• Home
  • »
  • News
  • »
  • trend
  • »
  • Viral Video: ಹಾವಿಗೆ ಮುತ್ತಿಡಲು ಹೋದವನಿಗೆ ಏನಾಯ್ತು? ನೀವೇ ನೋಡಿ

Viral Video: ಹಾವಿಗೆ ಮುತ್ತಿಡಲು ಹೋದವನಿಗೆ ಏನಾಯ್ತು? ನೀವೇ ನೋಡಿ

ಹಾವಿಗೆ ಮುತ್ತಿಡಲು ಮುಂದಾದ ಯುವಕ

ಹಾವಿಗೆ ಮುತ್ತಿಡಲು ಮುಂದಾದ ಯುವಕ

Viral Video: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಬೊಮ್ಮನಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ಹಾವಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾರೆ.

  • Share this:

ಹಾವಿನ ಹೆಡೆಗೆ ಮುತ್ತಿಡುವುದು ಕೂಡ ಒಂದು ಟ್ರೆಂಡ್ (Trend) ಅನ್ನೊ ರೀತಿಯಲ್ಲಿ ಹಲವರು ಹಾವಿಗೆ ಮುತ್ತಿಡುವ (Kiss) ಸಾಹಸ ಮಾಡುತ್ತಾರೆ. ವಿಷಜಂತುಗಳು ಎಷ್ಟು ಡೇಜಂರ್ ಅನ್ನೊ ವಿಷಯ ಗೊತ್ತಿದ್ರೂ ಸಹ ಇಂತಹ ಸಾಹಸ್ಕೆ ಕೈ ಹಾಕುವವರ ಸಂಖ್ಯೆ ಕಮ್ಮಿಯಾಗಿಲ್ಲ. ಹಾವಿನ ಜೊತೆ ಸರಸವಾಡಲು ಹೋದ ಎಷ್ಟೊ ಜನ ಪಜೀತಿಗೊಳಗಾಗುತ್ತಾರೆ. ಶಿವಮೊಗ್ಗ (Shivamogga) ಜಿಲ್ಲೆಯಲ್ಲಿ‌ ಹಾವಿನ (Snake) ಹೆಡೆಗೆ ಮುತ್ತಿಡಲು ಹೋದ ಯುವಕನೊಬ್ಬನ‌ ವಿಡಿಯೋ ವೈರಲ್ (Video Viral)‌ ಆಗಿದೆ. ನಾಗರಹಾವೊಂದನ್ನು ಹಿಡಿದ ಯುವಕ ಏನ್ಮಾಡಿದ್ದಾನೆ ನೋಡಿ. 


ನಾಗರ ಹಾವು ಎಷ್ಟು ಅಪಾಯಕಾರಿ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಆದರೂ ಬೇಕು ಬೇಕೆಂದೇ ಕೆಲವು ಪೇಚಾಟಗಳನ್ನು ತಮಗೇ ತಂದಿಟ್ಟುಕೊಳ್ಳುವವರಿದ್ದಾರೆ. ಅಂತವರಲ್ಲಿ ಇವರೂ ಒಬ್ಬರು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಸಮೀಪದ ಬೊಮ್ಮನಕಟ್ಟೆಯಲ್ಲಿ ವ್ಯಕ್ತಿಯೊಬ್ಬರು ಹಾವಿಗೆ ಮುತ್ತಿಡುವ ಪ್ರಯತ್ನ ಮಾಡಿದ್ದಾರೆ. ನಾಗರಹಾವು ಹಿಡಿಯಲು ಕರೆಬಂದ ನಂತರ ಸ್ಥಳಕ್ಕೆ ಹೋದ ವ್ಯಕ್ತಿ ಅದನ್ನು ಹಿಡಿದಿದ್ದಾರೆ. ಅದರೊಂದಿಗೆ ಆಟವಾಡುತ್ತಾ ಹೆಡೆಗೆ ಮುತ್ತಿಡಲು ಹೋದಾಗ ಆ ಹಾವು ಆತನ ತುಟಿಗೆ ಕಚ್ಚಿದೆ.


ಕೂಡಲೆ ಅವರನ್ನು ಸಮೀಪವಿರುವ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‌‌ನಲ್ಲಿ ಸೆರೆಹಿಡಿದಿದ್ದಾರೆ. ಅಲ್ಲಿನ ತೀವ್ರ ನಿಗಾ ಘಟಕದಲ್ಲಿ ಇರಿಸಿ ಅವರಿಗೆ ಚಿಕಿತ್ಸೆ ನೀಡಲಾಗಿದೆ. ಪ್ರತ್ಯಕ್ಷದರ್ಶಿಗಳು ಘಟನೆ ಸಂದರ್ಭ ವಿಡಿಯೋ ಮಾಡಿದ್ದಾರೆ. ಅದನ್ನು ಮಾರ್ಕ್ಸ್ ತೇಜಸ್ವಿ ಎಂಬುವರು ಟ್ವೀಟ್ ಮಾಡಿದ್ದಾರೆ. ಕೆಳಗಿನ ಲಿಂಕ್ ಕ್ಲಿಕ್ ಮಾಡಿ ವಿಡಿಯೋ ವೀಕ್ಷಿಸಿ


ಇದನ್ನೂ ಓದಿ: ಜೈಲಲ್ಲಿ ಜೀವನ ಹೇಗಿರುತ್ತೆ ಅಂತ ನೋಡ್ಬೇಕಾ? ಜಸ್ಟ್ 500 ರೂಪಾಯಿ ಕೊಡಿ, ಒಂದು ದಿನ ಕಾರಾಗೃಹದಲ್ಲಿ ಇರಿ!ಎಷ್ಟೇ ಇಂತಹ ಘಟನೆಗಳು ನಡೆದರೂ ಸಹ ಎಚ್ಚೆತ್ತುಕೊಳ್ಳದ ಜನ ಪದೇ ಪದೇ ಇಂತಹ ಪ್ರಯತ್ನ ಮಾಡಲು ಮುಂದಾಗುತ್ತಾರೆ. ಇಷ್ಟೇ ಅಲ್ಲದೆ ದಾರಿ ಮಧ್ಯ ಸಾಗುವ ಆನೆಗಳ ಬಳಿ ಹೋಗುವುದು. ಕಾಡುಕೋಣಗಳ ಚಿತ್ರಸೆರೆಹಿಡಿಯುವುದು ಇಂತಹ ಅನೇಕ ಕೃತ್ಯಗಳನ್ನು  ಮಾಡುತ್ತಾರೆ.


ಇದನ್ನೂ ಓದಿ: ಬೋಂಡಾ ವ್ಯಾಪಾರಿಯ ಹೊಸ ಆವಿಷ್ಕಾರ! ಕ್ಷಣಮಾತ್ರದಲ್ಲಿ ರೆಡಿಯಾಗತ್ತೆ ಬೋಂಡಾ-ಬಜ್ಜಿ


ವಿಡಿಯೋ ಚಿತ್ರೀಕರಣ ಅಥವಾ ಫೋಟೋಗಳ ಸಲುವಾಗಿ ತಮ್ಮ‌ ಜೀವವನ್ನೆ ಬಲಿಕೊಡುವ ಪ್ರಯತ್ನ ಮಾಡುವ ಎಷ್ಟೊ ಸನ್ನಿವೇಶಗಳು ದಿನನಿತ್ಯ ಸಾಮಾಜಿಕ‌ ಜಾಲತಾಣಗಳಲ್ಲಿ ಕಂಡು ಬರುತ್ತಿದೆ. ಮಾರ್ಕ್ಸ್ ತೇಜಸ್ವಿ ಎಂಬುವರು ಟ್ವೀಟ್ ಮಾಡಿದ ವಿಡಿಯೋದಲ್ಲಿ ಹಲವಾರು ಕಮೆಂಟ್​​ಗಳು ಕೂಡಾ ಬಂದಿದೆ. ಹಾವು ಎರಡು ಬಾರಿ ಕಚ್ಚಿದೆ ಎಂಬ ಮಾತು ವಿಡಿಯೋದಲ್ಲಿ ಕಂಡು ಬರುತ್ತದೆ. ಅಲ್ಲಿರುವ ಎಲ್ಲರೂ ಸಹ ಇಂತಹ ಹುಚ್ಚು ಸಾಹಸಗಳಿಗೆ ಪುಷ್ಟಿನೀಡುವಂತೆ ವರ್ತಿಸುತ್ತಿದ್ದರು ಎಂಬುದು ಕಂಡು ಬರುತ್ತದೆ.


ಇದನ್ನೂ ಓದಿ: ಫ್ಲೈಟ್ ಅಟೆಂಡೆಂಟ್​ಗಳ ಕೈಯಲ್ಲಿರುವ ಆ ಚಿಕ್ಕ ಸೂಟ್‌ಕೇಸ್ ನಲ್ಲಿ ಏನೆಲ್ಲಾ ಇರುತ್ತೆ?


ಇನ್ನು ಮುಂದೆಯಾದರೂ ಎಚ್ಚೆತ್ತುಕೊಂಡು ಇಂತಹ ಪ್ರಯತ್ನಮಾಡಬಾರದು ಎಂಬುದನ್ನು ನಾವು ಇದರಲ್ಲಿ ಗಮನಿಸಬಹುದು. ಮತ್ತು ಪ್ರಾಣಿ ಹಾಗು ವಿಷಜಂತುಗಳಿಗೆ ಸಮಸ್ಯೆಯುಂಟುಮಾಡಬಾರದು ಎಂಬುದನ್ನು ಜನರು ಮನಗಾಣಬೇಕು. ಕೆಲವು ಸಂದರ್ಭಗಳಲ್ಲಿ ಸರಿಯಾದ ಚಿಕಿತ್ಸೆ ದೊರೆಯದೆ ಸಾವು ಕೂಡ ಸಂಭವಿಸುತ್ತದೆ. ಹಾವು ಭಯಗೊಂಡು ಹಿಂದುರಿಗಿ ಕಚ್ಚಿದ ದೃಶ್ಯವನ್ನು ನಾವಿದರಲ್ಲಿ ಕಾಣಬಹುದು.

First published: