವಾಗದ ಈ ಬಡ ಮಹಿಳೆಗೆ 500 ರೂಪಾಯಿ ದಾನ ಮಾಡಿ. ಹಿಂದುಳಿದವರಿಗೆ ಸಹಾಯ ಮಾಡಿ” ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ!

ಜ್ಯೋತಿಷಿ ನಿಧಿ ಚೌಧರಿ

ಜ್ಯೋತಿಷಿ ನಿಧಿ ಚೌಧರಿ

  • Share this:
ಈಗೆಲ್ಲ ಕೆಟ್ಟದ್ದೋ ಒಳ್ಳೆಯದೋ ಗೊತ್ತಿಲ್ಲ, ಜನ ಏನ್ (People) ಮಾಡಿದ್ರೂ ಸುದ್ದಿಯಾಗ್ತಾರೆ (News). ಸೋಶಿಯಲ್ ಮೀಡಿಯಾದಲ್ಲೊಂದು ಅಕೌಂಟ್ (Social Media Account) ಇದ್ರಂತೂ ಎದ್ದಿದ್ದು, ಮಲಗಿದ್ದು, ಕುಂತಿದ್ದು, ನಿಂತಿದ್ದೆಲ್ಲ ಸುದ್ದಿಯಾಗುತ್ತೆ. ಸೆಲಿಬ್ರಿಟಿಯಾದ್ರಂತೂ (Celebrity) ಕೇಳೋದೇ ಬೇಡ. ಅವರನ್ನು ಫಾಲೋ (Follow) ಮಾಡುವವರು ಸಾಕಷ್ಟು ಜನ ಇರ್ತಾರೆ. ಇದರ ಜೊತೆಗೆ ಅವ್ರನ್ನ ಟ್ರೋಲ್ (Troll) ಮಾಡೋದಕ್ಕೂ, ಸೋಶಿಯಲ್ ಮೀಡಿಯಾದಲ್ಲೇ ಕಾಲೆಳೆಯುವುದಕ್ಕೂ ಜನ ಕಾಯ್ತಾ ಇರ್ತಾರೆ. ಇದೀಗ ನಿಧಿ ಚೌಧರಿ (Nidhi Choudhari) ಎಂಬ ಸ್ಟಾರ್ ಜ್ಯೋತಿಷಿಯೊಬ್ಬರು (Star Astrologer) ಸಖತ್ ಟ್ರೋಲ್ ಆಗಿದ್ದಾರೆ. ವಿಡಿಯೋದಲ್ಲಿ ಭವಿಷ್ಯ ಹೇಳಿದ ಅವರನ್ನು ಟ್ರೋಲ್ ಮಾಡಿದ ನೆಟ್ಟಿಗರು (Netties), ಸೋಶಿಯಲ್ ಮೀಡಿಯಾದಲ್ಲೇ ಗ್ರಹಚಾರ ಬಿಡಿಸಿದ್ದಾರೆ. ಅಷ್ಟಕ್ಕೂ ಯಾರು ಈ ನಿಧಿ ಚೌಧರಿ? ಅವರು ಮಾಡಿದ ತಪ್ಪೇನು? ಸೋಶಿಯಲ್ ಮೀಡಿಯಾದಲ್ಲಿ ಅವರು ಟ್ರೋಲ್ ಆಗಿದ್ದೇಕೆ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ…

ಯಾರು ಈ ನಿಧಿ ಚೌಧರಿ?

ನಿಧಿ ಚೌಧರಿ ಓರ್ವ ಖ್ಯಾತ ಜ್ಯೋತಿಷಿ. ತಮ್ಮ ಜ್ಯೋತಿಷ್ಯದೊಂದಿಗೆ ಗ್ಲಾಮರ್‌ನಿಂದಲೂ ಫೇಮಸ್ ಆಗಿರುವ ಇವರು ಸ್ಟಾರ್ ಆಸ್ಟ್ರಾಲಜರ್. ಜೊತೆಗೆ ವೃತ್ತಿಯಿಂದ ವಕೀಲರು, ಸೋಶಿಯಲ್ ಇನ್‌ಫ್ಲೂಯೆನ್ಸರ್, ಫ್ಯಾಶನ್ ಸ್ಟೈಲಿಸ್ಟ್, ವಾಸ್ತು ತಜ್ಞೆ, ಜೊತೆಗೆ ಟ್ಯಾರೋಟ್ ಕಾರ್ಡ್ ರೀಡರ್ ಕೂಡ ಆಗಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ನಿಧಿ ಚೌಧರಿ

ನಿಧಿ ಚೌಧರಿ ಟ್ವಿಟರ್‌ನಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಹೊಂದಿರುವ ಜ್ಯೋತಿಷಿ.  "ಹೌದು! ನಾನು ವಕೀಲೆ, ಸಾಮಾಜಿಕ ಮಾಧ್ಯಮ ಪ್ರಭಾವಿ, ಫ್ಯಾಷನ್ ಸ್ಟೈಲಿಸ್ಟ್. ನಾನು ಜ್ಯೋತಿಷ್ಯ, ಟ್ಯಾರೋ ಕಾರ್ಡ್ ರೀಡರ್ ಹಾಗೂ ವಾಸ್ತು ತಜ್ಞೆ ಅಂತ ಬರೆದುಕೊಂಡಿದ್ದಾರೆ. ಜೊತೆಗೆ ನಾನು ಮಾದಕವಾಗಿ ಕಾಣಲು ಇಷ್ಟಪಡುತ್ತೇನೆ, ”ಎಂದು ಕೂಡ ಅವರು ಬರೆದಿದ್ದಾರೆ.

ಇದನ್ನೂ ಓದಿ: Family Fight: ಹೆಂಡ್ತಿ ಯಾಕ್ ಹಿಂಗ್ ಕಾಡ್ತಿ ಅಂತ 80 ಅಡಿ ಮರವೇರಿದ ಗಂಡ! ಒಂದು ತಿಂಗಳಾದ್ರೂ ಕೆಳಕ್ಕೆ ಬರಲೇ ಇಲ್ಲ!

ಟ್ರೋಲ್ ಆದ ನಿಧಿ ಚೌಧರಿ ವಿಡಿಯೋ

ನಿಧಿ ಚೌಧರಿ ಟ್ವಿಟರ್‌ನಲ್ಲಿ ವಿಡಿಯೋ ಒಂದನ್ನು ಹಾಕಿದ್ದರು. ಅದರಲ್ಲಿ ತಮ್ಮ ಮನೆಯ ಸಹಾಯವನ್ನು ಅಥವಾ ಇತರ ದುರ್ಬಲ ವ್ಯಕ್ತಿಗಳನ್ನು ದುರ್ಬಳಕೆ ಮಾಡದೆ ಶನಿಯಿಂದ ಹೇಗೆ ದೂರ ಉಳಿಯಬಹುದು, ಒಬ್ಬರು ಅವರನ್ನು ಹೇಗೆ ನ್ಯಾಯಯುತವಾಗಿ ನಡೆಸಿಕೊಳ್ಳಬೇಕು ಮತ್ತು ಸಾಧ್ಯವಾದಾಗಲೆಲ್ಲಾ ಅವರಿಗೆ ಹೇಗೆ ಸಹಾಯ ಮಾಡಬೇಕು ಎಂಬುದರ ಕುರಿತು ಅವರು ಮಾತನಾಡಿದರು ಎಂಬುದನ್ನು ವಿವರಿಸುವ ವೀಡಿಯೊವನ್ನು ಪೋಸ್ಟ್ ಮಾಡಿದ್ದರು. ಈ ವಿಡಿಯೋ ಈಗ ಸಖತ್ ಟ್ರೋಲ್ ಆಗುತ್ತಿದೆ.

ಬ್ಲೌಸ್ ಹಾಕದೇ ವಿಡಿಯೋ ಮಾಡಿದ್ದಕ್ಕೆ ಟ್ರೋಲ್!

ಹೌದು, ಈ ವಿಡಿಯೋದಲ್ಲಿ ಅವರು ಬ್ಲೌಸ್ ಹಾಕದೇ, ಎದೆಯನ್ನು ಸೀರೆಯಿಂದ ಮುಚ್ಚುವಂತೆ ಕುಳಿತುಕೊಂಡು ವಿವರಣೆ ನೀ್ಡಿದ್ದಾರೆ. ಇದು ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. ಮೊದಲು ಬ್ಲೌಸ್ ಹಾಕೊಂಡು ಭವಿಷ್ಯ ಹೇಳಮ್ಮ ಅಂತ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

ಎಲ್ಲಾ ಹಾಕಿದ್ರೂ ಬ್ಲೌಸ್ ಹಾಕೋದು ಮರೆತರು!

ನಿಧಿ ಚೌಧರಿ ಈ ವಿಡಿಯೋದಲ್ಲಿ ನೀಲಿ ಸೀರೆಯನ್ನು ಧರಿಸಿದ್ದಾರೆ. ಜೊತೆಗೆ ತನ್ನ ಎಡಗೈಯಲ್ಲಿ ಬೆಳ್ಳಿಯ ಆಭರಣಗಳು, ರುದ್ರಾಕ್ಷ ಮತ್ತು ಇತರ ಧಾರ್ಮಿಕ ವಸ್ತು, ಸರಗಳನ್ನು ತೊಟ್ಟಿದ್ದಾರೆ. ಜೊತೆಗೆ ಕಪ್ಪು ಬಿಂದಿ ಹಾಗೂ ಮೇಕಪ್ ಮಾಡೋದನ್ನು ಮರೆತಿಲ್ಲ, ಆದರೆ ಬ್ಲೌಸ್ ಹಾಕುವುದನ್ನು ಮಾತ್ರ ಮರೆತಿದ್ದಾರೆ ಅಂತ ನೆಟ್ಟಿಗರು ಕಾಲೆಳೆದಿದ್ದಾರೆ.

ಇದನ್ನೂ ಓದಿ: Tongue Cut: ತನ್ನ ನಾಲಿಗೆಯನ್ನೇ ಕತ್ತರಿಸಿ ದೇವಿ ಮುಂದಿಟ್ಟ ಭಕ್ತ! ಅಂಧಭಕ್ತಿಯ ಕಥೆ ಕೇಳಿದ್ರೆ ಶಾಕ್ ಆಗ್ತೀರಿ

ನೆಟ್ಟಿಗರಿಂದ ತರಹೇವಾರಿ ಕಾಮೆಂಟ್

ಇನ್ನು ಆಕೆಯ ಬಗ್ಗೆ ನೆಟ್ಟಿಗರು ಚಿತ್ರ ವಿಚಿತ್ರ ಕಾಮೆಂಟ್ ಮಾಡಿದ್ದಾರೆ. “ಬ್ರಹ್ಮಾಸ್ತ್ರವನ್ನು ನೋಡುವ ಬದಲು ತನಗಾಗಿ ಕುಪ್ಪಸವನ್ನು ಖರೀದಿಸಲು ಸಾಧ್ಯವಾಗದ ಈ ಬಡ ಮಹಿಳೆಗೆ 500 ರೂಪಾಯಿ ದಾನ ಮಾಡಿ. ಹಿಂದುಳಿದವರಿಗೆ ಸಹಾಯ ಮಾಡಿ” ಎಂದು ಒಬ್ಬರು ಬರೆದಿದ್ದಾರೆ. ಮತ್ತೊಬ್ಬರು "ನಮಗೆ ಅವಳ ಸಲಹೆ ಅಗತ್ಯವಿಲ್ಲ. ಅವಳಿಗೆ ರವಿಕೆ ಬೇಕು” ಕಾಮೆಂಟ್ ಮಾಡಿದ್ದಾರೆ.
Published by:Annappa Achari
First published: