• Home
  • »
  • News
  • »
  • trend
  • »
  • Shocking Video: ಟಾಯ್ಲೆಟ್ ಕಮೋಡ್‌ನಲ್ಲಿ ಡ್ರಿಂಕ್ಸ್​ ತಯಾರಿಸಿ ಕೊಟ್ಟ ಮಹಿಳೆಯ ವಿಡಿಯೋ ವೈರಲ್; ವಾಂತಿ ಮಾಡಿಕೊಂಡ ನೆಟ್ಟಿಗರು!

Shocking Video: ಟಾಯ್ಲೆಟ್ ಕಮೋಡ್‌ನಲ್ಲಿ ಡ್ರಿಂಕ್ಸ್​ ತಯಾರಿಸಿ ಕೊಟ್ಟ ಮಹಿಳೆಯ ವಿಡಿಯೋ ವೈರಲ್; ವಾಂತಿ ಮಾಡಿಕೊಂಡ ನೆಟ್ಟಿಗರು!

ಟಾಯ್ಲೆಟ್ ಕಮೋಡ್‌ನಲ್ಲಿ ಡ್ರಿಂಕ್ಸ್​ ತಯಾರಿಸಿ ಕೊಟ್ಟ ಮಹಿಳೆ

ಟಾಯ್ಲೆಟ್ ಕಮೋಡ್‌ನಲ್ಲಿ ಡ್ರಿಂಕ್ಸ್​ ತಯಾರಿಸಿ ಕೊಟ್ಟ ಮಹಿಳೆ

ಕಮೋಡ್ ಒಳಗೆ ಎಲ್ಲಾ ರೀತಿಯ ಪಾನೀಯಗಳನ್ನು ಸೇರಿಸಿ, ಕಾಂಡಿಮೆಂಟ್ಸ್ ಬೆರೆಸಿ, ಐಸ್ ಕ್ರೀಂ ಮಿಶ್ರಣ ಮಾಡಿ ತಯಾರಿಸಿದ ಸ್ಪೆಷಲ್ ಕಮೋಡ್ ಪಾನೀಯದ ವಿಡಿಯೋ ನೋಡಿ ನೆಟ್ಟಿಗರು ಮುಖ ಕಿವುಚುತ್ತಿದ್ದಾರೆ.

  • Share this:

ಕೊರೊನಾ ಲಾಕ್‌ಡೌನ್‌ ಶುರುವಾದಾಗಿನಿಂದ ಮನುಷ್ಯನ ನಡವಳಿಗೆ ಸಾಕಷ್ಟು ಬದಲಾಗಿಬಿಟ್ಟಿದೆ. ಅದರಲ್ಲೂ ಶಾರ್ಟ್ ವಿಡಿಯೋ ಕ್ರಿಯೇಟರ್ಸ್ ಸೃಜನಶೀಲತೆ ಹೆಸರಿನಲ್ಲಿ ಮಾಡದಂತಹ ಕೆಲಸಗಳೇ ಇಲ್ಲವೇನೋ ಅನ್ನಿಸುವಷ್ಟು ಇಂಟರ್ನೆಟ್ ತುಂಬಿ ಹೋಗಿದೆ. ಆದರೂ ಎಲ್ಲರೂ ಮಾಡಿದ್ದನ್ನೇ ನಾವು ಮಾಡಿದರೆ ಏನು ಮಜಾ ಅಂತ ಅನ್ನಿಸೋ ಕೆಲವು ಆಸಾಮಿಗಳಿದ್ದಾರೆ. ಈಗ ಅವರೇ, ಏನು ಕಾಲ ಬಂತಪ್ಪಾ? ಎಂಬ ವಿಡಿಯೋಗಳನ್ನು ಮಾಡಿ ಜನರ ತಲೆ ತಿರುಗೋ ಹಾಗೆ ಮಾಡ್ತಿದ್ದಾರೆ. ಈಗ ಇಲ್ಲಿರುವ ವಿಡಿಯೋ ನೋಡಿದರೆ ನಿಮ್ಮ ತಲೆ ತಿರುಗೋದು ಇರಲಿ, ನೀವು ವಾಕರಿಕೆ ಮಾಡಿಕೊಳ್ಳುವುದು ಖಂಡಿತ.


The Anna Show ಎನ್ನುವ ಫೇಸ್ಬುಕ್ ಪೇಜ್‌ನ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಶೌಚಕ್ಕೆಂದು ಬಳಸುವ ಕಮೋಡ್‌ನಲ್ಲಿ ಪಾನೀಯ ಸಿದ್ಧವಾಗುತ್ತಿರುವ ವಿಡಿಯೋ ಇದು. ಕಮೋಡ್ ಒಳಗೆ ಎಲ್ಲಾ ರೀತಿಯ ಪಾನೀಯಗಳನ್ನು ಸೇರಿಸಿ, ಕಾಂಡಿಮೆಂಟ್ಸ್ ಬೆರೆಸಿ, ಐಸ್ ಕ್ರೀಂ ಮಿಶ್ರಣ ಮಾಡಿ ತಯಾರಿಸಿದ ಸ್ಪೆಷಲ್ ಕಮೋಡ್ ಪಾನೀಯದ ವಿಡಿಯೋ ನೋಡಿ ನೆಟ್ಟಿಗರು ಮುಖ ಕಿವುಚುತ್ತಿದ್ದಾರೆ.


ಮಹಿಳೆಯೊಬ್ಬಳು ಕಮೋಡ್‌ನಲ್ಲಿ ನೀರನ್ನು ತೆಗೆಯಲು ಟೀ ಶರ್ಟ್ ಒಂದನ್ನು ಇಡುತ್ತಾಳೆ. ನಂತರ ಐಸ್ ಕ್ಯೂಬ್ ಅನ್ನು ಕಮೋಡ್ ಒಳಗೆ ಸುರಿಯುತ್ತಾಳೆ. ಇಡೀ ಕಮೋಡ್ ಅನ್ನು 2 ಪ್ಯಾಕ್ ಐಸ್ ಕ್ರೀಂನಿಂದ ತುಂಬುತ್ತಾಳೆ. ಆ ನಂತರ ಅದಕ್ಕೆ ಒಂದೆರಡು ಪ್ಯಾಕೆಟ್‌ಗಳಷ್ಟು ಕಾಂಡಿಮೆಂಟ್‌ಗಳನ್ನು ಸುರಿಯುತ್ತಾಳೆ. ನಂತರ, ಖಾಲಿಯಾದ ಫ್ಲಶ್ ಟ್ಯಾಂಕ್‌ನಲ್ಲಿ, ಪುನಃ ಎರಡು ಪ್ಯಾಕೆಟ್ ಕಾಂಡಿಮೆಂಟ್ಸ್ ತುಂಬಿ ಹರಡುತ್ತಾಳೆ. ಇದಕ್ಕೆ ಒಂದು ಬಾಟಲ್ ಫ್ರೂಟ್ ಪಂಚ್, ಸ್ಪ್ರೈಟ್ ಮತ್ತು ಫಾಂಟಾವನ್ನು ಸೇರಿಸುತ್ತಾಳೆ. ಇದೆಲ್ಲವೂ ಚೆನ್ನಾಗಿ ಮಿಕ್ಸ್ ಆದ ಬಳಿಕ ಫ್ಲಶ್ ಪ್ಲೇಟ್ ಮುಚ್ಚಲಾಗುತ್ತದೆ. ಆ ಬಳಿಕ ಫ್ಲಶ್ ಮಾಡಿದಾಗ ಕಮೋಡ್ ಒಳಗೆ ಈಗಾಗಲೇ ಐಸ್ ಕ್ಯೂಬ್ಸ್, ಐಸ್ ಕ್ರೀಂ ಮತ್ತು ಕಾಂಡಿಮೆಂಟ್ಸ್‌ಗಳಿದ್ದು, ಅಲ್ಲಿಗೆ ಫ್ಲಶ್ ಮಾಡಿದ ಪಾನೀಯಗಳೆಲ್ಲವೂ ಬಂದು ಸೇರುತ್ತದೆ.


ಆ ನಂತರ ಅಲ್ಲಿ ಸಂಗ್ರಹವಾದ ಡ್ರಿಂಕ್ ಅನ್ನು ಆ ಮಹಿಳೆ ಈಗಾಗಲೇ ಕಾಯುತ್ತಾ ನಿಂತಿರುವ ಅತಿಥಿಗಳಿಗೆ ನೀಡಲು ಗಾಜಿನ ಲೋಟಕ್ಕೆ ತುಂಬುತ್ತಾಳೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಕುಳಿತಲ್ಲೇ ವಾಂತಿ ಮಾಡಿಕೊಳ್ಳುವುದು ಬಾಕಿ. ಎಲ್ಲಕ್ಕೂ ಮಿಗಿಲಾಗಿ, ಆಕೆ ಕಮೋಡ್ ಒಳಗಿನ ಕಾಂಡಿಮೆಂಟ್ ಎತ್ತಿ ಬಾಯಿಗೆ ಹಾಕಿಕೊಂಡು 'ವಾವ್! ಇದು ರುಚಿಯಾಗಿದೆ!' ಎನ್ನುವುದನ್ನು ನೋಡಿದರೆ ತಲೆ ಗಿರ ಗಿರ... ನೀವು ಕಾಂಡಿಮೆಂಟ್ ಸಹವಾಸಕ್ಕೆ ಹೋಗೋದಿಲ್ಲ.ಸದ್ಯ ಇಂಟರ್ನೆಟ್‌ನಲ್ಲಿ ಈ ವಿಡಿಯೋ ವೈರಲ್ ಆಗಿದ್ದು. ಬಹುತೇಕರು ಈ ವಿಡಿಯೋ ಬಗ್ಗೆ ತಮ್ಮ ಆಕ್ಷೇಪ ಹೊರ ಹಾಕಿದ್ದಾರೆ. ಈ ವಿಡಿಯೋವನ್ನು ಮನರಂಜನೆ ಸಲುವಾಗಿ ಮಾಡಲಾಗಿದೆ ಎನ್ನುವ ಶೀರ್ಷಿಕೆ ನೀಡಿದ್ದರೂ ಸಹ ನೆಟ್ಟಿಗರು ಬೇಸರ ವ್ಯಕ್ತಪಡಿಸಿದ್ದಾರೆ.


ಇನ್ನು ಲೈಸೆನ್ಸ್ ಹೊಂದಿರುವ ವೃತ್ತಿಪರ ಪ್ಲಂಬರ್ ಒಬ್ಬರು ಕಮೆಂಟ್ ಹಾಕಿದ್ದು 'ನಾನು ವೃತ್ತಿಪರ ಪ್ಲಂಬರ್ ಆಗಿದ್ದೇನೆ. ನನ್ನ ಬಳಿ ಲೈಸೆನ್ಸ್ ಇದೆ. ನೀವು ಅತ್ಯಂತ ಕೆಟ್ಟ ಕೆಲಸ ಮಾಡಿದ್ದೀರಿ. ನೀವು ಅದನ್ನು ಸ್ವಚ್ಛ ಮಾಡಿರಬಹುದು. ಆದರೆ ಅದನ್ನು ನೀವು ಈ ರೀತಿಯಾಗಿ ಬಳಸಬಾರದಿತ್ತು ' ಎಂದಿದ್ದಾರೆ.


ಇದಿಷ್ಟೇ ಅಲ್ಲದೇ ಇನ್ನಿತರ ಬರಹಗಾರರು 'ಇದು ಆರೋಗ್ಯಕರವಾದ ಪೇಯವಲ್ಲ. ಟಾಯ್ಲೆಟ್ ಸೀಟಿನಲ್ಲಿ ಹಲವಾರು ಕೆಟ್ಟ ಬ್ಯಾಕ್ಟೀರಿಯಾಗಳಿರುತ್ತದೆ ಎನ್ನುವುದು ನೆನಪಿರಲಿ. ಈ ಪಾನೀಯವು ತೀವ್ರ ಮಾರಣಾಂತಿಕ ಕಾಯಿಲೆಗಳಿಗೆ ಗುರಿ ಮಾಡಬಹುದು ಎಚ್ಚರ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಬಳಕೆದಾರರು 'ಇದು ಅತ್ಯಂತ ಸೂಕ್ಷ್ಮ ವಿಡಿಯೋ ಆಗಿದ್ದು, ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಮಕ್ಕಳಿಗೆ ಒಳ್ಳೆಯದು, ಕೆಟ್ಟದ್ದು ಗೊತ್ತಿರುವುದಿಲ್ಲ. ಈ ವಿಡಿಯೋ ಮಕ್ಕಳಿಗೆ ಆಕರ್ಷಕವೆನಿಸಬಹುದು. ಅವುಗಳು ಕೂಡ ಇದನ್ನು ಪ್ರಯತ್ನಿಸಬಹುದು' ಎಂದು ತಮ್ಮ ಸಿಟ್ಟು ಪ್ರದರ್ಶಿಸಿದ್ದಾರೆ.


ನೀವೇನೇ ಹೇಳಿ, 'ಔಟ್ ಗೋಯಿಂಗ್ ಜಾಗದಲ್ಲಿ ಈ ಇನ್‌ಕಮಿಂಗ್ ಬೇಕಿತ್ತಾ?' ಎಂದು ಇನ್ನಿತರ ನೆಟ್ಟಿಗರು ಕಾಲೆಳೆಯುತ್ತಿದ್ದಾರೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು