• Home
  • »
  • News
  • »
  • trend
  • »
  • Viral Video: ಮದುವೆ ವಿಧಿವಿಧಾನದಲ್ಲಿ ನಿದ್ದೆಗೆ ಜಾರಿದ ವಧು! ವೈರಲ್ ಆಯ್ತು ವಿಡಿಯೋ

Viral Video: ಮದುವೆ ವಿಧಿವಿಧಾನದಲ್ಲಿ ನಿದ್ದೆಗೆ ಜಾರಿದ ವಧು! ವೈರಲ್ ಆಯ್ತು ವಿಡಿಯೋ

ನಿದ್ರಿಸುತ್ತಿರುವ ವಧು

ನಿದ್ರಿಸುತ್ತಿರುವ ವಧು

Sleeping Bride: ಸಾಮಾಜಿಕ ಜಾಲತಾಣದಲ್ಲಿ ದಿನಕ್ಕೊಂದೊಂದು ವಿಡಿಯೋ, ಫೊಟೋ ವೈರಲ್ ಆಗ್ತಾನೇ ಇರುತ್ತವೆ. ಇದೀಗ ಒಂದು ಬಾರಿ ವೈರಲ್ ಆದ ವಿಡಿಯೋ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ಧು ಮಾಡ್ತಾ ಇದೆ. ಯಾವ್ದು ಅಂತ ಕೇಳ್ತೀರಾ? ನೀವೇ ನೋಡಿ

  • Share this:

ನಮ್ಮಲ್ಲಿ ಅದರಲ್ಲೂ ಹಿಂದೂ (Hindu) ಪದ್ಧತಿಯಲ್ಲಿ ಮದುವೆ ಸಂಪ್ರದಾಯ ಬಹಳಷ್ಟು ಪ್ರಾಮುಖ್ಯತೆ ಪಡೆಯುತ್ತದೆ. ಇಲ್ಲಿನ ವಿಧಿ ವಿಧಾನಗಳು ಬಹಳಷ್ಟು ಕ್ಲಿಷ್ಟಕರವಾಗಿರುತ್ತೆ. ಆದರೆ ಮದುವೆಯೊಂದು ಮಹತ್ವದ ಘಟ್ಟವಾದ್ದರಿಂದ ಹಿರಿಯರು ಹಾಗೂ ವಧುವರರು ಇದನ್ನು ಪೂರ್ಣಗೊಳಿಸಲೇ ಬೇಕು. ತೀರಾ ಬೆಳಗಿನ ಜಾವದಲ್ಲಿ ಅಥವಾ ಕೆಲವೊಮ್ಮೆ ರಾತ್ರಿ ನಡೆಯುವ ಮದುವೆ ಕಾರ್ಯಗಳಲ್ಲಿ ವಧು ವರರು ಸುಸ್ತಾಗಿ ಬಿಡುವುದು ಕಾಮನ್.‌ ಆದ್ರೆ ಇಲ್ಲೊಬ್ಬಳು ವಧು ಆಕೆಯದೇ ಮದುವೆಯಲ್ಲಿ ನಿದ್ದೆ ಮಾಡ್ತಾ ಇರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ (Social Media) ವೈರಲ್‌ ಆಗಿದೆ. ಹೌದು ಮದುವೆಯ ವಿಧಿವಿಧಾನಗಳ ಸಮಯದಲ್ಲಿ ವಧು ತೂಕಡಿಸುತ್ತಿರುವ ಹಳೆಯ ವಿಡಿಯೋ ಮತ್ತೆ ವೈರಲ್‌ ಆಗಿದೆ. ಈ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣ ಇನ್‌ ಸ್ಟಾಗ್ರಾಂ (Instagram) ನಲ್ಲಿ ಹಂಚಿಕೊಂಡಿದ್ದಾರೆ.


ಬ್ಯಾಟರ್ಡ್‌ ಸೂಟ್‌ ಕೇಸ್‌ ಎಂಬ ಬಳಕೆದಾರರ ಹೆಸರನ್ನು ಹೊಂದಿರುವ ಅಕೌಂಟ್‌ ನಿಂದ ಇದನ್ನು ಪೋಸ್ಟ್‌ ಮಾಡಲಾಗಿದೆ. ಈ ಪೋಸ್ಟ್‌ ಜೊತೆ "ನಿದ್ರಿಸುತ್ತಿರುವ ವಧು ಇಲ್ಲಿದ್ದಾಳೆ! ಈಗ ಬೆಳಿಗ್ಗೆ 06:30 ಆಗಿದೆ. ಮದುವೆ ಇನ್ನೂ ನಡೆಯುತ್ತಿದೆ” ಎಂದು ಪೋಸ್ಟ್‌ ಜೊತೆ ಬರೆಯಲಾಗಿದೆ.


ವಿಡಿಯೋದಲ್ಲಿ ಬೆಳಿಗ್ಗೆ ಆಚರಣೆ ವೇಳೆಗೆ ತುಂಬಾ ದಣಿದಿದ್ದ ವಧು ತೂಕಡಿಸುತ್ತಿದ್ದಾರೆ. ಕೆಂಪು ಬಣ್ಣದ ಸೀರೆಯಲ್ಲಿ ಭಾರೀ ಆಭರಣದ ಜೊತೆ ಹೆವಿ ಬ್ರೈಡಲ್‌ ಮೇಕಪ್‌ ಮಾಡಿಕೊಂಡಿರುವ ವಧುವಿನ ವಿಡಿಯೋ ವೈರಲ್‌ ಆಗಿದೆ.


ವಧು ಹೀಗೆ ತೂಕಡಿಸುತ್ತಿರುವಾಗ ವರ ಪಕ್ಕದಲ್ಲಿಯೇ ವಿಧಿ ವಿಧಾನದಲ್ಲಿ ತೊಡಗಿದ್ದಾನೆ. ಇನ್ನು ವಧು ಹೀಗೆ ನಿದ್ರಿಸ್ತಾ ಇರೋದನ್ನು ಆಕೆಯ ಸ್ನೇಹಿತೆ ಪಾಲ್ವಿ ಶರ್ಮಾ ಎಂಬುವವರು ರೆಕಾರ್ಡ್‌ ಮಾಡಿದ್ದಾರೆ.


ಇದನ್ನೂ ಓದಿ: ಅಂತರಾಷ್ಟ್ರೀಯ ಹೆಣ್ಣು ಮಗುವಿನ ದಿನದ ಮಹತ್ವ ತಿಳಿಯಿರಿ


ವೈರಲ್ ವೀಡಿಯೊವನ್ನು ಹಂಚಿಕೊಂಡ ನಂತರ ಇನ್‌ ಸ್ಟಾಗ್ರಾಂ ನಲ್ಲಿ 7.6 ಲಕ್ಷ ವೀಕ್ಷಣೆಗಳು ಮತ್ತು 15,000 ಕ್ಕೂ ಹೆಚ್ಚು ಲೈಕ್‌ಗಳನ್ನು ಬಂದಿವೆ. ಪೋಸ್ಟ್‌ನ ಕಾಮೆಂಟ್ ಸೆಕ್ಶನ್‌ ನಲ್ಲಿ ಹಲವಾರು ಬಳಕೆದಾರರು ಶುಭಾಶಯಗಳನ್ನು ಹಾಗೂ ಟೀಕೆಗಳನ್ನೂ ಮಾಡಿದ್ದಾರೆ.


ಪರಿಸ್ಥಿತಿಯನ್ನು ಸ್ವತಃ ಸಂಬಂಧಿಸಿ, ಒಬ್ಬ ಬಳಕೆದಾರರು ಬರೆದಿದ್ದಾರೆ, ಅಕೆಯ ಔಟ್‌ ಫೀಟ್‌ ತುಂಬಾ ಸುಂದರವಾಗಿದೆ, ಮಾಶಲ್ಲಾಹ್ ಎಂದಿದ್ದಾರೆ. ಇನ್ನೊಬ್ಬರು ಆಕೆ ತುಂಬಾ ಮುದ್ದಾಗಿದ್ದಾಳೆ ಎಂಬುದಾಗಿ ಕಾಮೆಂಟ್‌ ಮಾಡಿದ್ದಾರೆ.


ಇನ್ನೊಬ್ಬರು "ನಿದ್ದೆಗಿಂತ ಮುಖ್ಯವಾದುದು ಯಾವುದೂ ಇಲ್ಲ" ಎಂದು ವ್ಯಂಗ್ಯವಾಡಿದ್ದಾರೆ. ಮತ್ತೊಬ್ಬರು ತಮ್ಮ ಕಳವಳವನ್ನು ವ್ಯಕ್ತಪಡಿಸಿ "ಇದು ಹುಡುಗಿಗೆ ಸಾಕಷ್ಟು ವಿಶ್ರಾಂತಿ ಪಡೆಯಲು ಬಿಡದೆ ಇಡೀ ರಾತ್ರಿ ನಿರಂತರವಾಗಿ ನಡೆಸಿದ ಅನೇಕ ಆಚರಣೆಗಳ ಫಲಿತಾಂಶವಾಗಿದೆ" ಎಂದಿದ್ದಾರೆ.


ಈ ಮಧ್ಯೆ, ಈ ವರ್ಷದ ಆರಂಭದಲ್ಲಿ, ವಧುವೊಬ್ಬಳು ತನ್ನ ತಂದೆಗೆ ಭಾವಪೂರ್ಣವಾಗಿ ಅಭಿನಂದನೆ ಸಲ್ಲಿಸಿದ ವೀಡಿಯೊ ವೈರಲ್ ಆಗಿತ್ತು. ವಧು, ಅಣವಿ ಶರ್ಮಾ ತನ್ನ ಸಹೋದರಿಯೊಂದಿಗೆ ವೇದಿಕೆಯಲ್ಲಿ ತನ್ನ ತಂದೆಗೆ ಗೌರವಾರ್ಥವಾಗಿ ಭಾವನಾತ್ಮಕ ಹಾಡುಗಳಿಗೆ ನೃತ್ಯ ಮಾಡಿದರು.ವಧು ಸ್ವತಃ ಅಭಿನಯವನ್ನು ನೃತ್ಯ ಸಂಯೋಜನೆ ಮಾಡಿದ್ದರು. ಇದನ್ನು ನೋಡಿದ ವಧುವಿನ ತಂದೆ ಪ್ರದರ್ಶನದಲ್ಲಿ ಕಣ್ಣೀರಾಗುತ್ತಾರೆ ಮತ್ತು ವೀಡಿಯೊದ ಕೊನೆಯಲ್ಲಿ ತಂದೆ-ಮಗಳು ತಬ್ಬಿಕೊಂಡು ಪರಸ್ಪರ ಸಮಾಧಾನಿಸಿಕೊಳ್ಳುತ್ತಿರುವ ವಿಡಿಯೋ ವೈರಲ್‌ ಆಗಿತ್ತು.


ಇನ್ನು, ವಿವಾಹಗಳು ವ್ಯಕ್ತಿಯ ಜೀವನದಲ್ಲಿ ಅತ್ಯಂತ ಮಹತ್ವದ ಘಟ್ಟಗಳಲ್ಲಿ ಒಂದು. ಆದರೆ ವಿವಾಹಗಳು ಸಾಮಾನ್ಯವಾಗಿ ವಧುವರರಿಗೆ ಬೇಸರವನ್ನುಂಟುಮಾಡುತ್ತವೆ. ಅದರಲ್ಲೂ ವಿಶೇಷವಾಗಿ ಇದು ಭಾರತೀಯ ವಿವಾಹಗಳಾದಾಗ.


ಇದನ್ನೂ ಓದಿ: ಸ್ವತಃ ಫುಡ್‌ ಆರ್ಡರ್‌ ಡೆಲಿವರಿ ಮಾಡ್ತಾರಂತೆ ಜೊಮೆಟೊ CEO


ಇವು ಸಾಂಪ್ರದಾಯಿಕವಾಗಿ ವಿಸ್ತಾರವಾದ ಆಚರಣೆಗಳು ಮತ್ತು ಸಮಾರಂಭಗಳನ್ನು ಹೊಂದಿರುತ್ತವೆ. ಮತ್ತು ಈ ದಿನದಲ್ಲಿ ವಧುವರರು ದಣಿದಿರುತ್ತಾರೆ. ಅದರಲ್ಲೂ ವಧು ಭಾರೀ ಸೀರೆ ಅಲಂಕಾರ, ಆಭರಣ ಗಳಿಂದಾಗಿ ಸುಸ್ತಾಗಿರುತ್ತಾರೆ.


ಜೊತೆಗೆ ಹೆವಿ ಮೇಕಪ್‌ ಹಾಗೂ ಫೋಟೋಶೂಟ್‌ ಗಳಿಂದಾಗಿ ಇನ್ನಷ್ಟು ದಣಿದಿರುತ್ತಾರೆ ಎಂಬುದು ಸತ್ಯ. ಆದರೆ ಅದೊಂದು ದಿನ ಅಷ್ಟೂ ದಣಿವನ್ನು ಬದಿಗಿಟ್ಟು ಸಂಪ್ರದಾಯಕ್ಕೊಂದು ಗೌರವ ಸಲ್ಲಿಸಿ ಅದರಲ್ಲಿ ಪಾಲ್ಗೊಳ್ಳುತ್ತಾರೆ.

First published: