ತಾಯಿಯೇ ಮೊದಲ ದೇವರು ಎಂಬ ಮಾತು ನೂರಕ್ಕೆ ನೂರು ಮಾತು ಸತ್ಯ ಅಲ್ವಾ? ಆಕೆ ತನಗೆ ಅದೆಷ್ಟೇ ಕಷ್ಟ ಬಂದ್ರೂ ಕೂಡ ತನ್ನ ಮಕ್ಕಳನ್ನು, ಮನೆಯವರನ್ನೆಲ್ಲಾ ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾಳೆ. ತಾನು ಹಸಿವಿನಿಂದ ಇದ್ದರೂ ಕೂಡ ಮನೆಮಂದಿಗೆಲ್ಲಾ ಹೊಟ್ಟೆ ತುಂಬಾ ಊಟವನ್ನು ಹಾಕುತ್ತಾಳೆ. ಅದಕ್ಕೇ ತಾಯಿಯ ಹೃದಯ ( Heart ) ಎಂದು ಹೇಳೋದು. ಅದೆಷ್ಟೋ ಜನರು ವಿಚ್ಚೇದನ ಆಗಿದ್ದರೂ ಕೂಡ ತನ್ನ ಮಕ್ಕಳನ್ನು( Children) ತನ್ನ ಜೊತೆಯಲ್ಲಿಯೇ ಇಟ್ಟುಕೊಂಡು ಸಾಕಿ ಸಲಹುತ್ತಾಳೆ. ಈ ರೀತಿಯಾದ ಅದೆಷ್ಟೋ ಕೇಸ್ಗಳು ನಮ್ಮ ಸಮಾಜದಲ್ಲಿ( Society) ದಿನೇ ದಿನೇ ನಡೆಯುತ್ತಲೇ ಇರುತ್ತವೆ ಅಲ್ವಾ? ಇದೇ ವಿಷಯಕ್ಕೆ ಸಂಬಂಧಿಸಿದಂತೆ ಒಂದು ವಿಷಯ ಸಖತ್ ವೈರಲ್ Viral ಆಗ್ತಾ ಇದೆ. ಇಲ್ಲಿ ಇರುವ ತಾಯಿಯ ಕಥೆಯನ್ನು ಕೇಳ್ತಾ ಇದ್ರೆ ನಿಜಕ್ಕೂ ಎಂಥವರಿಗಾದ್ರೂ ಹೃದಯ ಕಲುಕುತ್ತೆ. ಹೀಗಾಗಿಯೇ ವೈರಲ್ ಆಗ್ತಾ ಇದೆ ಈಕೆಯ ಸುದ್ದಿ.
ಏನಿದು ವೈರಲ್ ವಿಷಯ?
ಈ ತಾಯಿಯ ಹೆಸರು ಗಾಯತ್ರಿ. ಕೇವಲ 35 ವರ್. ಗಾಯತ್ರಿಗೆ ತನ್ನ ಸಣ್ಣ ವಯಸ್ಸಿನಲ್ಲಿಯೇ ಮದುವೆ ಮಾಡಿದ್ದಾರೆ. ಅಂದ್ರೆ ಹದಿಹರೆಯದ ವಯಸ್ಸಿಗೆ ಮದುವೆ ಮಾಡಿದ್ದಾರೆ. ಉತ್ತರ ಪ್ರದೇಶದ ಅಯೋಧ್ಯೆಯ ಜೈನ್ಪುರದಲ್ಲಿ ಈಕೆ ವಾಸಿಸುತ್ತಾ ಇದ್ದಾರೆ. ಇದರ ಜೊತೆಗೆ ಇವರ ವೃತ್ತಿ ಆಟೋ ರಿಕ್ಷಾ ಓಡಿಸುವುದು.
ನಿಜ, ಮಹಿಳೆಯು ಆಟೋ ಓಡಿಸ್ತಾ ಇರೋದಾ ಅದೂ 35 ವರ್ಷಕ್ಕೆ ಅಂತ ಆಶ್ಚರ್ಯ ಆಗ್ತಾ ಇದ್ದೀರಾ? ಇದು ಇವರ ಆಯ್ಕೆ ಅಲ್ಲ. ಬದುಕನ್ನು ಸಾಗಿಸಲು ಈ ದಾರಿಯನ್ನು ಹಿಡಿದಿದ್ದಾರೆ. ತನ್ನ ಮಗಳಾದ ಶ್ರೇಯಾಳನ್ನು ಡಾಕ್ಟರ್ ಮಾಡಬೇಕೆಂಬುದು ಇವರ ಮಹದ್ದಾಸೆ.
ಅಸಲಿ ಘಟನೆ ಏನು?
ಗಾಯತ್ರಿ ಅವರಿಗೆ ಹದಿಹರೆಯದ ವಯಸ್ಸಿನಲ್ಲಿ ಮದುವೆ ಮಾಡಿದರು. ಆಕೆಗೆ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಹೆಣ್ಣು ಮಗು ಜನ್ಮ ನೀಡಿದ ನಂತರ ಗಾಯತ್ರಿಯನ್ನು ಆಕೆಯ ಗಂಡ ಬಿಟ್ಟು ಹೋಗುತ್ತಾರೆ. ಆ ಸಮಯಯದಲ್ಲಿ ದೊಡ್ಡ ಭಾರವೇ ಗಾಯತ್ರಿಯ ಮೈಮೇಲೆ ಬೀಳುತ್ತದೆ. ಆದರೆ ಯಾವುದೇ ವಿಷಯಕ್ಕೂ ಕೊರಗದೇ ಎಲ್ಲವನ್ನು ನಿಭಾಯಿಸಲು ಈ ತಾಯಿ ಮುಂದಾಗುತ್ತಾರೆ.
ತನ್ನ ಮಗಳನ್ನು ಡಾಕ್ಟರ್ ಮಾಡಬೇಕೆಂದು ಗಾಯತ್ರಿಯ ಕನಸು. ಹೆಣ್ಣು ಮಗಳನ್ನು ಯಾವ ರೀತಿಯಾಗಿ ಸಾಕಬೇಕು ಮತ್ತು ಸಮಾಜದಲ್ಲಿ ಹೇಗೆ ಬೆಳೆಸಬೇಕು ಎಂದು ಗಾಯತ್ರಿಗೆ ಚೆನ್ನಾಗಿ ತಿಳಿದಿತ್ತು. ಹೀಗಾಗಿ ಅಲ್ಲಿಂದ ಆರಂಭವಾಯ್ತು ತಾಯಿಯ ಹೊಸ ಜೀವನ.
ಪತಿಯು ಬಿಟ್ಟು ಹೋದ ನಂತರ ಗಾಯತ್ರಿ ತನ್ನ ತಂಗಿಯ ಮನೆಯಲ್ಲಿ ಮಗಳಾದ ಶ್ರೇಯಾಳನ್ನು ಬಿಟ್ಟು ಒಂದು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾರೆ. ಇಷ್ಟೆಲ್ಲಾ ಕೆಲಸವನ್ನು ಮಾಡಿದ್ರು ಕೂಡ ಮಗಳ ವಿದ್ಯಾಭ್ಯಾಸಕ್ಕೆ ಹಣ ಸಾಕಾಗುವುದಿಲ್ಲ ಮತ್ತು ಇಲ್ಲಿ ಗಾಯತ್ರಿಗೆ ತುಂಬಾ ಶೋಷಣೆ ನಡೆಯುತ್ತಾ ಇರುತ್ತದೆ. ಎಲ್ಲಾ ಕಂಪನಿಗಳಲ್ಲಿಯೂ 9 ಗಂಟೆಗಳ ಕಾಲ ದುಡಿಯಲು ಹೇಳಿದ್ರೆ ಇಲ್ಲಿ ಮಾತ್ರ 10 ರಿಂದ 12 ಗಂಟೆಗಳಕಾಲ ಡುಡಿಸುತ್ತಾ ಇದ್ರೆಂತೆ, ಅದೂ ಅಲ್ಲಅದೇ ಸಂಬಳ ಕೂಡ ತುಂಬಾ ಕಡಿಮೆ ಕೊಡ್ತಾ ಇದ್ರಂತೆ.
ಇದನ್ನೂ ಓದಿ: ಗೂಗಲ್ ಡೂಡಲ್ನಲ್ಲಿ ಬಬಲ್ ಟೀ ಮಾಡ್ತಿದೆ ನಾಯಿಮರಿ, ಇಲ್ಲಿದೆ ನೋಡಿ ಇಂಟ್ರೆಸ್ಟಿಂಗ್ ಮಾಹಿತಿ
ಆಗ ಗಾಯತ್ರಿಯ ತಾಯಿ ಡ್ರೈವಿಂಗ್ ಬಗ್ಗೆ ಸಲಹೆಯನ್ನು ನೀಡುತ್ತಾರೆ. ಅದಾಗ ಇ -ರಿಕ್ಷಾವನ್ನು ಗಾಯತ್ರಿ ಖರೀದಿಸುತ್ತಾರೆ ಮತ್ತು ಇದರಿಂದ ಉತ್ತಮ ಹಣಗಳಿಕೆ ಮಾಡಲು ಶುರು ಮಾಡುತ್ತಾರೆ. ಅಲ್ಲಿಯ ತನಕ ಮಗಳ ವೈದ್ಯಕೀಯ ಕ್ಷೇತ್ರಕ್ಕೆ ಹಣ ಸಾಕಾಗ್ತಾ ಇರೋಲ್ಲ ಆದ್ರೆ ಗಾಯತ್ರಿ ಯಾವಾಗ ಆಟೋ ಚಾಲಕಿ ಆಗುತ್ತಾರೆಯೋ ಆಗಿಂದ ಜೀವನವನ್ನು ಸಾಗಿಸಲು ಸುಲಭವಾಯ್ತು ಎನ್ನುತ್ತಾರೆ ಗಾಯತ್ರಿ.
ನನಗಾಗಿ ನನ್ನ ತಾಯಿ ತುಂಬ ಕಷ್ಟ ಪಡುತ್ತಾ ಇದ್ದಾರೆ. ಆಕೆಯ ಕನಸು ನಾನು ನನಸು ಮಾಡೇ ಮಾಡ್ತೀನಿ. ಇಂತಹ ಕಷ್ಟವನ್ನು ಮುಂದೆ ನನ್ನ ತಾಯಿ ನೋಡದೇ ಇರುವ ಹಾಗೆ ಸಾಕುತ್ತೀನಿ ಎಂದು ಮಗಳು ಶ್ರೇಯ ಹೇಳಿಕೊಂಡಿದ್ದಾರೆ.
ಒಟ್ಟಿನಲ್ಲಿ, ಇದರಿಂದ ಸಮಾಜ ಕಲಿಯುವಂತದ್ದು, ತಿಳಿಯುವಂತದ್ದು ಹಲವಾರು ಇವೆ. ಹೆಣ್ಣು ಮಗು ಎಂದು ಬಿಟ್ಟು ಹೋದ ಗಂಡನ ಹಿಂದೆ ಗೋಗರೆದುಕೊಂಡು ಹೋಗದೇ, ತನ್ನ ಕಾಲ ಮೇಲೆ ತಾನೇ ನಿಂತು ಮಗಳ ವಿದ್ಯಾಭ್ಯಾಸ ನೋಡಿಕೊಳ್ಳುತ್ತಾ ಇರುವ ತಾಯಿಗೊಂದು ಸಲಾಂ ಹೇಳಲೇಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ