Social media: 14 ವರ್ಷಗಳ ಬಳಿಕ ಸಾಮಾಜಿಕ ಮಾಧ್ಯಮದ ಮೂಲಕ ಒಂದಾದ ತಾಯಿ-ಮಗಳು!

ತಾಯಿ ಮತ್ತು ಮಗಳು ತುಂಬಾ ವರ್ಷಗಳ ನಂತರ ಮತ್ತೆ ಒಂದಾಗಲು ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ಮಧ್ಯೆ ನಡೆದ ಮಾತುಕತೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಏಂಜೆಲಿಕಾ ವೆನ್ಸಸ್ ಸಲ್ಗ್ಯಾಡೋ- ಮಗಳು ಜಾಕ್ವೆಲಿನ್ ಹೆರ್ನಾಂಡೆಜ್

ಏಂಜೆಲಿಕಾ ವೆನ್ಸಸ್ ಸಲ್ಗ್ಯಾಡೋ- ಮಗಳು ಜಾಕ್ವೆಲಿನ್ ಹೆರ್ನಾಂಡೆಜ್

  • Share this:
    ಈ ಸಾಮಾಜಿಕ ಮಾಧ್ಯಮಗಳಿಗೆ ಜನರ ಮತ್ತು ಸಮಾಜದ ಮೇಲೆ ಉತ್ತಮ ಮತ್ತು ಕೆಟ್ಟ ಎರಡು ಪರಿಣಾಮಗಳನ್ನು ಬೀರುವಂತಹ ಶಕ್ತಿ ಹೊಂದಿರುತ್ತದೆ. ಇದನ್ನು ನಾವು ಮನುಷ್ಯರಾದವರು ಹೇಗೆ ಬಳಸಿಕೊಳ್ಳುತ್ತೇವೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ ಎನ್ನುವುದೂ ಅಷ್ಟೇ ಸತ್ಯವಾದ ಮಾತು. ದಿನನಿತ್ಯ ಅನೇಕ ನೈಜ ಘಟನೆಗಳು ನಮ್ಮ ಕಣ್ಣು ಮುಂದೆಯೇ ನಡೆದಿರುತ್ತವೆ. ಕೆಲವರು ತಮ್ಮ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಮಾಡಿಕೊಳ್ಳಲು ಹೋಗಿ ಎಡವಟ್ಟು ಮಾಡಿಕೊಂಡಿರುವವರು ಇದ್ದಾರೆ ಮತ್ತು ಅದೇ ಸಾಮಾಜಿಕ ಮಾಧ್ಯಮದಿಂದ ಪ್ರಯೋಜನ ಪಡೆದವರು ಸಹ ಇದ್ದಾರೆ.

    ಒಟ್ಟಿನಲ್ಲಿ ಹೇಳಬೇಕೆಂದರೆ ನಾವು ಇದನ್ನು ಬುದ್ಧಿವಂತಿಕೆಯಿಂದ ಬಳಸಿಕೊಂಡರೆ ವರದಾನವಾಗಬಹುದು. ಇದು ಪ್ರಪಂಚದಾದ್ಯಂತ ನಡೆಯುತ್ತಿರುವ ಎಲ್ಲಾ ರೀತಿಯ ಘಟನೆಗಳ ಬಗ್ಗೆ ನಮಗೆ ಅರಿವು ಮೂಡಿಸುತ್ತದೆ ಮತ್ತು ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಸಂಪರ್ಕದಲ್ಲಿರಲು ನಮಗೆ ಸಹಾಯ ಮಾಡುತ್ತದೆ.

    ಇಂತಹದೇ ಒಂದು ಸಂಪರ್ಕವನ್ನು ತಾಯಿ ಮತ್ತು ಮಗಳ ಮಧ್ಯೆ ನೀಡಿ, ಸುಮಾರು 14 ವರ್ಷಗಳಿಂದ ದೂರವಿದ್ದ ತಾಯಿ ಮತ್ತು ಮಗಳನ್ನು ಜೊತೆಗೂಡಿಸಿದೆ ಎಂದರೆ ಅತಿಶಯೋಕ್ತಿಯಲ್ಲ.

    ಸೋಮವಾರದಂದು 14 ವರ್ಷಗಳ ಹಿಂದೆ ಫ್ಲೋರಿಡಾದಿಂದ ಕಾಣೆಯಾದ ಪುಟ್ಟ ಮಗಳನ್ನು ಅಧಿಕೃತವಾಗಿ ಮತ್ತೆ ತನ್ನ ತಾಯಿಯೊಂದಿಗೆ ಸೇರಿಸಲಾಯಿತು. ಡಿಸೆಂಬರ್ 22, 2007 ರಂದು, ಹೆರ್ನಾಂಡೆಜ್‌ನನ್ನು ಫ್ಲೋರಿಡಾದ ಕ್ಲೆರ್ಮಾಂಟ್‌ನಲ್ಲಿರುವ ತನ್ನ ಮನೆಯಿಂದ ಅವಳ ತಂದೆ ಪ್ಯಾಬ್ಲೋ ಹೆರ್ನಾಂಡೆಜ್ ಅಪಹರಿಸಿದ್ದಾರೆ ಎಂದು ಅಂತಾರಾಷ್ಟ್ರೀಯ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು ಎಂದು ಹೇಳಲಾಗುತ್ತಿದೆ.

    ತಾಯಿ ಮತ್ತು ಮಗಳು ತುಂಬಾ ವರ್ಷಗಳ ನಂತರ ಮತ್ತೆ ಒಂದಾಗಲು ಸಾಮಾಜಿಕ ಮಾಧ್ಯಮದಲ್ಲಿ ಇವರಿಬ್ಬರ ಮಧ್ಯೆ ನಡೆದ ಮಾತುಕತೆಯೇ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಈಗ 19 ವರ್ಷದ ಜಾಕ್ವೆಲಿನ್ ಹೆರ್ನಾಂಡೆಜ್, ಈ ತಿಂಗಳ ಆರಂಭದಲ್ಲಿ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್ ಮೂಲಕ ತನ್ನ ತಾಯಿ ಏಂಜೆಲಿಕಾ ವೆನ್ಸಸ್ ಸಲ್ಗ್ಯಾಡೋರನ್ನು ಸಂಪರ್ಕಿಸಿದ್ದಾರೆ. ತಾನು ನಿಮ್ಮ ಕಳೆದು ಹೋದ ಮಗಳು ಮತ್ತು ಪ್ರಸ್ತುತ ಮೆಕ್ಸಿಕೋದಲ್ಲಿ ವಾಸಿಸುತ್ತಿದ್ದೇನೆ ಎಂದು ತಿಳಿಸಿದ್ದಾಳೆ.

    ಕ್ಲೆರ್ಮಾಂಟ್ ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆಯ ಪ್ರಕಾರ, ಸೆಪ್ಟೆಂಬರ್ 2, 2021ರಂದು ವೆನ್ಸಸ್ ಸಲ್ಗ್ಯಾಡೋ ತನ್ನ ಕಳೆದು ಹೋದ ಮಗಳು ಎಂದು ಹೇಳಿಕೊಂಡ ಒಬ್ಬ ಹುಡುಗಿಯು ತನ್ನನ್ನು ಸಂಪರ್ಕಿಸಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದರು. ಸೆಪ್ಟೆಂಬರ್ 10ರಂದು ಟೆಕ್ಸಾಸ್‌ನ ಲಾರೆಡೊದಲ್ಲಿ ತನ್ನನ್ನು ಭೇಟಿಯಾಗಲು ಹುಡುಗಿ ಹೇಳಿದ್ದಾಳೆ ಎಂದು ಪೊಲೀಸರಿಗೆ ತಿಳಿಸಿದ್ದರು.

    Read Also⇒ Cobra Bite: 7 ವರ್ಷದ ಬಾಲಕಿಯ ಕುತ್ತಿಗೆಗೆ ಸುತ್ತಿಕೊಂಡಿದ್ದ ನಾಗರಹಾವು! ಬಿಡಿಸಲು ಹೋದಾಗ ಕಚ್ಚಿತು!

    ತಕ್ಷಣವೇ ಈ ಹುಡುಗಿಯ ಬಗ್ಗೆ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಪೊಲೀಸರು ಯೋಜನೆ ರೂಪಿಸಿ, ವಿವಿಧ ಏಜೆನ್ಸಿಗಳನ್ನು ಸಂಪರ್ಕಿಸಿ ಮಾಹಿತಿ ತರಿಸಿಕೊಳ್ಳಲಾಯಿತು. ಕೆಲವೇ ಗಂಟೆಗಳಲ್ಲಿ ಪೊಲೀಸರು ಈ ಏಜೆನ್ಸಿಗಳು ಒದಗಿಸಿದ ಹಲವಾರು ದಾಖಲೆಗಳನ್ನು ಪರಿಶೀಲಿಸಿದಾಗ ನಿಜವಾಗಿಯೂ ಮೆಕ್ಸಿಕೋ ಹುಡುಗಿಯು ವೆನ್ಸಸ್ ಸಲ್ಗ್ಯಾಡೋ ಅವರ ಕಾಣೆಯಾದ ಮಗಳು ಎಂದು ಸಾಬೀತುಪಡಿಸಿತು.
    First published: