Snake Eats Golf Balls: ಕೋಳಿ ಮೊಟ್ಟೆಯೆಂದು ಗಾಲ್ಫ್ ಬಾಲ್ ನುಂಗಿದ ಹಾವು! ಮತ್ತೇನಾಯ್ತು?

ಒಂದು ಹಾವು ಕೋಳಿಯ ಮೊಟ್ಟೆಗಳೆಂದು ಭಾವಿಸಿ ಎರಡು ಗಾಲ್ಫ್ ಚೆಂಡುಗಳನ್ನು ನುಂಗಿ ಕೋಳಿ ಗೂಡಿನ ಬೇಲಿಯಲ್ಲಿ ಸಿಕ್ಕಿಕೊಂಡಿತ್ತು. ಮುಂದೆ ಅದನ್ನು ವನ್ಯಜೀವಿ ಕೇಂದ್ರದ ಸಿಬ್ಬಂದಿಯವರಿಂದ ರಕ್ಷಿಸಲಾಯಿತು.

ಎರಡು ಗಾಲ್ಫ್ ಬಾಲ್ ನುಂಗಿದ ಹಾವು
(ಚಿತ್ರಕೃಪೆ: ಫೇಸ್ಬುಕ್)

ಎರಡು ಗಾಲ್ಫ್ ಬಾಲ್ ನುಂಗಿದ ಹಾವು (ಚಿತ್ರಕೃಪೆ: ಫೇಸ್ಬುಕ್)

  • Share this:
ಪ್ರಕೃತಿಯಲ್ಲಿನ ಜೀವಿಗಳ ಸೃಷ್ಟಿಯಲ್ಲೇ ಅವುಗಳ ಆಹಾರ ಮೂಲಗಳು ಸೃಷ್ಟಿಯಾಗಿರುತ್ತದೆ. ಮಿಡತೆಗೆ (Grasshopper) ಹುಲ್ಲು, ಕಪ್ಪೆಗೆ ಮಿಡತೆ, ಹಾವಿಗೆ ಕಪ್ಪೆ, ಗಿಡುಗನಿಗೆ (Eagle) ಹಾವು ಹೀಗೆ ಆಹಾರ ಸರಪಳಿಯನ್ನು(Food Chain) ಗಮನಿಸಬಹುದು. ಸಾಮಾನ್ಯವಾಗಿ ಕೆಲವು ಹಾವುಗಳು (Snake) ಕೋಳಿಯ ಮೊಟ್ಟೆಯನ್ನು (Chicken Egg) ತನ್ನ ಆಹಾರವನ್ನಾಗಿ ಸೇವಿಸುತ್ತದೆ. ಇದೀಗ ಹಾವಿಗೆ (Snake) ಸಂಬಂಧಿಸಿದ ಸುದ್ದಿಯೊಂದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಹಾವೊಂದು ಕೋಳಿಯ ಮೊಟ್ಟೆಗಳೆಂದು ಭಾವಿಸಿ ಗಾಲ್ಫ್ ಚೆಂಡುಗಳನ್ನು ನುಂಗಿ ಅಪಾಯಕ್ಕೆ ಸಿಲುಕಿದೆ.

ಒಂದು ಹಾವು ಕೋಳಿಯ ಮೊಟ್ಟೆಗಳೆಂದು ಭಾವಿಸಿ ಎರಡು ಗಾಲ್ಫ್ ಚೆಂಡುಗಳನ್ನು ನುಂಗಿ ಕೋಳಿ ಗೂಡಿನ ಬೇಲಿಯಲ್ಲಿ ಸಿಕ್ಕಿಕೊಂಡಿತ್ತು. ಮುಂದೆ ಅದನ್ನು ವನ್ನಜೀವಿ ಕೇಂದ್ರದ ಸಿಬ್ಬಂದಿಯವರು ರಕ್ಷಿಸಿದರು.

ಯುನೈಟೆಡ್ ಸ್ಟೇಟ್ ನಲ್ಲಿ ನಡೆದ ಘಟನೆ
ಇತ್ತೀಚಿಗೆ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಬುಲ್ ಸ್ನೇಕ್ ವರ್ಗಕ್ಕೆ ಸೇರಿದ ಹಾವೊಂದು ಬೋನಿನೊಳಗೆ ಇದ್ದ ಜೋಡಿ ಗಾಲ್ಫ್ ಬಾಲ್‌ಗಳನ್ನು ಕೋಳಿ ಮೊಟ್ಟೆ ಎಂದು ತಪ್ಪಾಗಿ ಭಾವಿಸಿ ಅವೆರಡನ್ನೂ ತಿಂದು ಕೋಳಿ ಗೂಡಿನ ತಂತಿ ಬೇಲಿ ನಡುವೆ ಸಿಲುಕಿದೆ ಮತ್ತು ಈ ಕುರಿತು ಮನೆಯವರು ಮಾಹಿತಿ ನೀಡಿದ ಕೂಡಲೆ ವನ್ಯಜೀವಿ ಕೇಂದ್ರದ ಸಿಬ್ಬಂದಿಯವರು ಧಾವಿಸಿದರು.

ಇದನ್ನೂ ಓದಿ: Rooster: ಸತ್ತುಹೋದ ಹುಂಜದ 13ನೇ ದಿನದ ಕಾರ್ಯ ಆಚರಿಸಿದ ಕುಟುಂಬ! ಅಂತದ್ದೇನು ಸಾಧನೆ ಮಾಡಿದೆ ಇದು

ಕೊಲೊರಾಡೋ ವನ್ಯಜೀವಿ ಕೇಂದ್ರದಿಂದ ಹಾವಿನ ರಕ್ಷಣೆ
ಸರೀಸೃಪವು ಬೇಲಿಯಲ್ಲಿ ಸಿಲುಕಿದ ನಂತರ ಕೊಲೊರಾಡೋ ವನ್ಯಜೀವಿ ಕೇಂದ್ರದ ಸಿಬ್ಬಂದಿಯವರು ಸ್ಥಳಕ್ಕೆ ಆಗಮಿಸಿ ಹಾವನ್ನು ರಕ್ಷಿಸಿ ಅದನ್ನು ಸಂರಕ್ಷಣಾ ಕೇಂದ್ರಕ್ಕೆ ತಂದು ಅದರ ಹೊಟ್ಟೆಯೊಳಗೆಇದ್ದ ಚೆಂಡುಗಳನ್ನು ಹೊರತೆಗೆಯಲಾಯಿತು.

ಬಾಲ್ ಅನ್ನು ಹೊರತೆಗೆಯಲು 30 ನಿಮಿಷ ತೆಗೆದುಕೊಂಡ ಸಿಬ್ಬಂದಿಯವರು
ವನ್ಯಜೀವಿ ಕೇಂದ್ರದ ಸಿಬ್ಬಂದಿಯವರು ಹಾವಿನ ಹೊಟ್ಟೆಯಲ್ಲಿರುವ ಬಾಲ್ ಅನ್ನು ನಿಧಾನವಾಗಿ ಎಚ್ಚರಿಕೆಯಿಂದ ವಿಶೇಷ ತಂತ್ರಗಳನ್ನು ಬಳಸಿ 30 ನಿಮಿಷಗಳ ಪ್ರಕ್ರಿಯೆಯಲ್ಲಿ ಹೊರೆ ತೆಗೆದರು.

ಫೆಸ್ಬುಕ್ ನಲ್ಲಿ ಫೊಟೋ ಹಂಚಿಕೊಂಡ ವನ್ಯಜೀವಿ ಕೇಂದ್ರ
ನೀವು ಈ ರೀತಿಯ ಘಟನೆಯನ್ನು ಪ್ರತಿನಿತ್ಯ ನೋಡುವುದಿಲ್ಲವೇ ಎಂದು ಪೋಸ್ಟ್ನ ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ. ಒಂದು ವೇಳೇ ಹಾವಿನ ಹೊಟ್ಟೆಯಿಂದ ತ್ವರಿತಗತಿಯಲ್ಲಿ ಚೆಂಡನ್ನು ಹೊರ ತೆಗೆಯದಿದ್ದಾರೆ ಶಸ್ತ್ರ ಚಿಕಿತ್ಸೆ ಮಾಡಬೇಕಿತ್ತು ಎಂದು ಹೇಳಿದ್ದಾರೆ.

ಹಾವಿನ ಹೊಟ್ಟೆಯೊಳಗೆ ಬಾಲ್ ಗಳಿಂದ ಉಂಟಾದ ಉಬ್ಬುಗಳು
(ಚಿತ್ರಕೃಪೆ: ಫೇಸ್ಬುಕ್)


ಗಾಲ್ಫ್ ಚೆಂಡುಗಳು ಹಾವಿನ ದೇಹದ ಉದ್ದಕ್ಕೂ ಒಂದೆರಡು ಬಿಂದುಗಳಲ್ಲಿ ಗೋಚರಿಸುವ ಉಬ್ಬುಗಳನ್ನು ಹೇಗೆ ಉಂಟುಮಾಡಿದವು ಎಂಬುದನ್ನು ಇವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಫೋಟೊದಲ್ಲಿ ಗಮನಿಸಬಹುದು.

ಹಾವು ಅಪಾಯದಿಂದ ಪಾರಾಗಿ ಸುರಕ್ಷಿತವಾಗಿದೆ
ಹಾವಿನ ಹೊಟ್ಟೆಯಿಂದ ಎರಡು ಬಾಲ್ ಗಳನ್ನು ಹೊರೆತೆಗೆದ ವನ್ಯಜೀವಿ ಅಧಿಕಾರಿಯು ಅದು ಸುರಕ್ಷಿತವಾಗಿದೆ. ಸಣ್ಣ ಪ್ರಮಾಣದ ನೋವು ಮತ್ತು ಗಾಯಗಳಾಗಿದೆ ಎಂದರು. ಅದಕ್ಕೆ ಹಸಿವಾಗಿದ್ದ ಕಾರಣ ನಾವು ಅದಕ್ಕೆ ಆಹಾರವನ್ನು ನೀಡಿದೆವು ಎಂದರು.

ಪರಿಸರ ವ್ಯವಸ್ಥೆಯಲ್ಲಿ ಹಾವಿಗೆ ನಿರ್ಣಾಯಕ ಸ್ಥಾನ
ಪರಿಸರ ವ್ಯವಸ್ಥೆಯಲ್ಲಿ ಹಾವುಗಳಿಗೆ ನಿರ್ಣಾಯಕವಾದ ಸ್ಥಾನವಿದೆ. ಅವುಗಳು ಒಂದು ರೀತಿಯಲ್ಲಿ ಕೀಟನಾಶಕಗಳಾಗಿವೆ. ಅವುಗಳು ಪ್ರಕೃತಿಯಲ್ಲಿನ ದಂಶಕಗಳನ್ನು ಹೆಚ್ಚಾಗಿ ಸೇವಿಸುವುದರಿಂದ ನಿಸರ್ಗದಲ್ಲಿ ಸಮತೋಲನತೆಯನ್ನು ಕಾಪಾಡುತ್ತದೆ.

ಇದನ್ನೂ ಓದಿ: Viral Video: ಆಮೆಯೊಂದಿಗೆ ಆ್ಯಪಲ್ ಹಂಚಿಕೊಂಡ ಚಿಂಪಾಂಜಿ! ಈ ಪ್ರಾಣಿಗಳ ಪ್ರೀತಿ ಈಗ ನೆಟ್ಟಿಗರ ಫೇವರೇಟ್

ಪರಿಸರ ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಕಾಪಾಡಲು ಪ್ರಕೃತಿಯಲ್ಲಿನ ಜೀವಿಗಳ ಸಂಖ್ಯೆಯಲ್ಲಿ ಸಮತೋಲನ ಅಗತ್ಯವಾಗಿ ಬೇಕು. ಪರಿಸರದಲ್ಲಿ ಸ್ಥಿರತೆಯನ್ನು ತರುವಲ್ಲಿ ಹಾವುಗಳು ಸಹ ಪ್ರಮುಖವಾಗಿದೆ. ಹಾವುಗಲ್ಲಿ 3000 ಕ್ಕೂ ಹೆಚ್ಚಿನ ಜಾತಿಗಳಿವೆ. ಅವುಗಳಲ್ಲಿ 600 ಕ್ಕೂ ಹೆಚ್ಚಿನ ಹಾವುಗಳು ವಿಷಪೂರೀತವಾದ ಹಾವುಗಳಾಗಿದೆ.
Published by:Nalini Suvarna
First published: