• Home
  • »
  • News
  • »
  • trend
  • »
  • Diet Plan: ಸಣ್ಣಗಾಗ್ಬೇಕು ಅಂತ ರಾತ್ರಿ ಊಟ ಬಿಡ್ತಿದೀರಾ? ಇದನ್ನ ಮೊದಲು ಓದಿ, ಆಮೇಲೆ ನಿಮ್ಮಿಷ್ಟ !

Diet Plan: ಸಣ್ಣಗಾಗ್ಬೇಕು ಅಂತ ರಾತ್ರಿ ಊಟ ಬಿಡ್ತಿದೀರಾ? ಇದನ್ನ ಮೊದಲು ಓದಿ, ಆಮೇಲೆ ನಿಮ್ಮಿಷ್ಟ !

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ತಿನ್ನುವುದು ಕಮ್ಮಿ ಮಾಡಿದ್ರೆ ದೇಹದ ತೂಕ ತಾನಾಗೇ ಕಮ್ಮಿಯಾಗುತ್ತೆ ಎನ್ನುವುದು ಅನೇಕರ ಲೆಕ್ಕಾಚಾರ. ಅದಕ್ಕೇ ಡಯೆಟ್ ಅಂದ್ಕೂಡ್ಲೇ ಮೊದಲು ರಾತ್ರಿ ಊಟಕ್ಕೆ ಕತ್ತರಿ ಬೀಳುತ್ತೆ. ಆದ್ರೆ, ರಾತ್ರಿ ಊಟ ಬಿಟ್ರೆ ನಿಜವಾಗ್ಲೂ ಸಣ್ಣಗಾಗ್ತಾರಾ? ಇದಕ್ಕೆ ವೈದ್ಯರು ಏನಂತಾರೆ..ಫುಲ್ ಡೀಟೆಲ್ಸ್ ಓದಿ...

ಮುಂದೆ ಓದಿ ...
  • Share this:

Diet Plan: ತೂಕ ಕಳೆದುಕೊಳ್ಳುವ ನಿಟ್ಟಿನಲ್ಲಿ ಆಹಾರ ತ್ಯಜಿಸುವುದನ್ನು ಬಹುತೇಕರು ಅಳವಡಿಸಿಕೊಂಡಿರುತ್ತಾರೆ. ಅದರಲ್ಲೂ ರಾತ್ರಿಯ ಹೊತ್ತು ಮಲಗುವ ಮುನ್ನ ತಮ್ಮ ಕ್ಯಾಲೊರಿ ಬಳಕೆಯನ್ನು ಕಡಿಮೆ ಮಾಡಲು ಊಟವನ್ನು ಬಿಡುವ ಅನೇಕರಿದ್ದಾರೆ. ಮಧ್ಯಾಹ್ನದ ಭೋಜನ ಮತ್ತು ರಾತ್ರಿ ಊಟದ ಸೇವನೆ ಆರೋಗ್ಯಕರ ಹಸಿವನ್ನು ಉಳಿಸಿಕೊಳ್ಳಲು ನೆರವಾಗುತ್ತದೆ. ಆದ್ದರಿಂದ ಸರಿಯಾದ ಸಮಯಕ್ಕೆ ಸೂಕ್ತವಾದ ಆಹಾರ ಸೇವನೆಯೊಂದಿಗೆ ಭೋಜನ ಮಾಡುವುದು ನಿಯಮ. ಆದಷ್ಟು ಲಘು ಆಹಾರ ತೆಗೆದುಕೊಳ್ಳುವುದನ್ನು ಸಲಹೆ ನೀಡಲಾಗುತ್ತದೆ. ಇದು ಸರಾಗ ಜೀರ್ಣಕ್ರಿಯೆಗೆ ಅನುಕೂಲಕಾರಿ.


ತೂಕ ಇಳಿಕೆ: ನೀವು ರಾತ್ರಿಯ ಊಟ ಬಿಡುವಿರಾ?


ತ್ವರಿತವಾಗಿ ತೂಕ ಇಳಿಸಿಕೊಳ್ಳಲು ದಿನದ ಪ್ರಮುಖ ಊಟವನ್ನು ಬಿಡಬೇಡಿ ಎಂದು ಪೌಷ್ಟಿಕ ತಜ್ಞರಾದ ಲೋನ್​ವೀತ್ ಬಾತ್ರಾ ತಮ್ಮ ಇನ್​ಸ್ಟಾಗ್ರಾಂ ಪೋಸ್ಟ್​​​ನಲ್ಲಿ ಹೇಳಿದ್ದಾರೆ. ಅನೇಕ ಜನರು ಊಟವನ್ನು ಲಘು ಉಪಾಹಾರ ಅಥವಾ ಸಲಾಡ್‌ನೊಂದಿಗೆ ಮುಗಿಸುತ್ತಾರೆ. ಇದು ಕ್ಯಾಲೊರಿ ಕಡಿತಕ್ಕೆ ಸಹಾಯ ಮಾಡುತ್ತದೆ, ಆದರೆ ಇದು ದೀರ್ಘಾವಧಿಯಲ್ಲಿ ಅಷ್ಟೇನೂ ಪರಿಣಾಮಕಾರಿಯಾಗುವುದಿಲ್ಲ. ಈ ಆಹಾರ ಶೈಲಿಯನ್ನು ತ್ಯಜಿಸಿ.


ಹಸಿವಿನ ಹಾರ್ಮೋನುಗಳನ್ನು ನೀವು ಗಮನಿಸಲೇಬೇಕು. ಹಸಿದುಕೊಂಡು ತೂಕವನ್ನು ಕಳೆದುಕೊಳ್ಳಲು ಊಟವನ್ನು ಮರೆಯಬಾರದು. ಆರೋಗ್ಯವಂತ ಮನುಷ್ಯನಿಗೆ ಹಸಿವಿನ ಹಾರ್ಮೋನ್ ಬಹಳ ಮುಖ್ಯವಾಗುತ್ತದೆ. ಆದ್ದರಿಂದ ಹಸಿವಿನ ಹಾರ್ಮೋನ್​ಗಳನ್ನು ನಿರ್ಲಕ್ಷಿಸಬೇಡಿ. ಸೂಕ್ತ ಆಹಾರದೊಂದಿಗೆ ಉಪಚರಿಸಿ.


ಊಟವನ್ನು ಬಿಡುವುದು ಅದರಲ್ಲೂ ರಾತ್ರಿಯ ಭೋಜವನ್ನು ತ್ಯಜಿಸುವುದು ತೂಕ ಇಳಿಕೆಗೆ ಸರಿಯಾದ ಮಾರ್ಗವಲ್ಲ. ಆ ಮೂಲಕ ಅನಾರೋಗ್ಯಕರ ಆಹಾರ ಶೈಲಿ ಬೆಳೆಸಿಕೊಳ್ಳುವ ಸಾಧ್ಯತೆಗಳಿರುತ್ತದೆ. ಇದರಿಂದ ರಾತ್ರಿ ನಿದ್ದೆ ಬಾರದೇ ಕುರುಕಲು ತಿನ್ನುವ ಮೂಲಕ ತೂಕ ಹೆಚ್ಚುವ ಸಾಧ್ಯತೆಗಳು ದಟ್ಟವಾಗಿದೆ. ಅಲ್ಲದೇ ನಿದ್ದೆಯ ವ್ಯತ್ಯಾಸವೂ ಕೂಡ ನಿಮ್ಮನ್ನು ಅತಿ ತೂಕದ ವ್ಯಕ್ತಿಗಳನ್ನಾಗಿಸಬಹುದು.


ರಾತ್ರಿ ಊಟಕ್ಕೆ ಸೂಕ್ತ ಸಮಯ ಯಾವುದು?


ಆಹಾರ ತಜ್ಞರ ಪ್ರಕಾರ, ನೀವು ಮಲಗುವ ಮುನ್ನ ಮೂರು ಗಂಟೆಗಳ ಮೊದಲು ರಾತ್ರಿಯ ಊಟವನ್ನು ಮುಗಿಸಬೇಕು. ಉತ್ತಮ ಆರೋಗ್ಯಕ್ಕಾಗಿ ಮಲಗುವ ಸಮಯ ಮತ್ತು ಭೋಜನದ ನಡುವೆ ಮೂರು ಗಂಟೆಗಳ ಅಂತರವನ್ನು ಕಾಪಾಡಿಕೊಳ್ಳಲು ಶಿಫಾರಸು ಮಾಡಲಾಗಿದೆ. ಈ ನಿಯಮವನ್ನು ನೀವು ತಪ್ಪದೇ ಅಳವಡಿಸಿಕೊಂಡರೆ ರಾತ್ರಿಯ ಊಟವನ್ನು ಬಿಡುವ ಅಗತ್ಯವಿಲ್ಲ. ಜೊತೆಗೆ ರಾತ್ರಿಯ ಊಟವನ್ನು ಔಷಧೋಪಚಾರದಂತೆ ಮಾಡಿದರೆ ದೇಹಕ್ಕೆ ಶಕ್ತಿಯೂ ಲಭ್ಯವಾಗುತ್ತದೆ.


ರಾತ್ರಿಯ ಊಟದಲ್ಲಿ ಏನೇನಿರಬೇಕು?


ಬಾತ್ರರವರು ಇನ್ನಿತರ ಆರೋಗ್ಯಕರ ಅಂಶಗಳನ್ನು ಸಹ ಉಲ್ಲೇಖಿಸಿದ್ದಾರೆ.ಭೋಜನದಲ್ಲಿ ಕಿಚಡಿಯನ್ನು ತಪ್ಪದೇ ಅಳವಡಿಸಿಕೊಳ್ಳಬೇಕು. ಇದು ಹೆಚ್ಚು ಮಸಾಲೆಭರಿತವಾಗಿರದೇ ಹಗುರವಾಗಿರುತ್ತದೆ ಮತ್ತು ನಾರಿನಂಶ ಅಧಿಕವಾಗಿರುತ್ತದೆ. ಆದ್ದರಿಂದ ಇದು ನಿಮಗೆ ಹೆಚ್ಚು ಸಮಯದವರೆಗೆ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಜೊತೆಗೆ ಸರಾಗ ಜೀರ್ಣಕ್ರಿಯೆಗೂ ಸಹಕಾರಿ.
ರೋಟಿಯೊಂದಿಗೆ ದಾಲ್ ಮತ್ತು ಅನ್ನ ಅಥವಾ ಚಿಕನ್ ಟಿಕ್ಕಾ ಸೇರಿಸಿಕೊಳ್ಳುವುದು ನಿಮಗೆ ಊಟದ ಸಂಪೂರ್ಣತೆ ನೀಡಬಹುದು. ಇವುಗಳು ಮಧ್ಯರಾತ್ರಿಯಲ್ಲಿ ಚಿಪ್ಸ್, ಚಾಕೊಲೇಟ್‌ಗಳು ಮತ್ತು ಇತರ ಅನಾರೋಗ್ಯಕರ ಆಹಾರಗಳನ್ನು ಜಗಿದು ಚಪ್ಪರಿಸುವುದನ್ನು ತಪ್ಪಿಸುತ್ತದೆ. ಮಧ್ಯರಾತ್ರಿ ಅಥವಾ ಬೆಳಗ್ಗೆ ಹುಳಿತೇಗು ಮತ್ತು ಇತರ ಜಠರ ಕರುಳಿನ ತೊಂದರೆಗಳನ್ನು ತಪ್ಪಿಸಲು ಸಣ್ಣ ಪೌಷ್ಟಿಕ ಭೋಜನವನ್ನು ಸೇವಿಸಿ.


Published by:Soumya KN
First published: