Viral Video: ದಶಕಗಳ ಹಿಂದೆ ಕಳೆದುಹೋದವರು ಮತ್ತೆ ಸಿಕ್ಕ ಅದ್ಭುತ ಕ್ಷಣ, ವಿಡಿಯೋ ನೋಡಿ

ಕಳೆದ ಏಳು ವರ್ಷಗಳಲ್ಲಿ ಒಬ್ಬರಿಗೊಬ್ಬರು ಅನೇಕ ಬಾರಿ ಮುಖಾಮುಖಿಯಾದರೂ ಸಹ ಪರಸ್ಪರರ ಬಗ್ಗೆ ತಿಳಿಯದೆ ಜೀವನವನ್ನು ನಡೆಸುತ್ತಿದ್ದ ಇಬ್ಬರು ಒಡಹುಟ್ಟಿದವರ ನಡುವಿನ ಭೇಟಿಯ ಕಥೆಯಿದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ರೇಮಂಡ್ ಟರ್ನರ್ ಮತ್ತು ಕ್ರಿಸ್ಟಿನಾ ಸ್ಯಾಡ್ಬೆರ್ರಿ ಟೆಕ್ಸಾಸ್ ನ ಫೋರ್ಟ್‌ವರ್ತ್ ನಲ್ಲಿರುವ ಮಕ್ಕಳ ಆಸ್ಪತ್ರೆಯಾದ ಕುಕ್ ಚಿಲ್ಡ್ರನ್ಸ್ ಮೆಡಿಕಲ್ ಸೆಂಟರ್ ನಲ್ಲಿ ತಾವು ಇಬ್ಬರು ಒಡಹುಟ್ಟಿದವರು ಎಂದು ತಿಳಿಯದೆ ಅನೇಕ ಬಾರಿ ಪರಸ್ಪರ ಭೇಟಿಯಾಗಿದ್ದಾರೆ.

ವರ್ಷಗಳ ನಂತರ ಭೇಟಿಯಾದ ಒಡಹುಟ್ಟಿದವರು

ವರ್ಷಗಳ ನಂತರ ಭೇಟಿಯಾದ ಒಡಹುಟ್ಟಿದವರು

  • Share this:
ಚಿಕ್ಕವರಾಗಿದ್ದಾಗ ಅಣ್ಣ ತಮ್ಮ ಇಬ್ಬರು ಯಾವುದೋ ಊರ ಜಾತ್ರೆಯಲ್ಲಿ (Fair)  ಅಥವಾ ಎಲ್ಲೋ ಪ್ರವಾಸಕ್ಕೆ (Tour) ಅಂತ ಜನನಿಬಿಡ ಪ್ರದೇಶದಲ್ಲಿ ಕಳೆದು ಹೋಗಿದ್ದು, ಅನೇಕ ವರ್ಷಗಳ ನಂತರ ಅವರಿಬ್ಬರೂ ಹೇಗೋ, ಎಲ್ಲೋ ಮತ್ತೆ ಭೇಟಿ ಆಗಿರುವ ಅನೇಕ ಕಥೆಗಳನ್ನು ನಾವು ಈ ಸಿನೆಮಾಗಳಲ್ಲಿ (Cinema) ನೋಡಿರುತ್ತೇವೆ. ಕೆಲವೊಮ್ಮೆ ಈ ಸಿನೆಮಾದಲ್ಲಿ ತೋರಿಸುವ ಕಥೆಗಳು ಕೆಲವೊಬ್ಬರ ನೈಜ ಜೀವನದಲ್ಲಿ ನಡೆದಿರುತ್ತವೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಇಲ್ಲೊಂದು ಘಟನೆ ಸಹ ಸಿನೆಮಾ ಘಟನೆಗಿಂತ ಯಾವುದರಲ್ಲಿಯೂ ಕಡಿಮೆ ಇಲ್ಲ ಎಂದು ಹೇಳಬಹುದು. ಎಲ್ಲೋ ಒಂದು ಘಟನೆಯಲ್ಲಿ ಕಳೆದು ಹೋದ ಒಡಹುಟ್ಟಿದವರನ್ನು (Siblings) ನಾವು ನೋಡಿರುತ್ತೇವೆ ಮತ್ತು ಅವರು ಎಷ್ಟೋ ವರ್ಷಗಳ ನಂತರ ತಮ್ಮ ಮತ್ತೆ ಒಂದಾದಾಗ ಆಗುವ ಆ ಖುಷಿ ಪದಗಳಲ್ಲಿ ಹೇಳುವುದಕ್ಕೆ ಸಾಧ್ಯವಿಲ್ಲ.

ಅನೇಕ ಬಾರಿ ಮುಖಾಮುಖಿಯಾದರೂ ಒಡಹುಟ್ಟಿದವರೆಂದು ತಿಳಿದೇ ಇರ್ಲಿಲ್ಲ 
ಆದರೆ ಈ ಘಟನೆಯಲ್ಲಿ ಒಂದು ವ್ಯತ್ಯಾಸವಿದೆ. ಅದು ಏನೆಂದರೆ ಕಳೆದ ಏಳು ವರ್ಷಗಳಲ್ಲಿ ಒಬ್ಬರಿಗೊಬ್ಬರು ಅನೇಕ ಬಾರಿ ಮುಖಾಮುಖಿಯಾದರೂ ಸಹ ಪರಸ್ಪರರ ಬಗ್ಗೆ ತಿಳಿಯದೆ ಜೀವನವನ್ನು ನಡೆಸುತ್ತಿದ್ದ ಇಬ್ಬರು ಒಡಹುಟ್ಟಿದವರ ನಡುವಿನ ಭೇಟಿಯ ಕಥೆಯಿದು ಎಂದು ಹೇಳಿದರೆ ತಪ್ಪಾಗುವುದಿಲ್ಲ. ರೇಮಂಡ್ ಟರ್ನರ್ ಮತ್ತು ಕ್ರಿಸ್ಟಿನಾ ಸ್ಯಾಡ್ಬೆರ್ರಿ ಟೆಕ್ಸಾಸ್ ನ ಫೋರ್ಟ್‌ವರ್ತ್ ನಲ್ಲಿರುವ ಮಕ್ಕಳ ಆಸ್ಪತ್ರೆಯಾದ ಕುಕ್ ಚಿಲ್ಡ್ರನ್ಸ್ ಮೆಡಿಕಲ್ ಸೆಂಟರ್ ನಲ್ಲಿ ತಾವು ಇಬ್ಬರು ಒಡಹುಟ್ಟಿದವರು ಎಂದು ತಿಳಿಯದೆ ಅನೇಕ ಬಾರಿ ಪರಸ್ಪರ ಭೇಟಿಯಾಗಿದ್ದಾರೆ.

ಇದನ್ನೂ ಓದಿ: Viral Story: ಮದುವೆಯೂ ಆಗಿಲ್ಲ, ಗೆಳತಿಯೂ ಇಲ್ಲ, ಆದ್ರೆ ಈ ಯಂಗ್​ ಹೀರೋ 48 ಮಕ್ಕಳ ತಂದೆ!

ಡಿಎನ್‌ಎ ಮೂಲಕ ತಿಳಿಯಿತು ಇವರಿಬ್ಬರ ಸಂಬಂಧ 
ಚೈಲ್ಡ್ ಲೈಫ್ ಝೋನ್ ನ ಸ್ಪಾರ್ಕಲ್ ಫ್ಲೈ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ನಿರ್ಮಾಪಕರಾಗಿರುವ ಟರ್ನರ್, ತನ್ನ ಪೂರ್ವಜರ ಬಗ್ಗೆ ತಿಳಿದುಕೊಳ್ಳುವ ಉದ್ದೇಶದಿಂದ ಸಾರ್ವಜನಿಕವಾಗಿ ಹೊಂದಿರುವ ವೈಯಕ್ತಿಕ ಜೀನೋಮಿಕ್ಸ್ ಮತ್ತು ಬಯೋಟೆಕ್ನಾಲಜಿ ಕಂಪನಿಯಾದ 23 ಅಂಡ್ ಮೀ ಗೆ ತನ್ನ ಡಿಎನ್‌ಎಯನ್ನು ಸಲ್ಲಿಸಿದನು. ಕ್ರಿಸ್ಟಿನಾ ಸ್ಯಾಡ್ಬೆರ್ರಿಯನ್ನು ದತ್ತು ತೆಗೆದುಕೊಳ್ಳಲಾಯಿತು. ಅವಳು ತನ್ನ ಜೈವಿಕ ಕುಟುಂಬವನ್ನು ಕಂಡು ಹಿಡಿಯಲು 2006 ರಲ್ಲಿ ತನ್ನ ಡಿಎನ್ಎಯನ್ನು ಇಲ್ಲಿಯೇ ಸಲ್ಲಿಸಿದ್ದಳು.

ಅವರು 2015 ರಿಂದ ತಮ್ಮ 11 ವರ್ಷದ ಮಗನನ್ನು ಕುಕ್ ಚಿಲ್ಡ್ರನ್ಸ್ ಗೆ ಕರೆ ತರುತ್ತಿದ್ದರು. ಅವರ ಅಪಾಯಿಂಟ್ಮೆಂಟ್ ಗಳಿಗೆ ಮೊದಲು, ಅವರು ಸ್ಪಾರ್ಕಲ್ ಫ್ಲೈ ರೆಕಾರ್ಡಿಂಗ್ ಸ್ಟುಡಿಯೋಗೆ ಹೋಗುತ್ತಿದ್ದರು ಮತ್ತು ಅಲ್ಲಿರುವ ರೋಗಿಗಳು ಹಾಡುವುದನ್ನು, ರೆಕಾರ್ಡ್ ಮಾಡುವುದನ್ನು ಮತ್ತು ಸಂಗೀತವನ್ನು ನುಡಿಸುವುದನ್ನು ನೋಡುತ್ತಿದ್ದರು.

ಇದನ್ನೂ ಓದಿ:  Viral Photo: ಮಗಳು ಡಾಕ್ಟರೇಟ್ ಪದವಿ ಪಡೆದ ಖುಷಿಗೆ ಈ ತಾಯಿ ಏನು ಮಾಡಿದ್ದಾಳೆ ಗೊತ್ತಾ? ಇಲ್ಲಿದೆ ನೋಡಿ

ಮಾರ್ಚ್ ನಲ್ಲಿ, ರೇಮಂಡ್ ನ ಡಿಎನ್‌ಎ ಫಲಿತಾಂಶಗಳು ಕ್ರಿಸ್ಟಿನಾ ಅವರನ್ನು ಒಡಹುಟ್ಟಿದವರ ಜೋಡಿಯಾಗಿ ತೋರಿಸಿದವು. ರೇಮಂಡ್ ಅವರ ಪತ್ನಿ ಮಾರಿಯಾ ಅವರು ಕ್ರಿಸ್ಟಿನಾ ಅವರನ್ನು ಸಾಮಾಜಿಕ ಮಾಧ್ಯಮದಲ್ಲಿ ಕಂಡುಕೊಂಡರು ಮತ್ತು ಅವರು ಮಾತನಾಡಲು ಪ್ರಾರಂಭಿಸಿದರು. ಅದೇ ದಿನ ಕ್ರಿಸ್ಟಿನಾ, ಮತ್ತೊಮ್ಮೆ, ಕುಕ್ ಚಿಲ್ಡ್ರನ್ಸ್ ನಲ್ಲಿ ರೇಮಂಡ್ ಅವರ ಮುಂದೆಯಿಂದಲೇ ಹಾದು ಹೋದರು. ಆಗ ಕ್ರಿಸ್ಟಿನಾಗೆ ಮಾರಿಯಾಳ ಪತಿ ಕುಕ್ ಚಿಲ್ಡ್ರನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿಯಿತು ಮತ್ತು ಅವಳು ಅವನನ್ನು ರೇಮಂಡ್ ಎಂದು ಗುರುತಿಸಿದಳು.

ಅವರಿಬ್ಬರೂ ಮತ್ತೊಮ್ಮೆ ಭೇಟಿಯಾದ ವಿಡಿಯೋ ವೈರಲ್ 
ಅವರಿಬ್ಬರು ಮತ್ತೆ ಭೇಟಿ ಆಗಿರುವ ಆ ವಿಡಿಯೋವನ್ನು ಕುಕ್ ಚಿಲ್ಡ್ರನ್ಸ್ ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಫೇಸ್‌ಬುಕ್ ಖಾತೆಯ ಪುಟದಲ್ಲಿ ಬುಧವಾರ ಪೋಸ್ಟ್ ಮಾಡಿದ್ದಾರೆ."ಇವೆಲ್ಲವನ್ನೂ ನಾವು ವಿವರಿಸಲು ಆಗುವುದಿಲ್ಲ ಮತ್ತು ಈ ವಿಷಯಗಳನ್ನು ಸ್ಕ್ರಿಪ್ಟ್ ಮಾಡಲು ಸಾಧ್ಯವಿಲ್ಲ. ಇದು ದೇವರ ಇಚ್ಛೆ, ದೇವರು ಈ ಸಂದರ್ಭವನ್ನು ನಮಗಾಗಿ ಸರಿಯಾದ ಸಮಯಕ್ಕಾಗಿ ಇರಿಸಿದ್ದರು" ಎಂದು ರೇಮಂಡ್ ಟರ್ನರ್ ವೀಡಿಯೋದಲ್ಲಿ ಉಲ್ಲೇಖಿಸಿದ್ದಾರೆ.

WATCH THE VIDEO HERE

"ಓ ದೇವರೇ.. ಎಂತಹ ಸುಂದರವಾದ ಭೇಟಿ ಇದು. ಈ ಘಟನೆ ತುಂಬಾನೇ ಇಷ್ಟವಾಯಿತು" ಎಂದು ಫೇಸ್‌ಬುಕ್ ಬಳಕೆದಾರರೊಬ್ಬರು ಈ ವೀಡಿಯೋ ನೋಡಿ ಕಾಮೆಂಟ್ ಮಾಡಿದ್ದಾರೆ. "ಓ.. ರೇಮಂಡ್ ಟರ್ನರ್ ಇದು ತುಂಬಾನೇ ಅದ್ಭುತವಾಗಿದೆ. ಇದನ್ನು ನೋಡಿ ನನಗೆ ತುಂಬಾ ಖುಷಿಯಾಯಿತು" ಎಂದು ಇನ್ನೊಬ್ಬರು ಬರೆದಿದ್ದಾರೆ.
Published by:Ashwini Prabhu
First published: