Viral Video ತಮ್ಮ ಟರ್ಬನ್ ಬಳಸಿ ಜಲಪಾತದಲ್ಲಿ ಬೀಳುತ್ತಿದ್ದ ಇಬ್ಬರನ್ನು ರಕ್ಷಿಸಿದ ಸಿಖ್ ಯುವಕರು
ನಮಗೆ ಹೇಗಾದ್ರೂ ಮಾಡಿ ಅವರನ್ನು ರಕ್ಷಿಸಬೇಕೆಂಬ ಯೋಚನೆ ಬಂತು, ಕೂಡಲೇ ನಾವೆಲ್ಲರೂ ನಮ್ಮ ಪೇಟ ತೆಗೆದು ಹಗ್ಗದ ರೂಪದಲ್ಲಿ ಕೆಳಗೆ ಇಳಿ ಬಿಡಲಾಯ್ತು. ನಂತರ ಎಲ್ಲ ಗೆಳೆಯರು ಕೈ ಕೈ ಹಿಡಿದು ಇಬ್ಬರನ್ನು ರಕ್ಷಣೆ ಮಾಡಲಾಯ್ತು
ಸೋಶಿಯಲ್ ಮೀಡಿಯಾ(Social Media)ದಲ್ಲಿ ಹೃದಯ ಸ್ಪರ್ಶಿ ವಿಡಿಯೋ ವೈರಲ್ ಆಗಿದ್ದು, ಸಿಖ್ ಜನರ ಸಾಹಸ ಮತ್ತು ಅವರ ಹೃದಯವಂತಿಕೆಗೆ ನೆಟ್ಟಿಗರು ಸಲಾಮ್ ಹೇಳುತ್ತಿದ್ದಾರೆ. ಐವರು ಸಿಖ್ ಯುವಕರು (Sikh men) ನೀರಿನಲ್ಲಿ ಸಿಲುಕಿದ್ದ ಇಬ್ಬರನ್ನು ತಮ್ಮ ಪೇಟ (Turbans )ಬಳಸಿ ರಕ್ಷಣೆ ಮಾಡಿದ್ದಾರೆ. ಸಾಮಾನ್ಯವಾಗಿ ಸಿಖ್ ಸಮುದಾಯದವರು ತಮ್ಮ ಪೇಟವನ್ನು ಯಾವುದೇ ಕಾರಣಕ್ಕೂ ಸಾರ್ವಜನಿಕವಾಗಿ ತೆಗೆಯಲ್ಲ. ತಮ್ಮ ಸಂಪ್ರದಾಯ ಮೀರಿ ಎರಡು ಜೀವಗಳನ್ನು ಉಳಿಸಿದ್ದಾರೆ. ಅಕ್ಟೋಬರ್ 11ರಂದು ವಿಡಿಯೋ (Viral Video) ಅಪ್ಲೋಡ್ ಮಾಡಲಾಗಿದ್ದು, ಇಡೀ ಪ್ರಪಂಚದಾದ್ಯಂತ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.
ಈ ಘಟನೆ ನಡೆದಿದ್ದು ಎಲ್ಲಿ?
ಕೆನಡಾದ ಬ್ರಿಟಿಷ್ ಕೊಲಂಬಿಯಾ(Canada’s British Columbia) ದ ಗೋಲ್ಡನ್ ಈಯರ್ಸ್ ಪ್ರಾವಿನ್ಸನ್ ಪಾರ್ಕ್ (Golden Ears Provincial Park) ನಲ್ಲಿ ಈ ಘಟನೆ ನಡೆದಿದೆ. ಕುಲ್ಜಿಂದರ್ ಸಿಂಗ್ ಮತ್ತು ಅವರ ನಾಲ್ವರು ಸ್ನೇಹಿತರು ಪಾರ್ಕ್ ನಲ್ಲಿ ವಾಯುವಿಹಾರಕ್ಕೆ ತೆರಳಿದ್ದರು. ಈ ವೇಳೆ ಜಲಪಾತದ ಇಳಿಜಾರಿನಲ್ಲಿ ಸಿಲುಕಿರುವ ಇಬ್ಬರು ಸಹಾಯಕ್ಕಾಗಿ ಕೂಗಿ ಕೊಳ್ಳುತ್ತಿದ್ದರು. ಅಲ್ಲಿದ್ದ ಕೆಲವರು ಪೊಲೀಸರಿಗೆ ಕರೆ ಮಾಡಲು ಪ್ರಯತ್ನಿಸಿದ್ದಾರೆ. ಆದ್ರೆ ಪೊಲೀಸರನ್ನು ಕಾಯುತ್ತಾ ಕುಳಿತುಕೊಳ್ಳದ ಸಿಖ್ ಗೆಳೆಯರು ತಮ್ಮ ಪೇಟವನ್ನು ಕಳಚಿ, ಸಹಾಯಕ್ಕೆ ಮುಂದಾಗಿದ್ದರು. ಸುಮಾರು 10 ಅಡಿ ಉದ್ದದಷ್ಡು ಬಟ್ಟೆ ಮಾಡಿ ಇಬ್ಬರನ್ನು ಮೇಲೆತ್ತಿದ್ದಾರೆ. ಇಬ್ಬರನ್ನು ರಕ್ಷಣೆ ಮಾಡುತ್ತಿರುವ ದೃಶ್ಯಗಳನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಕೊಲಂಬಿಯಾದ ಸಿಖ್ ಸಮುದಾಯದ ಟ್ವಿಟ್ಟರ್ ನಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಯುವಕರ ತ್ವರಿತ ಚಿಂತನೆ ಮತ್ತು ನಿಸ್ವಾರ್ಥ ಸೇವೆಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.
A video of the incident on Monday, in which five Sikh hikers tied their dastaars (turbans) together to save a man who had slipped and fallen at the Lower Falls at Golden Ears Park. Video courtesy @globalnews
ಇಬ್ಬರು ನೀರಿನಲ್ಲಿ ಸಿಲುಕಿರೋದು ನಮಗೆ ಕಾಣಿಸಿತು. ಎಲ್ಲರೂ ಸಹಾಯಕ್ಕಾಗಿ ಎಮೆರ್ಜನ್ಸಿ ನಂಬರ್ ಗೆ ಕರೆ ಮಾಡುತ್ತಿದ್ದರು, ಅಲ್ಲಿ ನಮಗೆ ಹೇಗಾದ್ರೂ ಮಾಡಿ ಅವರನ್ನು ರಕ್ಷಿಸಬೇಕೆಂಬ ಯೋಚನೆ ಬಂತು, ಕೂಡಲೇ ನಾವೆಲ್ಲರೂ ನಮ್ಮ ಪೇಟ ತೆಗೆದು ಹಗ್ಗದ ರೂಪದಲ್ಲಿ ಕೆಳಗೆ ಇಳಿ ಬಿಡಲಾಯ್ತು. ನಂತರ ಎಲ್ಲ ಗೆಳೆಯರು ಕೈ ಕೈ ಹಿಡಿದು ಇಬ್ಬರನ್ನು ರಕ್ಷಣೆ ಮಾಡಲಾಯ್ತು ಎಂದು ಸಿಖ್ ಯುವಕರು ಸ್ಥಳೀಯ ಮಾಧ್ಯಮದ ಜೊತೆ ಮಾತನಾಡಿದ್ದಾರೆ. ಆದರೆ ಯುವಕರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದು ಬಂದಿಲ್ಲ. ನೆಟ್ಟಿಗರು ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಉತ್ತರಾಖಂಡ್ (Uttarakhand) ದಲ್ಲಿ ಭಾರೀ ಮಳೆ(rainfalla)ಯಾಗುತ್ತಿದ್ದು, ಅಪಾರ ಪ್ರಮಾಣದ ಆಸ್ತಿ ಪ್ರವಾಹ(Flood)ದಲ್ಲಿ ಕೊಚ್ಚಿ ಹೋಗಿದೆ. ಪಾರ್ಕಿಂಗ್ ನಲ್ಲಿ ನಿಲ್ಲಿ ಸಲ್ಲಾಗಿದ್ದ ಕಾರ್ ಗಳು ಕೊಚ್ಚಿ ಹೋಗದಂತೆ ಹಗ್ಗಗಳಿಂದ ಕಟ್ಟಲಾಗಿದೆ. ಉತ್ತರಾಖಂಡ್ ನಲ್ಲಿ ಕಳೆದ ಎರಡು ದಿನಗಳಿಂದ ಮಳೆಯಾಗುತ್ತಿದ್ದು, ಸುಮಾರು 47 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಇದರಲ್ಲಿ 42 ಜನರ ಸಾವು ಒಂದೇ ದಿನವಾಗಿದೆ. ಉತ್ತರಾಖಂಡ್ ಭಾಗದಲ್ಲಿ ಅಪಾರ ಆಸ್ತಿ ಹಾನಿಯುಂಟಾಗಿದ್ದು, ಜನರು ಬೀದಿಗೆ ಬಂದಿದ್ದಾರೆ. ನೈನಿತಾಲ್ ಸಂಪರ್ಕ ಸಂಪೂರ್ಣ ಕಡಿತಗೊಂಡಿದ್ದು, ಜನರು ಸಿಲುಕಿಕೊಂಡಿದ್ದಾರೆ. ನೈನಿತಾಲ್ ಗೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳಲ್ಲಿ ಭೂ ಕುಸಿತವಾಗಿದೆ. ಕಾಠಗೋದಾಮ್ ಗೆ ರೈಲ್ವೇ ಸ್ಟೇಶನ್ ಬಳಿ ಹಳಿಗಳು ಮಳೆಯ ರಭಸಕ್ಕೆ ಕೊಚ್ಚಿ ಹೋಗಿದೆ. ಈ ರೈಲ್ವೇ ಮಾರ್ಗ ಸಿದ್ಧಪಡಿಸಲು ಕನಿಷ್ಠ 15 ದಿನಗಳಾದ್ರೂ ಬೇಕಾಗುತ್ತದೆ ಎಂದು ಹೇಳಲಾಗಿದೆ. ಈ ನಡುವೆ ಉತ್ತರಾಖಂಡ್ ಕುಮಾಓ ಜಿಲ್ಲೆಯಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಗದ್ವಾಲ್ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆ ಕ್ಷೀಣವಾಗಲಿದೆ.
Published by:Mahmadrafik K
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ