King Cobra: ಇವರ ಜಮೀನಿನಲ್ಲಿ 13 ಅಡಿ ಉದ್ದದ ಕಾಳಿಂಗ ಸರ್ಪ ಪ್ರತ್ಯಕ್ಷ! ಮುಂದೆ?

ವೆಂಕಟೇಶ್ ಎಂಬವರು ಸುಮಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಆದ್ರೆ ಮೊನ್ನೆಯಷ್ಟೆ 13 ಅಡಿ ಉದ್ದ ಇರುವ ಕಿಂಗ್ ಕೋಬ್ರಾ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಹಾವು ಕಂಡಿದ್ದಾದ್ರು ಎಲ್ಲಿ ಅಂದ್ರಾ.

13 ಅಡಿ ಉದ್ದ ಹಾವು ಹಿಡಿದು ಕಾಡಿಗೆ ಬಿಟ್ಟ ವೆಂಕಟೇಶ್

13 ಅಡಿ ಉದ್ದ ಹಾವು ಹಿಡಿದು ಕಾಡಿಗೆ ಬಿಟ್ಟ ವೆಂಕಟೇಶ್

  • Share this:
ಸಾಮಾನ್ಯವಾಗಿ ನಾವು ದೂರದಿಂದ ಹಾವನ್ನು (Snake) ನೋಡಿದ್ರೆ ಭಯದಿಂದ ನಡುಗುತ್ತೆವೆ. ಆದ್ರೆ ಹಾವುಗಳ ರಾಜಾ ಎಂದೆ ಕರೆಸಿಕೊಳ್ಳುವ ಕಿಂಗ್ ಕೋಬ್ರಾ(King Cobra)  ಹಾವು ಹಿಡಯುವುದು ಅಂದ್ರೆ ಅಷ್ಟು ಸುಲಭ ಅಲ್ಲಾ. ಈ ಹಾವು ಕಾಣುವುದೇ ಅಪರೂಪ. ಅದರಲ್ಲಿ ಈ ಹಾವು ಹಿಡಿಯುದು ಅಂದ್ರೆ ಅದಕ್ಕೆ ಧೈರ್ಯ (Daring) ಬೇಕು. ಹೀಗೆ ಆಂದ್ರಾ ಮೂಲದ ವೆಂಕಟೇಶ್ ಎಂಬವರು ಸುಮಾರು ಹಾವುಗಳನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಆದ್ರೆ ಇತ್ತೀಚೆಗೆ 13 ಅಡಿ (13 Foot) ಉದ್ದ ಇರುವ ಕಿಂಗ್ ಕೋಬ್ರಾ ಹಾವನ್ನು ಹಿಡಿದು ಕಾಡಿಗೆ ಬಿಟ್ಟಿದ್ದಾರೆ. ಅಷ್ಟಕ್ಕೂ ಈ ಹಾವು ಕಂಡಿದ್ದಾದ್ರು ಎಲ್ಲಿ ಅಂದ್ರಾ. ಹಾಗಾದ್ರೆ ಈ ಸ್ಟೋರಿ ಓದಿ

ಪಶ್ಚಿಮ ಘಟಗಳಲ್ಲಿ ಹೆಚ್ಚಾಗಿ ಕಂಡು ಬರುವ ಕಿಂಗ್ ಕೋಬ್ರಾ ಹಾವು
ಸಾಮಾನ್ಯವಾಗಿ ನಾವು ನಾಗರ ಹಾವುಗಳನ್ನು ನೋಡಿದ್ದೇವೆ. ಆದ್ರೆ ಕಿಂಗ್ ಕೋಬ್ರಾ ಹಾವು ನೋಡುವುದು ಅಪರೂಪ. ಈ ಹಾವುಗಳು ಕಂಡುಬರುವುದು ಅಂದ್ರೆ ಪಶ್ಚಿಮ ಘಟಗಳಲಿ. ಇನ್ನು ಈ ವಿಷಭರಿತ ಕಿಂಗ್ ಕೋಬ್ರಾ ಹಾವು ಕಚ್ಚಿದ್ರೆ ಕ್ಷಣಾರ್ಧದಲ್ಲಿಯೇ ಮನುಷ್ಯ ಸತ್ತು ಹೋಗುತ್ತಾನೆ. ಹೀಗೆ ಈ ಹಾವುಗಳು ಯಾರ ಮನೆಗಳಿಗೆ ನುಗ್ಗಿದ್ರೆ ಯಾರು ಇದಕ್ಕೆ ಹೊಡೆಯಲ್ಲ. ಬದಲಾಗಿ ಹಾವು ಹಿಡಿಯುವರನ್ನು ಕರೆದು ಅವುಗಳಿಗೆ ಕಾಡಿಗೆ ಬಿಡಲಾಗುತ್ತದೆ.

ಇದನ್ನು ಓದಿ: Snakes: ಮಲಗಿದ್ದವನ ಮೇಲೆ ದೊಡ್ಡ ಹಾವಿನ ಓಡಾಟ, ಗೊತ್ತೇ ಆಗಲಿಲ್ವಾ?

13 ಅಡಿ ಉದ್ದ ಹಾವು ಹಿಡಿದು ಕಾಡಿಗೆ ಬಿಟ್ಟ ವೆಂಕಟೇಶ್
ಆಂದ್ರದ ಕೋಡೆ ಟ್ರಾಚು ವಲಯದಲ್ಲಿ ರೈತ ಸೈದಾರಾವ್ ಎಂಬುವರ ಮನೆಗೆ ಈ ಕಿಂಗ್ ಕೋಬ್ರಾ ಹೊಕ್ಕಿದೆ ಎಂದು ಮಾಹಿತಿ ತಿಳಿದ ವೆಂಕಟೇಶ್ ಮನೆಗೆ ಹೋಗಿ ಈ 13 ಅಡಿ ಉದ್ದವಿರುವ ಕಿಂಗ್ ಕೋಬ್ರಾ ಹಾವನ್ನು ಹಿಡಿದಿದ್ದಾರೆ. ಬಳಿಕ ಈ ಹಾವುವನ್ನು ವಂಟ್ಲಮಾಮಿಡಿ ಪ್ರದೇಶದಲ್ಲಿ ಬಿಡಲಾಗಿದೆ ಎಂದು ತೆಲಗು ವಾಹಿನಿಯೊಂದು ಸುದ್ದಿ ಮಾಡಿದೆ. ಇತ್ತೀಚೆಗೆ ಈ ಕಿಂಗ್ ಕೋಬ್ರಾ ಹಾವು ಕಾಣಿಸಿಕೊಂಡಿತ್ತು ಎನ್ನಲಾಗಿದೆ.

18.5 ಅಡಿ ಉದ್ದ ಇರುತ್ತವೆ ಈ ಕಿಂಗ್ ಕೋಬ್ರಾ ಹಾವು
ಸಾಮಾನ್ಯವಾಗಿ ಕಿಂಗ್ ಕೋಬ್ರಾ ಹಾವುಗಳು 18.5 ಅಡಿ ಉದ್ದದ ಇರುತ್ತವೆ ಎಂದು ವೈಜ್ಞಾನಿಕ ಸಮೀಕ್ಷೆಗಳು ಹೇಳುತ್ತವೆ. ಆದ್ರೆ ಇತ್ತಿಚೆಗೆ ತಮಿಳನಾಡಿನಲ್ಲಿ ಕೆಲವು ಪ್ರದೇಶಗಳಲ್ಲಿ 15 ಅಡಿ ಉದ್ದ ಹಾವು ಹಿಡಿದು ಕಾಡಿಗೆ ಬಿಟ್ಟಿರುವ ಬಗ್ಗೆ ಸುದ್ದಿಯಾಗಿತ್ತು. ಕೊಯಮತ್ತೂರಿನ ನರಸಿಪುರಂ ಗ್ರಾಮದಲ್ಲಿ 15 ಅಡಿ ಉದ್ದ ಕಿಂಗ್ ಕೋಬ್ರಾ ಹಾವು ಕಂಡಿದ್ದು, ಇಲ್ಲಿಯ ಅರಣ್ಯ ಇಲಾಖೆಯು ಆ ಹಾವುವನ್ನು ಹಿಡಿದು ಬಳಿಕ ಅದನ್ನು ಸಿರುವಾನಿ ಅರಣ್ಯ ಪ್ರದೇಶದಲ್ಲಿ ಬಿಡಲಾಗಿತ್ತು ಎನ್ನಲಾಗಿದೆ.

ಇದನ್ನು ಓದಿ: Carpet Python: ಮನೆಯೊಳಗಿತ್ತು 4 ಬೃಹತ್ ಹೆಬ್ಬಾವು! ಶಾಕಿಂಗ್ ವಿಡಿಯೋ ವೈರಲ್

ವೆಂಕಟೇಶ್ ಹಾವು ಹಿಡಿದಿರುವ ವಿಡಿಯೋ ವೈರಲ್
ಹೀಗೆ ಹಾವುಗಳನ್ನು ಹಿಡಿಯುದು ಅಂದ್ರೆ ಸಾಮಾನ್ಯ ಅಲ್ಲಾ. ಅದಕ್ಕೆ ಕಲೆ ಬೇಕು. ಹೀಗೆ ಮೊದಲಿನಿಂದಲೇ ಹಾವುಗಳನ್ನು ಹಿಡಿಯುವುದನ್ನು ರೂಡಿ ಮಾಡಿಕೊಂಡಿರುವ ವೆಂಕಟೇಶ್ ಈ ಬಾರಿ ಹಾವಿನ ರಾಜ ಕಿಂಗ್ ಕೋಬ್ರಾ ಹಿಡಿದು ಸಾಧನೆ ಮೆರೆದಿದ್ದಾರೆ. 13 ಅಡಿ ಉದ್ದವಿರುವ ಕಿಂಗ್ ಕೋಬ್ರಾ ಹಾವು ಹಿಡಿದು ಅರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.

ಒಟ್ಟಿನಲ್ಲಿ ಇತ್ತಿಚೆಗೆ ವಿಷಪೂರಿತ ಹಾವುಗಳು ಮತ್ತು ಮನುಷ್ಯರು ಮುಖಾಮುಖಿ ಯಾಗುತ್ತಿರೋದು ಸಾಮಾನ್ಯವಾಗಿದೆ. ಅಷ್ಟೆ ಮಟ್ಟದಲ್ಲಿ ಹಾವು ಕಚ್ಚಿ ಸಾವುಗಳ ಸಂಖ್ಯೆ ಕುಡ ಹೆಚುತ್ತಿವೆ. ಹೀಗೆ ಹಾವು ಕಂಡ್ರೆ ಅವುಕೆ ತೊಂದ್ರೆ ನೀಡದೆ ಅವುಗಳನ್ನು ಕಾಡಿಗೆ ಬಿಡುವ ವ್ಯವಸ್ಥೆ ಆಗಬೇಕಿದೆ.
Published by:Ashwini Prabhu
First published: