ಆಹಾರ(Food)ದ ವಿಷಯ ಬಂದಾಗ ಎಲ್ಲರೂ ತಮಗೆ ಹೆಚ್ಚಿನ ಪಾಲು ಸಿಗಲಿದೆ ಎಂದು ಹೇಳುತ್ತಾರೆ. ಇನ್ನು ಉಚಿತವಾಗಿ ಸಿಕ್ರೆ ನನಗೂ ಮತ್ತು ನನ್ನ ಬಂಧು ಬಳಗಕ್ಕೂ ಇರಲಿ ಅನ್ನೋ ಜನ ನಮ್ಮ ನಿಮ್ಮ ಮಧ್ಯೆ ಇರುತ್ತಾರೆ. ಅದೇ ರೀತಿ ಪ್ರಾಣಿಗಳು (Animals) ದಿನ ನಿತ್ಯ ತಮ್ಮ ಆಹಾರಕ್ಕಾಗಿ ಹೋರಾಟ ನಡೆಸುತ್ತವೆ. ಕೆಲವೊಮ್ಮೆ ಒಂದೇ ಆಹಾರಕ್ಕೆ ಹಲವು ಪ್ರಾಣಿಗಳು ಕಾದಾಟ ನಡೆಸುವ ವಿಡಿಯೋಗಳನ್ನು (Viral Video) ನೋಡಿರಬಹುದು. ಇದೀಗ ಅಂತಹುವುದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾ(Social Media)ದಲ್ಲಿ ವೈರಲ್ ಆಗಿದೆ. ಇಲ್ಲಿ ಎರಡು ಹಾವುಗಳು (Two Snake) ಆಹಾರಕ್ಕಾಗಿ ಪೈಪೋಟಿ ನಡೆಸಿವೆ.
ಹಾವುಗಳು ಸಾಮಾನ್ಯವಾಗಿ ಕೋಳಿ ಫಾರ್ಮ್ ಗಳಿಗೆ ನುಗ್ಗುತ್ತವೆ. ಅಲ್ಲಿಯ ಕೋಳಿ ಮರಿಗಳನ್ನು ಕೊಂದು ಹೊಟ್ಟೆ ತುಂಬಿಸಿಕೊಳ್ಳುತ್ತವೆ. ಜೊತೆಗೆ ಕೋಳಿ ಮೊಟ್ಟೆಗಳ ಮೇಲೆಯೂ ಹಾವುಗಳು ಕಣ್ಣಿಟ್ಟಿರುತ್ತವೆ. ಕೆಲವೊಮ್ಮೆ ದೊಡ್ಡ ಕೋಳಿಗಳನ್ನು ನುಂಗಿ ಜೀರ್ಣಿಸಿಕೊಳ್ಳಲಾಗದೇ ಹೊರ ಹಾಕಿರುತ್ತವೆ.
ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ವಿಡಿಯೋ
ಈ ವಿಡಿಯೋದಲ್ಲಿ ಎರಡು ಹಾವುಗಳು ಕೋಳಿ ಮರಿಗಳಿಗಾಗಿ ಕಾದಾಟ ನಡೆಸಿವೆ. ಒಂದು ಹಾವು ಮಾತ್ರ ಎರಡೂ ಕೋಳಿ ಮರಿಗಳು ತನಗೆ ಬೇಕು ಎಂದು ಹೇಳಿದಂತೆ ಎಳೆದುಕೊಂಡು ಹೋಗುತ್ತಿದೆ. ಇನ್ನೂ ಒಂದು ಕೋಳಿ ಮರಿ ಸಿಗದೇ ವಾಪಸ್ ಆಗಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ನೋಡುಗರು ಈ ಹಾವುಗಳ ಕಾದಾಟಕ್ಕೆ ತಮ್ಮದೇ ಹೇಳಿಕೆಗಳನ್ನು ಸೇರಿಸುತ್ತಾ ಕಮೆಂಟ್ ಮಾಡಿದ್ದಾರೆ.
View this post on Instagram
ಇದನ್ನೂ ಓದಿ: Viral News: ಒಂದು ಹಾವು ಭಾರತದಿಂದ ಇಂಗ್ಲೆಂಡ್ಗೆ ಹಡಗಿನಲ್ಲಿ ಹೋಗಿಬಿಟ್ಟಿದೆ, ಅದ್ರ ಪ್ರಯಾಣದ ಕತೆಯೇ ರೋಚಕ!
ಎರಡು ಕೋಳಿ ಮರಿಗಳನ್ನು ಹಿಡಿದ ಹಾವು
ವಿಡಿಯೋ ಆರಂಭದಲ್ಲಿ ಕಾರ್ಪೆಟ್ ಮೇಲೆ ಎರಡು ಹಾವುಗಳು ತಮ್ಮ ಬಾಯಿಯಲ್ಲಿ ಮರಿಯನ್ನು ಹಿಡಿಯುವುದನ್ನು ನೀವು ನೋಡಬಹುದು. ವೀಡಿಯೊ ಮುಂದುವರಿದಂತೆ, ಬಲಭಾಗದಲ್ಲಿರುವ ಹಾವು ಎರಡು ಕೋಳಿ ಮರಿಗಳನ್ನು ಎಳೆದುಕೊಳ್ಳುತ್ತದೆ. ಇದನ್ನು ನೋಡಿದ ನೆಟ್ಟಿಗರು ಬಲಭಾಗದಲ್ಲಿರುವ ಹಾವಿಗೆ ದುರಾಸೆ ಎಂದು ಕಮೆಂಟ್ ಮಾಡಿದ್ದಾರೆ.
ಕೊನೆಯಲ್ಲಿ ಹಾವು ಎರಡು ಕೋಳಿ ಮರಿಗಳನ್ನು ಎಷ್ಟು ಬಿಗಿಯಾಗಿ ಹಿಡಿದಿದೆ ಅಂದ್ರೆ ಅವುಗಳನ್ನು ಹೋಗಲು ಬಿಡುವುದಿಲ್ಲ. ಮತ್ತೊಂದು ಹಾವು ಹಾಗೆ ಹೋಗುತ್ತದೆ.
ಹಾವು ಓಡಿಸೋಕೆ ಹೋಗಿ 13 ಕೋಟಿ ಮೌಲ್ಯದ ಮನೆಗೆ ಬೆಂಕಿ ಹಚ್ಚಿದ ಭೂಪ
ಅಮೇರಿಕದ ಮಾಂಟ್ಗೊಮೆರಿ ಕೌಂಟಿಯ ಮೇರಿಲ್ಯಾಂಡ್ ನಲ್ಲಿ ಪ್ರತಿನಿತ್ಯ ಹಾವುಗಳ ಕಾಟದಿಂದ ಬೇಸತ್ತು ಹೋಗಿದ್ದ ಮನೆಯ ಮಾಲಿಕ ಹಾವುಗಳನ್ನು ಓಡಿಸಲು ನಾನಾ ಪ್ರಯತ್ನ ಮಾಡುತ್ತಿದ್ದ..ಆದ್ರೆ ಮಾಲಿಕ ಮಾಡಿದ ಯಾವುದೇ ಪ್ರಯತ್ನಗಳಿಂದ ಹಾವು ಕಾಟ ಕೊಡುವುದು ಬಿಟ್ಟಿರಲಿಲ್ಲ..ಹೀಗಾಗಿ ಇದ್ದಿಲಿಗೆ ಬೆಂಕಿ ಹಚ್ಚಿ ಹೊಗೆ ಹಾಕುವ ಮೂಲಕ ಹಾವನ್ನು ಓಡಿಸುವ ಪ್ರಯತ್ನವನ್ನು ಮನೆ ಮಾಲೀಕ ಮಾಡಿದ್ದಾನೆ..
ಇದನ್ನೂ ಓದಿ: Salman Khan: ಸಲ್ಲುಭಾಯ್ಗೆ 3 ಬಾರಿ ಕಚ್ಚಿತ್ತಂತೆ ಹಾವು: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಫೋಟೋ ವೈರಲ್!
ಮಾಲೀಕನ ದುರದೃಷ್ಟವೋ ಏನೋ ಇದ್ದಿಲನ್ನು ಬೇಗ ಬೆಂಕಿ ಹತ್ತಿಕೊಳ್ಳುವ ವಸ್ತುವಿನ ಪಕ್ಕ ಇರಿಸಿದ್ದ ಕಾರಣ ಬಹುಬೇಗ ಬೆಂಕಿ ಮನೆ ತುಂಬಾ ವ್ಯಾಪಿಸಿ ಹೊತ್ತಿ ಉರಿಯಲು ಆರಂಭಿಸಿದೆ.. ಕೊಡಲೇ ಎಚ್ಚೆತ್ತ ಮಾಲೀಕ ತಕ್ಷಣ ಮಾಂಟ್ಗೊಮೆರಿ ಕೌಂಟಿ ಅಗ್ನಿಶಾಮಕ ಇಲಾಖೆಗೆ ಮಾಹಿತಿ ನೀಡಿದ್ದಾನೆ. ಆದ್ರೆ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿ ನಂದಿಸುವ ಯತ್ನ ಮಾಡುವ ವೇಳೆಗಾಗಲೇ 13 ಕೋಟಿಗೂ ಅಧಿಕ ಮೌಲ್ಯದ ಮನೆ ಸುಟ್ಟು ಭಸ್ಮವಾಗಿದೆ. ಸದ್ಯ ಹಾವು ಓಡಿಸಲು ಹೋಗಿ ಮನೆ ಸುಟ್ಟುಹೋದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ