• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Emotional Story: ಅಕ್ಕ ಕೆಲಸ ಮಾಡುವ ವಿಮಾನದಲ್ಲಿ ತಮ್ಮನ ಪ್ರಯಾಣ, ವಿಡಿಯೋ ನೋಡಿ ಎಮೋಷನಲ್ ಆದ ನೆಟ್ಟಿಗರು!

Emotional Story: ಅಕ್ಕ ಕೆಲಸ ಮಾಡುವ ವಿಮಾನದಲ್ಲಿ ತಮ್ಮನ ಪ್ರಯಾಣ, ವಿಡಿಯೋ ನೋಡಿ ಎಮೋಷನಲ್ ಆದ ನೆಟ್ಟಿಗರು!

ವೈರಲ್​ ಆದ ಫೋಟೋ

ವೈರಲ್​ ಆದ ಫೋಟೋ

Viral Video: ಅನೇಕ ಬಾರಿ ನಮ್ಮ ಒಡಹುಟ್ಟಿದವರ ಮೇಲೆ ಸಿಕ್ಕಾಪಟ್ಟೆ ಕೋಪ ಸಹ ಮಾಡಿಕೊಂಡಿರುತ್ತೇವೆ, ಆದರೆ ಇದ್ಯಾವುದೂ ಸಹ ನಮ್ಮ ನಡುವಿನ ಆ ಪ್ರೀತಿ ಮತ್ತು ಬಾಂಧವ್ಯವನ್ನು ಸಾಸಿವೆ ಕಾಳಿನಷ್ಟು ಕಡಿಮೆ ಮಾಡಿರುವುದಿಲ್ಲ.

 • Share this:

ಈಗಂತೂ ದಿನ ಬೆಳಗಾದರೆ ಸಾಕು ನಾವು ಈ ಸಾಮಾಜಿಕ ಮಾಧ್ಯಮಗಳಲ್ಲಿ (Social Media) ಅನೇಕ ರೀತಿಯ ವೀಡಿಯೋಗಳನ್ನು ನೋಡುತ್ತೇವೆ. ಅದರಲ್ಲೂ ಈ ಒಡಹುಟ್ಟಿದವರ ಮಧ್ಯೆ ಇರುವಂತಹ ಬಾಂಧವ್ಯದ ವಿಡಿಯೋಗಳಂತೂ ಅನೇಕರನ್ನ ಅವರ ಬಾಲ್ಯದ ದಿನಗಳ ಮುದ್ದಾದ ನೆನಪುಗಳಿಗೆ (Memory) ಮರಳಿ ಕರೆದುಕೊಂಡು ಹೋಗುತ್ತವೆ. ಹೌದು, ಇಂತಹ ಸುಮಧುರ ಬಾಂಧವ್ಯಗಳ ನೆನಪುಗಳಿಂದಲೇ ಜೀವನ ಶುರುವಾಗಿರುತ್ತೆ. ಒಡಹುಟ್ಟಿದವರ ಜೊತೆ ನಾವು ಬಾಲ್ಯದಲ್ಲಿ ಅನೇಕ ಬಾರಿ ಚಿಕ್ಕ ಪುಟ್ಟ ವಿಷಯಗಳಿಗೆಲ್ಲಾ ಜಗಳವಾಡಿರುತ್ತೇವೆ ಮತ್ತು ಪರಸ್ಪರರು ತಮಾಷೆ ಮಾಡಿಕೊಂಡು ಒಬ್ಬರ ಕಾಲನ್ನು ಇನ್ನೊಬ್ಬರು ಎಳೆದುಕೊಂಡಿರುತ್ತೇವೆ.


ಅನೇಕ ಬಾರಿ ನಮ್ಮ ಒಡಹುಟ್ಟಿದವರ ಮೇಲೆ ಸಿಕ್ಕಾಪಟ್ಟೆ ಕೋಪ ಸಹ ಮಾಡಿಕೊಂಡಿರುತ್ತೇವೆ, ಆದರೆ ಇದ್ಯಾವುದೂ ಸಹ ನಮ್ಮ ನಡುವಿನ ಆ ಪ್ರೀತಿ ಮತ್ತು ಬಾಂಧವ್ಯವನ್ನು ಸಾಸಿವೆ ಕಾಳಿನಷ್ಟು ಕಡಿಮೆ ಮಾಡಿರುವುದಿಲ್ಲ.


ಸಹೋದರಿ ಫ್ಲೈಟ್ ಅಟೆಂಡೆಂಟ್ ಆಗಿರುವ ಫ್ಲೈಟ್ ನಲ್ಲಿಯೇ ಪ್ರಯಾಣ ಬೆಳೆಸಿದ ಸಹೋದರ


ಇದರ ಬಗ್ಗೆ ಈಗೇಕೆ ಮಾತು ಅಂತ ನೀವು ಕೇಳಬಹುದು, ಇಲ್ಲಿ ಒಂದು ಮುದ್ದಾದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ. ಅದರಲ್ಲಿ ತನ್ನ ಸಹೋದರಿ ತಾನು ಪ್ರಯಾಣಿಸುತ್ತಿದ್ದ ವಿಮಾನದಲ್ಲಿಯೇ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವುದನ್ನು ನೋಡಿದಾಗ ಸಹೋದರನಿಗೆ ಆದ ಖುಷಿ ಮತ್ತು ಇಬ್ಬರೂ ಒಂದೇ ವಿಮಾನದಲ್ಲಿ ಆಕಸ್ಮಿಕವಾಗಿ ಸಿಕ್ಕಾಗ ಎಷ್ಟು ಖುಷಿ ಪಟ್ಟಿದ್ದಾರೆ ನೋಡಿ.


ಈ ಮುದ್ದಾದ ವಿಡಿಯೋ ನೋಡಿದ ಅನೇಕರು ಅವರಿಬ್ಬರ ಬಾಂಧವ್ಯ ಮತ್ತು ಅವರಿಬ್ಬರ ನಡುವಿನ ಪ್ರೀತಿಯನ್ನು ನೋಡಿ ತುಂಬಾನೇ ಪ್ರಭಾವಿತರಾಗಿದ್ದಾರೆ.


ಈ ಮುದ್ದಾದ ವಿಡಿಯೋ ನೋಡಿ ಪ್ರಭಾವಿತರಾದ ನೆಟ್ಟಿಗರು!


ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಮಾಡುತ್ತಿರುವ ತನ್ನ ಅಕ್ಕನ ಫ್ಲೈಟ್ ಅನ್ನೆ ಹತ್ತಿದ ಸಹೋದರ, ಆಗ ತಮ್ಮನನ್ನು ನೋಡಿದ ಆ ಅಕ್ಕನ ಪ್ರತಿಕ್ರಿಯೆ ಮಾತ್ರ ತುಂಬಾನೇ ಮನಮಿಡಿಯುವಂತೆ ಇತ್ತು.
ಈ ವಿಡಿಯೋವನ್ನು ಶೇಮ್ ಎಂಬ ಬಳಕೆದಾರರು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ಸಣ್ಣ ಕ್ಲಿಪ್ ಸಹೋದರ ವಿಮಾನವನ್ನು ಪ್ರವೇಶಿಸುವುದನ್ನು ಮತ್ತು ಅವರು ಬುಕ್ ಮಾಡಿಕೊಂಡ ಸೀಟ್ ನಲ್ಲಿ ಹೋಗಿ ಕುಳಿತುಕೊಳ್ಳುವುದನ್ನು ತೋರಿಸುತ್ತದೆ.


ನಂತರ, ತನ್ನ ಸಹೋದರಿ ಅಲ್ಲಿಗೆ ಬಂದು ಪ್ರಯಾಣಿಕರನ್ನು ಕುರಿತು ಸುರಕ್ಷತಾ ಪ್ರಕಟಣೆಯನ್ನು ಮಾಡುತ್ತಾಳೆ ಮತ್ತು ವಿಮಾನ ಟೇಕ್ ಆಫ್ ಆದ ನಂತರ ವಿಮಾನದಲ್ಲಿ ಪ್ರಯಾಣಿಸುತ್ತಿರುವ ಪ್ರಯಾಣಿಕರ ವಿನಂತಿಗಳನ್ನು ಹೇಗೆ ಸ್ವೀಕರಿಸಿ ಅವರಿಗೆ ಸಹಾಯ ಮಾಡುತ್ತಾರೆ ಎಂಬುದನ್ನು ತೋರಿಸಲು ಸಹೋದರ ತನ್ನ ಮೊಬೈಲ್ ಕ್ಯಾಮೆರಾದಲ್ಲಿ ಪ್ಯಾನ್ ಮಾಡುತ್ತಾನೆ. ಈ ಎಲ್ಲದರ ನಡುವೆ, ಇವರಿಬ್ಬರು ಒಬ್ಬರಿಗೊಬ್ಬರು ನೋಡಿದ ನಂತರ ಇಬ್ಬರಿಗೂ ತುಂಬಾನೇ ಖುಷಿಯಾಗುತ್ತದೆ.
ಕೊನೆಯಲ್ಲಿ, ಆ ಸಹೋದರ ತನ್ನ ಅಕ್ಕನ ಮತ್ತು ಇತರ ವಿಮಾನ ಪರಿಚಾರಕರೊಂದಿಗೆ ಫೋಟೋಗೆ ಪೋಸ್ ನೀಡುತ್ತಾನೆ. "ನಿಮ್ಮ ಅಕ್ಕನೆ ನಿಮ್ಮ ಫ್ಲೈಟ್ ಅಟೆಂಡೆಂಟ್ ಆದರೆ" ಅಂತ ಬರೆದು ಅದರ ಪಕ್ಕದಲ್ಲಿ ಎರಡು ಹಾರ್ಟ್ ಎಮೋಜಿಗಳನ್ನು ಈ ವೀಡಿಯೋದಲ್ಲಿನ ಪಠ್ಯದಲ್ಲಿ ಸೇರಿಸಲಾಗಿದೆ.


ಸಿಕ್ಕಾಪಟ್ಟೆ ವೈರಲ್ ಆಗಿದೆ ಈ ಮುದ್ದಾದ ವಿಡಿಯೋ!


ಈ ವಿಡಿಯೋವನ್ನು ಏಪ್ರಿಲ್ 22 ರಂದು ಅಪ್ಲೋಡ್ ಮಾಡಿದಾಗಿನಿಂದ ಈ ನೆಟ್ವರ್ಕ್ ನಲ್ಲಿ 17 ಮಿಲಿಯನ್ ವೀಕ್ಷಣೆಗಳು ಮತ್ತು 10 ಮಿಲಿಯನ್ ಲೈಕ್ ಗಳನ್ನು ಪಡೆದಿದೆ. ಈ ವಿಡಿಯೋ ನೋಡಿದ ನೆಟ್ಟಿಗರೊಬ್ಬರು "ಇದು ನಾನು ಇಂದು ನೋಡಿದ ಅತ್ಯಂತ ಮುದ್ದಾದ ಒಡಹುಟ್ಟಿದವರ ವಿಡಿಯೋ! ನಿಮ್ಮಿಬ್ಬರಿಗೂ ತುಂಬಾ ಪ್ರೀತಿ," ಎಂದು ಬರೆದಿದ್ದಾರೆ.


"ವಿಮಾನದಲ್ಲಿ ತಮ್ಮ ತನ್ನ ಅಕ್ಕನನ್ನು ಒಂದು ಲೋಟ ನೀರು ತೆಗೆದುಕೊಂಡು ಬನ್ನಿ ಅಂತ ಹೇಳಿದರೆ, ಆಕೆ ಅದಕ್ಕೆ ಆಗೋದಿಲ್ಲ ಅಂತ ಹೇಳುವುದಕ್ಕೆ ಆಗೋದಿಲ್ಲ" ಅಂತ ತಮಾಷೆಯಾಗಿ ಇನ್ನೊಬ್ಬ ಬಳಕೆದಾರರು ಕಾಮೆಂಟ್ ಮಾಡಿದ್ದಾರೆ.


top videos  "ನಾನು 10 ವರ್ಷಗಳ ಕಾಲ ಫ್ಲೈಟ್ ಅಟೆಂಡೆಂಟ್ ಆಗಿದ್ದೆ, ಆದರೆ ನನ್ನ ಕುಟುಂಬದ ಯಾರೊಬ್ಬರು ನನಗೆ ಫ್ಲೈಟ್ ನಲ್ಲಿ ಒಮ್ಮೆಯೂ ಭೇಟಿಯಾಗಿಲ್ಲ, ನನ್ನ ಸಹೋದರರು ಸಹ ಅಂತಹ ಸಂದರ್ಭವನ್ನು ತುಂಬಾನೇ ಇಷ್ಟಪಡುತ್ತಿದ್ದರು ಅಂತ ನನಗೆ ಖಾತ್ರಿಯಿದೆ" ಎಂದು ಮಹಿಳೆಯೊಬ್ಬರು ಹೇಳಿದರು.

  First published:

  ಸುದ್ದಿ 18ಕನ್ನಡ ಟ್ರೆಂಡಿಂಗ್

  ಮತ್ತಷ್ಟು ಓದು