• Home
 • »
 • News
 • »
 • trend
 • »
 • Viral Video: ಚಹಲ್ ಪತ್ನಿ ಜೊತೆ ಶ್ರೇಯಸ್ ಅಯ್ಯರ್ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್..!

Viral Video: ಚಹಲ್ ಪತ್ನಿ ಜೊತೆ ಶ್ರೇಯಸ್ ಅಯ್ಯರ್ ಸಖತ್ ಸ್ಟೆಪ್ಸ್: ವಿಡಿಯೋ ವೈರಲ್..!

Dhanashree Verma, Shreyas Iyer

Dhanashree Verma, Shreyas Iyer

ಇಂಗ್ಲೆಂಡ್ ವಿರುದ್ದದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಯಜುವೇಂದ್ರ ಚಹಲ್ ಶ್ರೇಯಸ್ ಅಯ್ಯರ್ ಏಕದಿನ ಮತ್ತು ಟಿ20 ಸರಣಿಯ ಬ್ಲೂ ಜೇರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಇಬ್ಬರೂ ಕ್ರಿಕೆಟಿಗರು ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ.

 • Share this:

  ಟೀಮ್ ಇಂಡಿಯಾ ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ ಪತ್ನಿ ಧನಶ್ರೀ ವರ್ಮಾ ಅತ್ಯುತ್ತಮ ಡ್ಯಾನ್ಸರ್. ತಮ್ಮ ಸಖತ್ ಸ್ಟೆಪ್ಸ್​ಗಳ ಮೂಲಕವೇ ಸೋಷಿಯಲ್ ಮೀಡಿಯಾದಲ್ಲಿ ಧನಶ್ರೀ, ಇತ್ತೀಚೆಗೆ ಟೀಮ್ ಇಂಡಿಯಾದ ಮತ್ತೋರ್ವ ಮಲ್ಟಿ ಟ್ಯಾಲೆಂಟೆಡ್ ಆಟಗಾರ ಶ್ರೇಯಸ್ ಅಯ್ಯರ್ ಜೊತೆ ಸಖತ್ ಸ್ಟೆಪ್ಸ್ ಹಾಕುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಹಲ್​ಚಲ್ ಎಬ್ಬಿಸಿದ್ದಾರೆ.


  ಮೇಲ್ನೋಟಕ್ಕೆ ಜಿಮ್ ಸ್ಟುಡಿಯೋದಂತೆ ಕಂಡು ಬರುವ ಸ್ಥಳದಲ್ಲಿ ಶ್ರೇಯಸ್ ಅಯ್ಯರ್ ಕಾಣಿಸಿಕೊಂಡಿದ್ದು, ಅಲ್ಲದೆ ಚಹಲ್ ಪತ್ನಿಯೊಂದಿಗೆ ಭರ್ಜರಿ ನೃತ್ಯದ ಮೂಲಕ ಗಮನ ಸೆಳೆದಿದ್ದಾರೆ. ಅದರಲ್ಲೂ ಇಬ್ಬರ ಕಾಲಿನ ಚಲನೆಗಳ ಹೊಂದಾಣಿಕೆಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಡ್ಯಾನ್ಸಿಂಗ್ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅಲ್ಲದೆ ಇಬ್ಬರ ನೃತ್ಯ ಪ್ರಾವೀಣ್ಯತೆಗೆ ಅಭಿಮಾನಿಗಳಿಗೆ ಮೆಚ್ಚುಗೆ ಸೂಚಿಸುತ್ತಿದ್ದಾರೆ.
  ಇಂಗ್ಲೆಂಡ್ ವಿರುದ್ದದ ಟೆಸ್ಟ್ ತಂಡದಲ್ಲಿ ಸ್ಥಾನ ಪಡೆಯಲು ವಿಫಲರಾಗಿರುವ ಯಜುವೇಂದ್ರ ಚಹಲ್ ಶ್ರೇಯಸ್ ಅಯ್ಯರ್ ಏಕದಿನ ಮತ್ತು ಟಿ20 ಸರಣಿಯ ಬ್ಲೂ ಜೇರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮೊದಲು ಇಬ್ಬರೂ ಕ್ರಿಕೆಟಿಗರು ವಿಜಯ್ ಹಜಾರೆ ಟ್ರೋಫಿಯಲ್ಲಿ ಕಣಕ್ಕಿಳಿಯಲಿದ್ದಾರೆ.

  View this post on Instagram


  A post shared by Shreyas Iyer (@shreyas41)

  ಚಹಲ್ ಹರಿಯಾಣ ತಂಡದ ಸದಸ್ಯರಾದರೆ ಮತ್ತು ಶ್ರೇಯಸ್ ಅಯ್ಯರ್ ಮುಂಬೈ ತಂಡದ ನಾಯಕನಾಗಿ ಆಡಲಿದ್ದಾರೆ. ಇನ್ನು ಭುಜದ ಗಾಯದಿಂದಾಗಿ ಅಯ್ಯರ್ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಆಡಿರಲಿಲ್ಲ. ಹೀಗಾಗಿ ಮುಂಬೈ ತಂಡವನ್ನು ಸೂರ್ಯಕುಮಾರ್ ಯಾದವ್ ಮುನ್ನಡೆಸಿದ್ದರು.

  Published by:zahir
  First published: