ನಟಿ ದೀಪಿಕಾ ಪಡುಕೋಣೆ (Deepika Padukone) ಅಭಿನಯದ ಪಠಾಣ್ ಚಿತ್ರದ ಬೇಷರಮ್ ರಂಗ್ ಹಾಡು ಅದೆಷ್ಟು ವಿವಾದ ಸೃಷ್ಟಿಸಿದೆಯೋ ಅಷ್ಟೇ ಜನರಿಗೆ ಇಷ್ಟವಾಗಿದೆ ಕೂಡ. ಅನೇಕ ಜನರು ಈಗಾಗಲೇ ಈ ಸಾಂಗ್ಗೆ ಡಾನ್ಸ್ ಮಾಡಿ ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಡುತ್ತಿದ್ದಾರೆ. ಇತ್ತೀಚಿಗಷ್ಟೇ ಈ ಟ್ರೆಂಡಿಂಗ್ (Trending) ಸಾಂಗ್ನ ಇನ್ಸ್ಟಾ ರೀಲ್ ಒಂದು ಸಖತ್ ವೈರಲ್ ಆಗಿದೆ. ನಟಿ ದೀಪಿಕಾ ಪಡುಕೋಣೆ ಮಾಡಿದ್ದ ಬೇಷರಮ್ ರಂಗ್ ಹುಕ್ ಸ್ಟೆಪ್ಗಳನ್ನು ತನ್ವಿ ಗೀತಾ ರವಿಶಂಕರ್ ಎಂಬುವವರು ಮರುಸೃಷ್ಟಿ ಮಾಡಿದ್ದಾರೆ. ಡಿಸೆಂಬರ್ 30 ರಂದು ಅಂದರೆ ನಿನ್ನೆ ಫ್ಯಾಶನ್ ಇನ್ಫ್ಲುಯೆನ್ಸರ್ ತನ್ವಿ ಗೀತಾ ರವಿಶಂಕರ್ ಮಾಡಿರುವ ಈ ಪೋಸ್ಟ್ ನೆಟ್ಟಿಗರ ಮನ ಗೆದ್ದಿದೆ.
ಪ್ಲಸ್ ಸೈಜ್ ಫ್ಯಾಷನ್ ಇನ್ಫ್ಲಯುಯೆನ್ಸರ್ ಆಗಿರುವ ತನ್ವಿ
ತನ್ವಿ ಗೀತಾ ರವಿಶಂಕರ್ ಅವರು ಇನ್ಸ್ಟಾಗ್ರಾಂನಲ್ಲಿ ಲಕ್ಷಕ್ಕೂ ಅಧಿಕ ಫಾಲೋವರ್ಸ್ಗಳನ್ನು ಹೊಂದಿದ್ದು, ಡಿಜಿಟಲ್ ಕ್ರಿಯೇಟರ್ ಆಗಿದ್ದಾರೆ. ಸ್ವತಃ ಪ್ಲಸ್ ಸೈಜ್ ಹೊಂದಿರುವ ತನ್ವಿ ತನ್ನಂತೆಯೇ ಇರುವ ಹಲವಾರು ಮಹಿಳೆಯರಿಗೆ ಫ್ಯಾಷನ್ ಇನ್ಸೈಟ್ಸ್ ಗಳನ್ನು ಹಂಚಿಕೊಳ್ಳುತ್ತಾರೆ.
ಸಾಮಾಜಿಕ ಮಾಧ್ಯಮದಲ್ಲಿ ಅಲೆಗಳನ್ನು ಸೃಷ್ಟಿಸಿರುವ ಈ ಪೋಸ್ಟ್ನಲ್ಲಿ ಅವರು ನೀಲಿ ಬಣ್ಣದ ಸರಾಂಗ್ ಜೊತೆಗೆ ನೇರಳೆ ಬಣ್ಣದ ಬಿಕಿನಿಯನ್ನು ಧರಿಸಿದ್ದಾರೆ. ಕಡಲತೀರದಲ್ಲಿ ನಡೆಯುವಾಗ ಹಾಡಿನ ಹುಕ್ ಸ್ಟೆಪ್ಸ್ ಹಾಕಿದ್ದಾರೆ. ಡಾನ್ಸ್ ನಲ್ಲಿ ಅವರು ಮಾಡಿದ ಸ್ಟೆಪ್ಸ್ ಹಾಗೂ ಮುಖಭಾವವನ್ನು ಹಲವರು ಮೆಚ್ಚಿಕೊಂಡಿದ್ದಾರೆ.
ಪೋಸ್ಟ್ನ ಶೀರ್ಷಿಕೆಯಲ್ಲಿ ಅವರು, "ಬೇಷರಮ್ ಆಗಿರಿ. ನೀವು ಇಷ್ಟಪಡುವದನ್ನು ಮಾಡುವುದು, ನೀವು ಇಷ್ಟಪಡುವದನ್ನು ಧರಿಸುವುದು ಮತ್ತು ನೀವು ಬಯಸಿದ ಜೀವನವನ್ನು ನಡೆಸುವುದು, ನಿಮ್ಮನ್ನು ಬೇರೆಯವರ ದೃಷ್ಟಿಯಲ್ಲಿ "ಬೇಷರಾಮ್" ಆಗಿ ಮಾಡಿದರೆ, ಅದು ಸಂಪೂರ್ಣವಾಗಿ ಒಳ್ಳೆಯದು ಎಂದು ಬರೆದುಕೊಂಡಿದ್ದಾರೆ.
ಆತ್ಮವಿಶ್ವಾಸ ಹಾಗೂ ಡಾನ್ಸ್ಗೆ ಮೆಚ್ಚುಗೆ ನೀಡಿದ ನೆಟ್ಟಿಗರು
ಅವರು ಈ ವಿಡಿಯೋವನ್ನು ಅಪ್ ಲೋಡ್ ಮಾಡಿದ ಕೆಲವೇ ಗಂಟೆಗಳಲ್ಲಿ ಸಾವಿರಾರು ಲೈಕ್ ಗಳು ಬಂದವು. ಅನೇಕ ಜನರು ಅವರ ನೃತ್ಯವನ್ನು ಜೊತೆಗೆ ಅವರ ಆತ್ಮವಿಶ್ವಾಸವನ್ನು ಮೆಚ್ಚಿದರು. ಇನ್ನು ಹಲವಾರು ಜನರು ಪಾಸಿಟಿವ್ ಆಗಿ ಕಾಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಇನ್ಸ್ಟಾಗ್ರಾಮ್ ಕಾಮೆಂಟ್ಗಳಲ್ಲಿ ಒಬ್ಬ ವ್ಯಕ್ತಿ, "ಒ ಎಂ ಜಿ! ನಾನು ಇದನ್ನು ನೋಡುವಾಗ ನಾನು ನಗುತ್ತಿದ್ದೆ. ಸಖತ್ತಾಗಿ ಮಾಡಿದ್ದೀರಿ.. ನೀವು ಮಾಡಿದ್ದ ಆ ಸ್ಟೆಪ್ಸ್ ತುಂಬಾ ಚೆನ್ನಾಗಿತ್ತು. ನಾನೂ ನಿಮ್ಮ ಹಾಗೆಯೇ ಆತ್ಮವಿಶ್ವಾಸ ಹೊಂದಿದ್ದರೆ, ಆದ್ರೆ ಒಂದು ದಿನ ಬರಬಹುದು..” ಎಂದು ಬರೆದಿದ್ದಾರೆ.
View this post on Instagram
ಇದನ್ನೂ ಓದಿ: ನರ್ತಕಿಯ ನೃತ್ಯಕ್ಕೆ ತಲೆದೂಗಿ ಆಶೀರ್ವದಿಸಿದ ಆನೆ! ವಿಡಿಯೋ ನೋಡಿ
ಇನ್ನು, ಬಾಲಿವುಡ್ ನ ಪಠಾಣ್ ಚಿತ್ರದ ಈ ಬೇಷರಂ ರಂಗ್ ಹಾಡು ಸಾಕಷ್ಟು ವಿಚಾರಗಳಿಗೆ ವಿವಾದ ಎಬ್ಬಿಸಿತ್ತು. ಆದ್ರೆ ಇದೀಗ ಅದೇ ಹಾಡು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಆಗಿದೆ. ಸಾಕಷ್ಟು ಜನರು ಅದಕ್ಕೆ ಡಾನ್ಸ್ ಮಾಡಿ ವಿಡಿಯೋ ಹಾಕುತಿದ್ದಾರೆ. ಈ ಮಧ್ಯೆ ಪ್ಲಸ್ ಸೈಜ್ ಇದ್ದರೂ ಅದನ್ನು ಮೀರಿ ಇಂಥ ಹಾಡಿಗೆ ಡಾನ್ಸ್ ಮಾಡಿರುವ ತನ್ವಿ ಅವರ ಪ್ಯಾಷನ್ ಗೆ ಜನರು ಮೆಚ್ಚುಗೆ ನೀಡುತ್ತಿದ್ದಾರೆ. ದೇಹದ ಆಕಾರ ಹೇಗೇ ಇದ್ದರೂ ನಾವು ಪಾಸಿಟಿವ್ ಆಗಿರುವುದು ಮುಖ್ಯ ಎನ್ನುವ ತನ್ವಿ ಗೀತಾ ರವಿಶಂಕರ್ ಅನೇಕರಿಗೆ ಸ್ಪೂರ್ತಿ ಕೂಡ ಆಗಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ