66 ವರ್ಷಗಳಿಂದ ಬೆಳೆಸಿ ದಾಖಲೆ ನಿರ್ಮಿಸಿದ ಉಗುರುಗಳೀಗ ಮ್ಯೂಸಿಯಂನಲ್ಲಿ


Updated:July 12, 2018, 5:57 PM IST
66 ವರ್ಷಗಳಿಂದ ಬೆಳೆಸಿ ದಾಖಲೆ ನಿರ್ಮಿಸಿದ ಉಗುರುಗಳೀಗ ಮ್ಯೂಸಿಯಂನಲ್ಲಿ

Updated: July 12, 2018, 5:57 PM IST
ನ್ಯೂಸ್ 18 ಕನ್ನಡ

ಪುಣೆ(ಜು. 12): ವಿಶ್ವದಲ್ಲೇ ಅತ್ಯಂತ ಉದ್ದದ ಉಗುರು ಹೊಂದಿರುವ ದಾಖಲೆ ತನ್ನ ಹೆಸರಿಗೆ ಬರೆದುಕೊಂಡಿರುವ ಭಾರತೀಯ ಶ್ರೀಧರ್​ ಚಿಲ್ಲಾಲ್, ಕೊನೆಗೂ ಅವುಗಳನ್ನು ಕತ್ತರಿಸಲು ಮುಂದಾಗಿದ್ದಾರೆ. ಗಿನ್ನೆಸ್​ ರೆಕಾರ್ಡ್​ ನಿರ್ಮಿಸಿರುವ ಶ್ರೀಧರ್​ 1952 ರಿಂದ ಈವರೆಗೆ ಒಂದು ಬಾರಿಯೂ ತಮ್ಮ ಎಡಗೈ ಉಗುರುಗಳನ್ನು ಕತ್ತರಿಸಿಲ್ಲವಂತೆ, ಈ ಮೂಲಕ ವಿಶ್ವದಲ್ಲೇ ಅತಿ ಉದ್ದ ಉಗುರು ಹೊಂದಿರುವ ವ್ಯಕ್ತಿ ಎಂಬ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಆದರೆ ಈಗ 82 ವರ್ಷದ ಶ್ರೀಧರ್​ ಉಗುರು ಕತ್ತರಿಸಲು ಒಪ್ಪಿಕೊಂಡಿದ್ದಾರೆ.

ಟೈಮ್ಸ್​ ಸ್ಕ್ವೇರ್​ನಲ್ಲಿ ರಿಪ್ಲೇಯ ಬಿಲೀವ್​ ಮಿ ಆರ್​ ನಾಟ್​ ಮ್ಯೂಜಿಯಂನಲ್ಲಿ ಇಂದು ಉಗುರು ಕತ್ತರಿಸುವ ಕಾರ್ಯಕ್ರಮ ನಡೆದಿದ್ದು, ಇಲ್ಲಿ ಶ್ರೀಧರ್​ ಚಿಲ್ಲಾಲ್​ ತಮ್ಮ ಉಗುರುಗಳನ್ನು ಕತ್ತರಿಸಿಕೊಂಡಿದ್ದಾರೆ. ಇವರ ಎಲ್ಲಾ ಉಗುರುಗಳ ಒಟ್ಟು ಉದ್ದ 909 ಸೆಂ. ಮೀ ಎನ್ನಲಾಗಿದ್ದು, ಹೆಬ್ಬೆರಳಿನ ಉಗುರಿನ ಉದ್ದ 198.8 ಸೆಂ. ಮೀ ಎಂದು ತಿಳಿದು ಬಂದಿದೆ. 2016 ರಲ್ಲಿ ಶ್ರೀಧರ್​ರವರು ಒಂದು ಕೈ ಬೆರಳುಗಳಲ್ಲಿ ಅತ್ಯಂತ ಉದ್ದ ಉಗುರು ಹೊಂದಿರುವ ವ್ಯಕ್ತಿ' ಎಂಬ ವಿಶ್ವ ದಾಖಲೆಯನ್ನು ಅವರು ನಿರ್ಮಿಸಿದ್ದರು.
First published:July 12, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ