Snake Shaped Cake: Viral Video: ಸ್ನೇಕ್ ಅಲ್ಲ, ಇದು ಕೇಕ್...ತಿನ್ನೋಕೆ ಭಾರೀ ಧೈರ್ಯ ಬೇಕಂತೆ!

ಅದ್ಭುತವಾದ ಕಲೆ, ಕೇಕ್ ರುಚಿಯಾಗಿದ್ರೂ, ತಿನ್ನಲು ಗುಂಡಿಗೆ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ.

Snake Cake

Snake Cake

  • Share this:
ಸೋಶಿಯಲ್ ಮೀಡಿಯಾದಲ್ಲಿ ಕೆಲವೊಮ್ಮೆ ವಿಚಿತ್ರ ವಿಡಿಯೋಗಳು ವೈರಲ್ ಆಗುತ್ತಿರುತ್ತವೆ. ಈ ವಿಡಿಯೋ ನೋಡುಗರನ್ನು ಬೆಚ್ಚಿ ಬೀಳಿಸಿದೆ. ನೋಡಲು ಹಾವಿನಂತೆ ಕಾಣುವ ಕೇಕ್ ಕಂಡವರು ಒಂದು ಕ್ಷಣ ಶಾಕ್ ಆಗಿದ್ದಾರೆ. ವಿಡಿಯೋದಲ್ಲಿ ಮೊದಲಿಗೆ ಹಳದಿ ಮತ್ತು ಬಿಳಿ ಮಿಶ್ರಿತ ಹಾವು ಮುದುಡಿಕೊಂಡಿ ಕುಳಿತಂತೆ ಕಾಣುತ್ತದೆ. ಕ್ಷಣಾರ್ಧದಲ್ಲಿ ಈ ಹಾವನ್ನು ಚಾಕುವಿನಿಂದ ಕತ್ತರಿಸಲಾಗುತ್ತದೆ. ಅಕ್ಟೋಬರ್ 11ರಂದು ವಿಡಿಯೋ ಇನ್ ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿದ್ದು, 2 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ. ಅವರಿಂದ ತಯಾರಾದ ರಿಯಾಲಿಸ್ಟಿಕ್ ಹಾವಿನ ಕೇಕ್ ಎಂದು ವಿಡಿಯೋ ಕ್ಯಾಪ್ಷನ್ ನಲ್ಲಿ ಬರೆಯಲಾಗಿದೆ, ವಿಡಿಯೋ ನೋಡಿ ಅಚ್ಚರಿಗೆ ಒಳಗಾಗಿರುವ ಜನರು ಕಮೆಂಟ್ ಮೂಲಕ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ

ಟ್ರೆಂಡ್ ಆಗಿದೆ ಸ್ನೇಕ್

ಮೊದಲಿಗೆ ಕೇಕ್ ತಂದಿದ್ದರೆ  ಹುಟ್ಟುಹಬ್ಬ ಆಚರಿಸಲಾಗುತ್ತಿತ್ತು. ಇದೀಗ ಹುಟ್ಟು ಹಬ್ಬದ ಆಚರಣೆ ವಿಭಿನ್ನವಾಗಿದೆ. ಹುಟ್ಟು ಹಬ್ಬ ಆಚರಿಸಿಕೊಳ್ಳುವ ವ್ಯಕ್ತಿಯ ಇಷ್ಟವಾದ ವಸ್ತುವಿನ ರೂಪದಲ್ಲಿ ಕೇಕ್ ತಯಾರಿಸಲಾಗುತ್ತದೆ, ಕೆಲವರು ಫೋಟೋ ಕೇಕ್ ಸಹ ಆರ್ಡರ್ ಮಾಡುತ್ತಾರೆ, ಹೀಗಾಗಿ ಬರ್ತ್ ಡೇ ಪಾರ್ಟಿಗಳು ವಿಶೇಷ ಪಡೆದುಕೊಳ್ಳುತ್ತವೆ. ಅಂತಹ ಬರ್ತ್ ಡೇ ವಿಡಿಯೋ ಫೋಟೋ ಮತ್ತು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಕೆಲವು ಕೇಕ್ ಪಾರ್ಲರ್ ಗಳು ವಿಶೇಷವಾಗಿಯೇ ಇಂತಹ ಕೇಕ್ ಸಿದ್ಧಪಡಿಸುವ ಮೂಲಕ ಗ್ರಾಹಕರನ್ನು ಸೆಳೆಯುತ್ತವೆ. ಈ ಹಿಂದೆ ಹಾವಿನ ಕೇಕ್ ವಿಡಿಯೋಗಳು ವೈರಲ್ ಆಗಿದ್ದವು.




ಹಾವಿನ ವಿಡಿಯೋಗೆ ನೆಟ್ಟಿಗರ ಕಮೆಂಟ್

ಈ ವಿಡಿಯೋ ನೋಡಿದ ನೆಟ್ಟಿಗರು ತುಂಬಾ ವಿಚಿತ್ರವಾದ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ. ಅದ್ಭುತವಾದ ಕಲೆ, ಕೇಕ್ ರುಚಿಯಾಗಿದ್ರೂ, ತಿನ್ನಲು ಗುಂಡಿಗೆ ಬೇಕು ಎಂದು ಕಮೆಂಟ್ ಮಾಡಿದ್ದಾರೆ. ಸುಮಾರು ಒಂದು ಸಾವಿರಕ್ಕೂ ಅಧಿಕ ಕಮೆಂಟ್ ಗಳು ಬಂದಿವೆ. ಇನ್ನು ಹಲವರು ಇಂತಹ ಕೇಕ್ ನೋಡಲೇ ಭಯಂಕರ ಆಗಿರುತ್ತದೆ, ನಿಜವಾದ ಹಾವಿಗೂ ಮತ್ತು ಈ ಕೇಕ್ ಗೆ ಯಾವುದೇ ವ್ಯತ್ಯಾಸವಿಲ್ಲ. ನನಗೆ ಈ ಕೇಕ್ ಬೇಡ ಅಂತಾನೂ ಕಮೆಂಟ್ ಮಾಡಲಾಗಿದೆ.

ಇದನ್ನೂ ಓದಿ:  Viral Video: ತನ್ನ ಗಂಡನ 'ಗೆಳತಿ' ಎಂದು ಶಂಕಿಸಿ ಆಕೆಯನ್ನು ಹೇಗೆ ಥಳಿಸಿದ್ದಾಳೆ ನೋಡಿ ಈ ಮಹಿಳೆ..!

ಪ್ರೀತಿಯ ಪ್ರಾಣಿಗಳಿಗೂ ಕೇಕ್

ಕೆಲವು ವರ್ಷಗಳ ಹಿಂದೆ ಹುಟ್ಟುಹಬ್ಬದ ಸಂಭ್ರಮ ಕೇವಲ ಶ್ರೀಮಂತ ಮಕ್ಕಳಿಗೆ ಮಾತ್ರ ದೊರೆಯುತ್ತಿತ್ತು. ಇಂದು ಕಾಲ ಕಳೆದಂತೆ ಸಾಮಾನ್ಯ ವರ್ಗದವರು ಮಕ್ಕಳು ಹುಟ್ಟುಹಬ್ಬ ಆಚರಿಸುತ್ತಿರುವುದು ನಿಜವಾದ ಸಂಭ್ರಮ. ಆದರೆ, ಪ್ರಾಣಿ ಪ್ರಿಯರು ಕೂಡ ತಾವು ಸಾಕಿರುವ ಪ್ರಾಣಿಗಳ ಜನ್ಮದಿನಾಂಕವನ್ನು ನೆನಪಿನಲ್ಲಿಟ್ಟುಕೊಂಡು ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸುವ ದಿನಗಳು ಬಂದಿವೆ. ಇದಕ್ಕೆ ಪೂರಕವೆಂಬಂತೆ ಬಿಹಾರದ ವ್ಯಕ್ತಿಯೊಬ್ಬರು ತಾನು ಸಾಕಿದ ಕುದುರೆಯ ಹುಟ್ಟುಹಬ್ಬಕ್ಕೆ 50 ಪೌಂಡ್ ಕೇಕ್ ಕತ್ತರಿಸಿ ಭರ್ಜರಿಯಾಗಿ ಹುಟ್ಟುಹಬ್ಬ ಆಚರಿಸಿದ್ದರು.

ಇದನ್ನೂ ಓದಿ:  Baby Elephant Viral Video: ಬಾಲ್ಯ ನೆನಪು ಮಾಡುತ್ತಿರುವ ಆನೆ - ಕ್ಯೂಟ್ ವಿಡಿಯೋ ಮಿಸ್ ಮಾಡ್ಕೊಬೇಡಿ

ಪತ್ನಿಯ ಹುಟ್ಟುಹಬ್ಬಕ್ಕೆ ವಿಶೇಷ ಕೇಕ್ ತಯಾರಿಸಿದ್ದ ರಘು ಮುಖರ್ಜಿ

ಅನು ಪ್ರಭಾಕರ್​ ಅವರ ಹುಟ್ಟಿದ್ದ ವರ್ಷವನ್ನು ಸ್ಟೈಲ್​ ಆಗಿ ಅವರ ಪತಿ ಕೇಕ್​ ಮೇಲೆ ಬರೆಸಿದ್ದರು. ಮೇಡ್​ ಇನ್​ 1980, ಲಿಮಿಟೆಡ್​ ಎಡಿಷನ್​ ಅಂತ ಬರೆಸುವ ಮೂಲಕ ಪತ್ನಿಗೆ ವಿಶ್​ ಮಾಡಿದ್ದಾರೆ. ಅನು ಪ್ರಭಾಕರ್​ ತಮ್ಮ ಹುಟ್ಟುಹಬ್ಬದಂದು ತುಂಬಾ ಕೇಕ್​ಗಳನ್ನು ಕತ್ತರಿಸಿ, ಸಂಭ್ರಮದಿಂದ ಬರ್ತ್​ ಡೇ ಆಚರಿಸಿದ್ದರು. ಕೇಕ್ ಮೇಲೆ ಹುಟ್ಟಿದ ವರ್ಷ ಹಾಕುವ ಮೂಲಕ ಪರೋಕ್ಷವಾಗಿ ಪತ್ನಿಯ ವಯಸ್ಸು ಬಹಿರಂಗ ಮಾಡಿದ್ದಾರೆ ಎಂದು ಅಭಿಮಾನಿಗಳು ಕಮೆಂಟ್ ಮಾಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಕುಟುಂಬದ ಜೊತೆ ಹುಟ್ಟು ಹಬ್ಬ ಆಚರಿಸಿರುವ ಫೋಟೋಗಳು ವೈರಲ್ ಆಗಿದ್ದವು.
Published by:Mahmadrafik K
First published: