ತಮ್ಮ ಮಕ್ಕಳಿಗೆ (Childrens) ಒಳ್ಳೆಯ ಶಿಕ್ಷಣ ಕೊಡಿಸಬೇಕು, ಅವರಿಗೆ ಒಂದೊಳ್ಳೆಯ ಕೆಲಸ ಸಿಕ್ಕಿ ಜೀವನದಲ್ಲಿ ಅವರ ಕಾಲಿನ ಮೇಲೆ ಅವರು ಎದ್ದು ನಿಲ್ಲಬೇಕು ಅಂತ ತಂದೆ ತಾಯಂದಿರು ತುಂಬಾನೇ ಕಷ್ಟಪಟ್ಟು ಮಕ್ಕಳನ್ನು ಬೆಳೆಸುತ್ತಾರೆ. ಹಾಗೆಯೇ ಮಕ್ಕಳು ಸಹ ತಂದೆ-ತಾಯಂದಿರ ಕಷ್ಟವನ್ನು ನೋಡುತ್ತಾ ಬೆಳೆದಿರುವುದರಿಂದ ಅವರ ಕೈಯಿಂದ ಎಷ್ಟು ಸಾಧ್ಯವೋ ಅಷ್ಟು ಸಹಾಯ (Help) ಮಾಡಲು ನೋಡುತ್ತಾರೆ. ಒಟ್ಟಿನಲ್ಲಿ ಹೇಳುವುದಾದರೆ ತಂದೆ ತಾಯಂದಿರ ಮತ್ತು ಮಕ್ಕಳ ನಡುವೆ ಒಂದು ಬಿಡಿಸಲಾಗದ ಪ್ರೀತಿ, ವಾತ್ಸಲ್ಯ ಬೆಸೆದಿರುವ ಬಂಧ ಇರುತ್ತೆ. ಅದಕ್ಕೆ ಅನ್ಸುತ್ತೆ ತಂದೆ-ತಾಯಿ ಕಷ್ಟ ಪಡುವುದನ್ನು ಮಕ್ಕಳಿಗೆ ನೋಡಿಕೊಂಡು ಸುಮ್ಮನೆ ಇರುವುದಕ್ಕೆ ಆಗುವುದಿಲ್ಲ ಮತ್ತು ಅದೇ ರೀತಿಯಾಗಿ ತಮ್ಮ ಮಕ್ಕಳು ಕಷ್ಟ ಪಡುವುದನ್ನು ನೋಡಿಕೊಂಡು ತಂದೆ-ತಾಯಂದಿರಿಗೆ (Parents) ಇರುವುದಕ್ಕೆ ಸಾಧ್ಯವಾಗುವುದಿಲ್ಲ.
ಸಾಮಾಜಿಕ ಮಾಧ್ಯಮದಲ್ಲಿ ನಾವು ಆಗಾಗ ತಂದೆ ತಾಯಂದಿರಿಗೆ ಕಷ್ಟ ಆಗಬಾರದು ಅಂತ ಮಕ್ಕಳು ಸಹಾಯ ಮಾಡುವ ಮತ್ತು ಮಕ್ಕಳಿಗೆ ತೊಂದರೆಯಾಗಬಾರದು ಅಂತ ತಂದೆ ತಾಯಿ ಸಹಾಯ ಮಾಡುವ ಹೃದಯಸ್ಪರ್ಶಿ ವಿಡಿಯೋಗಳನ್ನು ನೋಡಿರುತ್ತೇವೆ. ಇಲ್ಲಿಯೂ ಸಹ ಅಂತಹದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಇದನ್ನು ನೋಡಿ ನೆಟ್ಟಿಗರ ಹೃದಯ ಕರಗುವುದಂತೂ ನಿಜ.
ಇದನ್ನೂ ಓದಿ: ಇರುವೆಗಳು ಏಕೆ ಸಾಲಿನಲ್ಲೇ ಹೋಗುತ್ತವೆ? ಇವುಗಳ ಶಿಸ್ತಿನ ಹಿಂದೆಯೂ ಇದೆ ಕುತೂಹಲಕಾರಿ ವಿಚಾರ!
ತಂದೆಗೆ ಸೈಕಲ್ ಹೊಡೆಯಲು ಕಷ್ಟವಾಗುತ್ತಿದ್ದಾಗ ಮಗ ಏನ್ ಮಾಡಿದ್ರು ನೋಡಿ
ತನ್ನ ಹೆತ್ತವರು ಸೈಕಲ್ ಮೇಲೆ ಕುಳಿತುಕೊಂಡು ಫ್ಲೈ-ಓವರ್ ಮೇಲೆ ಹೋಗುತ್ತಿದ್ದಾಗ, ತಂದೆಗೆ ಸೈಕಲ್ ತುಳಿಯಲು ಕಷ್ಟವಾಗುತ್ತಿದ್ದ ಸಮಯದಲ್ಲಿ ಮಗ ಹಿಂದೆಯಿಂದ ಆ ಸೈಕಲನ್ನು ತಳ್ಳಿ ಅವರಿಗೆ ಮುಂದಕ್ಕೆ ಆರಾಮಾಗಿ ಹೋಗಲು ಸಹಾಯ ಮಾಡಿದ್ದಾನೆ. ದಾರಿಯಲ್ಲಿ ಹೋಗುವ ವ್ಯಕ್ತಿಯೊಬ್ಬರು ಈ ಮಗ ತನ್ನ ತಂದೆ ತಾಯಿ ಕುಳಿತುಕೊಂಡು ಹೊರಟಿರುವ ಸೈಕಲ್ ಅನ್ನು ತಳ್ಳಿ ಸಹಾಯ ಮಾಡಿರುವ ದೃಶ್ಯವನ್ನು ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ನೋಡಿ ಯಾರಿಗಾದರೂ ಕಣ್ಣಲ್ಲಿ ನೀರು ಬರುವುದು ಸಹಜ. ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಅವನೀಶ್ ಶರಣ್ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡ ನಂತರ ಸಿಕ್ಕಾಪಟ್ಟೆ ವೈರಲ್ ಆಗಿದೆ.
ವೈರಲ್ ಆದ ವಿಡಿಯೋವನ್ನು ಬೈಕ್ ಸವಾರನೊಬ್ಬ ರೆಕಾರ್ಡ್ ಮಾಡಿದ್ದಂತೆ
ಈ 21 ಸೆಕೆಂಡುಗಳ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಫ್ಲೈ-ಓವರ್ ಮೇಲೆ ಬೈಕ್ ಸವಾರಿ ಮಾಡುವುದನ್ನು ಮತ್ತು ಕುಟುಂಬವೊಂದು ಬೈಸಿಕಲ್ ಸವಾರಿ ಮಾಡುವುದನ್ನು ಚಿತ್ರೀಕರಿಸುವುದನ್ನು ತೋರಿಸುತ್ತದೆ. ವಿಡಿಯೋ ಮುಂದುವರಿಯುತ್ತಿದ್ದಂತೆ, ಚಿಕ್ಕ ಹುಡುಗನೊಬ್ಬ ತನ್ನ ಹೆತ್ತವರಿಗೆ ಆ ಫ್ಲೈ-ಓವರ್ ಹತ್ತಲು ಸಹಾಯ ಮಾಡಲು ಬೈಸಿಕಲ್ ಅನ್ನು ತಳ್ಳುವುದನ್ನು ಕಾಣಬಹುದು.
ऐसे ही जीवन भर माता पिता का सहारा बनना.❤️ pic.twitter.com/aIVZkpA3so
— Awanish Sharan 🇮🇳 (@AwanishSharan) April 20, 2023
ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ
ಆ ಹುಡುಗ ನಗುವುದು ಮಾತ್ರವಲ್ಲದೆ, ಅವನ ಹೆತ್ತವರು ಸಹ ಸಂತೋಷಪಟ್ಟಂತೆ ಕಾಣುತ್ತಿದ್ದರು. ನಾಲ್ಕು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಹೊಂದಿರುವ ಈ ವಿಡಿಯೋಗೆ 24,000 ಕ್ಕೂ ಹೆಚ್ಚು ಲೈಕ್ ಗಳು ಸಹ ಬಂದಿವೆ. ಅಷ್ಟೇ ಅಲ್ಲದೆ ಈ ವಿಡಿಯೋ ಆನ್ಲೈನ್ನಲ್ಲಿ ಅನೇಕರ ಹೃದಯಗಳನ್ನು ಕರಗಿಸಿದೆ.
ಐಎಎಸ್ ಅಧಿಕಾರಿಯ ಮಾತನ್ನು ಒಪ್ಪಿದ ಬಳಕೆದಾರರೊಬ್ಬರು "ನೀವು ಹೇಳಿದ್ದು ಸರಿಯಾಗಿದೆ.. ಹುಟ್ಟಿನಿಂದ ನಮ್ಮ ಬೆಳವಣಿಗೆಯ ಎಲ್ಲಾ ಪ್ರಮುಖ ಹಂತಗಳವರೆಗೆ ನಮಗೆ ಸಹಾಯ ಮಾಡುವ ಪೋಷಕರು ನಮ್ಮ ಜೀವನದಲ್ಲಿ ತುಂಬಾನೇ ಪ್ರಮುಖವಾದವರು. ಅವರು ಯಾವಾಗಲೂ ನಮ್ಮ ಜೀವನದಲ್ಲಿ ನಮ್ಮೊಂದಿಗೆ ಇರುತ್ತಾರೆ ಮತ್ತು ಜೀವನದ ಪ್ರತಿಯೊಂದು ಕಷ್ಟವನ್ನು ಎದುರಿಸಲು ನಮಗೆ ಸಹಾಯ ಮಾಡುತ್ತಾರೆ ಅಂತ ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ