ಅನೇಕರು ಸಿಕ್ಸ್ ಪ್ಯಾಕ್ಗಾಗಿ ಜಿಮ್ನಲ್ಲಿ ಹಗಲು-ರಾತ್ರಿ ವರ್ಕೌಟ್ ಮಾಡುತ್ತಾರೆ. ಇನ್ನು ಕೆಲವರು ಪ್ರೊಟೀನ್ಗಳನ್ನು ತಿನ್ನುತ್ತಾ, ಸಿಕ್ಸ್ಪ್ಯಾಕ್ ಒಂದಿದ್ದರೆ ಸಾಕು ಎಂದುಕೊಂಡು ಜಿಮ್ ಹೋಗುವವರಿದ್ದಾರೆ. ಆದರೆ ಇಲ್ಲೊಬ್ಬ ಪುಟ್ಟ ಪೋರನ ಸಿಕ್ಸ್ ಪ್ಯಾಕ್ ನೋಡಿದರೆ ನಿಮಗೆ ಆಶ್ಚರ್ಯವಾಗುವುದು ಖಂಡಿತ!.
ಸಿಕ್ಸ್ ಪ್ಯಾಕ್ ಒಮ್ಮಿಂದೊಮ್ಮೆಗೆ ಬರಲು ಸಾಧ್ಯವಿಲ್ಲ. ನಿರಂತರ ವರ್ಕೌಟ್ ಮಾಡಿದರೆ ಸಿಕ್ಸ್ ಪ್ಯಾಕ್ ಮೂಡುವುದರಲ್ಲಿ ಸಂಶಯವಿಲ್ಲ. ಆದರೆ ಈ ಆರು ವರ್ಷದ ಪುಟ್ಟ ಪೋರನ ಸಿಕ್ಸ್ ಪ್ಯಾಕ್ ಮಾತ್ರ ಎಂತವರಿಗೂ ಆಶ್ಚರ್ಯ ಮೂಡಿಸುವುದರಲ್ಲಿ ಅನುಮಾನವಿಲ್ಲ. ಇಷ್ಟು ಚಿಕ್ಕ ಪ್ರಾಯದಲ್ಲಿ ಸಿಕ್ಸ್ ಪ್ಯಾಕ್ಸ್ ಬರಿಸಿರುವ ಈ ಪೋರ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಬಾರಿ ವೈರಲ್ ಆಗುತ್ತಿದೆ.
ವಿಡಿಯೋದಲ್ಲಿ ಇರುವ ಬಾಲಕನ ಹೆಸರು ಆರ್ತ್ ಹುಸೈನ್. ಇರಾನ್ ಬಾಬೋಲ್ ನಗರದವನು. ಈತನ ಸಿಕ್ಸ್ಪ್ಯಾಕ್ ಮತ್ತು ವರ್ಕೌಟ್ ವಿಡಿಯೋ ಸಾಕಷ್ಟು ಜನರ ಸ್ಮಾಟ್ಫೋನ್ನಲ್ಲಿ ಹರಿದಾಡುತ್ತಿದೆ. ಅಷ್ಟೇ ಏಕೆ ಅನೇಕ ಅಭಿಮಾನಿಗಳನ್ನು ಹೊಂದಿದ್ದಾನೆ ಹುಸೈನ್. ಇನ್ನು ಇನ್ಸ್ಟಾಗ್ರಾಂನಲ್ಲಿ ಹುಸೈನ್ 40 ಲಕ್ಷಕ್ಕೂ ಅಧಿಕ ಪಾಲೋವರ್ಸ್ ಹೊಂದಿದ್ದು, ಪ್ರತಿಯೊಂದು ಪೋಸ್ಟ್ಗೂ 10 ಲಕ್ಷಕ್ಕೂ ಹೆಚ್ಚು ಲೈಕ್ಸ್ ಪಡೆಯುತ್ತಿದ್ದಾನೆ.
ಸಿಕ್ಸ್ ಪ್ಯಾಕ್ ಪೋರ ಮೆಸ್ಸಿ ಅಭಿಮಾನಿ:
ಆರ್ತ್ ಹುಸೈನಿ ಪುಟ್ಭಾಲ್ ತಾರೆ ಲಿಯೊನೆಲ್ ಮೆಸ್ಸಿಯ ಅಭಿಮಾನಿ. ಹಾಗಾಗಿ ಮುಂದೊಂದು ದಿನ ಬಾರ್ಸಿಲೋನಾ ಪುಟ್ಭಾಲ್ ತಂಡದಲ್ಲಿ ಆಡುವುದು ಆರ್ತ್ ಹುಸೈನಿ ಕನಸಂತೆ.
ಲಾಕ್ಡೌನ್ ವೇಳೆ ಭಾರತದಲ್ಲಿ ಅತಿ ಹೆಚ್ಚು ಮಾರಾಟವಾಯ್ತು ಈ ಕಾರು!
Remove China Apps: ಭಾರತದ ಮತ್ತೊಂದು ಆ್ಯಪ್ ಪ್ಲೇ ಸ್ಟೋರ್ನಿಂದ ಕಣ್ಮರೆ!; ಕಾರಣವೇನು?
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ