ಓಣಂ ಹಬ್ಬಕ್ಕೆ ಶಾಪಿಂಗ್: ಅಮೆಜಾನ್‍ನಲ್ಲಿ ಸಿಗಲಿವೆ ಈ 6 ಪ್ರಮುಖ ಉತ್ಪನ್ನಗಳು

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಪಾಯಸದಲ್ಲಿ ನೂರಾರು ಬಗೆಗಳು ಇವೆ, ಆದರೆ ಪಾಲಡ ಪಾಯಸ ಇಲ್ಲದಿದ್ದರೆ ಓಣಂ ಅಪರಿಪೂರ್ಣ. ನಾಲಗೆಗೆ ಮಾತ್ರವಲ್ಲ ಹೃದಯಕ್ಕೂ ಆನಂದ ನೀಡುವ ಪಾಲಡದ ರುಚಿ ನೋಡಿದವರು ಅದನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಕೆಲವೇ ನಿಮಿಷಗಳಲ್ಲಿ ಪಾಲಡ ಮಾಡುವ ಇನ್‍ಸ್ಟಂಟ್ ಪಾಲಡ ಮಿಕ್ಸ್ ಅಮೆಜಾನ್‍ನಲ್ಲಿ ಲಭ್ಯ.

ಮುಂದೆ ಓದಿ ...
  • Share this:

    ಪ್ರತಿಯೊಬ್ಬ ಮಲಯಾಳಿಗೂ ಓಣಂ ಅತ್ಯಂತ ವಿಶೇಷ ಹಬ್ಬ. ಸರ್ಪ ದೋಣಿಯ ಸ್ಪರ್ಧೆ, ಕೈಕೊಟ್ಟಿಕಳಿ ಮತ್ತು ಪೂಕಳಂ (ರಂಗೋಲಿ) ಓಣಂ ಹಬ್ಬಕ್ಕೆ ಇನ್ನಷ್ಟು ಮೆರುಗು ನೀಡುತ್ತದೆ. ಇನ್ನು ಬಾಳೆ ಎಲೆಯಲ್ಲಿ ಬಡಿಸಿದ ತರಾವರಿ ಓಣಂನ ವಿಶೇಷ ಖಾದ್ಯಗಳ ಬಗ್ಗೆ ನೆನಪಿಸಿಕೊಂಡರೆ ಬಾಯಲ್ಲಿ ನೀರೂರುತ್ತದೆ.


    ನೀವು ಓಣಂ ಆಚರಿಸುತ್ತಿದ್ದರೆ, ನಿಮ್ಮ ಹಬ್ಬದ ಶಾಪಿಂಗ್ ಅನ್ನು ಹೆಚ್ಚು ಆಸಕ್ತಿದಾಯಕವಾಗಿಸಲು ಮತ್ತು ಸಂಭ್ರಮ ಹೆಚ್ಚಿಸಲು, ಅಮೆಜಾನ್‍ನಲ್ಲಿ ಈ 6 ವಸ್ತುಗಳನ್ನು ಶಾಪಿಂಗ್ ಮಾಡಬಹುದು. ಓಣಂ ವಿಶೇಷ ವಸ್ತುಗಳ ಮಾರಾಟ ನಡೆಯುತ್ತಿದ್ದು, ಅವಕಾಶ ಕಳೆದುಕೊಳ್ಳಬೇಡಿ ಮತ್ತು ಎಲ್ಲವನ್ನು ರಿಯಾಯಿತಿ ದರದಲ್ಲಿ ಪಡೆಯಿರಿ.


    ಬಾಳೆಕಾಯಿ ಚಿಪ್ಸ್
    ನೀವು ಹಬ್ಬಕ್ಕೆ ಮಲಯಾಳಿಯೇತರ ಸ್ನೇಹಿತರನ್ನು ಆಮಂತ್ರಸಿದ್ದರೆ, ಅವರು ನಿಮ್ಮಿಂದ ಬಾಳೆಕಾಯಿ ಚಿಪ್ಸನ್ನು ಖಂಡಿತಾ ನಿರೀಕ್ಷಿಸಿರುತ್ತಾರೆ. ನೀವು ಅತಿಥಿಗಳನ್ನು ಕರೆದಿರಿ ಅಥವಾ ಒಬ್ಬರೇ ಹಬ್ಬ ಆಚರಿಸುತ್ತಿರಿ, ಬಾಳೆಕಾಯಿ ಚಿಪ್ಸ್ ಇಲ್ಲದೆ ಓಣಸಧ್ಯ (ಓಣಂ ಬಾ ಊಟ) ಪರಿಪೂರ್ಣ ಎನಿಸುವುದಿಲ್ಲ. ಓಣಂ ದಿನ ಬಾಳೆಕಾಯಿ ಚಿಪ್ಸ್ ಮೆಲ್ಲುತ್ತಾ ಸಿನಿಮಾ ನೋಡುವ ಮಜವೇ ಬೇರೆ..?


    ಶರ್ಕರ ವರಟ್ಟಿ ಅಥವಾ ಬೆಲ್ಲ
    ಕೇರಳ ನೇಂದ್ರ ಬಾಳೆ ಮತ್ತು ಶುದ್ಧ ತೆಂಗಿನ ಎಣ್ಣೆಯಿಂದ ಮಾಡಿದ ಶರ್ಕರ ವರಟ್ಟಿ ಒಣಸಧ್ಯದಲ್ಲಿ ಇರಲೇಬೇಕು. ಅದು ಓಣಂ ಊಟದ ಅಗತ್ಯ ಭಕ್ಷ್ಯಗಳಲ್ಲಿ ಒಂದು. ಅದು ಸಿಹಿಯಾದ ಮತ್ತು ಸಂತಸಮಯ ವರ್ಷದ ಆರಂಭದ ಸಂಕೇತವೂ ಹೌದು.



    Importance and history of onam festival things you need to know about this special day
    ಸಾಂದರ್ಭಿಕ ಚಿತ್ರ

    ಕೇರಳ ಕಸವು ಮುಂಡು
    ಓಣಕ್ಕೋಡಿ (ಹೊಸ ಬಟ್ಟೆ) ಇಲ್ಲದೆ ಓಣಂ ಆಚರಣೆಗೆ ಮೆರುಗು ಬರಲು ಸಾಧ್ಯವಿಲ್ಲ. ಓಣಂ ಸಂದರ್ಭದಲ್ಲಿ ಮನೆಯ ಕಿರಿಯರಿಗೆ ಹೊಸ ಉಡುಪುಗಳನ್ನು ನೀಡುವ ಸಂಪ್ರದಾಯವಿದೆ. ನೀವು ಮನೆಯಿಂದ ದೂರವಿದ್ದು ಹಬ್ಬ ಆಚರಿಸುತ್ತಿದ್ದರೆ, ಬಿಳಿ ಮತ್ತು ಚಿನ್ನದ ಬಣ್ಣದ ಕಸವು ಮುಂಡು ಸೆಟ್ ನಿಮಗೆ ಮನೆಯ ಅನುಭೂತಿ ನೀಡುತ್ತದೆ.


    ಬಾಳೆ ಎಲೆ
    ನೀವು ದಕ್ಷಿಣ ಭಾರತದಲ್ಲಿ ವಾಸಿಸುತ್ತಿಲ್ಲ ಎಂದಾದಲ್ಲಿ, ಓಣಂ ಊಟಕ್ಕೆ ಅಗತ್ಯವಿರುವ ಬಾಳೆ ಎಲೆ ಸಿಗುವುದು ತುಂಬಾ ಕಷ್ಟ ಆಗಬಹುದು. ಸಿಕ್ಕಿದರೂ ಅದು ಹರಿದಿರುವ ಅಥವಾ ತುಂಬಾ ಚಿಕ್ಕ ಗಾತ್ರದ ಅಥವಾ ದೊಡ್ಡ ಗಾತ್ರದ ಬಾಳೆ ಎಲೆ ಆಗಿರಬಹುದು. ಹಾಗಾಗಿ, ಈ ಸುಲಭವಾಗಿ ಬಿಸಾಡಬಹುದಾದ ಮತ್ತು ಪರಿಸರ ಸ್ನೇಹಿ ಕೃತಕ ಬಾಳೆ ಎಲೆ , ಮನೆಯಿಂದ ದೂರ ಓಣಂ ಆಚರಿಸುತ್ತಿರುವವರಿಗೆ ಪ್ರಯೋಜನಕಾರಿ.


    ಪಾಲಡ ಪಾಯಸಂ
    ಪಾಯಸದಲ್ಲಿ ನೂರಾರು ಬಗೆಗಳು ಇವೆ, ಆದರೆ ಪಾಲಡ ಪಾಯಸ ಇಲ್ಲದಿದ್ದರೆ ಓಣಂ ಅಪರಿಪೂರ್ಣ. ನಾಲಗೆಗೆ ಮಾತ್ರವಲ್ಲ ಹೃದಯಕ್ಕೂ ಆನಂದ ನೀಡುವ ಪಾಲಡದ ರುಚಿ ನೋಡಿದವರು ಅದನ್ನು ಮೆಚ್ಚದಿರಲು ಸಾಧ್ಯವೇ ಇಲ್ಲ. ಕೆಲವೇ ನಿಮಿಷಗಳಲ್ಲಿ ಪಾಲಡ ಮಾಡುವ ಇನ್‍ಸ್ಟಂಟ್ ಪಾಲಡ ಮಿಕ್ಸ್ ಅಮೆಜಾನ್‍ನಲ್ಲಿ ಲಭ್ಯ.


    ಇದನ್ನೂ ಓದಿ: ಯುಪಿಯಲ್ಲಿ ಏರುತ್ತಿದೆ ಚುನಾವಣಾ ಕಾವು; ಬ್ರಾಹ್ಮಣ ಮುಖಗಳಿಗೆ ಮಣೆ ಹಾಕಲು ಹೊರಟ ಬಿಜೆಪಿ

    ಪಪಡಮ್ (ಹಪ್ಪಳ)
    ಓಣಂ ಊಟದ ಎಲೆಯಲ್ಲಿ ಮನ ಸೆಳೆಯುವ ಮತ್ತೊಂದು ತಿನಿಸು ಪಪಡಂ. ಕೆಲವರು ಅದನ್ನು ಮುರಿದು, ಪಾಯಸದೊಂದಿಗೆ ಹಿಚುಕಿ ತಿನ್ನುವುದನ್ನು ಇಷ್ಟಪಟ್ಟರೆ, ಇನ್ನು ಕೆಲವರು ಊಟದ ಜೊತೆ ತಿನ್ನಲು ಇಷ್ಟಪಡುತ್ತಾರೆ. ಹೇಗೆ ತಿಂದರೂ ಪರವಾಗಿಲ್ಲ, ಓಣಂ ಊಟದಲ್ಲಿ ಹಪ್ಪಳ ಇಲ್ಲದಿದ್ದರೆ ಸಂಪೂರ್ಣ ಆನಂದ ಸಿಗದು.




    ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

    Published by:HR Ramesh
    First published: