• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Shocking Video: ಸಿಗರೇಟ್​ ಹಚ್ಚಲು ಹೋಗಿ ಬೆಂಕಿ ಹಚ್ಚಿಕೊಂಡ ಯುವಕ, ಎದೆ ಝಲ್​ ಅನಿಸುವ ವಿಡಿಯೋ ಇಲ್ಲಿದೆ!

Shocking Video: ಸಿಗರೇಟ್​ ಹಚ್ಚಲು ಹೋಗಿ ಬೆಂಕಿ ಹಚ್ಚಿಕೊಂಡ ಯುವಕ, ಎದೆ ಝಲ್​ ಅನಿಸುವ ವಿಡಿಯೋ ಇಲ್ಲಿದೆ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಒಂದು ಸಿಗರೇಟ್​ನಿಂದ ಜೀವಕ್ಕೆ ಅಪಾಯ ತಂದುಕೊಂಡ ಯುವಕನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

  • Share this:

ಸಿಗರೇಟ್ (Cigaratte)​ ಸೇದುವುದು ಆರೋಗ್ಯಕ್ಕ  ಹಾನಿಕರ (Bad For Health) ಅಂತ ಗೊತ್ತಿದ್ರೂ, ಹಲವರು ಪ್ರತಿನಿತ್ಯ ಧೂಮಪಾನ (Smoking) ಮಾಡುತ್ತಾರೆ. ಕಾಲೇಜು ವಿದ್ಯಾರ್ಥಿಗಳು (Students) ಕೂಡ ಈ ಸಿಗರೇಟ್​ ಚಟಕ್ಕೆ ದಾಸರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಸಿಗರೇಟ್​ ಸೇದುವಂತಿಲ್ಲ. ಆದರೂ ಈ ನಿಯಮಕ್ಕೆ ಕ್ಯಾರೇ ಎನ್ನದೇ ಎಲ್ಲೆಂದರಲ್ಲಿ ಸಿಗರೇಟ್​ ಸೇದುವವರನ್ನು ನಾವು ನೋಡಿದ್ದೇವೆ. ಸಿಗರೇಟ್ ಆರೋಗ್ಯಕ್ಕೆ ಹಾನಿಕರ ಎಂದು ಹೇಳಿದರೂ, ಸಿಗರೇಟ್ ಸೇದುವುದನ್ನು ಮಾತ್ರ ನಿಲ್ಲಿಸುವುದಿಲ್ಲ. ಆದರೆ ಇತ್ತೀಚೆಗೆ ವೈರಲ್ ಆದ ವಿಡಿಯೋ (Viral Video) ನೋಡಿದ್ರೆ, ಎದೆ ಝಲ್​ ಅನ್ನಿಸೋದು ಗ್ಯಾರಂಟಿ. ಒಂದು ಸಿಗರೇಟ್​ನಿಂದ ಜೀವಕ್ಕೆ ಅಪಾಯ ತಂದುಕೊಂಡ ಯುವಕನ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.


ಸಿಗರೇಟ್​ ಹಚ್ಚಲು ಹೋದವನ ಕಥೆ ಏನಾಯ್ತು ನೋಡಿ!


ಅನೇಕ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಜನರು ಧೂಮಪಾನ ತಡೆಯುತ್ತಿದ್ದಾರೆ. ಆದರೆ ವೈರಲ್ ಆಗುತ್ತಿರುವ ವೀಡಿಯೊವನ್ನು @OnlyBangersEth ಎಂಬ ಖಾತೆಯಿಂದ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಲಾಗಿದೆ. ವಿಡಿಯೋ ಮೊದಲು ಅಂಗಡಿಯೊಳಗೆ ಸೋಫಾದ ಮೇಲೆ ಕುಳಿತಿರುವ ವ್ಯಕ್ತಿಯನ್ನು ತೋರಿಸಲಾಗಿದೆ.


ಇದ್ದಕ್ಕಿದ್ದಂತೆ ಆತ ಎದ್ದು ಅಂಗಡಿಯ ಮೇಜಿನ ಬಳಿಗೆ ಬಂದು ಸಿಗರೇಟನ್ನು ಹೊರತೆಗೆದು ಅದನ್ನು ಹೊತ್ತಿಸಲು ಪ್ರಾರಂಭಿಸುತ್ತಾರೆ. ಆದರೆ ಕ್ಷಣ ಮಾತ್ರದಲ್ಲಿ ಲೈಟರ್​ನಿಂದ ಹೊರ ಬಂದ ಬೆಂಕಿ ಇಡೀ ಅಂಗಡಿಯನ್ನೇ ಆವರಿಸಿಕೊಂಡಿದೆ. ನೋಡ ನೋಡುತ್ತಲೇ ಅಂಗಡಿಯಲ್ಲಿದ್ದ ಮೂವರಿಗೂ ಬೆಂಕಿ ತಗುಲಿದೆ. ಈ ವಿಡಿಯೋ ನೋಡಿದರೆ ನಿಜಕ್ಕೂ ನಿಮ್ಮ  ಎದೆ ಝಲ್​ ಅನ್ನಿಸದೇ ಇರದು.ಧೂಮಪಾನ ಆರೋಗಕ್ಕೆ ಹಾನಿಕರ!


13 ಸೆಕೆಂಡ್‌ಗಳ ಈ ವಿಡಿಯೋ ಕೆಲವೇ ಕ್ಷಣಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಕಾಮೆಂಟ್‌ಗಳ ಮಹಾಪೂರವೇ ಹರಿದು ಬರುತ್ತಿದ್ದು, ವಿಡಿಯೋ ಚರ್ಚೆಯ ವಿಷಯವಾಗುತ್ತಿದೆ. ಈ ವಿಡಿಯೋಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದೆ. ಅನಿಲ ಸೋರಿಕೆ ಕಾರಣ ಎಂದು ಹಲವರು ಹೇಳುತ್ತಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಈ ವಿಡಿಯೋದ ಸತ್ಯಾಸತ್ಯತೆಯನ್ನು ನ್ಯೂಸ್ 18 ಕನ್ನಡ ಖಚಿತಪಡಿಸಿಲ್ಲ.


ಇದನ್ನೂ ಓದಿ: ಆಫೀಸ್​​ನಲ್ಲಿ ಧಮ್​ ಹೊಡೆಯೋಕೆ ಬ್ರೇಕ್ ತಗೊಳ್ಳೋ ಉದ್ಯೋಗಿಗಳೇ, ಈ ಸುದ್ದಿ ನೋಡಿ!


ಕ್ಯಾನ್ಸರ್​ಗೆ ಕಾರಣವಾಗಬಹುದು ಸಿಗರೇಟ್!ಸಿಗರೇಟ್ ಸೇದುವುದು ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಇದರ ನಿರಂತರ ಸೇವನೆಯು ಶ್ವಾಸಕೋಶದ ಕ್ಯಾನ್ಸರ್ ಗೆ ಕಾರಣವಾಗಬಹುದು. ಜನರು ಆರೋಗ್ಯವಾಗಿರಲು ಮತ್ತು ಧೂಮಪಾನ ಮಾಡದಂತೆ ಜಾಗೃತಿ ಮೂಡಿಸುತ್ತಾರೆ.


ಆಫೀಸ್​ನಲ್ಲಿ ಧಮ್​ ಹೊಡೆಯೋ ಮುನ್ನ ಹುಷಾರ್!


ಆಫೀಸ್​​ನಲ್ಲಿ ಕೆಲಸ ಮಾಡೋ ಟೈಮ್​ನಲ್ಲಿ 2 ನಿಮಿಷ ಇಲ್ಲ 5 ನಿಮಿಷ ರೆಸ್ಟ್​ ಮಾಡೋದು ಕಾಮನ್​. ಧಮ್​ ಹೊಡೆಯುವವರಂತೂ 9 ಗಂಟೆ ಕೆಲಸದ ಟೈಮ್​ನಲ್ಲಿ ಮಿನಿಮಮ್​ ನಾಲ್ಕು ಬಾರಿ ಬ್ರೇಕ್​ ತೆಗೆದುಕೊಳ್ತಾರೆ. 14 ವರ್ಷಗಳ ಅವಧಿಯಲ್ಲಿ ಹಲವು ಬಾರಿ ಸಿಗರೇಟ್ ಬ್ರೇಕ್ ತೆಗೆದುಕೊಂಡ ವ್ಯಕ್ತಿಯೊಬ್ಬ ಭಾರೀ ದಂಡ ತೆರಬೇಕಾದ ಘಟನೆ ನಡೆದಿದೆ. ಈತ ಎಷ್ಟು ಬಾರಿ ಬ್ರೇಕ್​ ತೆಗೆದುಕೊಂಡಿದ್ದಾನೆ ಅಂತ ಕೇಳಿದ್ರೆ ಶಾಕ್​ ಆಗ್ತೀರಾ.


14 ವರ್ಷದಲ್ಲಿ 4,512 ಬಾರಿ ಸಿಗರೇಟ್​ ಬ್ರೇಕ್!


ಮಾಧ್ಯಮ ವರದಿಗಳ ಪ್ರಕಾರ, ಒಸಾಕಾ ನಗರದಲ್ಲಿ ಕೆಲಸ ಮಾಡುತ್ತಿರುವ 61 ವರ್ಷದ ಸರ್ಕಾರಿ ನೌಕರನೊಬ್ಬ 14 ವರ್ಷದಲ್ಲಿ 4,512 ಬಾರಿ ಬ್ರೇಕ್​ ತೆಗೆದುಕೊಂಡಿದ್ದಾರೆ. ಒಟ್ಟು 355 ಗಂಟೆ 19 ನಿಮಿಷಗಳನ್ನು ಈ ವ್ಯಕ್ತಿ ಸಿಗರೇಟ್​ ಸೇದುವದಕ್ಕೆ ವೇಸ್ಟ್​ ಮಾಡಿದ್ದಾರೆ, ಇದಕ್ಕಾಗಿ ಆತನಿಗೆ 14.40 ಲಕ್ಷ ಯೆನ್ ಅಂದರೆ ಸುಮಾರು 9 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಈ ಘಟನೆ ನಡೆದಿರೋದು ಜಪಾನ್​ನಲ್ಲಿ.


First published: