You Need a Break: ಕೆಲಸದ ವೇಳೆ ಈ ರೀತಿ ಅನಿಸುತ್ತಿದ್ದರೆ ಮೊದಲು ಲ್ಯಾಪ್​​ಟಾಪ್​​ ಪಕ್ಕಕ್ಕಿಟ್ಟು ಟ್ರಿಪ್​​ಗೆ ಹೊರಡಿ..

Take a break from your daily routine: ನಿಮಗಾಗಿ ಕೆಲವು ದಿನಗಳಲ್ಲಿ ಮೀಸಲಾಗಿಟ್ಟುಕೊಳ್ಳಿ. ಒಬ್ಬರೇ ಸುಂದರ ಸ್ಥಳಗಳಿಗೆ ಭೇಟಿ ನೀಡಿ. ನಿಮಗೆ ಖುಷಿ ಕೊಡುವ ಕೆಲಸಗಳನ್ನು ಮಾಡಿ. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಿರಿ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ವೃತ್ತಿ ಜೀವನ ಹಾಗೂ ವೈಯಕ್ತಿಕ ಜೀವನದಲ್ಲಿ ಸಮತೋಲನ ತರಲು ಇಂದು ಬಹಳಷ್ಟು ಜನರು ಪ್ರಯತ್ನಿಸುತ್ತಿದ್ದು ಆ ಕಾರ್ಯದಲ್ಲಿ ವಿಫಲತೆಯನ್ನು ಕಾಣುತ್ತಿದ್ದಾರೆ. ವೃತ್ತಿಯ ಒತ್ತಡಗಳನ್ನು ಮನೆಯ ಚಟುವಟಿಕೆಗಳಲ್ಲಿ ತಂದು ಮನೆಗಳಲ್ಲಿ ನೆಮ್ಮದಿ ಇಲ್ಲದ ವಾತಾವರಣಗಳು ಸೃಷ್ಟಿಯಾಗುತ್ತಿರುವುದು ಇಂದು ಸರ್ವೇಸಾಮಾನ್ಯವಾಗಿದೆ. ಇನ್ನು ಕೆಲವರು ಮನೆಯಲ್ಲಿನ ಒತ್ತಡಗಳನ್ನು ವೃತ್ತಿಜೀವನದಲ್ಲಿ ನೆನಪು ಮಾಡಿಕೊಳ್ಳುವ ಮೂಲಕ ಕಚೇರಿ ಕೆಲಸಗಳಲ್ಲಿ ಹಿಂದೆ ಬೀಳುವುದೂ ಇದ್ದೇ ಇದೆ. ಮಕ್ಕಳ ಆನ್‌ಲೈನ್ ತರಗತಿಗಳು, ಮನೆಯ ಕೆಲಸ ಹಾಗೂ ವರ್ಕ್ ಫ್ರಮ್ ಹೋಮ್ ಧಾವಂತ ಹೀಗೆ ಮಹಿಳೆ ಪುರುಷರು ತಮ್ಮ ದೈನಂದಿನ ಜೀವನದಲ್ಲಿ ಸಿಕ್ಕಾಪಟ್ಟೆ ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂಬುದು ಅಧ್ಯಯನಗಳಿಂದ ತಿಳಿದು ಬಂದಿದ್ದು ಅದರಲ್ಲೂ ಮಹಿಳೆಯರು ಮಾನಸಿಕ ನೆಮ್ಮದಿಯನ್ನು ಕಳೆದುಕೊಳ್ಳುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.

    ಪುರುಷನೇ ಆಗಿರಲಿ ಮಹಿಳೆಯರೇ ಆಗಿರಲಿ ಒತ್ತಡ ಎಂಬುದು ಸಂಪೂರ್ಣ ಜೀವನವನ್ನು ಕಬಳಿಸುವ ಉರುಳಾಗಿರಬಾರದು. ಹೆಚ್ಚಿನ ಒತ್ತಡ ನಿಮ್ಮ ವೈಯಕ್ತಿಕ ಜೀವನದಲ್ಲಿ ಕೂಡ ಪರಿಣಾಮ ಬೀರಬಾರದು ಎಂಬ ಅಂಶವನ್ನು ನೀವು ನೆನಪಿನಲ್ಲಿಟ್ಟುಕೊಳ್ಳಬೇಕು.

    ನೀವು ಹೆಚ್ಚಿನ ಕೆಲಸದ ಒತ್ತಡಕ್ಕೆ ಒಳಗಾಗಿದ್ದೀರಿ ಎಂಬುದು ನಿಮ್ಮ ದೈನಂದಿನ ಚಟುವಟಿಕೆಗಳಿಂದ ತಿಳಿದು ಬರುತ್ತದೆ ಎಂಬುದು ನಿಮಗೆ ಗೊತ್ತಿದೆಯೇ? ನೀವು ಹೆಚ್ಚಿನ ಒತ್ತಡಕ್ಕೆ ಒಳಗಾಗಿದ್ದೀರಿ ಎಂದಾದಲ್ಲಿ ನಿಮ್ಮ ಮನಸ್ಸಿಗೆ ಕೂಡಲೇ ವಿರಾಮವನ್ನು ನೀವು ನೀಡಬೇಕಾಗುತ್ತದೆ.ನೀವು ತೀವ್ರ ಒತ್ತಡಕ್ಕೆ ಒಳಗಾಗಿದ್ದೀರಿ ಎಂಬುದನ್ನು ತಿಳಿದುಕೊಳ್ಳುವುದು ಹೇಗೆ ಎಂಬುದನ್ನು ಇಂದಿಲ್ಲಿ ನಾವು ಅರಿತುಕೊಳ್ಳಲಿದ್ದು ಇದರಿಂದ ಮುಕ್ತಿ ಪಡೆಯುವ ಸಲಹೆಗಳನ್ನು ನಾವು ನೀಡಲಿದ್ದೇವೆ. ತೀವ್ರ ಒತ್ತಡಕ್ಕೆ ಒಳಗಾಗಿರುವ ಚಿಹ್ನೆಗಳನ್ನು ಇಲ್ಲಿ ನೀಡಿದ್ದೇವೆ.

    ಕೇಂದ್ರೀಕರಿಸಲು ಕಷ್ಟವಾಗುತ್ತದೆ:

    ಒಮ್ಮೊಮ್ಮೆ ವಿಪರೀತ ಒತ್ತಡದಿಂದ ನೀವು ಗಮನಿಸಬೇಕಾದ ಮುಖ್ಯ ಅಂಶಗಳು ಹೊರೆಯಾಗಿ ನಿಮಗೆ ತೋರಬಹುದು. ಸಣ್ಣಪುಟ್ಟ ಕೆಲಸಗಳು ಒತ್ತಡವಾಗಿ ನಿಮ್ಮನ್ನು ಕಾಡಬಹುದು. ನಿಮ್ಮ ಮನಸ್ಸು ಸುಖಾಸುಮ್ಮನೆ ಅಲೆದಾಡುತ್ತದೆ ಹಾಗೂ ಬೇಡದ ಚಿಂತೆಗಳಿಗೆ ಒಳಗಾಗುತ್ತದೆ.

    ಸುಸ್ತು ನಿಮ್ಮನ್ನು ಆವರಿಸಿಕೊಳ್ಳುತ್ತದೆ:

    ನಿರಾಸೆ, ಸುಸ್ತು ನಿಮ್ಮನ್ನು ಹಿಂಬಾಲಿಸುತ್ತಿರುತ್ತದೆ. ನೀವು ಮಾಡುವ ಕಾರ್ಯಗಳಲ್ಲಿ ನೀವು ವಿಫಲತೆಯನ್ನು ಅನುಭವಿಸುವಂತೆ ತೋರುತ್ತದೆ. ಒಂದು ರೀತಿಯ ಅಂಜಿಕೆ ನಿಮ್ಮನ್ನು ಕಾಡುತ್ತದೆ.

    ಜೀವನದ ಪ್ರಮುಖ ಘಟ್ಟಗಳನ್ನು ಕಳೆದುಕೊಳ್ಳುವುದು:

    ನಿಮ್ಮ ಮಾನಸಿಕ ಹಾಗೂ ದೈಹಿಕ ಒತ್ತಡಗಳಿಂದ ನಿಮ್ಮ ಸ್ನೇಹಿತರು ಕುಟುಂಬ ಸದಸ್ಯರನ್ನು ನೀವು ದೂರಮಾಡಿಕೊಳ್ಳುತ್ತೀರಿ. ನಿಮ್ಮ ಒತ್ತಡದಲ್ಲಿ ನೀವು ಪೂರ್ಣವಾಗಿ ಮುಳುಗಿರುವುದರಿಂದ ನಿಮಗಾಗಿ ಸಮಯ ಮೀಸಲಿರಿಸಬೇಕೆಂಬ ಅಂಶ ಕೂಡ ನಿಮಗೆ ಮರೆತುಹೋಗಿರುತ್ತದೆ.

    ಇದನ್ನೂ ಓದಿ: Dont be Bossy: ಕೆಲಸದ ಮಧ್ಯೆ ಹೊರ ಹೋಗಲು ಉದ್ಯೋಗಿಗೆ ಬಿಡುವು ಕೊಡದ ಬಾಸ್​​ಗೆ 1.8 ಕೋಟಿ ದಂಡ!

    ದೈನಂದಿನ ಕೆಲಸಗಳ ಮೇಲೆ ಶ್ರದ್ಧೆ ಇಲ್ಲದಿರುವುದು:

    ಒತ್ತಡದಿಂದಾಗಿ ಕೆಲಸದ ವಿರಾಮ ಇಲ್ಲದೇ ಇರುವುದರಿಂದ ನಿಮ್ಮ ಸಣ್ಣಪುಟ್ಟ ಕೆಲಸಗಳೂ ನಿಮಗೆ ಮರೆತುಹೋಗುತ್ತದೆ. ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ನಿಮ್ಮಿಂದ ಸಾಧ್ಯವಾಗದೇ ಹೋಗಬಹುದು. ಹಾಗಾಗಿ ನಿಮ್ಮ ಜೀವನದಲ್ಲಿ ನೀವು ವಿರಾಮ ವಿಶ್ರಾಂತಿಯನ್ನು ತೆಗೆದುಕೊಳ್ಳುವುದು ಮುಖ್ಯವಾಗಿದೆ.

    ವಿರಾಮ ತೆಗೆದುಕೊಳ್ಳುವುದು ಹೇಗೆ?

    • ಇದಕ್ಕೆ ಇರುವ ಉತ್ತರ ತುಂಬಾ ಸರಳ ಅದುವೇ ಸ್ವಯಂ ಕಾಳಜಿಯಾಗಿದೆ. ನಿಮಗಾಗಿ ಕೆಲವು ದಿನಗಳಲ್ಲಿ ಮೀಸಲಾಗಿಟ್ಟುಕೊಳ್ಳಿ. ಒಬ್ಬರೇ ಸುಂದರ ಸ್ಥಳಗಳಿಗೆ ಭೇಟಿ ನೀಡಿ. ನಿಮಗೆ ಖುಷಿ ಕೊಡುವ ಕೆಲಸಗಳನ್ನು ಮಾಡಿ. ಕುಟುಂಬ ಸದಸ್ಯರೊಂದಿಗೆ ಕಾಲ ಕಳೆಯಿರಿ.

    • ನಿಮ್ಮ ಪೋಷಕರು, ಸಂಗಾತಿ, ಮಕ್ಕಳು ಹಾಗೂ ಸ್ನೇಹಿತರೊಂದಿಗೆ ಅತ್ಯಮೂಲ್ಯ ಸಮಯಗಳನ್ನು ಕಳೆಯಿರಿ. ಜೀವನದಲ್ಲಿ ನಿಮ್ಮ ವೃತ್ತಿ ಬದುಕಿಗಿಂತ ಅತ್ಯಮೂಲ್ಯ ಆಸ್ತಿ ನಿಮ್ಮ ಕುಟುಂಬ ಸದಸ್ಯರು ಎಂಬುದನ್ನು ಮರೆಯದಿರಿ. ನಿಮ್ಮ ಮೆಚ್ಚಿನ ಪುಸ್ತಕಗಳನ್ನು ಓದಿ. ಸಂಗೀತ ಆಲಿಸಿ. ಧ್ಯಾನ, ಪ್ರಾಣಾಯಾಮಗಳನ್ನು ಮಾಡಿ.

    • ಈ ವಿರಾಮದ ನಂತರ ಮರಳಿ ನಿಮ್ಮ ದೈನಂದಿನ ಜೀವನಕ್ಕೆ ಮರಳಿದಾಗ ಹಿಂದೆ ಇದ್ದ ವಿಷಯಗಳನ್ನು ಬದಲಾಯಿಸಿಕೊಳ್ಳಿ. ನಿಮ್ಮ ಹೊರೆಯನ್ನು ಇಳಿಸಿಕೊಳ್ಳಿ. ನಡು ನಡುವೆ ಸ್ವಲ್ಪ ಸ್ವಲ್ಪ ವಿರಾಮಗಳನ್ನು ತೆಗೆದುಕೊಂಡೇ ನಿಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಡೆಸಿ

    Published by:Kavya V
    First published: