• Home
  • »
  • News
  • »
  • trend
  • »
  • Viral Video: ಅಳುತ್ತಿರುವ ಅಕ್ಕನನ್ನ ಸಂತೈಸಿದ ತಮ್ಮ; ಕ್ಯೂಟ್​ ವಿಡಿಯೋ ನೋಡಿದವರ ಕಣ್ಣಾಲಿಗಳು ತೇವ

Viral Video: ಅಳುತ್ತಿರುವ ಅಕ್ಕನನ್ನ ಸಂತೈಸಿದ ತಮ್ಮ; ಕ್ಯೂಟ್​ ವಿಡಿಯೋ ನೋಡಿದವರ ಕಣ್ಣಾಲಿಗಳು ತೇವ

ವೈರಲ್ ವಿಡಿಯೋ

ವೈರಲ್ ವಿಡಿಯೋ

ಅವಳು ಹೇಗಿದ್ದಾಳೆ? ಎಲ್ಲವೂ ಸರಿಯಾಗಿದೆಯೇ ಅಂತ ಕೇಳುತ್ತಾನೆ ಮತ್ತು ಅವಳಿಗೆ ಏನಾಯಿತು ಅಂತ ತಮ್ಮನಿಗೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅವನು ಅರ್ಥ ಮಾಡಿಕೊಂಡಿದ್ದರಿಂದ ಅವನು ಮೌನವಾಗಿರುತ್ತಾನೆ" ಎಂದು ಹೇಳಿದರು.

  • Share this:

ನಮಗಿಂತಲೂ ವಯಸ್ಸಿನಲ್ಲಿ ದೊಡ್ಡವರಾದ ಅಕ್ಕ ಅಥವಾ ಅಣ್ಣ (Brother Or Sister) ಯಾವುದೋ ಒಂದು ವಿಷಯಕ್ಕೆ ಮುನಿಸಿಕೊಂಡಾಗ ಅಥವಾ ಯಾವುದೋ ಒಂದು ಬೇಸರದಿಂದ ಕಣ್ಣೀರಿಡುತ್ತಿದ್ದಾಗ (Crying) ನಾವು ಅವರ ಬಳಿ ಹೋಗಿ ಅವರನ್ನು ಅನೇಕ ರೀತಿಯಲ್ಲಿ ಸಂತೈಸಲು ಪ್ರಯತ್ನಿಸುತ್ತೇವೆ. ಇಂತಹ ದೃಶ್ಯಗಳನ್ನು ನಾವು ಸಿನಿಮಾದಲ್ಲಿ ಮತ್ತು ಟಿವಿ ಧಾರವಾಹಿಗಳಲ್ಲಿಯೂ (Cinema And Tv) ಅನೇಕ ಬಾರಿ ನೋಡಿರುತ್ತೇವೆ. ಅನೇಕ ಸಲ ಒಡಹುಟ್ಟಿದವರು ಜಗಳವಾಡುತ್ತಾರೆ, ಕೀಟಲೆ ಮಾಡುತ್ತಾರೆ ಮತ್ತು ಪರಸ್ಪರರ ಮೇಲೆ ಕೋಪಗೊಳ್ಳುತ್ತಾರೆ. ಆದಾಗ್ಯೂ, ಇದೆಲ್ಲವನ್ನು ಹೊರತುಪಡಿಸಿ ಒಡಹುಟ್ಟಿದವರಲ್ಲಿ ಪ್ರೀತಿ, ಕಾಳಜಿ ಸಹ ತುಂಬಾನೇ ಇರುತ್ತದೆ ಅಂತ ಹೇಳಬಹುದು.


ಒಡಹುಟ್ಟಿದವರು ಹಂಚಿಕೊಳ್ಳುವ ಪ್ರೀತಿಯು ಬೇರೆಯೇ ಒಂದು ಹಂತದಲ್ಲಿರುತ್ತದೆ, ಪರಸ್ಪರರ ಅಗತ್ಯದ ಸಮಯದಲ್ಲಿ ಒಬ್ಬರನ್ನೊಬ್ಬರು ಸಂತೈಸಲು ಪ್ರಯತ್ನಿಸಿದಾಗ ಈ ಬಂಧವು ಇನ್ನೂ ಹೆಚ್ಚು ಸ್ಪಷ್ಟವಾಗುತ್ತದೆ ಮತ್ತು ಬಲಗೊಳ್ಳುತ್ತದೆ.


ನೋವಿನ ಸಂದರ್ಭದಲ್ಲಿ ಒಡಹುಟ್ಟಿದವರು ನೀಡುವ ಆ ಅಪ್ಪುಗೆ ಅಥವಾ ಸಮಾಧಾನದ ನಾಲ್ಕು ಮಾತುಗಳು ಮತ್ತು ನಮ್ಮ ಕಣ್ಣೀರು ಒರೆಸುವ ಪ್ರಯತ್ನ ಹತಾಶೆ ಮನಸ್ಸಿಗೆ ತುಂಬಾ ನೆಮ್ಮದಿಯನ್ನು ನೀಡುತ್ತದೆ ಅಂತ ಹೇಳಬಹುದು. ಇಲ್ಲಿಯೂ ಸಹ ಇಂತಹದೇ ಒಂದು ದೃಶ್ಯವನ್ನು ನೀವು ಈ ವೀಡಿಯೋದಲ್ಲಿ ನೋಡಬಹುದು.


ಅಕ್ಕನನ್ನು ಸಂತೈಸುತ್ತಿರುವ ಪುಟ್ಟ ತಮ್ಮ


ಇಲ್ಲಿರುವ ವಿಡಿಯೋದಲ್ಲಿ ಏಳು ವರ್ಷದ ಹುಡುಗನೊಬ್ಬ ತನ್ನ 25 ವರ್ಷದ ಅಳುವ ಸಹೋದರಿಯನ್ನು ಹೇಗೆ ಸಂತೈಸಲು ಪ್ರಯತ್ನಿಸುತ್ತಿದ್ದಾನೆ ಅನ್ನೋದನ್ನು ನಾವು ನೋಡಬಹುದು.


p.a.pz ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಬಳಕೆದಾರರು ತಮ್ಮ ಸಹೋದರ ಮತ್ತು ಸಹೋದರಿಯ ನಡುವಿನ ಹೃದಯಸ್ಪರ್ಶಿ ಕ್ಷಣವನ್ನು ತೋರಿಸುವ ವೀಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಈ ವಿಡಿಯೋವನ್ನು ವಿವರಿಸಲು ಅದಕ್ಕೆ ತಕ್ಕುದಾದ ಉದ್ದವಾದ ಶೀರ್ಷಿಕೆಯನ್ನು ಸಹ ಸೇರಿಸಿದರು.


ಅಕ್ಕನ ಬಳಿ ಓಡಿ ಬಂದ ತಮ್ಮ


"ಇದು ಕಳೆದ ವರ್ಷ, 2021 ರಲ್ಲಿ ನಡೆದ ಘಟನೆಯಾಗಿದ್ದು, ನನ್ನ ಸಹೋದರ ಆಟವಾಡುತ್ತಿದ್ದನು ಮತ್ತು ಇದ್ದಕ್ಕಿದ್ದಂತೆ ಅವನು ನನ್ನ ಸಹೋದರಿ ಅಳುತ್ತಿರುವುದನ್ನು ನೋಡಿದನು ಮತ್ತು ಅವನು ಎಲ್ಲವನ್ನೂ ಬಿಟ್ಟು ಅವಳು ಏಕೆ ಕಣ್ಣೀರಿಡುತ್ತಿದ್ದಾಳೆ ಅಂತ ನೋಡಲು ಅವಳ ಬಳಿಗೆ ಓಡಿದನು. ಅಕ್ಕನಿಗೆ ತನ್ನಿಂದ ಏನಾದರೂ ತೊಂದರೆಯಾಯಿತೆ ಅಥವಾ ನೋವಾಯಿತೇ ಅಂತ ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದನು" ಎಂದು ಅವರು ಬರೆದಿದ್ದಾರೆ.


ವಿಡಿಯೋದಲ್ಲಿ ಏನಾಗುತ್ತಿದೆ ಅಂತ ವಿವರಿಸಿದ ಅವರು "ನಂತರ ಪುಟ್ಟ ತಮ್ಮ ತನ್ನ ಅಕ್ಕನ ಕಣ್ಣೀರನ್ನು ಒರೆಸುವುದನ್ನು ನೋಡಬಹುದು. ಅವಳು ಹೇಗಿದ್ದಾಳೆ? ಎಲ್ಲವೂ ಸರಿಯಾಗಿದೆಯೇ ಅಂತ ಕೇಳುತ್ತಾನೆ ಮತ್ತು ಅವಳಿಗೆ ಏನಾಯಿತು ಅಂತ ತಮ್ಮನಿಗೆ ಹೇಳಲು ಸಾಧ್ಯವಾಗುತ್ತಿಲ್ಲ ಎಂದು ಅವನು ಅರ್ಥ ಮಾಡಿಕೊಂಡಿದ್ದರಿಂದ ಅವನು ಮೌನವಾಗಿರುತ್ತಾನೆ" ಎಂದು ಹೇಳಿದರು.


ಇದನ್ನೂ ಓದಿ:  Viral Video: ವಿದೇಶಿ ಮಹಿಳೆಗೆ ನಡುರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿ ಮುತ್ತು ಕೊಟ್ಟ!


6 ಮಿಲಿಯನ್ ವೀಕ್ಷಣೆ ಪಡೆದ ಅಕ್ಕ-ತಮ್ಮನ ಈ ಸುಂದರವಾದ ಕ್ಲಿಪ್


ಕೆಲವು ದಿನಗಳ ಹಿಂದೆ ಈ ವೀಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾಗಿದೆ. ಇದನ್ನು ಹಂಚಿಕೊಂಡಾಗಿನಿಂದ, ಕ್ಲಿಪ್ ತುಂಬಾನೇ ವೈರಲ್ ಆಗಿದೆ.

View this post on Instagram


A post shared by PAPz (@p.a.pz)

ಇಲ್ಲಿಯವರೆಗೆ, ಇದು ಸುಮಾರು ಆರು ಮಿಲಿಯನ್ ವೀಕ್ಷಣೆಗಳನ್ನು ಸಂಗ್ರಹಿಸಿದೆ ಮತ್ತು ಈ ಸಂಖ್ಯೆ ಮಾತ್ರ ಹಾಗೆಯೇ ಹೆಚ್ಚುತ್ತಿವೆ. ಈ ಹಂಚಿಕೆಯು ವಿವಿಧ ಕಮೆಂಟ್​​ಗಳನ್ನು ಪೋಸ್ಟ್ ಮಾಡಲು ಜನರನ್ನು ಪ್ರೇರೇಪಿಸಿದೆ.


ಈ ವಿಡಿಯೋ ನೋಡಿ ಸಂತೈಸಿದ ರೀತಿಯನ್ನ ಮೆಚ್ಚಿಕೊಂಡ ನೆಟ್ಟಿಗರು


"ನನ್ನ ಕಿರಿಯ ಸಹೋದರ ನನ್ನೊಂದಿಗೆ ಅದೇ ರೀತಿ ಮಾಡುತ್ತಿದ್ದನು. ಕುಟುಂಬ ಸದಸ್ಯರ ಮುಂದೆಯೂ ಅವರು ನನ್ನ ಪರವಾಗಿ ನಿಲ್ಲುತ್ತಾರೆ. ಅವನನ್ನು ತಮ್ಮನಾಗಿ ಪಡೆಯಲು ನಾನು ತುಂಬಾನೇ ಪುಣ್ಯ ಮಾಡಿದ್ದೇನೆ" ಎಂದು ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಬರೆದಿದ್ದಾರೆ.


ಇದನ್ನೂ ಓದಿ: Viral Video: ಅಬ್ಬಬ್ಬಾ! ಇಂಥಾ ಮಹಿಳೆಯರು ಕೂಡ ಇರ್ತಾರಾ? ಈ ವಿಡಿಯೋ ನೋಡಿದ್ರೆ ನೀವೂ ಬೈಯ್ತೀರಿ!


"ಕೇವಲ 5 ವರ್ಷ ವಯಸ್ಸಿನ ನನ್ನ ಪುಟ್ಟ ತಂಗಿಗೆ ನಾನು ನನ್ನನ್ನು ಯಾರೂ ಪ್ರೀತಿಸುವುದಿಲ್ಲ ಅಂತ ಹೇಳಿದಾಗ, ಆಕೆ ತಕ್ಷಣವೇ ಬಂದು 'ಚಿಂತಿಸಬೇಡ, ನಾನು ನಿನ್ನನ್ನು ಪ್ರೀತಿಸುತ್ತೇನೆ' ಎಂದು ಹೇಳಿದಳು" ಎಂದು ಇನ್ನೊಬ್ಬರು ಹಂಚಿಕೊಂಡಿದ್ದಾರೆ.


"ಅದೇ ರೀತಿಯಲ್ಲಿ, ನನ್ನ ಪುಟ್ಟ ಸಹೋದರನು ನನ್ನನ್ನು ತುಂಬಾನೇ ಪ್ರೀತಿಸುತ್ತಾನೆ ಮತ್ತು ನನ್ನ ಬಗ್ಗೆ ಕಾಳಜಿ ವಹಿಸುತ್ತಾನೆ" ಎಂದು ಮೂರನೆಯವರು ಕಾಮೆಂಟ್ ಹಾಕಿದ್ದಾರೆ.

Published by:Mahmadrafik K
First published: