ಹಾವೇರಿಯಲ್ಲಿ ಕಂಡ ಸರ್ಪಗಳ ಸಲ್ಲಾಪ [Video]


Updated:April 27, 2018, 6:51 PM IST
ಹಾವೇರಿಯಲ್ಲಿ ಕಂಡ ಸರ್ಪಗಳ ಸಲ್ಲಾಪ [Video]

Updated: April 27, 2018, 6:51 PM IST
ನ್ಯೂಸ್​ 18 ಕನ್ನಡ

ಸಂಕನಗೌಡ ಎಮ್ ದೇವಿಕೊಪ್ಪ
ಹಾವೇರಿ: ಇದು ಅಕ್ಷರಶಃ ಮೈನವಿರೇಳಿಸುವ ದೃಷ್ಯ. ಸರ್ಪಗಳೆರಡು ಸರಸ ಸಲ್ಲಾಪದಲ್ಲಿ ತಲ್ಲೀನವಾಗಿರೋ ಅದ್ಬುತ ಕ್ಷಣ.. ಅಲ್ಲಿ ಯಾರ ಭಯವೂ ಇಲ್ಲ.. ಯಾರ ಹಂಗೂ ಇಲ್ಲ.ತಮ್ಮ ಪಾಡಿಗೇ ತಾವು ಪಕೃತಿಯೊಂದಿಗೆ ಎರಡು ಸರ್ಪಗಳು ಗಂಟೆಗಳ ಕಾಲ ಮಿಲನ ಮಹೋತ್ಸವ ನಡೆಸಿದವು.

ಈ ದೃಷ್ಯ ಕಂಡುಬಂದಿದ್ದು ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಆಡೂರು ಗ್ರಾಮದಲ್ಲಿ, ಈ ಸರ್ಪಗಳೆರಡು ತಮಗಿಷ್ಟವಾದಂತೆ ರೋಮಾಂಚಕಾರಿಯಾಗಿ ನೃತ್ಯ ಮಾಡುತ್ತಿರುವ ದೃಷ್ಯ ಕಂಡು ಕಣ್ತುಂಬಿಕೊಂಡವರ ಬಾಯಲ್ಲಿ ಅಬ್ಬಾ..!! ಎಂಬ ಉದ್ಘಾರ. ಸರ್ಪ ಸಲ್ಲಾಪ ವಿಚಾರ ಬಹಳಷ್ಟು ಮಂದಿಗೆ ಬಾಯಿಂದ ಬಾಯಿಗೆ ಹಬ್ಬಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಹಾವುಗಳು ತಮ್ಮ ಪಾಡಿಗೆ ತಾವು ಮಿಲನದಲ್ಲಿ ತೊಡಗಿಸಿಕೊಂಡಿದ್ದವು.ಎರಡು ಹಾವುಗಳು ಸರಪ ಸಲ್ಲಾಪದಲ್ಲಿ ತೊಡಗಿರುವಾಗ ಆ ದೃಷ್ಯವನ್ನು ಸೆರೆಹಿಡಿಯಲಾಗಿದೆ. ಹೇಗಿದೆ ಆ ಅದ್ಭುತ ವೀಡಿಯೋ ನೀವೂ ಒಮ್ಮೆ ನೋಡಿ..
First published:April 27, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...