Shaadi.Com: ಇನ್ಮುಂದೆ ಶಾದಿ ಡಾಟ್​​ ಕಾಮ್​ನಲ್ಲಿ ಈ ಆಯ್ಕೆ ಸಿಗಲ್ಲ!

ಈ ವೆಬ್​ಸೈಟ್​ನಲ್ಲಿ ಈ ಮೊದಲು ತಮ್ಮ ಪಾರ್ಟ್ನರ್​ ಬಣ್ಣವನ್ನು ಆಯ್ಕೆ ಮಾಡಲೂ ಅವಕಾಶ ನೀಡಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಕಪ್ಪು ಬಣ್ಣದ ವ್ಯಕ್ತಿ ಜಾರ್ಜ್​ ಫ್ಲಾಯಿಡ್​ ಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಅಮೆರಿಕದಾದ್ಯಂತ ಭಾರೀ ಪ್ರತಿಭಟನೆಗಳು ಕೂಡ ನಡೆದಿದ್ದವು.

news18-kannada
Updated:June 25, 2020, 11:55 AM IST
Shaadi.Com: ಇನ್ಮುಂದೆ ಶಾದಿ ಡಾಟ್​​ ಕಾಮ್​ನಲ್ಲಿ ಈ ಆಯ್ಕೆ ಸಿಗಲ್ಲ!
ಈ ವೆಬ್​ಸೈಟ್​ನಲ್ಲಿ ಈ ಮೊದಲು ತಮ್ಮ ಪಾರ್ಟ್ನರ್​ ಬಣ್ಣವನ್ನು ಆಯ್ಕೆ ಮಾಡಲೂ ಅವಕಾಶ ನೀಡಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಕಪ್ಪು ಬಣ್ಣದ ವ್ಯಕ್ತಿ ಜಾರ್ಜ್​ ಫ್ಲಾಯಿಡ್​ ಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಅಮೆರಿಕದಾದ್ಯಂತ ಭಾರೀ ಪ್ರತಿಭಟನೆಗಳು ಕೂಡ ನಡೆದಿದ್ದವು.
  • Share this:
ವಧುವರರ ಅನ್ವೇಷಣಾ ಕೇಂದ್ರ ಶಾದಿ ಡಾಟ್​ ಕಾಮ್​ನಲ್ಲಿ ಇನ್ನುಮುಂದೆ ಚರ್ಮದ ಬಣ್ಣದ ಆಯ್ಕೆ ಸಿಗುವುದಿಲ್ಲ! ಬಳಕೆ ದಾರರಿಂದ ಭಾರೀ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಶಾದಿ ಡಾಟ್​ ಕಾಮ್​ ಈ ಆಯ್ಕೆಯನ್ನು ತೆಗೆದು ಹಾಕಿದೆ.

ಈ ವೆಬ್​ಸೈಟ್​ನಲ್ಲಿ ಈ ಮೊದಲು ತಮ್ಮ ಪಾರ್ಟ್ನರ್​ ಬಣ್ಣವನ್ನು ಆಯ್ಕೆ ಮಾಡಲೂ ಅವಕಾಶ ನೀಡಲಾಗಿತ್ತು. ಆದರೆ, ಇತ್ತೀಚೆಗಷ್ಟೇ ಕಪ್ಪು ಬಣ್ಣದ ವ್ಯಕ್ತಿ ಜಾರ್ಜ್​ ಫ್ಲಾಯಿಡ್​ ಹತ್ಯೆ ಪ್ರಕರಣ ಭಾರೀ ಚರ್ಚೆಗೆ ಕಾರಣವಾಗಿತ್ತು. ಅಲ್ಲದೆ, ಅಮೆರಿಕದಾದ್ಯಂತ ಭಾರೀ ಪ್ರತಿಭಟನೆಗಳು ಕೂಡ ನಡೆದಿದ್ದವು. ಅಲ್ಲದೆ, ಭಾರತದ ಅನೇಕ ಸೆಲಬ್ರೆಟಿಗಳು ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.

ಇದನ್ನೂ ಓದಿ: ಮಗು ಜನಿಸಿದ ನಂತರ ತಾಯಿಗೆ ಬೆನ್ನು ನೋವು ಬರೋದೇಕೆ?; ಇಲ್ಲಿದೆ ಮಾಹಿತಿ

ಈ ಬೆಳವಣಿಗೆ ಬೆನ್ನಲ್ಲೇ ಅನೇಕ ಬಳಕೆದಾರರು ಶಾದಿ ಡಾಟ್​ ಕಾಮ್​ನಲ್ಲಿ ಚರ್ಮದ ಬಣ್ಣದ ಆಯ್ಕೆ ಇಟ್ಟಿರುವ ಬಗ್ಗೆ ವಿರೋಧ ವ್ಯಕ್ಯಪಡಿಸಿದ್ದರು. ಹೀಗಾಗಿ, ಈ ಆಯ್ಕೆಯನ್ನು ತೆಗೆದು ಹಾಕಲಾಗಿದೆ.

ಇದನ್ನೂ ಓದಿ: ನಿಮ್ಮ ಬಾಯ್​ಫ್ರೆಂಡ್​ ಈ ರೀತಿ ಮಾಡುತ್ತಿದ್ದಾನಾ?; ಹಾಗಿದ್ರೆ ನಿಮ್ಮ ಲವ್​ಸ್ಟೋರಿ ಅಂತ್ಯವಾಗಬಹುದು!

ಚರ್ಮದ ಬಣ್ಣದ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವುದು ಇಂದು ನಿನ್ನೆಯದಲ್ಲ. ಅನೇಕ ಬಾಲಿವುಡ್​ ಹೀರೋಗಳು ಫೇರ್​ನೆಸ್​ ಕ್ರೀಮ್​ನಲ್ಲಿ ಪಾಲ್ಗೊಳ್ಳುತ್ತಿರುವುದು ಚರ್ಚೆ ಆಗುತ್ತಲೇ ಇದೆ.
First published:June 25, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading