ನವದೆಹಲಿ (Delhi) ಮಗನ ಪಾಸ್‌ಪೋರ್ಟಿನಿಂದ ತಂದೆಯ ಹೆಸರನ್ನು ತೆಗೆದುಹಾಕುವಂತೆ ಮಹಿಳೆಯೊಬ್ಬರು ಅರ್ಜಿಯನ್ನು ಸಲ್ಲಿಸಿದ್ದರು. ಈಗ ಆ ಮಹಿಳೆಯು ತಮ್ಮ ಕೇಸಿನಲ್ಲಿ ಯಶಸ್ವಿಯಾಗಿದ್ದಾರೆ. ಸಿಂಗಲ್ ಮದರ್ ಸಲ್ಲಿಸಿದ ಅರ್ಜಿಯನ್ನು ಪರಿಶೀಲಿಸುತ್ತಾ ಕೆಲವು ಸಂದರ್ಭಗಳಲ್ಲಿ ಜೈವಿಕ ತಂದೆಯ ಹೆಸರನ್ನು ಅಳಿಸಬಹುದು ಮತ್ತು ಉಪನಾಮವನ್ನು ಸಹ ಬದಲಾಯಿಸಬಹುದು ಎಂದು ಹೈಕೋರ್ಟ್ (High Court) ಹೇಳಿದೆ. ಇದರಿಂದ ಮಹಿಳೆಗೆ ಗೆಲುವು ಸಿಕ್ಕಂತಾಗಿದೆ. ಸಿಂಗಲ್ ಮದರ್ ಪರವಾಗಿ ಅರ್ಜಿಯನ್ನು ನಿರ್ಧರಿಸುವಾಗ, ದೆಹಲಿ ಹೈಕೋರ್ಟ್ ಇತ್ತೀಚೆಗೆ ಮಹಿಳೆಯ ಅಪ್ರಾಪ್ತ ಮಗನ ಪಾಸ್‌ಪೋರ್ಟ್‌ನಿಂದ (Passport) ಅವನ ತಂದೆಯ ಹೆಸರನ್ನು ತೆಗೆದುಹಾಕುವಂತೆ ಪಾಸ್‌ಪೋರ್ಟ್ ಅಧಿಕಾರಿಗಳಿಗೆ ನಿರ್ದೇಶನ ನೀಡಿತು. ಅರ್ಜಿದಾರರು (ತಾಯಿ) ತಮ್ಮ ಅರ್ಜಿಯಲ್ಲಿ ಮಗುವು ಹುಟ್ಟುವ ಮೊದಲೇ ಮಗುವಿನ ತಂದೆಯು ಮಗುವನ್ನು ತೊರೆದಿದ್ದರು ಮತ್ತು ಇಂತಹ ಕಷ್ಟದ ಸಮಯದಲ್ಲಿ ಮಗುವನ್ನು ಅವಳಿಂದ ಒಂಟಿಯಾಗಿ (Solo) ತುಂಬಾ ಶ್ರಮಪಟ್ಟು ಬೆಳೆಸಲಾಗಿದೆ ಎಂದು ಹೇಳಿದ್ದಾರೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್, ಈ ಪ್ರಕರಣದಲ್ಲಿ ತಂದೆಯು ತಮ್ಮ ಮಗುವನ್ನು ಸಂಪೂರ್ಣವಾಗಿ ತೊರೆದಿದ್ದಾರೆ. ಇದು ಸೂಕ್ಷ್ಮ ಪ್ರಕರಣವಾಗಿದೆ ಎಂದು ಹೇಳಿದರು. ಅಂತಹ ಸಂದರ್ಭಗಳಲ್ಲಿ, ಕಲಂ 8 ರ ಷರತ್ತು 4.5.1 ಮತ್ತು ಕಲಂ 9 ರ ಷರತ್ತು 4.1 ಸ್ಪಷ್ಟವಾಗಿ ಅನ್ವಯಿಸುತ್ತದೆ ಎಂದು ಈ ನ್ಯಾಯಾಲಯವು ಅಭಿಪ್ರಾಯಪಟ್ಟಿದೆ ಎಂದು ಪೀಠ ಹೇಳಿದೆ.
ಈ ಪ್ರಕರಣದ ವಿಶಿಷ್ಟ ಸಂದರ್ಭಗಳಲ್ಲಿ, ಅಪ್ರಾಪ್ತ ಮಗುವಿನ ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಿಂದ ಅಳಿಸಲು ಮತ್ತು ತಂದೆಯ ಹೆಸರಿಲ್ಲದೆ ಅಪ್ರಾಪ್ತ ಮಗುವಿನ ಪರವಾಗಿ ಪಾಸ್‌ಪೋರ್ಟ್ ಅನ್ನು ಮರು-ನೀಡುವಂತೆ ಹೈಕೋರ್ಟ್ ಪಾಸಪೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಇದೇ ಸಂದರ್ಭದಲ್ಲಿ ಕೋರ್ಟ್ ಕೆಲವು ಸಂದರ್ಭಗಳಲ್ಲಿ ಜೈವಿಕ ತಂದೆಯ ಹೆಸರನ್ನು ಅಳಿಸಬಹುದು ಮತ್ತು ಉಪನಾಮವನ್ನು ಸಹ ಬದಲಾಯಿಸಬಹುದು ಎಂದು ಹೇಳಿದೆ.
ಪ್ರತಿಯೊಂದು ಪ್ರಕರಣದಲ್ಲಿ ಹೊರಹೊಮ್ಮುವ ವಾಸ್ತವಿಕ ವಿಷಯವನ್ನು ಅವಲಂಬಿಸಿ ಅಂತಹ ಪರಿಹಾರವನ್ನು ಪರಿಗಣಿಸಬೇಕು ಎಂದು ಪೀಠವು ಸೂಚಿಸಿತು. ಯಾವುದೇ ಕಠಿಣ ಮತ್ತು ವೇಗದ ನಿಯಮವನ್ನು ಅನ್ವಯಿಸಲಾಗುವುದಿಲ್ಲ ಎಂದು ಸಹ ಪೀಠ ಹೇಳಿತು.
ಇದನ್ನೂ ಓದಿ: ಈ 7 ಫಾರ್ಮ್ ಮೂಲಕ ನೀವು ಪಿಎಫ್ ಹಣ ಡ್ರಾ ಮಾಡಬಹುದು!
"ಪೋಷಕರ ನಡುವಿನ ವೈವಾಹಿಕ ಅಪಶ್ರುತಿಯ ಸಂದರ್ಭದ ಅಸಂಖ್ಯಾತ ಸನ್ನಿವೇಶಗಳಿವೆ. ಆದರೆ ಇಲ್ಲಿ ತಂದೆಯು ಮಗುವನ್ನು ಮಗುವಿನ ಜನನದ ಮುಂಚೆಯೇ ತೊರೆದು ಹೋಗಿದ್ದರಿಂದ ಮಗುವಿನ ಪಾಸ್‌ಪೋರ್ಟ್ ಅರ್ಜಿಯನ್ನು ಅಧಿಕಾರಿಗಳು ಪರಿಗಣಿಸಬೇಕು ಮತ್ತು ಅಪ್ರಾಪ್ತ ಮಗುವಿನ ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಿಂದ ಅಳಿಸಲು ಹಾಗೂ ತಂದೆಯ ಹೆಸರಿಲ್ಲದೆ ಅಪ್ರಾಪ್ತ ಮಗುವಿನ ಪರವಾಗಿ ಪಾಸ್‌ಪೋರ್ಟ್ ಅನ್ನು ಮರು-ನೀಡುವಂತೆ ಹೈಕೋರ್ಟ್ ಪಾಸಪೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಒಬ್ಬ ಒಂಟಿ ತಾಯಿ ಮತ್ತು ಆಕೆಯ ಅಪ್ರಾಪ್ತ ಮಗ ಇಬ್ಬರೂ ಅಪ್ರಾಪ್ತ ಮಗುವಿನ ತಂದೆಯ ಹೆಸರನ್ನು ತನ್ನ ಅಸ್ತಿತ್ವದಲ್ಲಿರುವ ಪಾಸ್‌ಪೋರ್ಟ್‌ನಿಂದ ಅಳಿಸುವಂತೆ ಕೋರಿ ಹೈಕೋರ್ಟ್‌ಗೆ ಮೊರೆ ಹೋಗಿದ್ದರು.
ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರು ಹೈಕೋರ್ಟಿನಲ್ಲಿ ಅರ್ಜಿಯನ್ನು ಸಲ್ಲಿಸಿದ್ದರು. ಒಂಟಿ ತಾಯಿಯು ತಮ್ಮ ಅಪ್ರಾಪ್ತ ಮಗುವಿಗೆ ಹೊಸ ಪಾಸ್‌ಪೋರ್ಟ್ ಅನ್ನು ಮಗುವಿನ ಜೈವಿಕ ತಂದೆಯ ಹೆಸರನ್ನು ನಮೂದಿಸದೇ ಮರು ನೀಡುವಂತೆ ಕೋರಿ ಅರ್ಜಿಯನ್ನು ಸಲ್ಲಿಸಿದ್ದರು. ಹೊಸ ಪಾಸಪೋರ್ಟಿನಲ್ಲಿ ತಂದೆಯ ಹೆಸರು ಇರಬಾರದು ಎಂಬುದು ಅವರ ಕೋರಿಕೆ ಆಗಿತ್ತು.
ಅರ್ಜಿದಾರರ ತಾಯಿಯ ನಿಲುವು ಏನೆಂದರೆ, ಆಕೆ ಸಿಂಗಲ್ ಪೇರೆಂಟ್ ಆಗಿರುವುದರಿಂದ ಮತ್ತು ತಂದೆ ಮಗುವನ್ನು ಸಂಪೂರ್ಣವಾಗಿ ತ್ಯಜಿಸಿರುವುದರಿಂದ, ಮಗುವಿನ ಲಾಲನೆ ಮತ್ತು ಪಾಲನೆಯ ಜವಾಬ್ದಾರಿಯನ್ನು ಸಿಂಗಲ್ ಪೇರೆಂಟ್ ಆಗಿ ತಾನು ನಿಭಾಯಿಸಿರುವುದರಿಂದ ಇಂದು ಮಗುವಿನ ಪಾಸಪೋರ್ಟಿನಲ್ಲಿ ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಲು ಪಾಸ್‌ಪೋರ್ಟ್ ಅಧಿಕಾರಿಗಳು ಒತ್ತಾಯಿಸಬಾರದು ಎಂದಾಗಿತ್ತು.
ಇದನ್ನೂ ಓದಿ: ಮೆಕ್‌ಡೊನಾಲ್ಡ್ ಚಿಕನ್ನಿಂದಾಗಿ 4 ವರ್ಷದ ಮಗುವಿಗೆ ಸುಟ್ಟಗಾಯ, ಕೇಸ್ ದಾಖಲಿಸಿದ ಪೋಷಕರು
ಅಂತೆಯೇ ಹೈಕೋರ್ಟ್ ಸಹ ಏಪ್ರಿಲ್ 19 ರ ತೀರ್ಪಿನಲ್ಲಿ ಇದನ್ನು ಉಲ್ಲೇಖಿಸಿದೆ. ಅರ್ಜಿದಾರರು ಸಿಂಗಲ್ ಪೇರೆಂಟ್ ಆಗಿರುವುದರಿಂದ ಮತ್ತು ತಂದೆ ಮಗುವನ್ನು ಅದರ ಜನನದ ಮುಂಚೆಯೇ ಸಂಪೂರ್ಣವಾಗಿ ತ್ಯಜಿಸಿರುವುದರಿಂದ, ಮಗುವಿನ ಲಾಲನೆ ಮತ್ತು ಪಾಲನೆಯ ಜವಾಬ್ದಾರಿಯನ್ನು ಸಿಂಗಲ್ ಪೇರೆಂಟ್ ಆಗಿ ಆಕೆಯೊಬ್ಬಳೇ ನಿಭಾಯಿಸಿರುವುದರಿಂದ ಇಂದು ಮಗುವಿನ ಪಾಸಪೋರ್ಟಿನಲ್ಲಿ ತಂದೆಯ ಹೆಸರನ್ನು ಕಡ್ಡಾಯವಾಗಿ ನಮೂದಿಸಲು ಮಹಿಳೆಗೆ ಪಾಸ್‌ಪೋರ್ಟ್ ಅಧಿಕಾರಿಗಳು ಒತ್ತಾಯಿಸಬಾರದು ಎಂದು ಹೇಳಿದೆ.
ಜೊತೆಗೆ ಮಗುವಿನ ತಂದೆಯ ಹೆಸರನ್ನು ಪಾಸ್‌ಪೋರ್ಟ್‌ನಿಂದ ಅಳಿಸಲು ಹಾಗೂ ತಂದೆಯ ಹೆಸರಿಲ್ಲದೆ ಮಗುವಿನ ಪರವಾಗಿ ಪಾಸ್‌ಪೋರ್ಟ್ ಅನ್ನು ಮರು-ನೀಡುವಂತೆ ಹೈಕೋರ್ಟ್ ಪಾಸಪೋರ್ಟ್ ಅಧಿಕಾರಿಗಳಿಗೆ ನಿರ್ದೇಶಿಸಿದೆ.
ಮಗುವಿನ ಜನನದ ಮುಂಚೆಯೇ ಮಗುವಿನ ಜೈವಿಕ ತಂದೆಯು ಮಗುವನ್ನು ತೊರೆದು ಹೋಗಿದ್ದರು ಎಂಬ ಅಂಶವೇ ಈ ಕೇಸ್ ಗೆಲ್ಲಲು ಪ್ರಮುಖ ಕಾರಣವಾಗಿತ್ತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ