Shocking Video: ಮೊಸಳೆಯ ಸವಾರಿ ಮಾಡಿದ ಭೂಪ; ವೈರಲ್ ವಿಡಿಯೋಗೆ ಇಂಟರ್ನೆಟ್​ನಲ್ಲಿ ಭಾರೀ ಟೀಕೆ

ಬಹಳಷ್ಟು ಮಂದಿ, ಮೊಸಳೆಯ ಮೇಲೆ ನಿಂತ ಆ ವ್ಯಕ್ತಿಯ ಕೃತ್ಯವನ್ನು ಕಟುವಾಗಿ ಖಂಡಿಸಿದ್ದು, ಆ ಮೊಸಳೆಯ ಸುರಕ್ಷತೆಯ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ, ಹಲವಾರು ಮಂದಿ ಆತನ ಸಾಹಸವನ್ನು ಬೆಂಬಲಿಸಿರುವುದು ಅಚ್ಚರಿಯ ಸಂಗತಿ.

ಮೊಸಳೆ ಮೇಲೆ ಯುವಕನ ಸವಾರಿ

ಮೊಸಳೆ ಮೇಲೆ ಯುವಕನ ಸವಾರಿ

  • Share this:
ಆಸ್ಟ್ರೇಲಿಯಾದಲ್ಲಿ ಛಾಯಾಗ್ರಾಹಕನೊಬ್ಬ, ಅನಾಮಿಕ ಜಾಗವೊಂದರಲ್ಲಿ ಮೊಸಳೆಯನ್ನು ಸರ್ಫ್‍ಬೋರ್ಡಿನಂತೆ ಉಪಯೋಗಿಸಿಕೊಂಡು ಸವಾರಿ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಎಲ್ಲರನ್ನು ದಂಗು ಬಡಿಸಿತ್ತು. ಆ ಫೋಟೋದಲ್ಲಿ, ಮೊಸಳೆಯು ನೀರಿನೊಳಗೆ ಅರ್ಧ ಮುಳುಗಿದ್ದು, ಆ ಮನುಷ್ಯ ಅದರ ಮೇಲೆ ನಿಂತಿದ್ದಾನೆ.

ವನ್ಯಜೀವಿಗಳ ಕಾರಣದಿಂದಾಗಿ ಆಸ್ಟ್ರೇಲಿಯಾ ಪ್ರತೀ ವಾರ ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಲ್ಲಿರುತ್ತದೆ. ಆಸ್ಟ್ರೇಲಿಯಾದ ಬರುವ ವರದಿಗಳಲ್ಲಿ, ಹೆಚ್ಚಿನವು ವನ್ಯಜೀವಿ ಮತ್ತು ಹಲವಾರು ವಿಲಕ್ಷಣ ಪ್ರಾಣಿಗಳಿಗೆ ಸಂಬಂಧಿಸಿರುವುದಾಗಿರುತ್ತದೆ. ಸರಿಸೃಪಗಳಿಗೆ ಸಂಬಂಧಿಸಿದ ಘಟನೆಗಳು ದೇಶದದಲ್ಲಿ ಎಷ್ಟರ ಮಟ್ಟಿಗೆ ಮರುಕಳಿಸುತ್ತಿದೆ ಎಂದರೆ, ಈಗ ಅಂತಹ ವರದಿಗಳಿಗೆ ಅಶ್ಚರ್ಯಚಕಿತರಾಗುವುದನ್ನು ಜನ ಬಿಟ್ಟು ಬಿಟ್ಟಿದ್ದಾರೆ.

ಉದಾಹರಣೆಗೆ, ಯಾರದೋ ಮನೆಯ ಅಂಗಳದಲ್ಲಿ ಮೊಸಳೆ ಇರುವ ಚಿತ್ರ ಕಾಣಸಿಗುವುದು ಇತ್ತಿಚೆಗೆ ಆಸ್ಟೇಲಿಯಾದಲ್ಲಿ ಸಾಮಾನ್ಯ ಸಂಗತಿಯಾಗಿಬಿಟ್ಟಿದೆ.
ಆದರೂ, ವನ್ಯಜೀವಿಗಳಿಗೆ ಸಂಬಂಧಿಸಿದ , ಹೊಸ ಮತ್ತು ಬೆಚ್ಚಿ ಬೀಳುವಂತಹ ಘಟನೆಗಳಿಗೆ ಆಸ್ಟ್ರೇಲಿಯಾದಲ್ಲಿ ಯಾವುದೇ ಕೊರತೆ ಇಲ್ಲ.

ಆಸ್ಟ್ರೇಲಿಯಾದ ಸರಿಸೃಪಗಳು ಮತ್ತು ಇತರ ವನ್ಯ ಜೀವಿಗಳಿಂದ ಕೆಲವರು ಅಂತರ ಕಾಯ್ದುಕೊಂಡು, ಸುರಕ್ಷಿತವಾಗಿರಲು ಪ್ರಯತ್ನಿಸಿದರೆ, ಇನ್ನು ಕೆಲವರು ತಮ್ಮ ಎಲ್ಲೆ ಮೀರುವುದರಲ್ಲಿ ಹೆಚ್ಚಿನ ಸಂತೋಷ ಕಂಡುಕೊಳ್ಳುತ್ತಿದ್ದಾರೆ. ಆಸ್ಟ್ರೇಲಿಯಾದಲ್ಲಿ ಛಾಯಾಗ್ರಾಹಕನೊಬ್ಬ, ಅನಾಮಿಕ ಜಾಗವೊಂದರಲ್ಲಿ ಮೊಸಳೆಯನ್ನು ಸರ್ಫ್‍ಬೋರ್ಡಿನಂತೆ ಉಪಯೋಗಿಸಿಕೊಂಡು ಸವಾರಿ ಮಾಡುತ್ತಿರುವ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ಎಲ್ಲರನ್ನು ದಂಗು ಬಡಿಸಿತ್ತು. ಆ ಫೋಟೋದಲ್ಲಿ, ಮೊಸಳೆಯು ನೀರಿನೊಳಗೆ ಅರ್ಧ ಮುಳುಗಿದ್ದು, ಆ ಮನುಷ್ಯ ಅದರ ಮೇಲೆ ನಿಂತಿದ್ದಾನೆ.

ರೆಡಿಟ್‍ನಲ್ಲಿ ಮೊದಲು ಶೇರ್ ಮಾಡಲ್ಪಟ್ಟ ಆ ಫೋಟೋ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅದನ್ನು ಕಂಡು ರೆಡಿಟ್ ಬಳಕೆದಾರರು ತೀವ್ರ ಟೀಕೆ ವ್ಯಕ್ತಪಡಿಸಿದ ಮೇಲೆ, ಫೋಟೋವನ್ನು ತೆಗೆದುಹಾಕಲಾಯಿತು.

ಬಹಳಷ್ಟು ಮಂದಿ, ಮೊಸಳೆಯ ಮೇಲೆ ನಿಂತ ಆ ವ್ಯಕ್ತಿಯ ಕೃತ್ಯವನ್ನು ಕಟುವಾಗಿ ಖಂಡಿಸಿದ್ದು, ಆ ಮೊಸಳೆಯ ಸುರಕ್ಷತೆಯ ಕುರಿತು ಕಾಳಜಿ ವ್ಯಕ್ತಪಡಿಸಿದ್ದಾರೆ. ಆದರೆ, ಹಲವಾರು ಮಂದಿ ಆತನ ಸಾಹಸವನ್ನು ಬೆಂಬಲಿಸಿರುವುದು ಅಚ್ಚರಿಯ ಸಂಗತಿ.
“ಆತ ಹೈ ವಿಸ್ ಧರಿಸಿರುವುದು ಒಳ್ಳೆಯದಾಯ್ತು. . . . ಸುರಕ್ಷತೆಯ ಬಗ್ಗೆಯೂ ಯೋಚಿಸಬೇಕಲ್ಲ” ಎಂದು ಒಬ್ಬ ನೆಟ್ಟಿಗ ಬರೆದು ಕೊಂಡಿದ್ದಾರೆ.

ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು, “ ಅವನು ಸರಿಯಾದ ಕೆಲಸ ಮಾಡುತ್ತಿದ್ದಾನೆ, ಸೂಕ್ತವಾದ ಹೈ ವಿಸ್ ಶರ್ಟ್ ಧರಿಸಿ, ಮಂಡಿಯನ್ನು ಮಡಚಿದ್ದಾನೆ. . .ಅವನಿಗೆ ಹಗ್ಗವನ್ನು ಹೇಗೆ ಹಿಡಿದುಕೊಳ್ಳಬೇಕು ಎಂಬುದು ತಿಳಿದಿದೆ, ಅವನು ಮತ್ತೊಬ್ಬ ಸಂಗಾತಿಯ ಜೊತೆಗೂಡಿ ಈ ಕೆಲಸ ಮಾಡುತ್ತಿದ್ದಾನೆ. ಯಾವುದೇ ಸೇಫ್ಟಿ ಮ್ಯಾನೇಜರ್ ಈ ಕುರಿತು ಹೆಮ್ಮೆ ಪಡದಿರಲಾರ” ಎಂದು ಬರೆದಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿತ್ಯವೂ, ಆಸ್ಟ್ರೇಲಿಯಾದ ಮೊಸಳೆಗಳಿಗೆ ಸಂಬಂಧಿಸಿದ ವಿಡಿಯೋ ಮತ್ತು ಫೋಟೋಗಳನ್ನು ಶೇರ್ ಮಾಡಲಾಗುತ್ತದೆ. ಆದರೆ ಮೇಲೆ ತಿಳಿಸಿರುವಂತ ಕೆಲವು ಫೋಟೋಗಳು ನೋಡುಗರ ಮೇಲೆ ಹೆಚ್ಚು ಪ್ರಭಾವ ಬೀರುತ್ತವೆ.
ಕೆಲವು ವಾರಗಳ ಹಿಂದೆ, ಆಸ್ಟ್ರೇಲಿಯನ್ ಛಾಂಯಾಗ್ರಾಹಕÀರೊಬ್ಬರು ಮೊಸಳೆಯು ಶಾರ್ಕ್‍ವೊಂದನ್ನು ತನ್ನ ದವಡೆಗಳಲ್ಲಿ ಕಚ್ಚಿಕೊಂಡಿರುವ ದೃಶ್ಯವನ್ನು ಸೆರೆ ಹಿಡಿದಿದ್ದರು. ಸಂಶೋಧಕ ವಿಜ್ಞಾನಿ ಮತ್ತು ಛಾಯಾಗ್ರಾಹಕ, 46 ವರ್ಷದ ಮಾರ್ಕ್ ಜಿಂಬಿಕಿ, ಆಸ್ಟ್ರೇಲಿಯಾದ ಪೂರ್ವ ಕರಾವಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಛಾಯಾಚಿತ್ರವನ್ನು ಸೆರೆಹಿಡಿದಿದ್ದರು.

ಆ ಚಿತ್ರದಲ್ಲಿ, 680 KG ತೂಕವುಳ್ಳ ನೈಲ್ ಮೊಸಳೆ, 45ಕೇಜಿ ಭಾರದ ಶಾರ್ಕ್ ಮರಿಯನ್ನು ತನ್ನ ದವಡೆಯಲ್ಲಿ ಕಚ್ಚಿ ಹಿಡಿದಿರುವುದನ್ನು ನೋಡಬಹುದು.
First published: