Sivaji Ganesan Birth anniversary | ಇಂದು ಶಿವಾಜಿ ಗಣೇಶನ್​​ಗೆ 93ನೇ ಜನ್ಮದಿನ: "ನಡಿಗರ್​ ತಿಲಗಂ"ಗೆ ಗೂಗಲ್ ಡೂಡಲ್ ಗೌರವ!

Marlon Brando: ದಿವಂಗತ ಶಿವಾಜಿ ಗಣೇಶನ್ ಅವರಿಗಿಂದು 93ನೇ ಜನ್ಮದಿನ. ಮೇರು ನಟನಿಗೆ ಗೂಗಲ್ ವಿಶೇಷ ಗೌರವ ತೋರಿದೆ. ಶಿವಾಜಿ ಗಣೇಶನ್ ಚಿತ್ರವಿರುವ ಕಣ್ಮನ ಸೆಳೆಯುವ ಡೂಡಲ್ ಅನ್ನು ಬೆಂಗಳೂರು ಮೂಲದ ಅತಿಥಿ ಕಲಾವಿದ(Guest Artist) ನೂಪುರ ರಾಜೇಶ್ ಚೋಕ್ಸಿ(Noopur Rajesh Choksi) ರಚಿಸಿದ್ದಾರೆ.

ದಿವಂಗತ ಶಿವಾಜಿ ಗಣೇಶನ್ / Sivaji Ganesan

ದಿವಂಗತ ಶಿವಾಜಿ ಗಣೇಶನ್ / Sivaji Ganesan

  • Share this:
Sivaji Ganesan Birth anniversary: ತಮಿಳುನಾಡು ಚಿತ್ರರಂಗ ಕಂಡ ಶ್ರೇಷ್ಠ, ಸಾರ್ವಕಾಲಿಕ, ನಟ, ಭಾರತ ಕಂಡ ಮೊದಲ ವಿಧಾನ ನಟ(Method Actor) ವಿಲ್ಲಿಪುರಂ ಚೈನಾ ಪಿಳ್ಳೈ ಗಣೇಶನ್. ಹೀಗೆ ಹೇಳಿದರೆ ಬಹುಶಃ ಯಾರಿಗೂ ತಿಳಿಯುವುದಿಲ್ಲ. ಶಿವಾಜಿ ಗಣೇಶನ್ (Sivaji Ganesan) ಅಂದರೆ ಸಾಕು ತಮಿಳುನಾಡಿನ ಜನರಿಗೆ ಪ್ರೀತಿ, ಗೌರವ. ಶಿವಾಜಿ ಗಣೇಶನ್ ಅವರನ್ನ ಭಾರತೀಯ ಚಿತ್ರರಂಗದ "ಮರ್ಲಾನ್ ಬ್ರಾಂಡೊ" (Marlon Brando) ಅಂತಾನೇ ಕರೆಯಲಾಗುತ್ತಿತ್ತು. ದಿವಂಗತ ಶಿವಾಜಿ ಗಣೇಶನ್ ಅವರಿಗಿಂದು 93ನೇ ಜನ್ಮದಿನ. ಮೇರು ನಟನಿಗೆ ಗೂಗಲ್ ವಿಶೇಷ ಗೌರವ ತೋರಿದೆ. ಶಿವಾಜಿ ಗಣೇಶನ್ ಚಿತ್ರವಿರುವ ಕಣ್ಮನ ಸೆಳೆಯುವ ಡೂಡಲ್ ಅನ್ನು ಬೆಂಗಳೂರು ಮೂಲದ ಅತಿಥಿ ಕಲಾವಿದ(Guest Artist) ನೂಪುರ ರಾಜೇಶ್ ಚೋಕ್ಸಿ(Noopur Rajesh Choksi) ರಚಿಸಿದ್ದಾರೆ.

1 ಅಕ್ಟೋಬರ್ 1928 ತಮಿಳುನಾಡಿನ ವಿಲ್ಲುಪುರದಲ್ಲಿ ಇವರು ಜನಿಸಿದರು. ಇವರ ಮೂಲ ಹೆಸರು . ಚಿನ್ನಯ್ಯ ಮನ್ರಾಯರ್ ಗಣೇಶಮೂರ್ತಿ. 7ನೇ ವಯಸ್ಸಿನಲ್ಲಿ, ಮನೆ ತೊರೆದು ನಾಟಕ ತಂಡವನ್ನು ಶಿವಾಜಿ ಗಣೇಶನ್ ಸೇರಿಕೊಂಡರು. ನಾಟಕ ತಂಡದಲ್ಲಿ ಸ್ತ್ರೀ ಹಾಗೂ ಮಕ್ಕಳ ಪಾತ್ರವನ್ನು ಅದ್ಭುತವಾಗಿ ಶಿವಾಜಿ ಗಣೇಶನ್ ನಿರ್ವಹಿಸುತ್ತಿದ್ದರು. ಡಿಸೆಂಬರ್ 1945 ರಲ್ಲಿ, ಗಣೇಶನ್ 17 ನೇ ಶತಮಾನದ ಭಾರತೀಯ ರಾಜ ಶಿವಾಜಿಯ ನಾಟಕದಲ್ಲಿ ಅಭಿನಯಿಸಿದರು. ಇಲ್ಲಿಂದ ಇವರ ಬದುಕೇ ಬದಲಾಯಿತು. ಈ ಪಾತ್ರದಿಂದ ಶಿವಾಜಿ ಗಣೇಶನ್ ರಂಗಭೂಮಿ ಕ್ಷೇತ್ರದಲ್ಲಿ ಒಳ್ಳೆಯ ಹೆಸರನ್ನು ಪಡೆದುಕೊಂಡರು. ಬಾಲಕನಾಗಿದ್ದಾಗಲೇ ಉದ್ದದ ಡೈಲಾಗ್ ಗಳನ್ನು ಶಿವಾಜಿ ಗಣೇಶನ್ ಸರಾಗವಾಗಿ ಹೇಳುತ್ತಿದ್ದರು.

ಅಭಿನಯದ ಜೊತೆ ಜೊತೆಗೆ ಶಿವಾಜಿ ಗಣೇಶನ್ ಭರತನಾಟ್ಯ, ಕಥಕ್, ಮಣಿಪುರಿ, ನೃತ್ಯಗಳನ್ನು ಕಲಿತರು. 1952ರಲ್ಲಿ ಪರಾಶಕ್ತಿ ಎಂಬ ಸಿನಿಮಾದಲ್ಲಿ ಪ್ರಥಮ ಬಾರಿಗೆ ಶಿವಾಜಿ ಗಣೇಶನ್ ಅಭಿನಯಿಸಿದರು. ಬಳಿಕ 'ಛತ್ರಪತಿ ಶಿವಾಜಿ' ಚಿತ್ರದಲ್ಲಿ ಶಿವಾಜಿಯ ಪಾತ್ರದಲ್ಲಿ ಗಣೇಶನ್ ನಟಿಸಿದ್ದರುಈ ಸಿನಿಮಾದ ಬಳಿಕ ಶಿವಾಜಿಗಣೇಶನ್ ಎಂದೇ ಕರೆಯಲ್ಪಡುತ್ತಿದ್ದರು. ಇದಾದ ಬಳಿಕ ಶಿವಾಜಿ ಗಣೇಶನ್ ಹಿಂದೆ ತಿರುಗಿ ನೋಡಲೇ ಇಲ್ಲ. ಅಷ್ಟೊತ್ತಿಗಾಗಲೇ ಶಿವಾಜಿ ಗಣೇಶನ್ ಗೆ lಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ಹುಟ್ಟಿಕೊಂಡಿದ್ದರು. ಶಿವಾಜಿ ಗಣೇಶನ್ 300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ತಮಿಳು ಚಿತ್ರರಂಗ ಮಾತ್ರವಲ್ಲದೆ ತೆಲುಗು, ಕನ್ನಡ, ಮಲಯಾಳಂ,ಹಿಂದಿ ಭಾಷೆಯಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು.

5 ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಶಿವಾಜಿ ಗಣೇಶನ್ ರೂಲ್ ಮಾಡಿದವರು. ಇವರ ವಿಶಿಷ್ಟ ಅಭಿನಯಕ್ಕೆ ಮನ ಸೋತವರೇ ಇಲ್ಲ. ಅದರಲ್ಲೂ
ಭಾವನಾತ್ಮಕ ಸನ್ನಿವೇಶದಲ್ಲಿ ಇವರಂತೆ ನಟಿಸುವ ಮತ್ತೊಬ್ಬ ನಟ ಹುಟ್ಟೇ ಇಲ್ಲ. ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (Afro-Asian Film Festival in Cairo, Egypt) ಅತ್ಯುತ್ತಮ ನಟ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ನಟ ಶಿವಾಜಿ ಗಣೇಶನ್. 1960ರಲ್ಲಿ
ಬಿಡುಗಡೆಯಾಗಿ, ಸೂಪರ್ ಹಿಟ್ ಆಗಿದ್ದ "ವೀರಪಾಂಡಿಯ ಕಟ್ಟಬೊಮ್ಮನ್" ಸಿನಿಮಾದ ಅಭಿನಯಕ್ಕಾಗಿ ಈ ಪ್ರಶಸ್ತಿಗೆ ಭಾಜನರಾಗಿದ್ದರು. ಅನೇಕ ಪ್ರಶಸ್ತಿಗಳು ಹಾಗೂ ಬಿರುದುಗಳು ಇವರನ್ನು ಹುಡುಕಿಕೊಂಡು ಬಂದಿದೆ.

ಮೋಹನ್ ಲಾಲ್‌- ಶಿವಾಜಿ ಗಣೇಶನ್


ಇದನ್ನು ಓದಿ: Dangerous apps: 136 ಅಪಾಯಕಾರಿ ಆ್ಯಪ್​ಗಳನ್ನ ಬ್ಯಾನ್ ಮಾಡಿದ ಗೂಗಲ್ ಪ್ಲೇ ಸ್ಟೋರ್.. ನಿಮ್ಮ ಫೋನ್​​ನಲ್ಲಿದೆಯಾ?

17 ಜುಲೈ 2021 ರಲ್ಲಿ ಉಸಿರಾಟದ ಸಮಸ್ಯೆಯಿಂದ ಶಿವಾಜಿಗಣೇಶನ್ ಮೃತಪಟ್ಟಿದ್ದರು. ಬರೀ ನಟನೆಯಷ್ಟೆ ಅಲ್ಲದೆ, ಜನರಿಗಾಗಿ ಏನಾದರೂ ಮಾಡಬೇಕೆಂದು ರಾಜಕೀಯದಲ್ಲೂ ಶಿವಾಜಿ ಗಣೇಶನ್ ಸಕ್ರಿಯರಾಗಿದ್ದರು.

ವರದಿ - ವಾಸುದೇವ್. ಎಂ
Published by:Harshith AS
First published: