Viral Video: ಒಂದೇ ಬೈಕ್​ನಲ್ಲಿ 6 ಮಂದಿ ಸವಾರಿ! ಹಾಗಾದ್ರೆ ಕೊನೆಯ ಸವಾರ ಕೂತಿದೆಲ್ಲಿ?

ನಿಯಮದ ಪ್ರಕಾರ ದ್ವಿಚಕ್ರ ವಾಹನವನ್ನು ಓಡಿಸುವ ಚಾಲಕ ಮತ್ತು ಹಿಂಬದಿಯಲ್ಲಿ ಒಬ್ಬ ಸವಾರ ಇದು ಗರಿಷ್ಠ ಆಸನ ಸಾಮರ್ಥ್ಯ ಎಂದು ಹೇಳಬಹುದು. ಮೂರು ಜನರು ಒಂದೇ ಬೈಕ್ ಮೇಲೆ ಕುಳಿತುಕೊಂಡು ಹೋಗುವುದನ್ನು ನಾವು ನೋಡಿಯೇ ಇರುತ್ತೇವೆ, ಆದರೆ ಕೆಲವೊಮ್ಮೆ ನಾಲ್ಕು ಸವಾರರನ್ನು ಸಹ ನಾವು ನೋಡುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಇಲ್ಲೊಂದು ವೀಡಿಯೋ ವೈರಲ್ ಆಗಿದೆ ನೋಡಿ.

ಒಂದೇ ಸ್ಕೂಟರ್ ಮೇಲೆ ಆರು ಮಂದಿ ಸವಾರಿ

ಒಂದೇ ಸ್ಕೂಟರ್ ಮೇಲೆ ಆರು ಮಂದಿ ಸವಾರಿ

  • Share this:
ನಾವು ಸಾಮಾನ್ಯವಾಗಿ ಎಲ್ಲಾದರೂ ಹೊರಗೆ ಹೋಗಬೇಕಾದರೆ ಒಂದೇ ದ್ವಿಚಕ್ರ (Two Wheeler) ವಾಹನದ ಮೇಲೆ ಮೂರು ಜನರು ಕುಳಿತುಕೊಂಡು ಹೊರಟಿರುವುದು ಪೊಲೀಸರ (Police) ಕಣ್ಣಿಗೆ ಬಿದ್ದರೆ ಸಾಕು, ನಮ್ಮ ಬೈಕ್ (Bike) ಅನ್ನು ತಡೆದು ನಿಲ್ಲಿಸಿ ಕೂಡಲೇ ದಂಡ ವಿಧಿಸುವುದನ್ನು ನಾವು ನೋಡಿದ್ದೇವೆ. ಕೆಲವೊಂದು ಸಾರಿಯಂತೂ ದಂಡ ಕಟ್ಟದಿದ್ದಕ್ಕೆ ಬೈಕ್ ನ ಕೀ ಗಳನ್ನು ತೆಗೆದುಕೊಂಡು ಪೊಲೀಸರು ಆ ದ್ವಿಚಕ್ರ ವಾಹನವನ್ನು ನಂತರ ಪೊಲೀಸ್ ಠಾಣೆಗೆ (Police Station) ತೆಗೆದುಕೊಂಡು ಹೋಗಿ ಇರಿಸುವುದನ್ನು ನಾವು ನೋಡಿದ್ದೇವೆ. ಅದರಲ್ಲೂ ನಮ್ಮ ಭಾರತದಲ್ಲಿ ಸಂಚಾರ ನಿಯಮಗಳ ಪ್ರಕಾರ ಒಂದು ದ್ವಿಚಕ್ರ ವಾಹನದ ಮೇಲೆ ಇಬ್ಬರಿಗಿಂತ ಹೆಚ್ಚು ವಯಸ್ಕರು ಕುಳಿತುಕೊಂಡು ಸವಾರಿ ಮಾಡುವಂತಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ.

ಆದರೂ ಸಹ ಕೆಲವರು ಈ ನಿಯಮವನ್ನು ಗಾಳಿಗೆ ತೂರಿ ಒಂದೇ ಗಾಡಿಯ ಮೇಲೆ ಇಬ್ಬರಿಗಿಂತ ಹೆಚ್ಚು ಎಂದರೆ ಮೂವರು ಕುಳಿತುಕೊಂಡು ಹೋಗುವುದನ್ನು ನಾವು ಅನೇಕ ಬಾರಿ ಬಹುತೇಕವಾಗಿ ಎಲ್ಲಾ ನಗರಗಳಲ್ಲಿಯೂ ನೋಡುತ್ತೇವೆ.

ಬರೋಬ್ಬರಿ ಆರು ಮಂದಿ ಒಂದೇ ಬೈಕ್ ನಲ್ಲಿ ಸವಾರಿ
ನಿಯಮದ ಪ್ರಕಾರ ದ್ವಿಚಕ್ರ ವಾಹನವನ್ನು ಓಡಿಸುವ ಚಾಲಕ ಮತ್ತು ಹಿಂಬದಿಯಲ್ಲಿ ಒಬ್ಬ ಸವಾರ ಇದು ಗರಿಷ್ಠ ಆಸನ ಸಾಮರ್ಥ್ಯ ಎಂದು ಹೇಳಬಹುದು. ಮೂರು ಜನರು ಒಂದೇ ಬೈಕ್ ಮೇಲೆ ಕುಳಿತುಕೊಂಡು ಹೋಗುವುದನ್ನು ನಾವು ನೋಡಿಯೇ ಇರುತ್ತೇವೆ, ಆದರೆ ಕೆಲವೊಮ್ಮೆ ನಾಲ್ಕು ಸವಾರರನ್ನು ಸಹ ನಾವು ನೋಡುತ್ತೇವೆ ಎಂದು ಹೇಳಿದರೆ ತಪ್ಪಾಗುವುದಿಲ್ಲ. ಆದರೆ ಇಲ್ಲೊಂದು ವೀಡಿಯೋ ವೈರಲ್ ಆಗಿದೆ ನೋಡಿ, ಅಲ್ಲಿ ಒಂದು ಸ್ಕೂಟರ್ ಮೇಲೆ ಮೂವರಲ್ಲ, ನಾಲ್ವರಲ್ಲ ಬರೋಬ್ಬರಿ ಆರು ಜನರು ಸವಾರಿ ಮಾಡುತ್ತಿದ್ದಾರೆ.

ಕೊನೆಯ ಸವಾರ ಕೂತಿದ್ದೆಲ್ಲಿ
ಹೌದು.. ಇದು ಮಹಾನಗರ ಮುಂಬೈನಲ್ಲಿ ನಡೆದಿದ್ದು, ಒಂದೇ ಸ್ಕೂಟರ್ ಮೇಲೆ ಆರು ಜನರು ಕುಳಿತುಕೊಂಡು ಹೋಗುತ್ತಿರುವ ಒಂದು ವಿಲಕ್ಷಣ ವೀಡಿಯೋವನ್ನು ಸೆರೆಹಿಡಿಯಲಾಗಿದೆ ಮತ್ತು ಅವರಲ್ಲಿ ಕೊನೆಯ ಸವಾರ ಸ್ಥಳವಿರದೆ ಎಲ್ಲಿ ಏರಿ ಕುಳಿತುಕೊಂಡಿದ್ದಾನೆ ಎಂದು ನೀವು ನೋಡಿದರೆ ಒಂದು ಕ್ಷಣ ಶಾಕ್ ಆಗುವುದಂತೂ ಗ್ಯಾರಂಟಿ. ಏಕೆಂದರೆ ಆ ಕೊನೆಯ ಸವಾರ ಕುಳಿತಿದ್ದು ಅವನ ಮುಂದೆ ಕುಳಿತ ಯುವಕನ ಭುಜವನ್ನು ಏರಿ ಕುಳಿತ್ತಿದ್ದಾನೆ.

ಇದನ್ನೂ ಓದಿ: Eudora Okoro: ಕಾಸ್ಮೆಟಿಕ್​ ಸರ್ಜರಿ ಮಾಡಿಸುವ ಯುವತಿಯರೇ ಕೇಳಿ! ವಯಸ್ಸು 60 ಆದ್ರು 30ರಂತೆ ಇದ್ದಾಳೆ ಈ ಲೇಡಿ!

ಕಪ್ಪು ಕುರ್ತಾ ಧರಿಸಿದ ಹುಡುಗನೊಬ್ಬ ಹಿಂಬದಿ ಸವಾರನ ಭುಜದ ಮೇಲೆ ಕುಳಿತಿರುವುದನ್ನು ವೀಡಿಯೋದಲ್ಲಿ ನೋಡಬಹುದು. ಇವರು ಹೋಂಡಾ ಆಕ್ಟಿವಾ ಮೇಲೆ ಕುಳಿತುಕೊಂಡು ಸವಾರಿ ಹೋಗುತ್ತಿರುವ ಹಾಗೆ ಕಂಡು ಬಂದಿದೆ. ಮುಂಬೈ ನಗರದ ಅಂಧೇರಿ ಪಶ್ಚಿಮದ ಸ್ಟಾರ್ ಬಜಾರ್ ಬಳಿ ಒಂದು ಕಾರಿನ ಒಳಗಿನಿಂದ ಈ ವೀಡಿಯೋವನ್ನು ಚಿತ್ರೀಕರಿಸಲಾಗಿದೆ.

ಟ್ವಿಟ್ಟರ್ ನಲ್ಲಿ ಹಂಚಿದ ವಿಡಿಯೋ
ರಮಣದೀಪ್ ಸಿಂಗ್ ಹೋರಾ ಎಂಬ ಸಾಮಾಜಿಕ ಮಾಧ್ಯಮ ಬಳಕೆದಾರರು ಭಾನುವಾರ ಈ ವೀಡಿಯೋವನ್ನು ಟ್ವಿಟ್ಟರ್ ನಲ್ಲಿ ಹಂಚಿ ಕೊಂಡಿದ್ದು "ಒಂದು ಸ್ಕೂಟರ್ ನಲ್ಲಿ 6 ಜನರು ಕೂತಿರುವುದು" ಎಂದು ಬರೆದಿದ್ದಾರೆ. ಅವರು ಮುಂಬೈ ಪೊಲೀಸ್ ಆಯುಕ್ತರ ಟ್ವಿಟ್ಟರ್ ಹ್ಯಾಂಡಲ್ ಮತ್ತು ಮುಂಬೈ ಸಂಚಾರ ಪೊಲೀಸರ ಅಧಿಕೃತ ಖಾತೆಯನ್ನು ಸಹ ಇದಕ್ಕೆ ಟ್ಯಾಗ್ ಮಾಡಿದ್ದಾರೆ.



ಈ ಟ್ವೀಟ್ ಮಾಡಿದ ತಕ್ಷಣವೇ ಮುಂಬೈ ಟ್ರಾಫಿಕ್ ಪೊಲೀಸ್ (ಎಂಟಿಪಿ) ಅವರಿಂದ ಸ್ವಯಂಚಾಲಿತ ಪ್ರತಿಕ್ರಿಯೆಯು ಘಟನೆಯ "ನಿಖರವಾದ ಸ್ಥಳದ ವಿವರಗಳನ್ನು" ಒದಗಿಸುವಂತೆ ಹೋರಾ ಅವರನ್ನು ವಿನಂತಿಸಿತು. ಇದಕ್ಕೆ ಬಳಕೆದಾರರು "ಅಂಧೇರಿಯ ಪಶ್ಚಿಮ ಭಾಗದಲ್ಲಿರುವ ಸ್ಟಾರ್ ಬಜಾರ್ ಬಳಿ" ಎಂದು ಉತ್ತರಿಸಿದರು.

ಇದನ್ನೂ ಓದಿ: Burger Man: 32,340 ಬರ್ಗರ್ ತಿಂದವನು ಈತ! ಹುಟ್ಟಿದಾಗಿನಿಂದ ತಿಂದಿದ್ದು ಬರೀ ಬರ್ಗರ್

ಈ ವೀಡಿಯೋವನ್ನು ನಂತರ ‘ರೋಡ್ಸ್ ಆಫ್ ಮುಂಬೈ’ ಎಂಬ ಖಾತೆಯಿಂದ ಮರು ಹಂಚಿಕೆ ಮಾಡಲಾಯಿತು, ಅದು ಮುಂಬೈ ಸಂಚಾರ ಪೊಲೀಸರಿಗೆ ನಿಖರವಾದ ಸ್ಥಳವು ಅಂಧೇರಿ ಪಶ್ಚಿಮದ ಲಿಂಕ್ ರಸ್ತೆ ಎಂದು ತಿಳಿಸಿತು. ಅವರ ಟ್ವೀಟ್ ಗೆ ಪ್ರತಿಕ್ರಿಯಿಸಿದ ಎಂಟಿಪಿ, "ಅದನ್ನು ಪರಿಶೀಲಿಸುವಂತೆ" ಡಿಎನ್ ನಗರ ಸಂಚಾರ ವಿಭಾಗಕ್ಕೆ ನಿರ್ದೇಶನ ನೀಡಿದ್ದೇವೆ ಎಂದು ಹೇಳಿದರು.
Published by:Ashwini Prabhu
First published: