ಈಗಂತೂ ಈ ಹಾವುಗಳು (Snakes) ಎಲ್ಲಿ ಅವಿತು ಕುಳಿತುಕೊಳ್ಳುತ್ತವೆ ಅಂತ ಊಹಿಸುವುದಕ್ಕೂ ಸಹ ಸಾಧ್ಯವಾಗುವುದಿಲ್ಲ ನೋಡಿ. ಕೆಲವೊಮ್ಮೆ ದ್ವಿಚಕ್ರ ವಾಹನದ ಸೀಟಿನ ಕೆಳಗೆ ಇರುವ ಬಾಕ್ಸ್ ನಲ್ಲಿ ಅವಿತು ಕೂತರೆ, ಇನ್ನೂ ಕೆಲವು ಸಂದರ್ಭಗಳಲ್ಲಿ ಕಾರುಗಳ ಎಂಜಿನ್ ಗಳಲ್ಲಿ ಅವಿತು ಕುಳಿತುಕೊಳ್ಳುತ್ತವೆ ಈ ಹಾವುಗಳು. ಕೆಲವು ದಿನಗಳ ಹಿಂದೆ ವಾಟ್ಸಾಪ್ ನಲ್ಲಿ (WhatsApp)sO ಬಂದ ಒಂದು ವಿಡಿಯೋದಲ್ಲಿ ಗಾಡಿ ಓಡಿಸುವಾಗ ಹಾಕಿಕೊಳ್ಳುವ ಹೆಲ್ಮೆಟ್ (Bike Helmet) ನ ಕವರ್ ನ ಒಳಗೆ ಅವಿತು ಕುಳಿತಿತ್ತು ಒಂದು ಚಿಕ್ಕ ಹಾವಿನ ಮರಿ. ಹೀಗೆ ಈ ಹಾವುಗಳು ಎಲ್ಲಿ ಅವಿತು ಕುಳಿತುಕೊಳ್ಳುತ್ತವೆ ಅಂತ ಹೇಳುವುದಕ್ಕೆ ಸಾಧ್ಯವಾಗುವುದಿಲ್ಲ. ಆದರೆ ಇವುಗಳನ್ನು ಹಠಾತ್ತನೆ ನೋಡಿದರೆ ಸಾಕು ಎದೆ ಝಲ್ ಅಂತ ಅನ್ನುವುದಂತೂ ನಿಜ.
ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಎಷ್ಟೋ ವಿಡಿಯೋಗಳಲ್ಲಿ ಹಾವುಗಳು ಮನೆಯಲ್ಲಿ ಮತ್ತು ಮನೆಯ ಮೇಲಿರುವ ಮೇಲ್ಛಾವಣಿ ಹಂಚುಗಳಲ್ಲಿ ಅವಿತುಕೊಂಡು ಕುಳಿತಿರುವುದನ್ನು ನಾವು ನೋಡಿರುತ್ತೇವೆ.
ಎಷ್ಟೋ ಜನರು ಆಕಸ್ಮಿಕವಾಗಿ ಹಾವುಗಳನ್ನು ದೂರದಿಂದ ನೋಡಿದರೆನೆ ಭಯಭೀತರಾಗಿರುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ಮನೆಯಲ್ಲಿಯೇ ಹಾವು ಇದೆ ಅಂತ ಗೊತ್ತಾದರೆ ಎಂತವರಿಗಾದರೂ ಕೈ ಕಾಲುಗಳಲ್ಲಿ ನಡುಕ ಹುಟ್ಟುವುದು ಸಾಮಾನ್ಯ.
ಮನೆಯ ಸೀಲಿಂಗ್ ನಲ್ಲಿ ಅವಿತು ಕುಳಿತಿದ್ದವು ಭಯಾನಕ ಹಾವುಗಳು
ಇಲ್ಲಿ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ ನೋಡಿ, ಇದರಲ್ಲಿ ಒಂದಲ್ಲ ಎರಡಲ್ಲ, ಮೂರು ದೊಡ್ಡ ಹಾವುಗಳು ಮನೆಯಲ್ಲಿನ ಸೀಲಿಂಗ್ ಓಪನ್ ಮಾಡಿದ ತಕ್ಷಣ ಹೇಗೆ ಕೆಳಕ್ಕೆ ಇಳಿದಿವೆ ಎಂದು ನೋಡಬಹುದು.
ಇದನ್ನೂ ಓದಿ: ಟ್ವಿಟರ್‌ಗೆ ಬಂದ್ರಾ ಹೊಸ ಸಿಇಒ? ನಾಯಿ ಫೋಟೋ ಟ್ವೀಟ್ ಮಾಡಿದ್ದೇಕೆ ಎಲಾನ್ ಮಸ್ಕ್?
ಇದನ್ನು ನೋಡಿದರೆ ಬೆಚ್ಚಿ ಬೀಳುವುದು ಗ್ಯಾರಂಟಿ. ಈ ಭಯಾನಕ ವಿಡಿಯೋವನ್ನು ಟ್ವಿಟರ್ ಖಾತೆಯ ಪುಟದಲ್ಲಿ ಹಂಚಿಕೊಳ್ಳಲಾಗಿದ್ದು, ಈಗಾಗಲೇ ಹೆಚ್ಚಿನ ಸಂಖ್ಯೆಯ ಕಮೆಂಟ್ ಗಳು, ಲೈಕ್ ಗಳು ಮತ್ತು ವೀಕ್ಷಣೆಗಳನ್ನು ಇದು ಗಳಿಸಿದೆ. ವರದಿಗಳ ಪ್ರಕಾರ, ಈ ವಿಡಿಯೋ ಮಲೇಷ್ಯಾದಿಂದ ಬಂದಿದೆ. ಹಾವು ಹಿಡಿಯುವವನು ಆರಂಭದಲ್ಲಿ ತನ್ನ ಹಾವು ಹಿಡಿಯುವ ಕೊಕ್ಕೆ ಅಥವಾ ಕೋಲನ್ನು ಬಳಸಿಕೊಂಡು ಹಾವನ್ನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು ನಾವು ವಿಡಿಯೋದಲ್ಲಿ ನೋಡಬಹುದು.
ಹಾವಿನ ಬಾಲವು ಛಾವಣಿಯ ಹರಿದ ಭಾಗದಿಂದ ಕೆಳಕ್ಕೆ ನೇತಾಡುತ್ತಿರುತ್ತದೆ. ತದನಂತರ, ಹಾವು ಹಿಡಿಯುವವನು ತನ್ನ ಕೋಲಿನಿಂದ ಹಾವನ್ನು ಗೇಲಿ ಮಾಡಿದರೆ, ಇನ್ನೊಬ್ಬ ಹಾವು ಹಿಡಿಯುವವನು ಛಾವಣಿಯ ಇನ್ನೊಂದು ಬದಿಯನ್ನು ತಟ್ಟುತ್ತಾನೆ, ಇದರಿಂದಾಗಿ ಹಾವು ಛಾವಣಿಯಲ್ಲಿ ಅಡಗಿರುವ ಸ್ಥಳದಿಂದ ಹೊರ ಬರುತ್ತದೆ.
ನಿಮಗೆ ಹೃದಯ ಕಾಯಿಲೆ ಇದ್ದರೆ ಈ ಭಯಾನಕ ವಿಡಿಯೋ ನೋಡಲೇಬೇಡಿ
ಅಲ್ಲಿದ್ದುದ್ದು ಕೇವಲ ಒಂದು ಸಣ್ಣ ಹಾವು ಅಲ್ಲ, ಅಲ್ಲಿದ್ದುದು ಮೂರು ದೊಡ್ಡ ಭಯಾನಕ ಹಾವುಗಳು. ಕೆಲವೇ ಸಮಯದಲ್ಲಿ ಛಾವಣಿಯ ಮೂಲಕ ಬಿದ್ದು ಆಘಾತಕಾರಿ ದೃಶ್ಯವನ್ನು ಸೃಷ್ಟಿಸುತ್ತವೆ.
ದೊಡ್ಡ ಹಾವುಗಳು ಪತ್ತೆಯಾದ ನಂತರ ಹಾವು ಹಿಡಿಯುವವರು ಮತ್ತು ಮನೆಯಲ್ಲಿ ವಾಸವಾಗಿರುವ ಮನೆಯವರು ಭಯದಿಂದ ಚರ್ಚಿಸುವುದನ್ನು ಇಲ್ಲಿ ಕೇಳಬಹುದು.
ಮೇಲ್ಛಾವಣಿಯ ಉಳಿದ ಭಾಗದಿಂದ ನೇತಾಡುತ್ತಿರುವಾಗ ಮೂರು ಹಾವುಗಳು ಛಾವಣಿಯ ಮೂಲಕ ಬೀಳುವ ಕ್ಷಣವು ಭಯಾನಕ ಕ್ಷಣವಾಗಿದೆ. ನೀವು ಹೃದಯ ಕಾಯಿಲೆಯಿಂದ ಬಳಲುತ್ತಿರುವವರು ಆಗಿದ್ದಲ್ಲಿ ಈ ವಿಡಿಯೋ ನೋಡಬೇಡಿ.
ಮೇಲ್ಛಾವಣಿಯ ಮೂಲಕ ಹಾವುಗಳು ಕೆಳಕ್ಕೆ ಜೋತು ಬೀಳುವ ಭಯಾನಕ ತುಣುಕನ್ನು ಬಳಕೆದಾರರು ನಿನ್ನೆ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ಕಡಿಮೆ ಅವಧಿಯಲ್ಲಿಯೇ ಈ ಪೋಸ್ಟ್ 13.3 ಮಿಲಿಯನ್ ವೀಕ್ಷಣೆಗಳು, 14.6 ಸಾವಿರ ರಿಟ್ವೀಟ್ ಗಳು ಮತ್ತು 53 ಸಾವಿರಕ್ಕೂ ಹೆಚ್ಚು ಲೈಕ್ ಗಳನ್ನು ಸಹ ಗಳಿಸಿದೆ.
ಈ ಭಯಾನಕ ವಿಡಿಯೋಗೆ ಹೇಗೆ ಕಮೆಂಟ್ ಗಳು ಬಂದಿವೆ ನೋಡಿ
"ಇದನ್ನು ನೋಡಿ ನನ್ನ ಆತ್ಮವು ನನ್ನ ದೇಹವನ್ನು ಬಿಟ್ಟು ಹೋಗಿದೆ" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ. ಮತ್ತು ಇನ್ನೊಬ್ಬ ಬಳಕೆದಾರರು "ಈ ಮನೆಯನ್ನೇ ಸುಟ್ಟು ಬಿಡಿ" ಎಂದು ಕಮೆಂಟ್ ಮಾಡಿದ್ದಾರೆ. "ಇದನ್ನು ನೋಡಿ ನಾನು ಬೇರೆ ಮನಸ್ಥಿತಿಗೆ ಹೋಗಿದ್ದೇನೆ" ಎಂದು ಮೂರನೇಯವರು ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ