• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Advertisement: 25 ವರ್ಷಗಳ ಹಿಂದೆ ನಟಿಸಿದ್ದ ಸ್ಯಾನಿಟರಿ ಪ್ಯಾಡ್ ಜಾಹೀರಾತಿನ ವಿಡಿಯೋ ಶೇರ್‌ ಮಾಡಿದ ಸಚಿವೆ ಸ್ಮೃತಿ ಇರಾನಿ, ವ್ಹಾವ್​ ಎಂದ ನೆಟ್ಟಿಗರು!

Advertisement: 25 ವರ್ಷಗಳ ಹಿಂದೆ ನಟಿಸಿದ್ದ ಸ್ಯಾನಿಟರಿ ಪ್ಯಾಡ್ ಜಾಹೀರಾತಿನ ವಿಡಿಯೋ ಶೇರ್‌ ಮಾಡಿದ ಸಚಿವೆ ಸ್ಮೃತಿ ಇರಾನಿ, ವ್ಹಾವ್​ ಎಂದ ನೆಟ್ಟಿಗರು!

ಜಾಹಿರಾತು

ಜಾಹಿರಾತು

ನಮ್ಮ ದೇಶದ ಇಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಸ್ತ್ರೀಯರು ಮುಟ್ಟಿನ ಸಂದರ್ಭದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಸ್ತ್ರೀ ಸಂವೇದನೆಯನ್ನು ಎತ್ತಿ ಹಿಡಿದಿದ್ದಾರೆ.

  • Share this:

ನಾವು ಎಷ್ಟೆ ಆಧುನಿಕವಾಗಿ  ಮುಂದುವರಿದ್ದೇವೆ ಎಂದರೂ ಸಹ ಇಂದಿಗೂ ಹಲವು ಮೂಢ ಆಚರಣೆಗಳು ನಮ್ಮ ದೇಶದಲ್ಲಿ ಇರುವುದು ಸುಳ್ಳಲ್ಲ. ಅದರಲ್ಲೂ ಮಹಿಳೆಯರ ಮುಟ್ಟಿನ ಬಗ್ಗೆ ಏನೇನೋ ಊಹಾಪೋಹಗಳು ಇವೆ. 'ಅಮ್ಮನ್ನ ಮುಟ್ಟಬೇಡ, ಅವರನ್ನ ಕಾಗೆ ಮುಟ್ಟಿದೆʼ ಅಂತ ಇಂಥ ಮಾತನ್ನು ಕೆಲವು ವರ್ಷಗಳ ಹಿಂದೆ ಸಾಂಪ್ರದಾಯಿಕ ಮನೆಗಳಲ್ಲಿ (Home) ಕೇಳಬಹುದಾಗಿತ್ತು. ಕುಟುಂಬಗಳಲ್ಲಿ ಮಹಿಳೆಯರನ್ನು ಮುಟ್ಟಿನ ದಿನಗಳಲ್ಲಿ ಪ್ರತ್ಯೇಕ ಕೋಣೆಗಳಲ್ಲಿ ಇರುವಂತೆ ಮಾಡಲಾಗುತ್ತಿತ್ತು. ಆ ಕೋಣೆಗಳಿಗೋ (Room) ಸರಿಯಾದ ಗಾಳಿ ಬೆಳಕು ಇರುತ್ತಿರಲಿಲ್ಲ. ಕೆಲವು ಕಡೆ, ಹಳ್ಳಿಗಳಲ್ಲಿ, ಮನೆಯಾಚೆಗಿನ ಕೊಟ್ಟಿಗೆಯಲ್ಲೂ ಇರಬೇಕಾಗಿ ಬರುತ್ತಿತ್ತು. ಮುಟ್ಟಿನ ಬಳಲಿಕೆಯಿಂದ ಸುಸ್ತಾದ ಸ್ತ್ರೀ ಆ ಕೋಣೆಗಳ ಅನಾರೋಗ್ಯಕರ ವ್ಯವಸ್ಥೆಯಿಂದಲೇ ಬೇರೆ ಅನಾರೋಗ್ಯಗಳಿಗೆ  ತುತ್ತಾದರೂ ಆಶ್ಚರ್ಯವಿರುತ್ತಿರಲಿಲ್ಲ. ಇಂತಹ ಪರಿಸ್ಥಿತಿ ಈಗ ಸ್ವಲ್ಪ ಕಡಿಮೆ ಆಗಿದ್ರೂ ಕೂಡ ಮುಟ್ಟಿನ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವುದು ಇಂದಿಗೂ ಕೀಳರಿಮೆ ವಿಷಯ ಆಗಿದೆ.


ಏನಪ್ಪ ಇವರು ಇವತ್ತು ಸ್ತ್ರೀ ಬಗ್ಗೆ , ಅವರ ಮುಟ್ಟಿನ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಆಶ್ಚರ್ಯಪಡಬೇಡಿ ಅದಕ್ಕೂ ಕಾರಣವಿದೆ. ನಮ್ಮ ದೇಶದ ಇಂದಿನ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಸ್ತ್ರೀಯರು ಮುಟ್ಟಿನ ಸಂದರ್ಭದಲ್ಲಿ ಬಳಕೆ ಮಾಡುವ ಸ್ಯಾನಿಟರಿ ಪ್ಯಾಡ್‌ಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಸ್ತ್ರೀ ಸಂವೇದನೆಯನ್ನು ಎತ್ತಿ ಹಿಡಿದಿದ್ದಾರೆ.


ಸ್ಮೃತಿ ಇರಾನಿ ಹೇಳಿರುವುದೇನು?


ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಅವರು ಎರಡೂವರೆ ದಶಕಗಳ ಹಿಂದೆ ತಮ್ಮ ವಿಸ್ಪರ್ ಜಾಹೀರಾತಿನ ಮೂಲಕ ಮುಟ್ಟಿನ ಬಗ್ಗೆ ಇದ್ದ ಅನೇಕ ಮೂಢನಂಬಿಕೆಗಳನ್ನು ಹೋಗಲಾಡಿಸಿದ್ದಾರೆ.


ಇದನ್ನೂ ಓದಿ: ಈ ಮಹಿಳೆಯ ಹೃದಯ ಇರೋದು ಬ್ಯಾಗ್​ನಲ್ಲಿ, ಈಕೆಯ ಕಥೆ ಕೇಳಿದ್ರೆ ಎಂಥವರಿಗಾದ್ರೂ ಮನಸ್ಸು ಕರಗುತ್ತೆ!


ಋತುಸ್ರಾವವು ಸಹಜವಾದ ಪ್ರಕ್ರಿಯೆ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವಾಗಿದೆ. ಇದರ ಬಗ್ಗೆ ಹಳೆಯ ಮಾಜಿ ನಟಿಯಾಗಿರುವ ಸ್ಮೃತಿ ಇರಾನಿ ಅವರು ತಮ್ಮ ಹಳೆಯ ಜಾಹೀರಾತನ್ನು ಆನ್‌ಲೈನ್‌ನಲ್ಲಿ ಶೇರ್‌ ಮಾಡುವುದರ ಮೂಲಕ ಮತ್ತೊಮ್ಮೆ ಜಾಗೃತಿ ಮೂಡಿಸಲು ಪ್ರಯತ್ನಿಸಿದ್ದಾರೆ. ಆ ಜಾಹೀರಾತಿನ ಬಗ್ಗೆ ಅನೇಕರು ಉತ್ತಮ ಕಮೆಂಟ್‌ಗಳನ್ನು ಮಾಡಿದ್ದಾರೆ ಎಂಬುದರ ಕುರಿತು ಅವರು ಮಾತನಾಡಿದರು.


25 ವರ್ಷದ ವರ್ಷದ ಹಳೆಯ ವೈಟ್‌ ಆಂಡ್‌ ಬ್ಲಾಕ್‌ ವಿಡಿಯೋ ಶೇರ್‌ ಮಾಡಿದ ಸಚಿವೆ


25 ವರ್ಷ ವಯಸ್ಸಿನ ಕಪ್ಪು-ಬಿಳುಪು ಕ್ಲಿಪ್ ಅನ್ನು ಹಂಚಿಕೊಂಡ ಇರಾನಿ, ಸ್ಯಾನಿಟರಿ ಪ್ಯಾಡ್ ಜಾಹೀರಾತುಗಳಲ್ಲಿ ನಟಿಸಲು ಮಾಡೆಲ್‌ಗಳು ಆಗ ಒಪ್ಪುತ್ತಿರಲಿಲ್ಲ. ಏಕೆಂದರೆ ಆಗ ಇದ್ದ ಜಾಹೀರಾತು ಕ್ಷೇತ್ರ ಗ್ಲಾಮರ್ ಆಧಾರಿತ ಕ್ಷೇತ್ರವಾಗಿತ್ತು.


ಸ್ಯಾನಿಟರಿ ಪ್ಯಾಡ್‌ಗಳ ಜಾಹೀರಾತಿನಲ್ಲಿ ನಟಿಸಿದರೆ ನಮಗೆ ಆಫರ್‌ಗಳು ಕಡಿಮೆ ಆಗುತ್ತವೆ ಎಂದು ಹಲವು ನಟಿಯರು ಎಂದುಕೊಳ್ಳುತ್ತಿದ್ದರು. ಆದರೆ ಇದಕ್ಕೆ ತದ್ವಿರುದ್ಧವಾಗಿ ಇರಾನಿ ಅವರು ದೊಡ್ಡ ಕಂಪನಿಯಲ್ಲಿ ಸ್ಯಾನಿಟರಿ ಪ್ಯಾಡ್‌ ಬಗ್ಗೆ ಜಾಹೀರಾತು ಮಾಡುವ ಮೂಲಕ ಕ್ಯಾಮೆರಾದ ಮುಂದೆ ತಮ್ಮ ಕೆಲಸವನ್ನು ಪ್ರಾರಂಭಿಸಿದರು.ಸಚಿವೆಯು ಮುಂದೆ ಮಾತನಾಡುತ್ತಾ “ನಟಿಯಾಗಿದ್ದ ನಾನು ಈಗ ರಾಜಕಾರಣಿ ಆಗಿ ಬದಲಾಗಿದ್ದೇನೆ. 25 ವರ್ಷಗಳ ಹಿಂದೆ, ದೊಡ್ಡ ಕಂಪನಿಯ ನನ್ನ ಮೊದಲ ಜಾಹೀರಾತು.


ಜಾಹೀರಾತಿನ ವಿಷಯ ಕೇವಲ ಗ್ಲಾಮರ್‌ನಿಂದ ಮಾತ್ರ ಕೂಡಿರಲಿಲ್ಲ. ಅದು ಉತ್ತಮ ಸಂದೇಶವನ್ನು ಸಮಾಜಕ್ಕೆ ನೀಡುವುದೂ ಆಗಿತ್ತು. ಈ ಜಾಹೀರಾತು ಆಫರ್‌ ಬಂದ ತಕ್ಷಣ ನಾನು ಒಪ್ಪಿಕೊಂಡೆ. ಅಂದಿನಿಂದ ಯಾವತ್ತು ನನ್ನ ಕ್ಷೇತ್ರದಲ್ಲಿ ಹಿಂದಿರುಗಿ ನೋಡಲೇ ಇಲ್ಲ” ಎಂದು ತಮ್ಮ ನೆನಪುಗಳನ್ನು ಮೆಲಕು ಹಾಕಿದ್ದಾರೆ.


ಇರಾನಿ ಅವರ ಹಳೆಯ ಜಾಹೀರಾತು ವಿಡಿಯೋಗೆ ಕಮೆಂಟ್‌ಗಳ ಸುರಿಮಳೆ


ನಟಿ ಮೌನಿ ರಾಯ್ ಅವರು "ನನ್ನ ಸುಂದರ ಸ್ಮೃತಿ ದಿ" ಎಂದು ಕಮೆಂಟ್‌ ಬರೆದಿದ್ದಾರೆ. “ಇಂದು ನಮ್ಮಲ್ಲಿ ಹಲವಾರು ನಟಿಯರು ಈ ಜಾಹೀರಾತನ್ನು ಸುಲಭವಾಗಿ ಮಾಡುತ್ತಾರೆ.


ಆದರೆ ಹೌದು, ಹಳೆಯ ಕಾಲದಲ್ಲಿ ಅದರ ಬಗ್ಗೆ ಮಾತನಾಡುವುದು ನಿಷೇಧವಾಗಿತ್ತು ಎಂದು ನನಗೆ ಈಗಲೂ ನೆನಪಿದೆ. ಹಾಗಾಗಿ ಆ ಜಾಹೀರಾತನ್ನು ನೀವು ಮಾಡಿದ್ದಕ್ಕಾಗಿ ನಿಮಗೆ ಹ್ಯಾಟ್ಸ್ ಆಫ್, ಮತ್ತು ಅದು ತುಂಬಾ ಚೆನ್ನಾಗಿ ಮೂಡಿ ಬಂದಿದೆ” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.

First published: