• Home
  • »
  • News
  • »
  • trend
  • »
  • Durian Fruit: ಹಣ್ಣಿನ ಸಿಪ್ಪೆಯಿಂದ ಬ್ಯಾಂಡೇಜ್, ಗಾಯ ಬೇಗ ಗುಣವಾಗುತ್ತಂತೆ!

Durian Fruit: ಹಣ್ಣಿನ ಸಿಪ್ಪೆಯಿಂದ ಬ್ಯಾಂಡೇಜ್, ಗಾಯ ಬೇಗ ಗುಣವಾಗುತ್ತಂತೆ!

ಡುರಿಯನ್ ಹಣ್ಣು

ಡುರಿಯನ್ ಹಣ್ಣು

ಅಲ್ಲಿನ ವಿಜ್ಞಾನಿಗಳು ಎಸೆಯಲಾದ ಡುರಿಯನ್ ಹಣ್ಣಿನ ಸಿಪ್ಪೆಯನ್ನು ಮರು ಉಪಯೋಗಿಸಿ, ಅದನ್ನು ಬ್ಯಾಕ್ಟೀರಿಯಾ ವಿರೋಧಿ ಜೆಲ್ ಬ್ಯಾಂಡೇಜ್ ಆಗಿ ಪರಿವರ್ತಿಸುತ್ತಿದ್ದಾರೆ.

  • Share this:

ತ್ಯಾಜ್ಯ ವಸ್ತುಗಳಿಂದ ಪರಿಸರ ಹಾಳಾಗುತ್ತಿರುವುದು ನಮ್ಮ ದೇಶದಲ್ಲಿ ಮಾತ್ರವಲ್ಲ, ವಿಶ್ವದಾದ್ಯಂತ ಇರುವ ಸಮಸ್ಯೆ. ಹಾಗಾಗಿ, ಹಲವೆಡೆ ತ್ಯಾಜ್ಯವನ್ನು ಮರು ಬಳಕೆಯ ಪರಿಣಾಮಕಾರಿ ವಸ್ತುವನ್ನಾಗಿ ಪರಿವರ್ತಿಸಲು ಒಂದಲ್ಲ ಒಂದು ಪ್ರಯೋಗಗಳು ನಡೆಯುತ್ತಲೇ ಇರುತ್ತವೆ. ಅಂತಹ ಒಂದು ಪ್ರಯೋಗ ಸಿಂಗಾಪುರ(Singapore)ದಲ್ಲಿ ಯಶಸ್ವಿಯಾಗಿದೆ. ಸಿಂಗಾಪುರದ ನನ್ಯಾಂಗ್ ಟೆಕ್ನೋಲಾಜಿಕ್ ವಿಶ್ವವಿದ್ಯಾಲಯದ (ಎನ್‍ಟಿಯು) ವಿಜ್ಞಾನಿಗಳು , ಆಹಾರ ತ್ಯಾಜ್ಯ ಎಸೆಯುವ ಬದಲು , ಅದನ್ನು ಪರಿಣಾಮಕಾರಿಯಾಗಿ ಬಳಸಲು ಹೊಸ ಮಾರ್ಗವೊಂದನ್ನು ಕಂಡು ಹಿಡಿದಿದ್ದಾರೆ.


ಅಲ್ಲಿನ ವಿಜ್ಞಾನಿಗಳು ಎಸೆಯಲಾದ ಡುರಿಯನ್ ಹಣ್ಣಿನ(Durian Fruit) ಸಿಪ್ಪೆಯನ್ನು ಮರು ಉಪಯೋಗಿಸಿ, ಅದನ್ನು ಬ್ಯಾಕ್ಟೀರಿಯಾ ವಿರೋಧಿ ಜೆಲ್ ಬ್ಯಾಂಡೇಜ್ ಆಗಿ ಪರಿವರ್ತಿಸುತ್ತಿದ್ದಾರೆ.


ಅದಕ್ಕಾಗಿ ಅವರು ಬಳಸಿದ ವಿಧಾನ ಹೀಗಿದೆ: ಡುರಿಯನ್ ಹಣ್ಣಿನ ಸಿಪ್ಪೆಯನ್ನು ಜಾಗರೂಕತೆಯಿಂದ ಕತ್ತರಿಸಿ, ಒಣಗಿಸುವುದು. ಬಳಿಕ ಅದರ ಸಿಪ್ಪೆಯಿಂದ ಸೆಲ್ಯುಲೋಸ್ ಪುಡಿಯನ್ನು ತೆಗೆದುಕೊಳ್ಳುವುದು. ನಂತರ ಆ ಸೆಲ್ಯುಲೋಸ್ ಪುಡಿಯನ್ನು ಗ್ಲಿಸರಾಲ್ ಎಂಬ ದ್ರಾವಣದೊಂದಿಗೆ ಮಿಶ್ರ ಮಾಡುವುದು. ಅದನ್ನು ಸರಿಯಾಗಿ ಮಿಶ್ರಣ ಮಾಡಿದ ನಂತರ ಅದು ಮೃದುವಾದ ಹೈಡ್ರೋಜೆಲ್ ರೂಪಕ್ಕೆ ತಿರುಗುತ್ತದೆ. ನಂತರ ಅದನ್ನು ಬ್ಯಾಂಡೆಜ್ ಪಟ್ಟಿಗಳಾಗಿ ಕತ್ತರಿಸಲು ಬಳಸಲಾಗುತ್ತದೆ.


ಸಿಂಗಾಪುರದ ವಿಶ್ವ ವಿದ್ಯಾನಿಯದ ಫುಡ್ ಸೈನ್ಸ್ ಮತ್ತು ಟೆಕ್ನಾಲಜಿ ಪ್ರೋಗ್ರಾಂ ನಿರ್ದೇಶಕ ಪ್ರೊಫೆಸರ್ ವಿಲಿಯಂ ಚೆನ್ ಈ ಆವಿಷ್ಕಾರದ ಬಗ್ಗೆ ಮಾತನಾಡುತ್ತಾ, ಸಿಂಗಾಪುರದ ಜನರು ಒಂದು ವರ್ಷಕ್ಕೆ ಸರಾಸರಿ 12 ಮಿಲಿಯನ್ ಡುರಿಯನ್ ಹಣ್ಣುಗಳನ್ನು ಸೇವಿಸುತ್ತಾರೆ ಎಂದು ತಿಳಿಸಿದ್ದಾರೆ. “ ತಿರುಳಿನ ಹೊರತಾಗಿ, ನಾವು ಈ ಹಣ್ಣಿನ ಸಿಪ್ಪೆ ಮತ್ತು ಬೀಜದಿಂದ ಹೆಚ್ಚಿನದೇನೂ ಮಾಡುವಂತಿರಲಿಲ್ಲ, ಮತ್ತು ಇದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿತ್ತು” ಎಂದು ವಿಲಿಯಂ ಚೆನ್ ಹೇಳಿದ್ದಾರೆ.


ವರದಿಗಳ ಪ್ರಕಾರ, ಜನರು ಈ ಹಣ್ಣಿನ ಸಿಪ್ಪೆಗಳನ್ನು ಹೆಚ್ಚಾಗಿ ಎಸೆಯುತ್ತಿದ್ದರು ಮತ್ತು ಸುಡುತ್ತಿದ್ದರು, ಇದು ಪರಿಸರ ತ್ಯಾಜ್ಯ ಸೃಷ್ಟಿಗೆ ಕಾರಣ ಆಗುತ್ತಿತ್ತು.


ತಂತ್ರಜ್ಞಾನದ ಮೂಲಕ ಇತರ ಆಹಾರ ತ್ಯಾಜ್ಯಗಳನ್ನು ಕೂಡ ಹೈಡ್ರೊಜೆಲ್ ಆಗಿ ಪರಿವರ್ತಿಸಬಹುದು. ಸೋಯಾಬೀನ್ ಮತ್ತು ಇತರ ಬಳಸಿದ ಧಾನ್ಯಗಳನ್ನು ಸುಲಭವಾಗಿ ಹೈಡ್ರೊಜೆಲ್ ಆಗಿ ಪರಿವರ್ತಿಸಬಹುದು, ಅದರಿಂದ ಆಹಾರ ತ್ಯಾಜ್ಯ ಕಡಿಮೆ ಆಗುತ್ತದೆ ಎಂದು ವಿಲಿಯಂ ಚೆನ್ ಹೇಳಿದ್ದಾರೆ.


ಸಾಂಪ್ರದಾಯಿಕ ಬ್ಯಾಂಡೇಜ್‍ಗಳಿಗೆ ಹೋಲಿಸಿದಾಗ, ಆರ್ಗನೋ -ಹೈಡ್ರೊಜೆಲ್ ಬ್ಯಾಂಡೆಜ್‍ಗಳು , ಗಾಯವಾದ ಭಾಗಗಳನ್ನು ತೇವ ಮತ್ತು ತಂಪಾಗಿ ಇಡುತ್ತದೆ, ಆ ಕಾರಣದಿಂದಾಗಿ ಗಾಯವು ಬಹಳ ಬೇಗ ವಾಸಿ ಆಗುತ್ತದೆ.


ತ್ಯಾಜ್ಯ ವಸ್ತುಗಳು ಮತ್ತು ಈಸ್ಟ್ ಬಳಸಿ ಆ್ಯಂಟಿ ಮೈಕ್ರೋಬಿಯಲ್ ಬ್ಯಾಂಡೇಜ್‍ಗಳನ್ನು ಉತ್ಪಾದಿಸುವುದು, ಸಾಂಪ್ರದಾಯಿಕ ಬ್ಯಾಂಡೇಜ್ ಉತ್ಪಾದನೆಗಿಂತ ಕಡಿಮೆ ವೆಚ್ಚದಾಯಕ.


ಸಾಂಪ್ರದಾಯಿಕ ಬ್ಯಾಂಡೇಜ್‍ಗಳಲ್ಲಿನ ಆ್ಯಂಟಿ ಮೈಕ್ರೋಬಿಯಲ್ ಅಂಶಗಳನ್ನು ತಾಮ್ರದ ಆಯಾನ್ ಮತ್ತು ಬೆಳ್ಳಿಯಂತಹ ದುಬಾರಿ ಲೋಹದ ಸಂಯುಕ್ತಗಳಿಂದ ಬರುತ್ತದೆ ಎಂದು ನನ್ಯಾಂಗ್ ಟೆಕ್ನೋಲಾಜಿಕ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ವಿವರಿಸಿದ್ದಾರೆ.


ಡುರಿಯನ್ ಹಣ್ಣಿನ ಸಗಟು ವ್ಯಾಪಾರಿ ಟ್ಯಾನ್ ಎಂಗ್ ಚುವಾನ್ ಎಂಬವರು, ಸ್ಥಳೀಯ ಮಾಧ್ಯಮದ ಜೊತೆ ಮಾತನಾಡುತ್ತಾ , ಅವರು ಪ್ರತಿ ನಿತ್ಯ ಕನಿಷ್ಟ 30 ಕ್ರೇಟ್‍ಗಳಷ್ಟು ಅಂದರೆ, ಸುಮಾರು 1,800 ಕೇಜಿ ತೂಕದಷ್ಟು ಡುರಿಯನ್ ಹಣ್ಣುಗಳನ್ನು ಮಾರುತ್ತಾರೆ. ಈ ಆವಿಷ್ಕಾರದಿಂದಾಗಿ ಡುರಿಯನ್ ಹಣ್ಣನ್ನು ತಿನ್ನುವುದನ್ನು ಹೆಚ್ಚು ಆನಂದಾಯಕವಾಗಿಸಬಲ್ಲದು ಎಂದು ಹೇಳಿದ್ದಾರೆ. ಮತ್ತು ಅವರ ಮಾತುಗಳಲ್ಲಿ ಹೇಳುವುದಾದರೆ ಅದು “ಹೆಚ್ಚು ಸಮರ್ಥನೀಯ” ಆಗಬಲ್ಲದು.

Published by:Latha CG
First published: