Viral Video; ನ್ಯೂಯಾರ್ಕ್ ಬೀದಿಯಲ್ಲಿ ಲೆಹೆಂಗ ಧರಿಸಿ ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಯುವಕ; ಯಾರು ಈ ಡ್ಯಾನ್ಸರ್?

ಬಿಳಿ ಶರ್ಟ್ ಧರಿಸಿ, ಸೊಂಟಕ್ಕೆ ಹಳದಿ ಶಾಲು ಕಟ್ಟಿಕೊಂಡು ಮತ್ತು ಸುಂದರವಾದ ‘ಗಾಗ್ರಾ’ ಲಂಗ ತೊಟ್ಟು, ಜೈನಿಲ್ ಮೆಹ್ತಾ ಆ ಹಾಡಿಗೆ ಲಯಬದ್ಧವಾಗಿ ಡಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.

ವೈರಲ್ ವಿಡಿಯೋ

ವೈರಲ್ ವಿಡಿಯೋ

  • Share this:
‘ಪುಷ್ಪಾ: ದಿ ರೈಸ್’ (Puspa The Rise) ಸಿನಿಮಾ ಬಿಡುಗಡೆಯಾಗಿ ತಿಂಗಳುಗಳೇ ಕಳೆದಿದ್ದರೂ, ಅದರ ಹಾಡುಗಳ ಜನಪ್ರಿಯತೆ (Pushpa Songs) ಮಾತ್ರ ಒಂದಿಷ್ಟೂ ಕುಗ್ಗಿಲ್ಲ. ಇಂಟರ್ ನೆಟ್ ಲ್ಲಿ ಈಗಲೂ ಅದರ ಹವಾ ಚಾಲ್ತಿಯಲ್ಲಿದೆ. ಇಂಟರ್‌ನೆಟ್‍ ಕಿಟಕಿಯಲ್ಲೊಮ್ಮೆ ಇಣುಕು ಹಾಕಿದರೆ ಸಾಕು, ಪುಷ್ಪಾ ಸಿನಿಮಾದ ಹಾಡುಗಳ ಬಗೆಬಗೆಯ ರೀಲ್ಸ್ (Reels) ಗಳು ಕಾಣ ಸಿಗುತ್ತವೆ. ಇದೀಗ, ಮುಂಬೈನ ಕೊರಿಯೋಗ್ರಾಫರ್ (choreographer) ಒಬ್ಬರು, ‘ಗಾಗ್ರಾ’ ಧರಿಸಿ ನ್ಯೂಯಾರ್ಕ್ (New york) ಬೀದಿಯಲ್ಲಿ ನೃತ್ಯ ಮಾಡುತ್ತಿರುವ ವಿಡಿಯೋವೊಂದು ಸಾಮಾಜಿಕ ಮಾಧ್ಯಮ ಬಳಕೆದಾರರ ಹೃದಯಕ್ಕೆ ಲಗ್ಗೆ ಇಟ್ಟಿದೆ. ಜೈನಿಲ್ ಮೆಹ್ತಾ (Jainil Mehta) ಎಂಬ ಆ ಕೊರಿಯೋಗ್ರಾಫರ್, ತಮ್ಮ ನೃತ್ಯಕ್ಕೆ ಆಯ್ಕೆ ಮಾಡಿಕೊಂಡಿರುವುದು, ‘ಪುಷ್ಪ: ದಿ ರೈಸ್’ ಸಿನಿಮಾದ ‘ಸಾಮಿ ಸಾಮಿ’ (Saami Saami song) ಹಾಡನ್ನು.

ಜೈನಿಲ್ ಮೆಹ್ತಾ ಅವರು ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿರುವ ಈ ವಿಡಿಯೋಗೆ, “ಸಾಮಿ ಸಾಮಿ ಕೊನೆಗೂ ಹೊರ ಬಂದಿದೆ!!! DUMBO ದಲ್ಲಿ #meninskirts ಮಾಡುತ್ತಿರುವುದು. ಬ್ರೂಕ್ಲಿನ್ ಸಂಪೂರ್ಣವಾಗಿ ಒಂದು ವೈಬ್ ಆಗಿತ್ತು- ಮುಖ್ಯವಾಗಿ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ತೆಗೆಯುತ್ತಿದ್ದ ನೂರಾರು ಜನರ ಮುಂದೆ” ಎಂಬ ಅಡಿಬರಹವನ್ನು ನೀಡಿದ್ದಾರೆ.

ಗಾಗ್ರಾ ಧರಿಸಿ ಸಾಮಿ ಸಾಮಿ ಹಾಡಿಗೆ ಹೆಜ್ಜೆ

‘ಪುಷ್ಪಾ: ದಿ ರೈಸ್’ ಸಿನಿಮಾದ ‘ಸಾಮಿ ಸಾಮಿ’ ಹಾಡನ್ನು ಹಿಂದಿಯಲ್ಲಿ ಗಾಯಕಿ ಸುನಿಧಿ ಚೌಹಾಣ್‌ ಅವರು ಹಾಡಿದ್ದಾರೆ. ಬ್ರೂಕ್ಲಿನ್‍ನ DUMBO (ಡೌನ್ ಅಂಡರ್ ದ ಮ್ಯಾನ್‍ಹ್ಯಾಟನ್ ಬ್ರಿಡ್ಜ್ ಓವರ್‌ಪಾಸ್‌) ನಲ್ಲಿ , ಬಿಳಿ ಶರ್ಟ್ ಧರಿಸಿ, ಸೊಂಟಕ್ಕೆ ಹಳದಿ ಶಾಲು ಕಟ್ಟಿಕೊಂಡು ಮತ್ತು ಸುಂದರವಾದ ‘ಗಾಗ್ರಾ’ ಲಂಗ ತೊಟ್ಟು, ಜೈನಿಲ್ ಮೆಹ್ತಾ ಆ ಹಾಡಿಗೆ ಲಯಬದ್ಧವಾಗಿ ಡಾನ್ಸ್ ಮಾಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು.
ನೋಡಿದ ಜನ ಏನಂದುಕೊಳ್ಳುತ್ತಾರೆ ಎಂಬ ಬಗ್ಗೆ ತಲೆ ಕೆಡಿಸಿಕೊಳ್ಳದೆ, ಮನಸಾರೆ ಹಾಡಿಗೆ ಹೆಜ್ಜೆ ಹಾಕಿರುವ 22 ವರ್ಷದ ಈ ಯುವಕನ ಬಗ್ಗೆ ಬಹಳಷ್ಟು ಮಂದಿ ಇನ್‍ಸ್ಟಾಗ್ರಾಂ ಬಳಕೆದಾರರು ಮೆಚ್ಚುಗೆ ಸೂಚಿಸಿದ್ದಾರೆ.

ನೆಟ್ಟಿಗರಿಂದ ಮೆಚ್ಚುಗೆಯ ಕಮೆಂಟ್

ಈ ವಿಡಿಯೋಗೆ , “ಆತ್ಮವಿಶ್ವಾಸ” ಎಂದು ಒಬ್ಬ ಇನ್‍ಸ್ಟಾಗ್ರಾಂ ಬಳಕೆದಾರರು ಪ್ರತಿಕ್ರಿಯೆ ನೀಡಿದ್ದರೆ, “ನೀವು ಲಯ, ಬೆಡಗು, ಶೃಂಗಾರ, ನಯ ಎಲ್ಲವನ್ನು ಹೊಂದಿದ್ದೀರಿ.. ಸಂಪೂರ್ಣ ಪ್ರದರ್ಶಕ.. 60 ಸೆಕೆಂಡ್ ಸಾಕಾಗಲಿಲ್ಲ, ನಿಜ” ಎಂದು ಆ ವಿಡಿಯೋ ಇನ್ನಷ್ಟು ಉದ್ದವಾಗಿದ್ದರೆ ಚೆನ್ನಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:  Viral Video: ಈ ಮಹಿಳಗೆ ಹುಚ್ಚೇನಾದ್ರೂ ಹಿಡಿದಿದೆಯಾ? ಆಕೆ ಮಾಡಿದ ಕೆಲಸ ನೋಡಿದ್ರೆ ನೀವು ಬೈತಿರಿ!

ಈ ಹಿಂದೆ ಇನ್‍ಸ್ಟಾಗ್ರಾಂ ಪೋಸ್ಟ್ ಒಂದರಲ್ಲಿ, ತಮ್ಮ ಪಯಣದ ಬಗ್ಗೆ ಹೇಳಿಕೊಂಡಿದ್ದ ಜೈನಿಲ್ ಮೆಹ್ತಾ, ತಾನು ಚಿಕ್ಕ ವಯಸ್ಸಿನಲ್ಲಿಯೇ ಲಂಗ ಹಾಕಿಕೊಂಡು ಕುಣಿಯಲು ಆರಂಭಿಸಿದ್ದೆ ಎಂದು ತಿಳಿಸಿದ್ದರು.
“ನನಗೆ 7 ವರ್ಷ ವಯಸ್ಸಿದ್ದಾಗ ಡ್ಯಾನ್ಸ್‌ ಪಯಣವನ್ನು ಆರಂಭಿಸಿದೆ. ನನ್ನ ತಾಯಿಯ ದುಪಟ್ಟಾ ಮತ್ತು ಲಂಗಗಳನ್ನು ಕದ್ದು, ಕೋಣೆಯಲ್ಲಿ ಬಾಗಿಲು ಮುಚ್ಚಿಕೊಂಡು, ರೋಮ್ಯಾಂಟಿಕ್ ಸಂಗೀತಕ್ಕೆ ಡ್ಯಾನ್ಸ್‌ ಮಾಡುತ್ತಿದ್ದೆ” ಎಂದು ಅವರು ಹೇಳಿದ್ದರು.

ಡ್ಯಾನ್ಸ್ ಸುರಕ್ಷತೆಯ ಭಾವ ನೀಡಿದೆ

“ನಾನು ಏಕೆ ನನ್ನನ್ನು ಲಾಕ್ ಮಾಡಿಕೊಳ್ಳುತ್ತಿದ್ದೆ ಎಂಬುವುದು ಯಾವತ್ತೂ ತಿಳಿದುಕೊಳ್ಳಲಿಲ್ಲ- ಬಹುಶ: ಪುರುಷರು ಸೊಂಟದ ಸುತ್ತ ಒಂದು ಲಂಗ ಅಥವಾ ಬಟ್ಟೆ ಕಟ್ಟಿಕೊಳ್ಳುವುದು ವಿಚಿತ್ರವಾಗಿರುತ್ತದೆ ಎಂದು ನನಗೆ ಅನಿಸಿದ್ದಕ್ಕಿರಬಹುದು. ನನ್ನ ಡ್ಯಾನ್ಸ್‌ಗಳಲ್ಲಿ ಲಂಗಗಳನ್ನು ಧರಿಸಲು ಆರಂಭಿಸಿದೆ. ಡ್ಯಾನ್ಸ್‌ ನನಗೆ ಯಾವಾಗಲೂ ಸುರಕ್ಷತೆಯ ಅನುಭವವನ್ನು ನೀಡಿದೆ ಮತ್ತು ನನ್ನ ಭಯ ಹಾಗೂ ಸಮಾಜವನ್ನು ಎದುರಿಸಲು ನನ್ನ ಪಾಲಿಗೆ ಅದು ಪರಿಪೂರ್ಣವಾದ ಮಾರ್ಗವಾಗಿದೆ” ಎಂದು ಜೈನಿಲ್ ಮೆಹ್ತಾ ತಮ್ಮ ಪೋಸ್ಟ್‌ನಲ್ಲಿ ಹೇಳಿಕೊಂಡಿದ್ದರು.

ಡ್ಯಾನ್ಸನ್ನು ವೃತ್ತಿಪರವಾಗಿ ಅಭ್ಯಾಸ ಮಾಡಲು, ತಾನು ಲಾಸ್ ಏಂಜೆಲೀಸ್ ಗೆ ಹೋಗಿರುವುದಾಗಿ ಅವರು ತಮ್ಮ ಮತ್ತೊಂದು ಪೋಸ್ಟ್‌ನಲ್ಲಿ ತಿಳಿಸಿದ್ದರು. “ನಾನು ಮಿಶ್ರ ಪ್ರಕಾರಗಳನ್ನು ಕಲಿತಿದ್ದರೂ, ಲಂಗ ಧರಿಸುವುದರ ಆಲೋಚನೆಯನ್ನು ಮಾತ್ರ ಯಾವತ್ತೂ ತ್ಯಜಿಸಲಿಲ್ಲ. ನನ್ನ ಶಿಕ್ಷಣದ ಸಮಯದಲ್ಲಿ, ನನ್ನ ಆಲೋಚನೆ ಮತ್ತು ಮಾತಿನಲ್ಲಿ ಹೆಚ್ಚು ಮುಕ್ತವಾಗಿರುವುದನ್ನು ಕಲಿತೆ.

ಇದನ್ನೂ ಓದಿ:  Viral Video: ಬೆಕ್ಕಿನ ಜೊತೆ ಫ್ರೆಂಡ್​ಶಿಪ್ ಮಾಡೋಕೆ ನಾಯಿಯ ಕಸರತ್ತು..! ಏನೇನು ಮಾಡುತ್ತೆ ನೋಡಿ

ಚಿಂತೆಗಳಿಲ್ಲದ ಮಗು ಆಗಬೇಕು

ಹಾಗಾಗಿ, ಲಂಗ ಧರಿಸುವುದರ ಕುರಿತ ನನ್ನ ಭಯವನ್ನು ಎದುರಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲು ನಿರ್ಧರಿಸಿದೆ ಮತ್ತು ವಿಡಿಯೋಗಳನ್ನು ಪೋಸ್ಟ್ ಮಾಡಲು ಆರಂಭಿಸಿದೆ. ನಾನು ‘ಮತ್ತೆ ಆ ಚಿಂತೆ ಇಲ್ಲದ ಮಗು ಆಗಬೇಕು’ ಎಂದು ಆಲೋಚಿಸಿದೆ” ಎಂದು ಜೈನಿಲ್ ಮೆಹ್ತಾ ಬರೆದುಕೊಂಡಿದ್ದಾರೆ.
Published by:Mahmadrafik K
First published: