Jeff Bezos: ಯಶಸ್ವಿ ಉದ್ಯಮಿಯಾಗಲು ಅಮೆಜಾನ್ ಸಂಸ್ಥಾಪಕರು ಶಿಫಾರಸು ಮಾಡಿರುವ 6 ಪುಸ್ತಕಗಳಿವು! ನೀವೂ ಓದಿದ್ದೀರಾ ಈ ಬುಕ್ಸ್?

ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಜೆಫ್ ಅವರಂತೇ ಒಬ್ಬ ಯಶಸ್ವಿ ವ್ಯಕ್ತಿಯಾಗುವುದು ಎಲ್ಲರ ಗುರಿಯಾಗಿರುತ್ತದೆ. ಇವರಂತೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡವರಿಗೆ ಜೆಫ್ ಬೆಜೋಸ್ 6 ಪುಸ್ತಕಗಳನ್ನು ಶಿಫಾರಸ್ಸು ಮಾಡಿದ್ದಾರೆ. ಹಾಗಾದರೆ ಇವರು ಹೇಳಿರುವ ಆ ಆರು ಪುಸ್ತಕಗಳ ಬಗೆಗಿನ ಒಂದು ಪಕ್ಷಿ ನೋಟ ಹೀಗಿದೆ...

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್

  • Share this:

ವಿಶ್ವದ ಶ್ರೀಮಂತರ (Richest) ಪಟ್ಟಿಯಲ್ಲಿರುವ ಅಮೆಜಾನ್ ಸಂಸ್ಥಾಪಕ ಮತ್ತು ಅಧ್ಯಕ್ಷ ಜೆಫ್ ಬೆಜೋಸ್ (Jeff Bezos, founder and president of Amazon) ಬಗ್ಗೆ ಯಾರಿಗೆ ಗೊತ್ತಿರಲ್ಲ ಹೇಳಿ. ಪ್ರಿನ್ಸ್ಟನ್ ವಿಶ್ವವಿದ್ಯಾಲಯದ (Princeton University) ಓರ್ವ ಟೌ ಬೀಟಾ ಪೈ ಪದವೀಧರನಾದ ಬೆಜೊಸ್, 1994ರಲ್ಲಿ ಅಮೆಜಾನ್ ಅನ್ನು  ಸಂಸ್ಥಾಪಿಸುವುದಕ್ಕೆ ಮುಂಚಿತವಾಗಿ ಡಿ.ಈ.ಷಾ & ಕೊ ಸಂಸ್ಥೆಗಾಗಿ ಓರ್ವ ಹಣಕಾಸಿನ ವಿಶ್ಲೇಷಕನಾಗಿ ಕಾರ್ಯನಿರ್ವಹಿಸಿದರು. ಅಮೆಜಾನ್ ಸಂಸ್ಥೆ ಕಟ್ಟಿದ ನಂತರ ಇವರು ಹಿಂದಿರುಗಿ ನೋಡಲೇ ಇಲ್ಲ. ಯಶಸ್ಸು, ಸಾಧನೆ, ಹೆಸರು, ಖ್ಯಾತಿ ಜೆಫ್ ಬೆಜೋಸ್ ಅವರನ್ನು ಅರಸಿ ಬಂದವು.


ವಿಶ್ವದ ಸಿರಿವಂತರ ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿರುವ ಜೆಫ್ ಅವರಂತೇ ಒಬ್ಬ ಯಶಸ್ವಿ ವ್ಯಕ್ತಿಯಾಗುವುದು ಎಲ್ಲರ ಗುರಿಯಾಗಿರುತ್ತದೆ. ಇವರಂತೆ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಗುರಿ ಇಟ್ಟುಕೊಂಡವರಿಗೆ ಜೆಫ್ ಬೆಜೋಸ್ 6 ಪುಸ್ತಕಗಳನ್ನು ಶಿಫಾರಸ್ಸು ಮಾಡಿದ್ದಾರೆ. ಹಾಗಾದರೆ ಇವರು ಹೇಳಿರುವ ಆ ಆರು ಪುಸ್ತಕಗಳ ಬಗೆಗಿನ ಒಂದು ಪಕ್ಷಿ ನೋಟ ಹೀಗಿದೆ.


1) ರಿಮೇನ್ಸ್ ಆಫ್ ದಿ ಡೇ
ದಿ ರಿಮೇನ್ಸ್ ಆಫ್ ದಿ ಡೇ ನೊಬೆಲ್ ಪ್ರಶಸ್ತಿ ವಿಜೇತ ಬ್ರಿಟಿಷ್ ಲೇಖಕ ಕಜುವೊ ಇಶಿಗುರೊ ಅವರ 1989 ರ ಕಾದಂಬರಿ. ಈ ಕೃತಿಯು 1989 ರಲ್ಲಿ ಕಾದಂಬರಿಗಾಗಿ ಬೂಕರ್ ಪ್ರಶಸ್ತಿಯನ್ನು ಪಡೆಯಿತು. ಕಾದಂಬರಿಯ ಚಲನಚಿತ್ರ ರೂಪಾಂತರವನ್ನು 1993 ರಲ್ಲಿ ನಿರ್ಮಿಸಲಾಯಿತು ಮತ್ತು ಆಂಥೋನಿ ಹಾಪ್ಕಿನ್ಸ್ ಮತ್ತು ಎಮ್ಮಾ ಥಾಂಪ್ಸನ್ ನಟಿಸಿದ್ದಾರೆ, ಇದು ಎಂಟು ಅಕಾಡೆಮಿ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿತು.


ಇದನ್ನೂ ಓದಿ:  Eudora Okoro: ಕಾಸ್ಮೆಟಿಕ್​ ಸರ್ಜರಿ ಮಾಡಿಸುವ ಯುವತಿಯರೇ ಕೇಳಿ! ವಯಸ್ಸು 60 ಆದ್ರು 30ರಂತೆ ಇದ್ದಾಳೆ ಈ ಲೇಡಿ!

ಕಾದಂಬರಿಯು ಮೊದಲ-ವ್ಯಕ್ತಿ ನಿರೂಪಣೆಯಲ್ಲಿ, ಎರಡನೇ ಮಾಹಾಯುದ್ಧ ಸಂದರ್ಭದಲ್ಲಿ ಸೇವೆ ಸಲ್ಲಿಸಿದ ಇಂಗ್ಲಿಷ್ ಬಟ್ಲರ್ ಸ್ಟೀವನ್ಸ್ ಅವರ ಕಥೆಯನ್ನು ಹೇಳುತ್ತದೆ. ಬಟ್ಲರ್ ಲಾರ್ಡ್ ಡಾರ್ಲಿಂಗ್ಟನ್ ಅವರ ನಿಷ್ಠಾವಂತ ಸೇವೆಗೆ ತನ್ನ ಜೀವನವನ್ನು ಮುಡಿಪಾಗಿಟ್ಟಿದ್ದಾರು. ಕಾದಂಬರಿಯು 1956 ಕಾಲಘಟ್ಟದಲ್ಲಿ ಪ್ರಾರಂಭವಾಗುತ್ತದೆ.


2) ಬಿಲ್ಟ್ ಟು ಲಾಸ್ಟ್ : ಸಕ್ಸಸ್ ಫುಲ್ ಹ್ಯಾಬಿಟ್ಸ್ ಆಫ್ ವಿಷನರಿ ಕಂಪನೀಸ್
ಜಿಮ್ ಕಾಲಿನ್ಸ್ ಮತ್ತು ಜೆರ್ರಿ I. ಪೊರಾಸ್ ಬರೆದ ಪುಸ್ತಕ. ಇದು ನಿರಂತರವಾದ ದೊಡ್ಡ ಕಂಪನಿಗಳಿಗೆ ಕಾರಣವಾಗುವ ಆರು ವರ್ಷಗಳ ಸಂಶೋಧನಾ ಯೋಜನೆಯ ಫಲಿತಾಂಶಗಳನ್ನು ವಿವರಿಸುತ್ತದೆ.

ಪುಸ್ತಕದ ಮೊದಲ ಆವೃತ್ತಿಯನ್ನು ಅಕ್ಟೋಬರ್ 26, 1994ರಂದು ಹಾರ್ಪರ್ ಬ್ಯುಸಿನೆಸ್ ಪ್ರಕಟಿಸಿತು. ಪುಸ್ತಕದಲ್ಲಿ ಕಂಪನಿಗಳು ಹೇಗೆಲ್ಲಾ ಯಶಸ್ಸನ್ನು ಸಾಧಿಸಿವೆ ಎಂಬುವುದನ್ನು ಲೇಖಕರು ಬರೆದಿದ್ದಾರೆ.


3) ಕ್ರಿಯೇಷನ್: ಲೈಫ್ ಆ್ಯಂಡ್ ಹೌ ಟು ಮೇಲ್ ಇಟ್
ಸ್ಟೀವ್ ಗ್ರ್ಯಾಂಡ್ ಬರೆದ ಈ ಪುಸ್ತಕವನ್ನು ಸಾಧನೆಯತ್ತ ಮುಖ ಮಾಡಿರುವವರಿಗೆ ಜೆಫ್ ಶಿಫಾರಸ್ಸು ಮಾಡುತ್ತಾರೆ.


4) ಸ್ಯಾಮ್ ವಾಲ್ಟನ್ : ಮೇಡ್ ಇನ್ ಅಮೇರಿಕಾ
ಈ ಪುಸ್ತಕವು ಸ್ಯಾಮ್ಯುಯೆಲ್ ಮೂರ್ ವಾಲ್ಟನ್ ಚಿಲ್ಲರೆ ವ್ಯಾಪಾರಿಗಳಾದ ವಾಲ್ಮಾರ್ಟ್ ಮತ್ತು ಸ್ಯಾಮ್ಸ್ ಕ್ಲಬ್ ಅನ್ನು ಹುಟ್ಟುಹಾಕಿದ ಅಮೇರಿಕನ್ ಉದ್ಯಮಿ ಮತ್ತು ವಾಣಿಜ್ಯೋದ್ಯಮಿ. ಸ್ಯಾಮ್ ವಾಲ್ಟನ್ ಆಟೋಬಯೋಗ್ರಫಿಯಾಗಿದೆ. ಉದ್ಯಮದಲ್ಲಿ ಯಶಸ್ಸು ಸಾಧಿಸಿರುವ ವಾಲ್ಟನ್ ಅವರ ಆಟೋಬಯೋಗ್ರಫಿಯು ನಿಜಕ್ಕೂ ಸ್ಪೂರ್ತಿಯಾಗಿದೆ.


5) ದಿ ಬ್ಲ್ಯಾಕ್ ಸ್ವಾನ್: ದಿ ಇಂಪ್ಯಾಕ್ಟ್ ಆಫ್ ದಿ ಹೈಲಿ ಇಂಪ್ರಾಬಬಲ್
ದಿ ಬ್ಲ್ಯಾಕ್ ಸ್ವಾನ್: ದಿ ಇಂಪ್ಯಾಕ್ಟ್ ಆಫ್ ದಿ ಹೈಲಿ ಇಂಪ್ರಾಬಬಲ್ ಪುಸ್ತಕವು ಲೇಖಕ ನಾಸಿಮ್ ನಿಕೋಲಸ್ ತಾಲೆಬ್ ಅವರ 2007ರ ಪುಸ್ತಕವಾಗಿದೆ. ಪುಸ್ತಕವು ಅಪರೂಪದ ಮತ್ತು ಅನಿರೀಕ್ಷಿತ ಬಾಹ್ಯ ಘಟನೆಗಳ ತೀವ್ರ ಪ್ರಭಾವದ ಮೇಲೆ ಕೇಂದ್ರೀಕರಿಸುತ್ತದೆ-ಮತ್ತು ಈ ಘಟನೆಗಳಿಗೆ ಸರಳವಾದ ವಿವರಣೆಗಳನ್ನು ಹಿಮ್ಮುಖವಾಗಿ ಕಂಡುಹಿಡಿಯುವ ಮಾನವ ಪ್ರವೃತ್ತಿಯಾಗಿದೆ.


ಇದನ್ನೂ ಓದಿ: Paper Plane: ಇದು ಅಂತಿಂತ ವಿಮಾನ ಅಲ್ಲ! ಗಿನ್ನೆಸ್ ವಿಶ್ವ ದಾಖಲೆ ಬರೆದ ಪೇಪರ್ ಪ್ಲೇನ್!

ತಾಲೇಬ್ ಇದನ್ನು ಬ್ಲ್ಯಾಕ್ ಸ್ವಾನ್ ಸಿದ್ಧಾಂತ ಎಂದು ಕರೆಯುತ್ತಾರೆ. ಪುಸ್ತಕವು ಜ್ಞಾನ, ಸೌಂದರ್ಯಶಾಸ್ತ್ರ ಮತ್ತು ಜೀವನ ವಿಧಾನಗಳಿಗೆ ಸಂಬಂಧಿಸಿದ ವಿಷಯಗಳನ್ನು ಒಳಗೊಂಡಿದೆ


6) ದಿ ಇನ್ನೋವೇಟರ್ಸ್ ಡೈಲೆಮಾ:
1997ರಲ್ಲಿ ಪ್ರಕಟವಾದ ಈ ಪುಸ್ತಕವು ಹಾರ್ವರ್ಡ್ ಪ್ರಾಧ್ಯಾಪಕ ಮತ್ತು ಉದ್ಯಮಿ ಕ್ಲೇಟನ್ ಕ್ರಿಸ್ಟೇನ್ಸೆನ್ ಅವರ ಅತ್ಯುತ್ತಮ ಕೃತಿಯಾಗಿದೆ. ದೊಡ್ಡ ಕಂಪನಿಗಳು ತಮ್ಮ ಗ್ರಾಹಕರನ್ನು ಆಲಿಸುವ ಮೂಲಕ ಮತ್ತು ಹೆಚ್ಚಿನ-ಮೌಲ್ಯದ ಉತ್ಪನ್ನಗಳೆಂದು ತೋರುವ ಮೂಲಕ ಮಾರುಕಟ್ಟೆ ಪಾಲನ್ನು ಹೇಗೆ ಕಳೆದುಕೊಳ್ಳುತ್ತವೆ ಎಂಬುದನ್ನು ಇದು ವಿವರಿಸುತ್ತದೆ.

Published by:Ashwini Prabhu
First published: