Motivation: ಇಳಿವಯಸ್ಸಲ್ಲೂ ಕೃಷಿ ಬಗ್ಗೆ ಬುಕ್​ ಬರಿತಿದ್ದಾರಂತೆ ಈ ರೈತ, ಏನ್​ ಹುಮ್ಮಸ್ಸು ಅಲ್ವಾ!

ಹುಕುಂಚಂದ್ ಪಾಟಿದಾರ್‌ 2018ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ಹಳ್ಳಿ ಮಾನ್ಪುರದಲ್ಲಿ ರಾಸಾಯನಿಕಗಳನ್ನು ಬಳಸದೇ ಸಂಪೂರ್ಣ ಸಾವಯವ ಕೃಷಿ ಮಾಡಿದ್ದರ ಸಲುವಾಗಿ ಪಾಟಿದಾರ್‌ಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿತ್ತು.

ರೈತ ಹುಕುಂಚಂದ್ ಪಾಟಿದಾರ್‌

ರೈತ ಹುಕುಂಚಂದ್ ಪಾಟಿದಾರ್‌

  • Share this:
ವಿದ್ಯಾಭ್ಯಾಸ (Education) ಮೊಟಕುಗೊಳಿಸಿ ಕಾಲೇಜಿಗೆ ಹೋಗದೆ ಇಲ್ಲೊಬ್ಬ ವ್ಯಕ್ತಿ ಕೃಷಿಯಲ್ಲಿ(Agriculture) ಮಹತ್ತರ ಸಾಧನೆ ಮಾಡಿದ್ದಾರೆ. 10ನೇ ತರಗತಿಯಲ್ಲಿದ್ದಾಗ ಶಾಲೆ ಬಿಟ್ಟು ಇವರು ಕೃಷಿ ಕಡೆಗೆ ವಾಲಿಬಿಟ್ಟರು. ಆ ನಂತರ ಅವರು ಮಾಡಿದೆಲ್ಲಾ ಬರೀ (Achievement) ಸಾಧನೆ. ಅವರ ಸಾಧನೆ ಪ್ರಸ್ತುತ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಪಠ್ಯಕ್ರಮವನ್ನು ಸತ್ವಹ ತಾವೇ ತಯಾರಿ ಮಾಡಿಕೊಡುವಷ್ಟರ ಮಟ್ಟಿಗೆ ದೊಡ್ಡ ಮಟ್ಟದಲ್ಲಿದೆ. ಹಾಗಾದರೆ ಯಾರು ಆ ರೈತ,(Farmer) ಯಾವ ಊರಿನವರು ಎಂದು ತಿಳಿಯೋಣ.

ಸಾವಯವ ಕೃಷಿಯ ಪಠ್ಯಕ್ರಮ
ಹೌದು ನಾವಿಷ್ಟು ಹೊತ್ತು ಹೇಳಿದ್ದು ರಾಜಸ್ಥಾನದ ಝಲಾವರ್‌ನ ರೈತ ಹುಕುಂಚಂದ್ ಪಾಟಿದಾರ್‌ ಬಗ್ಗೆ. 10ನೇ ತರಗತಿಯಲ್ಲಿದ್ದಾಗ ತಮ್ಮ ವಿದ್ಯಾಭ್ಯಾಸ ಮೊಟಕುಗೊಳಿಸಿ ಹೊಲದಲ್ಲಿ ಕೆಲಸ ಮಾಡಲು ಪ್ರಾರಂಭಿಸಿದರು. ಕೃಷಿಯಲ್ಲಿ ಹೆಚ್ಚು ಒಲವು ಇದ್ದಿದ್ದ ಪಾಟಿದಾರ್‌ ಅದರಲ್ಲಿಯೇ ಸಾಧನೆ ಮಾಡಿದ್ದಾರೆ. ಸದ್ಯ ಹುಕುಂಚಂದ್ ಪಾಟಿದಾರ್‌ ವಿಜ್ಞಾನಿಗಳು ಮತ್ತು ಶಿಕ್ಷಣತಜ್ಞರೊಂದಿಗೆ ತಂಡದಲ್ಲಿ ಕೃಷಿ ವಿಶ್ವವಿದ್ಯಾನಿಲಯಗಳಿಗೆ ಅಗತ್ಯವಾಗಿರುವ ಸಾವಯವ ಕೃಷಿಯ ಪಠ್ಯಕ್ರಮವನ್ನು ರಚಿಸಲು ಸಹಾಯ ಮಾಡುತ್ತಿದ್ದಾರೆ.

ಪಾಟಿದಾರ್‌ಗೆ ಪದ್ಮ ಶ್ರೀ ಪ್ರಶಸ್ತಿ
ಇದಷ್ಟೇ ಅಲ್ಲದೇ ಹುಕುಂಚಂದ್ ಪಾಟಿದಾರ್‌ 2018ರಲ್ಲಿ ಪದ್ಮ ಶ್ರೀ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ತಮ್ಮ ಹಳ್ಳಿ ಮಾನ್ಪುರದಲ್ಲಿ ರಾಸಾಯನಿಕಗಳನ್ನು ಬಳಸದೇ ಸಂಪೂರ್ಣ ಸಾವಯವ ಕೃಷಿ ಮಾಡಿದ್ದರ ಸಲುವಾಗಿ ಪಾಟಿದಾರ್‌ಗೆ ಪದ್ಮ ಶ್ರೀ ಪ್ರಶಸ್ತಿ ಲಭಿಸಿತ್ತು. ಪಾಟೀದಾರ್ ಸಾವಯವ ಬೆಳೆಗಳನ್ನು ಬೆಳೆಯುವಲ್ಲಿ ನಿಸ್ಸೀಮರು. ಹಾಗಾಗಿ ಇಂಡಿಯನ್ ಕೌನ್ಸಿಲ್ ಫಾರ್ ಅಗ್ರಿಕಲ್ಚರ್ ರಿಸರ್ಚ್ ಅವರನ್ನು ಪಠ್ಯಕ್ರಮ ರಚಿಸಲು ಆಯ್ಕೆ ಮಾಡಿದೆ. ಇವರು ಕಿತ್ತಳೆ , ಈರುಳ್ಳಿ, ಕೊತ್ತಂಬರಿ, ಕಾಳುಗಳು ಮತ್ತು ಸೋಂಪನ್ನು ಸಾವಯವ ಕೃಷಿ ಮಾಡುತ್ತಾರೆ. ಇವರು ಬೆಳೆದ ಬಹುಪಾಲು ಕೃಷಿ ಉತ್ಪನ್ನಗಳನ್ನು ಯುರೋಪ್‌ಗೆ ರಫ್ತು ಮಾಡಲಾಗುತ್ತಿದೆ.

ಇದನ್ನೂ ಓದಿ: Agritourism: ರೈತರ ಬಾಳು ಬೆಳಗಿದ ಕೃಷಿ ಪ್ರವಾಸೋದ್ಯಮದ ಪಿತಾಮಹ ಇವರೇ..! ಇವ್ರ ಪ್ಲ್ಯಾನ್‌ಗೆ ಹಾಟ್ಸ್‌ಆಫ್​

ರಾಸಾಯನಿಕ ಬಳಕೆ ಬಗ್ಗೆ ಜಾಗೃತಿ
ಮಣ್ಣಿಗೆ ಯಾವುದೇ ರಾಸಾಯನಿಕ ಬೆರೆಸದೆ, ಪ್ರಕೃತಿಯಲ್ಲಿ ಸಿಗುವ ತ್ಯಾಜ್ಯ, ಇತರ ವಸ್ತುಗಳನ್ನೇ ಬಳಸಿಕೊಂಡು ವ್ಯವಸಾಯ ಮಾಡುವುದನ್ನು ಅನುಸರಿಸಿದ್ದೇನೆ. ಇದರಿಂದಾಗಿ ನನ್ನ ಕೃಷಿ ಭೂಮಿಯು ಫಲವತ್ತಾಗಿದೆ” ಎಂದು ಪಾಟಿದಾರ್ ಹೇಳಿದ್ದಾರೆ. ಇದರಿಂದ ಮಣ್ಣಿನ ಗುಣಮಟ್ಟಕ್ಕೂ ಧಕ್ಕೆಯಾಗುವುದಿಲ್ಲ, ಪರಿಸರವೂ ಪ್ರಾಂಜಲವಾಗಿರುತ್ತದೆ. ಈ ಕೃಷಿ ಪದ್ಧತಿಯಲ್ಲಿ ಬೆಳೆದ ಧಾನ್ಯ, ಹಣ್ಣು ಹಾಗೂ ತರಕಾರಿಗಳು ನೈಸರ್ಗಿಕ ಪೌಷ್ಟಿಕಾಂಶಗಳಿಂದ ಶ್ರೀಮಂತವಾಗಿರುತ್ತವೆ. ಭೂಮಿಯ ಪರಿಸ್ಥಿತಿಗಳು ಬೆಳವಣಿಗೆಗೆ ಹೆಚ್ಚು ಅನುಕೂಲಕರವಾಗಿವೆ. ಮಣ್ಣು ಫಲವತ್ತಾಗಲು ನೈಸರ್ಗಿಕವಾಗಿ ಮಣ್ಣಿನಲ್ಲಿರುವ ಸೂಕ್ಷ್ಮಜೀವಿಗಳು ಮತ್ತು ಕೀಟಗಳು ಅವಶ್ಯಕವಾಗಿವೆ. ಹಾಗಾಗಿ ಅದನ್ನು ರಾಸಾಯನಿಕಗಳನ್ನು ಸಿಂಪಡಿಸಿ ಕೊಲ್ಲಬಾರದು ಎಂದಿದ್ದಾರೆ.

ಪಂಚಗವ್ಯ, ಅಥವಾ ಹಸುಗಳಿಂದ ಪಡೆದ ಗೊಬ್ಬರಗಳು ಮಣ್ಣನ್ನು ಪೋಷಿಸಿ ಮತ್ತು ಬೆಳೆಗಳನ್ನು ಆರೋಗ್ಯಕರವಾಗಿರಿಸುತ್ತವೆ ಎಂದಿದ್ದಾರೆ. ರಾಜಸ್ಥಾನದ ನಾಲ್ಕು ಕೃಷಿ ವಿಶ್ವವಿದ್ಯಾಲಯಗಳಿಗೆ ಸಾವಯವ ಕೃಷಿಯ ವಿಷಯದ ಬಗ್ಗೆ ಪಾಟಿದಾರ್ ಸಲಹೆ ನೀಡುತ್ತಿದ್ದಾರೆ.

ಪ್ರಾಚೀನ ಗ್ರಂಥ
ಸಾವಯವ ಕೃಷಿ ಮಾಡುವುದರ ಬಗ್ಗೆ ಮತ್ತು ಇನ್ನಿತರ ಕೃಷಿ ಮಾಹಿತಿಗಳನ್ನು ಪಾಟೀದಾರ್ ನೀಡುತ್ತಿದ್ದಾರೆ. ಕೇವಲ ಕೃಷಿ ವಿಶ್ವವಿದ್ಯಾಲಯಗಳು ತೋಟಗಾರಿಕೆ ಮತ್ತು ಕೃಷಿಯಲ್ಲಿ BSc, MSc ಮತ್ತು PhD ಯಂತಹ ಕೋರ್ಸ್‌ಗಳನ್ನು ನಡೆಸುತ್ತವೆ. ಆದರೆ ಇದರ ಜತೆ ನಾನು ಶಾಲೆ, ಕಾಲೇಜಿನಲ್ಲಿ ನೈಸರ್ಗಿಕ ಮತ್ತು ಗೋಮಯ-ಸಂಬಂಧಿತ ಕೃಷಿ ಮಾಡುವುದರ ಬಗ್ಗೆ ಸಲಹೆ ನೀಡುತ್ತೇನೆ ಎಂದು ಪಾಟೀದಾರ್ ಹೇಳಿದ್ದಾರೆ. ನನಗೆ ಗೊತ್ತಿರುವುದು ಸಾಂಪ್ರದಾಯಿಕ ಕೃಷಿ, ಈ ಬೇಸಾಯ ಪದ್ಧತಿ ಪ್ರಾಚೀನ ಗ್ರಂಥಗಳಾದ ಮನುಸ್ಮೃತಿಯಲ್ಲಿ ಉಲ್ಲೇಖವಾಗಿದೆ”. ಅದನ್ನೇ ನಾನು ಉತ್ತಮವಾಗಿ ಅನುಸರಿಸುತ್ತಿದ್ದೇನೆ.

ಇದನ್ನೂ ಓದಿ: PM Kisan: ಈ ರೈತರಿಗೆ ಪಿಎಂ ಕಿಸಾನ್ ಯೋಜನೆಯ ಲಾಭ ಸಿಗಲ್ಲ

ಈ ಎಲ್ಲಾ ಸಲಹೆ, ಮಾಹಿತಿಗಳನ್ನು ಸಮಿತಿಯು ಇನ್ನೆರೆಡು ತಿಂಗಳಲ್ಲಿ ವರದಿ ಸಲ್ಲಿಸುವುದಾಗಿ ಹುಕುಂಚಂದ್ ಪಾಟಿದಾರ್‌ ಹೇಳಿದರು. ಸಾಧನೆ ಮಾಡಲು ಡಿಗ್ರಿ ಪ್ರಮಾಣಪತ್ರವೇ ಬೇಕಂತಿಲ್ಲ, ಸಾಧಿಸುವ ಛಲ, ಮನಸ್ಸು ಇರಬೇಕು ಎಂಬುದನ್ನು ಶ್ರಮಜೀವಿ ರೈತ ಹುಕುಂಚಂದ್ ಪಾಟಿದಾರ್‌ ತೋರಿಸಿಕೊಟ್ಟಿದ್ದಾರೆ
Published by:vanithasanjevani vanithasanjevani
First published: